ಚಿತ್ರ ಹೃದಯದಲ್ಲಿ ಮಾಡುವುದಾದರೆ...!

Update: 2019-04-28 06:26 GMT
ಚಿತ್ರ: ಲೋಕೇಶ್ ಮೊಸಳೆ

ಈಗ್ಗೆ ನಾಲ್ಕಾರು ವಾರಗಳಿಂದ ನಮ್ಮ ದೃಷ್ಟಿ ಭಾರತ ಮತ್ತು ಜಗತ್ತಿನ ಗಮನ ಸೆಳೆದ ಮತ್ತು ನೋಡುಗರಲ್ಲಿ ಅನೇಕ ಸಂವೇದನೆಗಳನ್ನು ಸೃಷ್ಟಿಸಿದ ಚಿತ್ರಗಳ ಕುರಿತು ಪುಟ್ಟ ಪುಟ್ಟ ಟಿಪ್ಪಣಿಗಳ ಮೂಲಕ ತಮ್ಮೆಲ್ಲರಿಗೂ ತಲುಪಿಸಿದ್ದೆವು. ಈ ರೀತಿಯ ಸರಣಿ ಚಿತ್ರಗಳ ಕುರಿತು ಬರೆಯುವ ಅಗತ್ಯ ಏಕೆ ಬಂತೆಂದರೆ ಚಿತ್ರಗಳು ಎಂದ ತಕ್ಷಣ ಅವು ಬರೀ ಒಂದೆರಡು ನೋಟದಲ್ಲಿ ಕಂಡು ಕಣ್ಮರೆಯಾಗುವಂಥದ್ದಲ್ಲ. ಅದು ತನ್ನೊಳಗೆ ತಾನೊಂದು ಕೇವಲ ಚಿತ್ರವಾಗಿರದೆ ಆಯಾ ಸಮಯ - ಸಂದರ್ಭಗಳನ್ನು ್ಛ್ಟಛಿಛ್ಢಿ ಮಾಡಿ ಮುಂದಿನ ಪೀಳಿಗೆಗಳಿಗೆ ಐತಿಹಾಸಿಕ ದಾಖಲೆಗಳಾಗಿಯೂ ಉಳಿಯಲಿ, ಉತ್ತಮ ಭವಿಷ್ಯದ ಕಡೆಗೆ ಸಮಾಜವನ್ನು ಕೊಂಡೊಯ್ಯುವ ದಾರಿದೀಪಗಳಾಗಿ ಬೆಳಗಲಿ ಎಂಬುದು ಜೊತೆಗೆ ಚಿತ್ರ ತೆಗೆಯುವಾಗ ನಮಗಿರಬೇಕಾದ ಎಚ್ಚರಿಕೆ, ಸಮಯ ಪ್ರಜ್ಞೆ, ಸೃಜನಶೀಲತೆ ಯಾವ ಮಟ್ಟದಲ್ಲಿರಬೇಕು ಎಂಬುದನ್ನು ಇಂಥ ಚಿತ್ರಗಳ ಮೂಲಕ ಹೇಳುವುದೇ ಆಗಿದೆ. ಕ್ಯಾಮರಾ ಇರುವವರೆಲ್ಲ ಈಗ ಒಂದೇ ರೀತಿಯ ಚಿತ್ರಗಳನ್ನು ಒಂದೇ ಕೋನದಲ್ಲೇ ತೆಗೆಯುವುದಾದರೆ ಅದನ್ನೇ ಏಕೆ ತೆಗೆಯಬೇಕು. ಯಾರು ಇತರರಿಗಿಂತ ಭಿನ್ನ ರೀತಿಯಲ್ಲಿ ಛಾಯಾಗ್ರಹಣ ಮಾಡುತ್ತಾರೋ ಅವರ ಚಿತ್ರಗಳು ಬೇರೆಯವರ ಚಿತ್ರಗಳನ್ನು ಸಾಧಾರಣ ಚಿತ್ರವಾಗಿಸುತ್ತದೆ. ತನ್ನದೇ ಆದ ವಿಭಿನ್ನ ಛಾಪನ್ನು ನೋಡುಗರಲ್ಲಿ ಮೂಡಿಸುತ್ತದೆ. ನೋಡುಗರ ಪ್ರಜ್ಞೆಯನ್ನು ವಿಸ್ತರಿಸುತ್ತದೆ.ಆತನನ್ನು ಸಹೃದಯನನ್ನಾಗಿಸುತ್ತದೆ. ಸಾಮಾನ್ಯ ನೋಡುಗನೊಬ್ಬನಲ್ಲಿ ವಿಶಿಷ್ಟ ದೃಷ್ಟಿಕೋನ ಮೊಳೆಯುತ್ತದೆ. ಸಮಾಜಕ್ಕೋ ಆಯಾ ಪ್ರಕೃತಿ-ಪರಿಸರದ ಬಗೆಗೋ ಹೊಸ ಹೊಸ ಒಳನೋಟಗಳನ್ನು ಆ ಚಿತ್ರ ಕಾಣಿಸುತ್ತದೆ. ಆದರೆ ಇದಕ್ಕೆಲ್ಲ ಯಾವ ಕಂಪೆನಿಯ ಕ್ಯಾಮರಾ ಬಳಕೆಯಾಗಿದೆ, ಎಷ್ಟು ಪಿಕ್ಸೆಲ್‌ಗಳಿವೆ, ಅದರ ಬೆಲೆಯೇನು ಎಂಬ ಅಂಶಗಳು ಮುಖ್ಯವಾಗುವುದಿಲ್ಲ. ಹಾಗಾಗಿ ನಿಜಕ್ಕೂ ಆ ಫೋಟೊಗ್ರಾಫರನು ಚಿತ್ರದಲ್ಲಿರುವ ಆ ನಿರ್ದಿಷ್ಟ ಖಖಿಆಒಉಇ ಅನ್ನು ಅರ್ಥಪೂರ್ಣವಾಗಿ ನಿರೂಪಿಸಿದ್ದಾನೆ ಎನ್ನುವುದೇ ಪ್ರಧಾನವಾಗಿರಬೇಕು. ಆ ಚಿತ್ರದಲ್ಲಿ ಏನೇನು ಇರಬೇಕು ಮತ್ತು ಏನೇನು ಇರಕೂಡದು ಎಂಬುದನ್ನು ಛಾಯಾಚಿತ್ರಕಾರನೇ ನಿರ್ಧರಿಸಿ ಯಾವ ಕೋನದಿಂದ ನೋಡಿದರೆ ವಿಚಾರವೊಂದನ್ನು ಚಿತ್ರದ ಮೂಲಕ ಸ್ಪಷ್ಟವಾಗಿಯೂ- ಸಂವೇದನಾತ್ಮಕವಾಗಿಯೂ ಪರಿಣಾಮಕಾರಿಯಾಗಿಯೂ ಮೂಡಿಸಬಲ್ಲ ಎಂಬುದನ್ನು ಅರ್ಥಮಾಡಿಕೊಳ್ಳಬೇಕು. ಇಷ್ಟೆಲ್ಲ ಏಕೆ ಹೇಳಬೇಕಾಗಿ ಬರುತ್ತದೆ ಎಂದರೆ ನಮ್ಮ ದೇಶದಲ್ಲಿ ಛಾಯಾಗ್ರಹಣ ಮಾಡುವವರ ಸಂಖ್ಯೆಗೇನೂ ಕೊರತೆಯಿಲ್ಲ. ಆದರೆ ಹೊಸ ಹೊಳಪುಗಳನ್ನು ಮೂಡಿಸುವ ಚಿತ್ರಕಾರರು ಕಡಿಮೆ ಇದ್ದಾರೆ. ಒಂದೇ ತೆರನಾದ ಚಿತ್ರವನ್ನೇ ನೂರಾರು ಚಿತ್ರಕಾರರು ತೆಗೆದರೆ ಅದಕ್ಕೆ ಅರ್ಥವೇನು ಬಂತು. ಪ್ರತಿಯೊಬ್ಬರೂ ಸಿದ್ಧಮಾದರಿ ಒಂದನ್ನು ಇಟ್ಟುಕೊಂಡು ಅದನ್ನೇ ಕಾಪಿ ಮಾಡಿದರೆ ಅದರಲ್ಲಿ ಯಾವುದೂ ಶ್ರೇಷ್ಠ ಚಿತ್ರ ಎನಿಸಿಕೊಳ್ಳುವುದಿಲ್ಲ. ಶ್ರೇಷ್ಠ ಎನಿಸಿಕೊಳ್ಳುವಂತಹ ಚಿತ್ರದ ಹಿಂದೆ ಅಪಾರ ಪರಿಶ್ರಮ ತಾಳ್ಮೆ, ಶ್ರದ್ಧೆ, ಪ್ರತಿಭೆ ಎಲ್ಲವನ್ನೂ ಧಾರೆಯೆರೆಯಬೇಕಾಗುತ್ತದೆ. ಹೊಸತನವನ್ನು ಛಾಯಾಗ್ರಹಣದ ಸಂದರ್ಭದಲ್ಲಿ ಅಲ್ಲಿನ ಹಿನ್ನೆಲೆಗೆ ತಕ್ಕಂತೆ ಸೃಷ್ಟಿಸಿಕೊಳ್ಳಬೇಕಾಗುತ್ತದೆ. ಈ ನಿಟ್ಟಿನಲ್ಲಿ ನೋಡುವುದಾದರೆ ಬೆರಳೆಣಿಕೆಯಷ್ಟು ಛಾಯಾಗ್ರಾಹಕರು ಮಾತ್ರ ಹೊಸ ಪ್ರಯೋಗಗಳನ್ನು ಮಾಡುತ್ತಿದ್ದಾರೆ.

ಇಲ್ಲಿರುವ ಚಿತ್ರವನ್ನೇ ತೆಗೆದುಕೊಳ್ಳಿ. yellow wattled lapwing ಎಂಬ ಈ ಪಕ್ಷಿಯ ಚಿತ್ರವನ್ನು ಅನೇಕರು ತೆಗೆದಿದ್ದಾರೆ. ಇದರ ಬಹುತೇಕ ಚಲನವಲನಗಳನ್ನು ಹಲವರು ಸೆರೆಹಿಡಿದಿದ್ದಾರೆ. ಇಲ್ಲಿರುವ ಚಿತ್ರವನ್ನು ಸೆರೆಹಿಡಿಯಲು ಕಡಿಮೆ ಎಂದರೂ ಒಂದು ವಾರ ಕಾಲಾವಕಾಶ ತೆಗೆದುಕೊಳ್ಳಲಾಗಿದೆ. ಪಕ್ಷಿ ಇರುವ ಜಾಗವನ್ನು ಪರಿಸರವನ್ನು ಅದರ ಚಲನವಲನಗಳನ್ನು ಗುರುತಿಸಿ ಯಾವ ರೀತಿಯಲ್ಲೂ ಅದರ ಸ್ವಾತಂತ್ರಕ್ಕೆ ಚ್ಯುತಿ ಬರದಂತೆ ಅಂತರ ಕಾಯ್ದುಕೊಂಡು ಕ್ಯಾಮರಾದ ಕೋನವನ್ನು ಭಿನ್ನ ರೀತಿಯಲ್ಲಿ ಚಿತ್ರ ಮೂಡಿಬರುವಂತೆ ಚೋಡಿಸಿಟ್ಟು ಪಕ್ಷಿ ಕ್ಯಾಮರಾಗೆ ಸಾಧ್ಯವಾದಷ್ಟು ಸಮೀಪ ಬಂದಾಗ ಕ್ಲಿಕ್ಕಿಸುವುದು. ಈ ಚಿತ್ರದ ಹೆಗ್ಗಳಿಕೆ ಇರುವುದು ಪಕ್ಷಿಯನ್ನು ಅತಿ ಸಮೀಪದಿಂದ ಸೆರೆಹಿಡಿದಿರುವುದರಲ್ಲಿ ಅಲ್ಲ. ಸುತ್ತಲ ಪರಿಸರವನ್ನು ಗಮನಿಸಿ ನೋಡಿ. ಆಗಸದೆಲ್ಲೆಡೆ ಕಾರ್ಮೋಡ ಕವಿದಿದೆ. ಹೊಸ ಮಳೆಗೆ ಜಳಕ ಮಾಡಿ ಹೊಸ ಪುಳಕದಲ್ಲಿ ಎದ್ದು ಅರಳಿನಿಂತ ಪುಟಾಣಿ ಹೂವಿನ ಸಸ್ಯಗಳು ಕೂಡ ಈ ಚಿತ್ರಕ್ಕೆ ವಿಶೇಷ ಮೆರುಗನ್ನು ನೀಡಿದೆ. ಚಿತ್ರದ ಹೈಲೈಟ್ ಎಂದರೆ ಕವಿದ ಕಾರ್ಮೋಡಗಳ ನಡುವೆಯೂ ತೂರಿ ಬಂದ ಸೂರ್ಯನ ಬಿಸಿಲು ನೇರವಾಗಿ ಪಕ್ಷಿಯ ಮುಖ ಮತ್ತು ದೇಹಕ್ಕೆ ಬಿದ್ದು ಚಿತ್ರದ ಸೌಂದರ್ಯ ಮಟ್ಟ ಇನ್ನಷ್ಟು ಹೆಚ್ಚಿಸಿದೆ. ಹಾಗಾಗಿ ಇದೇ ಪಕ್ಷಿಯ ನೂರಾರು ಇತರ ಚಿತ್ರಗಳಿಗಿಂತ ಈ ಚಿತ್ರ ಭಿನ್ನವಾಗಿ ನಿಲ್ಲುತ್ತದೆ.

ಹಾಗಾಗಿ ಛಾಯಾಗ್ರಹಣದಲ್ಲಿ ಸಂಪೂರ್ಣ ಕಲಿಕೆಯೆಂಬುದು ಇರುವುದಿಲ್ಲ. ಆತ ಅದೆಷ್ಟೇ ದೊಡ್ಡ ಛಾಯಾಗ್ರಾಹಕನಾಗಿರಲಿ ಇನ್ನೂ ಶ್ರೇಷ್ಠ ಚಿತ್ರವನ್ನು ತಾನು ತೆಗೆಯಲು ಹಂಬಲಿಸುತ್ತಿರುತ್ತಾನೆ. ಅಂದರೆ ಕಲಿತಷ್ಟೂ ಕಲಿಕೆ ಬೆಳೆಯುತ್ತಲೇ ಹೋಗುತ್ತದೆ. ಪ್ರಯೋಗಿಸಿದಷ್ಟೂ ಅದು ವಿಸ್ತರಿಸುತ್ತಲೇ ಇರುತ್ತದೆ. ಆದ್ದರಿಂದ ತಾಂತ್ರಿಕ ಜ್ಞಾನ ಪಡೆದ ನಂತರ ಹೊಸ ಪ್ರಯೋಗಗಳಿಗೆ ಒಡ್ಡಿಕೊಳ್ಳುವುದು ಮತ್ತು ಆ ಮೂಲಕ ಪಡೆದ ಚಿತ್ರಗಳು ಹೃದಯದ ಭಾಷೆಗೆ ಹತ್ತಿರವಾಗುವಂತೆ ಚಿಂತಿಸುವುದನ್ನು ರೂಢಿಸಿಕೊಳ್ಳುವುದು ಮುಖ್ಯ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News