ಮಧು ಲಿಮಯೆ ಕಂಡ ಆರೆಸ್ಸೆಸ್
ಕೋಟ್ಯಂತರ ಭಾರತೀಯರನ್ನು ನಾಗರಿಕರೇತರನ್ನಾಗಿ ನೋಡಲು ಗುರೂಜಿ ಬಯಸಿದ್ದರು. ಅವರ ಎಲ್ಲ ನಾಗರಿಕ ಹಕ್ಕುಗಳನ್ನು ಕಿತ್ತು ಹಾಕಲು ಬಯಸಿದ್ದರು. ವಾಸ್ತವದಲ್ಲಿ, ಗುರೂಜಿಯ ಚಿಂತನೆಗಳು ಹೊಸದಾಗಿ ರೂಪುಗೊಂಡವಲ್ಲ. ನಾವು ಕಾಲೇಜಿನಲ್ಲಿದ್ದ ದಿನಗಳಿಂದಲೂ ಆರೆಸ್ಸೆಸ್‌ವಾದಿಗಳು ಹಿಟ್ಲರ್‌ನ ಚಿಂತನೆ ಗಳನ್ನು ಅನುಸರಿಸುತ್ತಿದ್ದರು. ಅವರ ದೃಷ್ಟಿಕೋನದಲ್ಲಿ, ಭಾರತದ ಮುಸ್ಲಿಮರು ಮತ್ತು ಕ್ರೈಸ್ತರನ್ನು ಜರ್ಮನಿಯಲ್ಲಿ ಹಿಟ್ಲರ್ ಯಹೂದಿಗಳನ್ನು ನಡೆಸಿಕೊಳ್ಳುತ್ತಿದ್ದ ರೀತಿಯಲ್ಲೇ ನಡೆಸಬೇಕಿತ್ತು.
ನಾನು 1937ರಲ್ಲಿ ರಾಜಕೀಯ ಜೀವನ ಪ್ರವೇಶಿಸಿದೆ. ಆ ಕಾಲದಲ್ಲಿ ಪುಣೆಯಲ್ಲಿ ಒಂದೆಡೆ ಆರೆಸ್ಸೆಸ್ ಮತ್ತು ವಿನಾಯಕ ದಾಮೋದರ್ ಸಾವರ್ಕರ್ ಅವರ ಅನುಯಾಯಿಗಳ ಸಾವರ್ಕರ್‌ವಾದಿಗಳು ಬಹಳ ಸಕ್ರಿಯವಾಗಿದ್ದರೆ ಇನ್ನೊಂದೆಡೆ ರಾಷ್ಟ್ರವಾದಿಗಳು, ಸಮಾಜವಾದಿಗಳು ಮತ್ತು ಎಡಪಂಥೀಯ ರಾಜಕೀಯ ಸಂಘಟನೆಗಳು ಸಕ್ರಿಯವಾಗಿದ್ದವು. ಮೇ 1, 1938ರಂದು ನಾವು ಮೇ ದಿನದ ಪ್ರಯುಕ್ತ ಪಾದಯಾತ್ರೆ ಆಯೋಜಿಸಿ ದ್ದೆವು. ಈ ಪಾದಯಾತ್ರೆಯ ಮೇಲೆ ಆರೆಸ್ಸೆಸ್ ಮತ್ತು ಸಾವರ್ಕರ್‌ವಾದಿಗಳು ದಾಳಿ ನಡೆಸಿದರು. ಪ್ರಸಿದ್ಧ ಕ್ರಾಂತಿಕಾರಿ ಸೇನಾಪತಿ ಬಪತ್ ಮತ್ತು ನನ್ನ ಸಮಾಜವಾದಿ ನಾಯಕ ಎಸ್.ಎಂ. ಜೋಶಿ ಜೊತೆಗೆ ಇತರ ಅನೇಕರು ಗಾಯಗೊಂಡರು. ಅಂದಿನಿಂದಲೂ ನಮಗೆ ಈ ಹಿಂದುತ್ವ ಸಂಘಟನೆಗಳ ಜೊತೆ ಭಿನ್ನಾಭಿಪ್ರಾಯವಿದೆ.
ಆರೆಸ್ಸೆಸ್ ಜೊತೆಗಿನ ನಮ್ಮ ಮೊದಲ ಭಿನ್ನಾಭಿಪ್ರಾಯ ರಾಷ್ಟ್ರವಾದಕ್ಕೆ ಸಂಬಂಸಿದ್ದು. ಭಾರತದಲ್ಲಿ ಪ್ರತಿಯೊಬ್ಬ ಪ್ರಜೆಗೂ ಸಮಾನ ಹಕ್ಕಿದೆ ಎಂದು ನಂಬಿದವರು ನಾವು. ಆದರೆ ಆರೆಸ್ಸೆಸ್ ಮತ್ತು ಸಾವರ್ಕರ್‌ವಾದಿಗಳು ತಮ್ಮದೇ ಹಿಂದೂ ರಾಷ್ಟ್ರದ ಪರಿಕಲ್ಪನೆಯನ್ನು ತಂದರು. ಮುಹಮ್ಮದ್ ಅಲಿ ಜಿನ್ನಾ ಕೂಡಾ ಇದೇ ರೀತಿಯ ಜಾಗತಿಕ ದೃಷ್ಟಿಕೋನವನ್ನು ಹೊಂದಿದ್ದರು. ಅವರು ಭಾರತ ಎರಡು ರಾಷ್ಟ್ರಗಳಿಂದ ನಿರ್ಮಿಸಲ್ಪಟ್ಟಿದೆ ಎಂದು ಭಾವಿಸಿದ್ದರು. ಮುಸ್ಲಿಂ ರಾಷ್ಟ್ರ ಮತ್ತು ಹಿಂದೂ ರಾಷ್ಟ್ರ. ಸಾವರ್ಕರ್ ಕೂಡಾ ಅದನ್ನೇ ಹೇಳಿರುವುದು. ನಮ್ಮ ನಡುವೆ ಇದ್ದ ಇನ್ನೊಂದು ದೊಡ್ಡ ವ್ಯತ್ಯಾಸವೆಂದರೆ ನಾವು ಪ್ರಜಾಸತ್ತಾತ್ಮಕ ಗಣರಾಜ್ಯದ ಕನಸನ್ನು ಕಾಣುತ್ತಿದ್ದೆವು. ಇದೇ ವೇಳೆ ಆರೆಸ್ಸೆಸ್, ಪ್ರಜಾಪ್ರಭುತ್ವ ಎನ್ನುವುದು ಪಾಶ್ಚಾತ್ಯ ಪರಿಕಲ್ಪನೆ ಮತ್ತು ಅದು ಭಾರತಕ್ಕೆ ಸರಿಹೊಂದುವುದಿಲ್ಲ ಎಂದು ಪ್ರತಿಪಾದಿಸಿತ್ತು.
ಆ ದಿನಗಳಲ್ಲಿ ಆರೆಸ್ಸೆಸ್ ಸದಸ್ಯರು ಅಡಾಲ್ ಹಿಟ್ಲಿರ್ ಬಗ್ಗೆ ಅಭಿಮಾನ ಹೊಂದಿದ್ದರು ಮತ್ತು ಆತನನ್ನು ಶ್ಲಾಸುತ್ತಿದ್ದರು. ಗುರೂಜಿ (ಮಾಧವ ಸದಾಶಿವ ಗೋಳ್ವಾಲ್ಕರ್) ಕೇವಲ ಆರೆಸ್ಸೆಸ್‌ನ ಸರಸಂಘಚಾಲಕರಾಗಿರಲಿಲ್ಲ. ಜೊತೆಗೆ ಅವರು ಸಂಘದ ಸೈದ್ಧಾಂತಿಕ ಗುರುಗಳೂ ಆಗಿದ್ದರು. ಗುರೂಜಿ ಮತ್ತು ನಾಝಿಗಳ ಚಿಂತನೆಯಲ್ಲಿ ಆಶ್ಚರ್ಯಕರ ರೀತಿಯ ಸಾಮ್ಯತೆ ಗಳಿವೆ. ಗುರೂಜಿ ಬರೆದ ಪುಸ್ತಕಗಳಲ್ಲಿ ಒಂದು, ‘ವಿ ಓರ್ ಅವರ್ ನೇಶನ್‌ಹುಡ್ ಡಿೈನ್ಡ್’ ಪುಸ್ತಕ ಹಲವು ಆವೃತಿಗಳನ್ನು ಕಂಡಿತು. ಅದರ ನಾಲ್ಕನೇ ಆವೃತಿ 1947ರಲ್ಲಿ ಮುದ್ರಣಗೊಂಡಿತ್ತು. ಈ ಪುಸ್ತಕದಲ್ಲಿ ಒಂದು ಕಡೆ ಗುರೂಜಿ ಹೇಳುತ್ತಾರೆ, ಹಿಂದೂಸ್ತಾನದಲ್ಲಿರುವ ಹಿಂದೂಯೇತರರು ಹಿಂದೂ ಸಂಸ್ಕೃತಿ ಮತ್ತು ಭಾಷೆಯನ್ನು ಅಳವಡಿಸಿಕೊಳ್ಳಬೇಕು. ಹಿಂದೂ ಧರ್ಮಕ್ಕೆ ಗೌರವ ನೀಡಬೇಕು. ಯಾವುದೇ ಸ್ವಂತದ ಪರಿಕಲ್ಪನೆಗಳನ್ನು ಪ್ರೋತ್ಸಾಹಿಸದೆ ಹಿಂದೂ ಜನಾಂಗದ ವೈಭವೀಕರಣ ಮಾಡಬೇಕು. ಅವರು ತಮ್ಮ ಅಸಹಿಷ್ಣುತೆಯ ಮನೋಭಾವವನ್ನು ತ್ಯಜಿಸುವುದು ಮಾತ್ರವಲ್ಲ ಈ ದೇಶ ಮತ್ತು ಪ್ರಾಚೀನ ಸಂಪ್ರದಾಯಗಳನ್ನು ಗೌರವಿಸಬೇಕು. ಒಂದೇ ಶಬ್ದದಲ್ಲಿ ಹೇಳಬೇಕೆಂದರೆ, ಅವರು ಹೊರಗಿನವರಾಗಿ ಬದುಕಬೇಕು ಅಥವಾ ಹಿಂದೂ ರಾಷ್ಟ್ರದ ಅಂಗವಾಗಿ ಈ ದೇಶದಲ್ಲಿರಬೇಕು. ಆ ಮೂಲಕ ಯಾವುದೇ ರೀತಿಯ ಸೌಲಭ್ಯ, ನಾಗರಿಕ ಹಕ್ಕುಗಳಿಗೆ ಬೇಡಿಕೆಯಿಡಕೂಡದು. ಒಂದೇ ಮಾತಿನಲ್ಲಿ ಹೇಳಬೇಕೆಂದರೆ ಗುರೂಜಿ ಕೋಟ್ಯಂತರ ಭಾರತೀಯರನ್ನು ನಾಗರಿಕರೇತರನ್ನಾಗಿ ನೋಡಲು ಬಯಸಿದ್ದರು. ಅವರ ಎಲ್ಲ ನಾಗರಿಕ ಹಕ್ಕುಗಳನ್ನು ಕಿತ್ತು ಹಾಕಲು ಗುರೂಜಿ ಬಯಸಿದ್ದರು. ವಾಸ್ತವದಲ್ಲಿ, ಗುರೂಜಿಯ ಚಿಂತನೆಗಳು ಹೊಸದಾಗಿ ರೂಪುಗೊಂಡವಲ್ಲ. ನಾವು ಕಾಲೇಜಿನಲ್ಲಿದ್ದ ದಿನಗಳಿಂದಲೂ ಆರೆಸ್ಸೆಸ್‌ವಾದಿಗಳು ಹಿಟ್ಲರ್‌ನ ಚಿಂತನೆಗಳನ್ನು ಅನುಸರಿಸುತ್ತಿದ್ದರು. ಅವರ ದೃಷ್ಟಿಕೋನದಲ್ಲಿ, ಭಾರತದ ಮುಸ್ಲಿಮರು ಮತ್ತು ಕ್ರೈಸ್ತರನ್ನು ಜರ್ಮನಿಯಲ್ಲಿ ಹಿಟ್ಲರ್ ಯಹೂದಿಗಳನ್ನು ನಡೆಸಿಕೊಳ್ಳುತ್ತಿದ್ದ ರೀತಿಯಲ್ಲೇ ನಡೆಸಬೇಕಿತ್ತು. ಗುರೂಜಿಗೆ ನಾಝಿ ಪಕ್ಷದ ಬಗ್ಗೆ ಇದ್ದ ಆಕರ್ಷಣೆ ಅವರ ಪುಸ್ತಕದ ಈ ಸಾಲುಗಳಿಂದ ತಿಳಿಯುತ್ತದೆ; ತನ್ನ ಜನಾಂಗದ ಮತ್ತು ಸಾಂಸ್ಕೃತಿಕ ಶುದ್ಧತೆಯನ್ನು ಉಳಿಸಿಕೊಳ್ಳುವ ಉದ್ದೇಶದಿಂದ ಜರ್ಮನಿ, ಯಹೂದಿ ಎಂಬ ಸೆಮಿಟಿಕ್ ಜನಾಂಗಗಳಿಂದ ತನ್ನನ್ನು ಶುದ್ಧೀಕರಿಸುವ ಮೂಲಕ ಇಡೀ ಜಗತ್ತೇ ಆಘಾತಪಡುವಂತೆ ಮಾಡಿತು. ಒಂದೇ ದೇಶದಲ್ಲಿ ಭಿನ್ನ ಮೂಲಗಳ ಜನಾಂಗಗಳು ಮತ್ತು ಸಂಸ್ಕೃತಿಗಳು ನೆಲೆಸುವುದು ಅಸಾಧ್ಯವೆನ್ನುವುದನ್ನು ಜರ್ಮನಿ ತೋರಿಸಿದೆ. ಇದು ಹಿಂದೂಸ್ಥಾನಕ್ಕೆ ಪಾಠವಾಗಿದ್ದು ಅದರ ಲಾಭವನ್ನು ಪಡೆದುಕೊಳ್ಳಬೇಕಿದೆ.
ಇದು ಭಾರತ ಸ್ವಾತಂತ್ರಕ್ಕಾಗಿ ಹೋರಾಡುತ್ತಿದ್ದ ಕಾಲದ ಹಳೆ ಪುಸ್ತಕ ಎಂದು ನೀವು ಹೇಳಬಹುದು. ಆದರೆ ಅವರ ಇನ್ನೊಂದು ಪುಸ್ತಕವಿದೆ-ಬಂಚ್ ಆ್ ಥಾಟ್ಸ್. 1966ರಲ್ಲಿ ಮುದ್ರಣಗೊಂಡ ಈ ಪುಸ್ತಕದ ಒಂದು ಉದಾಹರಣೆಯನ್ನು ನೀಡುತ್ತೇನೆ. ಈ ಪುಸ್ತಕದಲ್ಲಿ ಭಾರತದ ಆಂತರಿಕ ಭದ್ರತಾ ಸಮಸ್ಯೆ ಬಗ್ಗೆ ಮಾತನಾಡುವ ಗುರೂಜಿ ಮೂರು ಆಂತರಿಕ ಅಪಾಯಗಳನ್ನು ಗುರುತಿಸುತ್ತಾರೆ. ಒಂದು ಮುಸ್ಲಿಮರು, ಎರಡನೆಯದು ಕ್ರೈಸ್ತರು ಮತ್ತು ಮೂರನೆಯದು ಕಮ್ಯುನಿಸ್ಟರು. ಗುರೂಜಿಯ ಪ್ರಕಾರ, ಪ್ರತಿಯೊಬ್ಬ ಮುಸಲ್ಮಾನ, ಪ್ರತಿಯೊಬ್ಬ ಕ್ರೈಸ್ತ ಮತ್ತು ಪ್ರತಿಯೊಬ್ಬ ಕಮ್ಯುನಿಸ್ಟ್ ಭಾರತದ ಭದ್ರತೆಗೆ ಅಪಾಯಕಾರಿ. ಅವರ ಸಿದ್ಧಾಂತ ಈ ರೀತಿಯಿತ್ತು. ನಮ್ಮ ನಡುವೆ ಇದ್ದ ಎರಡನೇ ದೊಡ್ಡ ಭಿನ್ನಾಭಿಪ್ರಾಯ ಜಾತಿ ವಿಷಯಕ್ಕೆ ಸಂಬಂಸಿದ್ದಾಗಿದೆ. ಅವರು ಜಾತಿ ವ್ಯವಸ್ಥೆಯ ಬೆಂಬಲಿಗರಾಗಿದ್ದರೆ ಸಮಾಜವಾದಿ ಗಳಾಗಿದ್ದ ನನ್ನಂಥವರು ಜಾತಿ ವ್ಯವಸ್ಥೆಯ ಕಟುವಿರೋಗಳಾಗಿದ್ದರು. ನನ್ನನ್ನು ನಾನು ಬ್ರಾಹ್ಮಣವಾದ ಮತ್ತು ಜಾತಿ ವ್ಯವಸ್ಥೆಯ ಅತ್ಯಂತ ದೊಡ್ಡ ಶತ್ರು ಎಂದು ಪರಿಗಣಿಸುತ್ತೇನೆ.
ಭಾರತದಲ್ಲಿ ಜಾತಿ ವ್ಯವಸ್ಥೆ ಮತ್ತು ಅದಕ್ಕೆ ಸಂಬಂಸಿದ ಅಸಮಾನತೆಗಳನ್ನು ನಾಶಗೊಳಿಸದ ಹೊರತು ಆರ್ಥಿಕ ಮತ್ತು ಸಾಮಾಜಿಕ ಸಮಾನತೆ ತರುವುದು ಅಸಾಧ್ಯ ಎನ್ನುವುದು ನನ್ನ ಅನಿಸಿಕೆ. ಸಂಘ ಪರಿವಾರ ಮತ್ತು ನಮ್ಮ ಮಧ್ಯೆ ಭಾಷೆಗೆ ಸಂಬಂಸಿದಂತೆಯೂ ಭಿನ್ನಾಭಿಪ್ರಾಯಗಳಿದ್ದವು. ನಾವು ಜನರ ಭಾಷೆಗಳನ್ನು ಪ್ರೋತ್ಸಾಹಿಸುವ ನಿಲುವನ್ನು ಹೊಂದಿದ್ದರೆ ಗುರೂಜಿ ಮತ್ತು ಸಂಘ ಪರಿವಾರ ಹಿಂದಿಯನ್ನು ಸಾಮಾನ್ಯ ಭಾಷೆಯನ್ನಾಗಿ ಮಾಡಿ ಅಂತಿಮವಾಗಿ ಸಂಸ್ಕೃತವನ್ನು ರಾಷ್ಟ್ರೀಯ ಭಾಷೆಯನ್ನಾಗಿ ಮಾಡುವ ಉದ್ದೇಶವನ್ನು ಹೊಂದಿತ್ತು. ಸ್ವಾತಂತ್ರಕ್ಕಾಗಿ ನಡೆದ ರಾಷ್ಟ್ರೀಯ ಹೋರಾಟದ ಸಂದರ್ಭದಲ್ಲಿ ಸಂಯುಕ್ತ ರಾಷ್ಟ್ರದ ಪರಿಕಲ್ಪನೆಯನ್ನು ಒಪ್ಪಿಕೊಳ್ಳಲಾಗಿತ್ತು. ಅದರಂತೆ, ಕೇಂದ್ರಕ್ಕೆ ಕೆಲವೊಂದು ವಿಷಯದಲ್ಲಿ ಸಂಪೂರ್ಣ ಅಕಾರವಿದ್ದು ಇನ್ನುಳಿದ ವಿಷಯಗಳಲ್ಲಿ ಕೇಂದ್ರ ಮತ್ತು ರಾಜ್ಯಗಳು ಜಂಟಿಯಾಗಿ ನಿರ್ಧಾರ ತೆಗೆದುಕೊಳ್ಳಬೇಕಾಗಿತ್ತು. ಸಂವಿಧಾನದಲ್ಲೂ ಇದೇ ಉಲ್ಲೇಖವನ್ನು ಮಾಡಲಾದ ಕಾರಣ ಸಂಯುಕ್ತ ರಾಷ್ಟ್ರ ನಿರ್ಮಾಣಗೊಂಡಿತು.
ಲೋಹಿಯಾ ಸೇರಿದಂತೆ ಸಮಾಜವಾದಿ ಮುಖಂಡರ ಜೊತೆ ಮಧು ಲಿಮಯೆ
ಆದರೆ ಸಂಘಪರಿವಾರ ಮತ್ತು ಗುರೂಜಿ ಈ ಸಾಂವಿಧಾನಿಕ ನಿಬಂಧನೆಯನ್ನು ವಿರೋಸುತ್ತಲೇ ಬಂದರು. ಅವರು ರಾಜ್ಯಗಳ ಒಕ್ಕೂಟ ಎಂಬ ಪರಿಕಲ್ಪನೆಯನ್ನು ಅಪಹಾಸ್ಯಗೈದರು ಮತ್ತು ರಾಜ್ಯಗಳ ಒಕ್ಕೂಟವನ್ನು ಪ್ರತಿಪಾದಿಸುವ ಈ ಸಂವಿಧಾನವನ್ನು ತೆಗೆದುಹಾಕಬೇಕು ಎಂದು ವಾದಿಸಿದರು. ಸಂವಿಧಾನವನ್ನು ಮರುಪರಿಶೀಲಿಸಬೇಕು ಮತ್ತು ಏಕೈಕ ರಾಷ್ಟ್ರದ ಪರಿಕಲ್ಪನೆಯನ್ನು ಅಳವಡಿಸಿಕೊಳ್ಳಬೇಕು ಎನ್ನುವುದು ಗುರೂಜಿ ವಾದವಾಗಿತ್ತು. ಇಂದಿರಾ ಗಾಂ ತುರ್ತುಪರಿಸ್ಥಿತಿ ಹೇರಿದ ಸಂದರ್ಭದಲ್ಲಿ ನಾವು ಸಂಘಪರಿವಾರ ಮತ್ತು ಜನಸಂಘದ ಜೊತೆ ಮೈತ್ರಿ ಮಾಡಿಕೊಂಡಿದ್ದು ನಿಜ. ವಿರೋಧ ಪಕ್ಷಗಳು ಒಗ್ಗಟ್ಟಾಗದಿದ್ದರೆ ಇಂದಿರಾ ಗಾಂಯನ್ನು ಸೋಲಿಸುವುದು ಅಸಾಧ್ಯ ಎಂದು ಲೋಕ ನಾಯಕ ಜಯಪ್ರಕಾಶ್ ನಾರಾಯಣ್ ನಂಬಿದ್ದರು. ಚೌಧರಿ ಚರಣ್ ಸಿಂಗ್ ಕೂಡಾ ನಾವೆಲ್ಲ ಒಗ್ಗಟ್ಟಾಗಿ ಒಂದು ಪಕ್ಷವನ್ನು ರಚಿಸಬೇಕು ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದರು. ನಾವು ಚುನಾವಣೆಗೆ ಸ್ಪರ್ಸಬೇಕು ಎನ್ನುವುದು ನನ್ನ ಅನಿಸಿಕೆಯಾಗಿತ್ತು. ನಾವೆಲ್ಲ ಒಗ್ಗಟ್ಟಾಗದಿದ್ದರೆ ಯಶಸ್ಸು ಗಳಿಸುವುದು ಅಸಾಧ್ಯ ಎಂಬ ನಿಲುವಿಗೆ ಜಯಪ್ರಕಾಶ್ ನಾರಾಯಣ್ ಮತ್ತು ಇತರ ನಾಯಕರು ಬಂದಿದ್ದ ಕಾರಣ ನಾವು ಸಮಾಜವಾದಿಗಳು ನಮ್ಮ ಒಪ್ಪಿಗೆಯನ್ನು ನೀಡಿದೆವು. ಆದರೆ ನಾವು ರಾಜಕೀಯ ಪಕ್ಷಗಳಾದ ಜನಸಂಘ, ಸಮಾಜವಾದಿ ಪಕ್ಷ, ಭಾರತೀಯ ಲೋಕದಳ ಹಾಗೂ ಇತರ ಪಕ್ಷಗಳ ಜೊತೆ ಹೊಂದಾಣಿಕೆ ಮಾಡಿಕೊಂಡಿದ್ದೇವೆಯೇ ಹೊರತು ಸಂಘ ಪರಿವಾರದ ಯಾವ ಬೇಡಿಕೆಯನ್ನೂ ಒಪ್ಪಿರಲಿಲ್ಲ.
ಹೀಗೆ ರೂಪುಗೊಂಡ ಜನತಾಪಕ್ಷದ ಚುನಾವಣಾ ಪ್ರಣಾಳಿಕೆ ಯಾವುದೇ ರೀತಿಯಲ್ಲೂ ಸಂಘಪರಿವಾರದ ಬೇಡಿಕೆಗಳನ್ನು ಪ್ರತಿಲಿಸುತ್ತಿರಲಿಲ್ಲ. ಪಕ್ಷದ ಪ್ರಣಾಳಿಕೆ ಜಾತ್ಯತೀತ, ಪ್ರಜಾಸತ್ತಾತ್ಮಕ ಮತ್ತು ಗಾಂ ತತ್ವಗಳನ್ನು ಆಧರಿಸಿದ ಸಮಾಜವನ್ನು ಪ್ರತಿಬಿಂಬಿಸುತ್ತಿತ್ತೇ ಹೊರತು ಹಿಂದೂ ರಾಷ್ಟ್ರದ ಉಲ್ಲೇಖ ಎಲ್ಲೂ ಇರಲಿಲ್ಲ. 1977ರಲ್ಲಿ ವಿಧಾನಸಭಾ ಚುನಾವಣೆಯಲ್ಲಿ ನಾಲ್ಕು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದಲ್ಲಿ ಜನತಾ ಪಕ್ಷ ಅಕಾರಕ್ಕೇರುವ ಮೂಲಕ ನಾವು ನಮ್ಮನ್ನು ಬದಲಾಯಿಸಿಕೊಳ್ಳಬೇಕಾದ ಅಗತ್ಯವಿಲ್ಲ ಎಂಬ ನಿಲುವಿಗೆ ಸಂಘಪರಿವಾರ ತಲುಪಿತು. ಸದ್ಯ ನಾಲ್ಕು ರಾಜ್ಯಗಳಲ್ಲಿ ಅಕಾರಕ್ಕೇರಿರುವ ನಾವು ಮುಂದೆ ಇನ್ನಿತರ ರಾಜ್ಯಗಳಲ್ಲಿ ಮತ್ತು ಕೇಂದ್ರದಲ್ಲೂ ಅಕಾರ ಪಡೆಯಬಹುದು ಎಂಬುದು ಅವರಿಗೆ ಸ್ಪಷ್ಟವಾಗಿತ್ತು. ಸಂಘಪರಿವಾರದ ಉದ್ದೇಶ ಜನರ ಬದುಕಿನ ಪ್ರತಿಯೊಂದು ಆಯಾಮಕ್ಕೆ ಪ್ರವೇಶಿಸುವುದು ಮಾತ್ರವಲ್ಲ ಅದನ್ನು ನಿಯಂತ್ರಿಸುವುದಾಗಿದೆ. ಇದೇ ನಿಲುವನ್ನು ಗುರೂಜಿಯ ಪುಸ್ತಕಗಳಲ್ಲಿ ಕಾಣಬಹುದಾಗಿದೆ.
ಯಾವುದೇ ಸರ್ವಾಕಾರಿ ಸಂಘಟನೆಯೂ ಸ್ವಾತಂತ್ರಕ್ಕೆ ಯಾವುದೇ ಎಡೆಮಾಡಿಕೊಡುವುದಿಲ್ಲ. ಅದರ ಕಪಿಮುಷ್ಟಿ ಕಲೆ, ಸಂಗೀತ, ಆರ್ಥಿಕತೆ, ಸಂಸ್ಕೃತಿ ಹೀಗೆ ಎಲ್ಲೆಡೆಯೂ ವ್ಯಾಪಿಸಿರುತ್ತದೆ. ಇದು ಮತಾಂಧ ಸಂಘಟನೆಯ ಪ್ರಮುಖ ಅಂಶ. ಸಂಘ ಪರಿವಾರದ ಸದಸ್ಯರು ಇತರ ಸಮಯಗಳಲ್ಲಿ ಏನು ಮಾಡುತ್ತಾರೆ ಎನ್ನುವುದು ಮುಖ್ಯವಲ್ಲ. ಅವರೆಂದಾದರೂ ನಾವು ಗುರೂಜಿಯ ಯೋಚನೆಯ ಹಾದಿಯನ್ನು ತೊರೆಯುತ್ತಿದ್ದೇವೆ ಎಂದು ಹೇಳಿದ್ದಾರೆಯೇ? ಜೈಲಿನಲ್ಲಿ ಇರುವಾಗ ಇವರು ಕ್ಷಮೆಗಾಗಿ ವಿನಂತಿ ಮಾಡಿಕೊಂಡಿದ್ದರು. ರಾಜ ನಾರಾಯಣ್ ಪ್ರಕರಣದಲ್ಲಿ ಸರ್ವೋಚ್ಚ ನ್ಯಾಯಾಲಯ ಇಂದಿರಾ ಗಾಂ ಪರ ತೀರ್ಪು ನೀಡಿದಾಗ ಬಾಳಾ ಸಾಹೇಬ್ ದಿಯೋರಸ್ ಇಂದಿರಾ ಗಾಂಯವರನ್ನು ಅಭಿನಂದಿಸಿದ್ದರು. ಸಂಘ ಪರಿವಾರದವರ ಹೇಳಿಕೆಗಳ ಮೇಲೆ ನನಗೆ ನಂಬಿಕೆಯಿಲ್ಲ. ಜನಸಂಘದ ನಾಯಕರು ಜನತಾ ಪಕ್ಷದಲ್ಲಿದ್ದ ಸಮಯದಲ್ಲಿ ಸಂಘಪರಿವಾರದ ನಾಯಕರನ್ನು ಪಕ್ಷದಿಂದ ಉಚ್ಚಾಟಿಸಿದ್ದರೆ, ಅವರನ್ನು ಕಾರ್ಯಕಾರಿ ಸಮಿತಿಯಿಂದ ತೆಗೆದುಹಾಕಿದ್ದರೆ, ಸಂಘ ಪರಿವಾರದ ಚಟುವಟಿಕೆಗಳ ಮೇಲೆ ನಿರ್ಬಂಧ ಹೇರಿದ್ದರೆ ಮತ್ತು ಮುಖ್ಯವಾಗಿ ನಾನಾಜಿ ದೇಶ್ಮುಖ್, ಸುಂದರ್ ಸಿಂಗ್ ಭಂಡಾರಿ ಮತ್ತು ಇತರರನ್ನು ಉಚ್ಚಾಟಿಸಿದ್ದರೆ ಮಾತ್ರ ನಾನು ಈ ಮಂದಿಯನ್ನು ನಂಬುತ್ತಿದ್ದೆ.