ಸ್ಪೈವೇರ್ ಭೀತಿ: ವಿಶ್ವದ ಎಲ್ಲಾ ಬಳಕೆದಾರರಿಗೆ ವಾಟ್ಸ್ಯಾಪ್ ನಿಂದ ಮಹತ್ವದ ಸೂಚನೆ!

Update: 2019-05-14 10:11 GMT

ನ್ಯೂಯಾರ್ಕ್, ಮೇ 14: ಇಸ್ರೇಲ್ ನ ಸೈಬರ್ ಇಂಟಲಿಜೆನ್ಸ್ ಕಂಪೆನಿ ಎನ್‍ಎಸ್‍ಒ ಗ್ರೂಪ್ ಅಭಿವೃದ್ಧಿ ಪಡಿಸಿದ ಸ್ಪೈವೇರ್  ವಾಟ್ಸ್ಯಾಪ್ ಬಳಕೆದಾರರ ಮೊಬೈಲ್ ಫೋನ್  ಅನ್ನು ವಾಟ್ಸ್ಯಾಪ್ ಫೋನ್ ಕಾಲ್ ಫಂಕ್ಷನ್ ಮೂಲಕ ಪ್ರವೇಶಿಸಿ  ಸಮಸ್ಯೆ ಸೃಷಿಸಬಹುದೆಂಬ  ಆತಂಕದಿಂದ ತನ್ನ ಬಳಕೆದಾರರಿಗೆ ತನ್ನ ಲೇಟೆಸ್ಟ್ ವರ್ಷನ್ ಗೆ ಅಪ್‍ಡೇಟ್ ಮಾಡಿಕೊಳ್ಳುವಂತೆ ವಾಟ್ಸ್ಯಾಪ್ ಸಲಹೆ ನೀಡಿದೆ.

ಶಂಕಾಸ್ಪದ ಕೋಡ್ ಅನ್ನು ಹ್ಯಾಕರುಗಳು ಒಂದು ನಿರ್ದಿಷ್ಟ ಮೊಬೈಲ್ ಗೆ ಅದರ ಬಳಕೆದಾರನಿಗೆ ಕರೆ ಮಾಡುವ ಮೂಲಕ  ಕಳುಹಿಸಿ ಆ ನಿರ್ದಿಷ್ಟ ಕರೆಯನ್ನು ಬಳಕೆದಾರ ಸ್ವೀಕರಿಸಿದರೂ ಸ್ವೀಕರಿಸದೇ ಇದ್ದರೂ ಬಾಧಿಸುವಂತೆ ಮಾಡುತ್ತಾರೆ. ಒಳಬರುವ ಕರೆಗಳ ಮಾಹಿತಿಗಳು ಇದರಿಂದಾಗಿ ತಾನಾಗಿಯೇ ಅಳಿಸಿ ಹೋಗುವುದೆಂದು ತಿಳಿದು ಬಂದಿದೆ.

ಇದು ಗಮನಕ್ಕೆ ಬರುತ್ತಿದ್ದಂತೆಯೇ ವಾಟ್ಸ್ಯಾಪ್ ಸೂಕ್ತ ನಿವಾರಣೋಪಾಯಗಳನ್ನು ಕೈಗೊಂಡಿದೆ. ಸೋಮವಾರ ವಾಟ್ಸ್ಯಾಪ್ ಹೊಸ ಅಪ್‍ಡೇಟ್ ಘೋಷಿಸಿದ್ದು ಅದನ್ನು ಬಳಸುವಂತೆ ಬಳಕೆದಾರರಿಗೆ ಸಲಹೆ ನೀಡುತ್ತಿದೆ.

ಎನ್‍ಎಸ್‍ಒ ವಿರುದ್ಧ ಮೆಕ್ಸಿಕನ್ ಪತ್ರಕರ್ತರು ಮತ್ತು ಕೆಲವರು ದಾಖಲಿಸಿದ್ದ ಕೋರ್ಟ್ ಪ್ರಕರಣದಲ್ಲಿ ಪ್ರತಿವಾದಿಗಳ ವಕೀಲರಾಗಿರುವ ಇಂಗ್ಲೆಂಡ್ ಮೂಲದ ಅಟಾರ್ನಿ ಒಬ್ಬರ ಫೋನ್ ಮೇಲೆ ಈ ಸ್ಪೈವೇರ್ ದಾಳಿ ಯತ್ನ ಮೇ 12ರಂದು ನಡೆದಿತ್ತೆನ್ನಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News