ಇಬ್ಬರು ಮಹಿಳೆಯರು, ಇಬ್ಬರು ಪೊಲೀಸರು

Update: 2019-06-03 10:20 GMT

ಭಾಗ-1

ಬಿಜೆಪಿ ಮತ್ತು ಅದರ ಬೆಂಬಲಿಗರ ದ್ವಿಮುಖ ನೀತಿ ಅಸಾಮಾನ್ಯವಾದುದು. ಮುಸ್ಲಿಂ, ದಲಿತ ಅಥವಾ ಆದಿವಾಸಿ ವಿಚಾರಣಾಧೀನ ಕೈದಿಗಳು ಪೊಲೀಸ್ ಕಸ್ಟಡಿಯಲ್ಲಿ ಚಿತ್ರಹಿಂಸೆಗೆ ಗುರಿಯಾಗಿದ್ದಾರೆಂದು ಜನರು ಹೇಳಿದರೆ ಅಂಥವರನ್ನು ಭಾರತದಲ್ಲಿ ರಾಷ್ಟ್ರ ವಿರೋಧಿಗಳೆಂದು ಹೇಳಲಾಗುತ್ತದೆ.

2004ರಲ್ಲಿ ಅಹ್ಮದಾಬಾದ್‌ನ ಹೊರವಲಯದಲ್ಲಿ ಪೊಲೀಸ್ ಎನ್‌ಕೌಂಟರ್ ಎನ್ನಲಾದ ಒಂದು ಎನ್‌ಕೌಂಟರ್‌ನಲ್ಲಿ ಮಹಾರಾಷ್ಟ್ರದ ಮುಂಬ್ರಾದ ಓರ್ವ ಕಾಲೇಜು ವಿದ್ಯಾರ್ಥಿನಿ ಇಶ್ರತ್ ಜಹಾನ್ ಕೊಲ್ಲಲ್ಪಟ್ಟಳು. ಬಳಿಕ, ಅವಳ ಅಪರಾಧವಾಗಲಿ ಅಥವಾ ಅವಳನ್ನು ಕೊಂದ ಪೊಲೀಸರ ನಿರ್ದೋಷಿತನವಾಗಲಿ ನ್ಯಾಯಾಲಯದಲ್ಲಿ ಸಾಬೀತಾಗದೆಯೇ ಅವಳ ಮೇಲೆ ಭಯೋತ್ಪಾದನೆಯ ಆಪಾದನೆ ಹೊರಿಸಲಾಯಿತು. ಅವಳು ಭಯೋತ್ಪಾದಕಿ ಎಂದು ಘೋಷಿಸಲಾಯಿತು.

ಇನ್ನೊಂದೆಡೆ, ಪ್ರಜ್ಞಾಸಿಂಗ್ ಠಾಕೂರ್ ಅಪರಾಧಿಯಲ್ಲವೆಂದು ಘೋಷಿಸಲಾಯಿತು. ಆಕೆ ಇನ್ನೂ ಭಯೋತ್ಪಾದನೆಯ ಆಪಾದನೆಯ ಮೇರೆಗೆ ವಿಚಾರಣೆ ಎದುರಿಸುತ್ತಿದ್ದಾರೆ. ಸಂಸತ್ ಚುನಾವಣೆಯಲ್ಲಿ ಬಿಜೆಪಿಯ ಅಭ್ಯರ್ಥಿಯಾಗಿ ಆಕೆ ಉತ್ತಮ ಅಂತರದಿಂದ ಚುನಾವಣೆಯಲ್ಲಿ ಗೆದ್ದಿದ್ದಾರೆ.
ಪೊಲೀಸ್ ಅಧಿಕಾರಿ ಹೇಮಂತ್ ಕರ್ಕರೆಯವರು ಠಾಕೂರ್, ಲೆಫ್ಟಿನಂಟ್ ಕರ್ನಲ್ ಶ್ರೀಕಾಂತ್ ಪುರೋಹಿತ್ ಮತ್ತು ಇತರರ ವಿರುದ್ಧ, ಅವರು 2008ರಲ್ಲಿ ನಡೆದ ಮಾಲೇಗಾಂವ್ ಸ್ಫೋಟದಲ್ಲಿ ವಹಿಸಿದ್ದರೆನ್ನಲಾದ ಪಾತ್ರಕ್ಕಾಗಿ ಪುರಾವೆ ಆಧಾರಿತ ಪ್ರಕರಣ ದಾಖಲಿಸಿದ್ದರು. ಮುಂಬೈಯಲ್ಲಿ ನಡೆದ ಭಯೋತ್ಪಾದಕ ದಾಳಿಯ ವಿರುದ್ಧ ಹೋರಾಡಿ ಕೊಲ್ಲಲ್ಪಟ್ಟ ಅವರಿಗೆ ಮರಣೋತ್ತರ ಅಶೋಕ ಚಕ್ರ ಪ್ರಶಸ್ತಿ ನೀಡಲಾಯಿತು. ಹತ್ತು ವರ್ಷಗಳ ಬಳಿಕ, ಪೊಲೀಸ್ ಕಸ್ಟಡಿಯಲ್ಲಿ ಠಾಕೂರ್‌ಗೆ ಚಿತ್ರಹಿಂಸೆ ನೀಡಿದ್ದರೆಂದು ಅವರ ಮೇಲೆ ಆಪಾದನೆ ಹೊರಿಸಲಾಗಿದೆ ಮತ್ತು ಹಿಂದಿನ ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರ ಹೂಡಿದ್ದ ಒಂದು ‘ಹಿಂದೂ-ವಿರೋಧಿ’ ಒಳಸಂಚಿನಲ್ಲಿ ಅವರು ಒಂದು ದಾಳವಾಗಿದ್ದರೆಂದು ಈಗ ಅವರ ಮೇಲೆ ಯಾವುದೇ ಪುರಾವೆ ಇಲ್ಲದೆ, ಆಪಾದನೆ ಹೇರಲಾಗಿದೆ.
ಇಶ್ರತ್ ಜಹಾನ್‌ಳ ಅಪಹರಣ ಮತ್ತು ಕೊಲೆ ಆರೋಪದ ವಿಚಾರಣೆಯಿಂದ ಮಾಜಿ ಪೊಲೀಸ್ ಅಧಿಕಾರಿ ಡಿ.ಜಿ. ವಂಝಾರಾರನ್ನು ಗುಜರಾತ್ ಸರಕಾರ ರಕ್ಷಿಸುತ್ತಾ ಬಂದಿದೆ. ಮೇ 2 ರಂದು ವಿಶೇಷ ಸಿಬಿಐ ನ್ಯಾಯಾಲಯವೊಂದು ಅವರ ಸಹದ್ಯೋಗಿ ಎನ್.ಕೆ. ಅಮಾನ್ ವಿರುದ್ಧದ ವಿಚಾರಣೆಯನ್ನು ಕೈಬಿಟ್ಟಿದೆ.
ಇದೆಲ್ಲ ಭಾರತದ ನ್ಯಾಯದಾನ ವ್ಯವಸ್ಥೆ, ರಾಜಕೀಯ ವ್ಯವಸ್ಥೆ ಮತ್ತು ಭಾರತೀಯರ ಬಗ್ಗೆ ಏನು ಹೇಳುತ್ತದೆ?
ಜಹಾನ್ ಮತ್ತು ಠಾಕೂರ್, ಕರ್ಕರೆ ಮತ್ತು ವಂಝಾರಾರವರ ಅವ್ಯವಸ್ಥೆಯನ್ನು, ಹಣೆಬರಹವನ್ನು ಒಪ್ಪಿಕೊಳ್ಳಲು, ಸ್ವೀಕರಿಸಲು ಹೇಳುವ ಮೂಲಕ ಆಳುವ ಬಿಜೆಪಿ ಭಾರತೀಯರ ಅತ್ಯಂತ ಕೆಟ್ಟ ಪೂರ್ವಾಗ್ರಹಗಳನ್ನು ಸ್ವೀಕಾರಾರ್ಹವಾಗಿಸುತ್ತಿದೆ.
ಪೊಲೀಸರು ಮತ್ತು ಸರಕಾರವು ಒಬ್ಬಳು ಮೃತ ಮುಸ್ಲಿಂ ಹದಿಹರೆಯದಾಕೆಯನ್ನು ಭಯೋತ್ಪಾದಕಿ ಎಂದರೆ, ಕೇಸರಿ ಬಣ್ಣದ ಉಡುಪು ಧರಿಸಿದ ಒಬ್ಬಾಕೆ ಭಯೋತ್ಪಾದಕಿಯಾಗಲು ಸಾಧ್ಯವಿಲ್ಲ ಎಂದು ಹೇಳಿದರೆ ಭಾರತೀಯರು ಒಪ್ಪಿಬಿಡುತ್ತಾರೆಂದು ಅದು ತಿಳಿಸಿದೆ. ಮಹಾರಾಷ್ಟ್ರದ ವಾರ್ಧಾದಲ್ಲಿ ಎಪ್ರಿಲ್ 1ರಂದು ನಡೆದ ರ್ಯಾಲಿಯೊಂದರಲ್ಲಿ ಪ್ರಧಾನಿ ಮೋದಿ ಇದನ್ನೇ ಹೇಳಿದರು : ಯಾವನೇ ಒಬ್ಬಳು ಹಿಂದೂ ಭಯೋತ್ಪಾದಕ/ಕಿ ಆಗಿರಲೂ ಇಲ್ಲ ; ಆಗಲು ಎಂದಿಗೂ ಸಾಧ್ಯವಿಲ್ಲ ಎಂದು ಅವರು ಹೇಳಿದರು.
ಬಿಜೆಪಿ ಮತ್ತು ಅದರ ಬೆಂಬಲಿಗರ ದ್ವಿಮುಖ ನೀತಿ ಅಸಾಮಾನ್ಯವಾದುದು. ಮುಸ್ಲಿಂ, ದಲಿತ ಅಥವಾ ಆದಿವಾಸಿ ವಿಚಾರಣಾಧೀನ ಕೈದಿಗಳು ಪೊಲೀಸ್ ಕಸ್ಟಡಿಯಲ್ಲಿ ಚಿತ್ರಹಿಂಸೆಗೆ ಗುರಿಯಾಗಿದ್ದಾರೆಂದು ಜನರು ಹೇಳಿದರೆ ಅಂಥವರನ್ನು ಭಾರತದಲ್ಲಿ ರಾಷ್ಟ್ರ ವಿರೋಧಿಗಳೆಂದು ಹೇಳಲಾಗುತ್ತದೆ.
ನಾವು ಭಾರತೀಯರು ಬಿಜೆಪಿ ಮತ್ತು ಅದರ ಬೆಂಬಲಿಗರು ತಿಳಿದಷ್ಟು ಪೂರ್ವಗ್ರಹ ಪೀಡಿತರೇ? ಮತಾಂಧರೇ? ಈ ಪ್ರಶ್ನೆಗೆ ಪ್ರತಿಯೊಬ್ಬ ಭಾರತೀಯನೂ ಆತ್ಮಾವಲೋಕನ ಮಾಡಿಕೊಂಡು ಉತ್ತರ ಹೇಳಬೇಕಾದ ಅಗತ್ಯವಿದೆ. ನಾವು ಒಂದೊಂದಾಗಿ ವಾಸ್ತವ ಸಂಗತಿಗಳನ್ನು ಪರಿಶೀಲಿಸೋಣ.


 ವಂಝಾರಾ ಮತ್ತು ಇತರರ ವಿರುದ್ಧದ ಪ್ರಕರಣ ರಾಜಕೀಯ ಪ್ರೇರಿತವೇ?
 ಗುಜರಾತಿನ ಮಾಜಿ ಪೊಲೀಸ್ ಅಧಿಕಾರಿಗಳಾದ ಡಿಜಿ ವಂಝಾರಾ ಮತ್ತು ಎನ್.ಕೆ. ಅಮೀನ್,ಇಶ್ರತ್ ಜಹಾನ್ ನಕಲಿ ಪೊಲೀಸ್ ಎನ್‌ಕೌಂಟರ್ ಪ್ರಕರಣದಲ್ಲಿ ವಹಿಸಿದ್ದರೆನ್ನಲಾದ ಪಾತ್ರಕ್ಕಾಗಿ ಅವರ ವಿರುದ್ಧ ವಿಚಾರಣೆ ನಡೆಸಲು ಗುಜರಾತ್ ಸರಕಾರವು ಸಿಬಿಐಗೆ ಅನುಮತಿ ನೀಡಲಿಲ್ಲ. ಪರಿಣಾಮವಾಗಿ,ಮೇ 2 ರಂದು ವಿಶೇಷ ಸಿಬಿಐ ನ್ಯಾಯಾಲಯವೊಂದು ಅವರ ವಿರುದ್ಧದ ವಿಚಾರಣೆಯನ್ನು ಕೈಬಿಟ್ಟಿತು.ಅವರ ವಿರುದ್ಧ ಅಂದಿನ ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರ ಒಳಸಂಚು ಹೂಡಿತ್ತೆಂದು ಬಿಜೆಪಿ ವಾದಿಸಿದೆ.ಆದರೆ ಪುರಾವೆ ಇದೆಯೇ?

 ರಾಷ್ಟ್ರೀಯ ಮಾನವ ಹಕ್ಕು ಆಯೋಗ ಹೇಳಿರುವ ಮತ್ತು ಸುಪ್ರೀಂ ಕೋರ್ಟ್ ಎತ್ತಿಹಿಡಿದಿರುವ ಮಾರ್ಗದರ್ಶಿ ನಿಯಮಗಳ ಪ್ರಕಾರ, ಪೊಲೀಸ್ ಫೈರಿಂಗ್‌ನಲ್ಲಿ ಸಂಭವಿಸುವ ಪ್ರತಿಯೊಂದು ಸಾವಿನ ಪ್ರಕರಣದಲ್ಲೂ ಎಫ್‌ಐಆರ್ ದಾಖಲಿಸಬೇಕು ಮತ್ತು ಓರ್ವ ನ್ಯಾಯಾಧೀಶರಿಂದ ವಿಚಾರಣೆ ನಡೆಯಬೇಕು.
 ಇಶ್ರತ್ ಜಹಾನ್ ಪ್ರಕರಣದ ವಿಚಾರಣೆ ನಡೆಸಿದ ಮ್ಯಾಜಿಸ್ಟ್ರೇಟ್ ಎಸ್‌ಪಿ ತಮಾಂಗ್ ವಿಧಿ ವಿಜ್ಞಾನ ಪುರಾವೆ ಮತ್ತು ಮರಣೋತ್ತರ ವರದಿಗಳನ್ನು ಪರಿಶೀಲಿಸಿದ ಬಳಿಕ, ಈ ಪ್ರಕರಣದಲ್ಲಿ ಪೊಲೀಸರು ನೀಡಿರುವ ಹೇಳಿಕೆ ಹಾಗೂ ವಿವರಣೆಗಳು ‘‘ಸಂಪೂರ್ಣವಾಗಿ ಸುಳ್ಳು ಮತ್ತು ಒಂದು ಕಟ್ಟು ಕತೆ’’ ಎಂಬ ತೀರ್ಮಾನಕ್ಕೆ ಬಂದರು. ಇಶ್ರತ್ ಮತ್ತು ಇತರ ಮೂವರ ಹೊಟ್ಟೆಯಲ್ಲಿದ್ದ ಅರೆ ಜೀರ್ಣವಾದ ಆಹಾರವು, ಪೊಲೀಸರು ಎನ್‌ಕೌಂಟರ್ ನಡೆಸುವ ಹಲವು ಗಂಟೆಗಳ ಮೊದಲೇ, ಅವರನ್ನು ಹತ್ಯೆ ಗೈಯಲಾಗಿತ್ತೆಂಬುದನ್ನು ಸಾಬೀತು ಪಡಿಸಿತ್ತು. ಅಲ್ಲದೆ, ಎನ್‌ಕೌಂಟರ್ ವೇಳೆ ತಾವು 70 ಗುಂಡುಗಳನ್ನು ಹಾರಿಸಿರುವುದಾಗಿ ಪೊಲೀಸರು ಹೇಳಿದ್ದರು.ಆದರೆ ಎನ್‌ಕೌಂಟರ್ ನಡೆದ ಸ್ಥಳದಲ್ಲಿ ಯಾವುದೇ ಗುಂಡುಗಳು ಕಂಡುಬರಲಿಲ್ಲ ಎಂಬುದನ್ನು ತಮಾಂಗ್ ಗಮನಿಸಿದರು.
ತಮಾಂಗ್‌ರವರ ವರದಿಯನ್ನಾಧರಿಸಿ, ಒಂದು ವಿಶೇಷ ತನಿಖಾ ತಂಡ (ಎಸ್‌ಐಟಿ) ಪ್ರಕರಣದ ವಿಚಾರಣೆ ನಡೆಸಬೇಕೆಂದು ಗುಜರಾತ್ ಹೈಕೋರ್ಟ್‌ಆಜ್ಞೆ ಮಾಡಿತು. ಅದರಂತೆ ವಿಚಾರಣೆ ನಡೆಸಿ 2011 ರಲ್ಲಿ ವರದಿ ಸಲ್ಲಿಸಿದ ಎಸ್‌ಐಟಿ, ಪೊಲೀಸರು ‘‘ನಡೆಸಿದ್ದೇವೆಂದು ಹೇಳಿದ ’’ ಎನ್‌ಕೌಂಟರ್ ‘‘ಸಾಚಾ ಅಲ್ಲ’’ (ನಕಲಿ) ಎಂದು ತೀರ್ಮಾನಿಸಿತು.
ಮುಂದುವರಿಯುವುದು

Similar News

ಜಗದಗಲ
ಜಗ ದಗಲ