ವಿವಿಧ ವಿವಿ ಉಪಕುಲಪತಿಗಳ ನೇಮಕ: ಸಂಸ್ಕೃತ ವಿವಿಗೆ ಪ್ರೊ.ಗಿರೀಶ್‌ಚಂದ್ರ, ಕರ್ನಾಟಕ ವಿವಿಗೆ ಶಿರಾಲ್ ಶೆಟ್ಟಿ ನೇಮಕ
Update: 2019-06-18 17:33 GMT
ಬೆಂಗಳೂರು, ಜೂ.18: ಕರ್ನಾಟಕ ರಾಜ್ಯಪಾಲ ವಾಜುಭಾಯಿ ವಾಲಾ ಸಂಸ್ಕೃತ ವಿವಿ, ಕಲಬುರಗಿ ವಿವಿ, ಕುವೆಂಪು ವಿವಿ ಸೇರಿದಂತೆ ಹಲವು ವಿಶ್ವವಿದ್ಯಾಲಯಗಳ ಉಪಕುಲಪತಿಗಳ ನೇಮಕಾತಿಗೆ ಆದೇಶ ಹೊರಡಿಸಿದ್ದಾರೆ.
ಬೆಂಗಳೂರಿನ ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ಉಪಕುಲಪತಿಯಾಗಿ ಪ್ರೊ.ಗಿರೀಶ್ ಚಂದ್ರ, ಕಲಬುರ್ಗಿ ವಿವಿ ಉಪಕುಲಪತಿಯಾಗಿ ಪ್ರೊ.ಎಸ್.ಪಿ. ಮೆಲ್ಕೇರಿ, ಬೆಳಗಾವಿಯ ರಾಣಿ ಚೆನ್ನಮ್ಮ ವಿವಿ ಕುಲಪತಿಯಾಗಿ ಪ್ರೊ.ಎಸ್.ಎಂ. ಹುರಕಡ್ಲಿ, ಕುವೆಂಪು ವಿವಿ ಉಪ ಕುಲಪತಿಯಾಗಿ ಪ್ರೊ.ಎಸ್.ಎಸ್. ಪಾಟೀಲ್, ಧಾರವಾಡದ ಕರ್ನಾಟಕ ವಿವಿ ಉಪಕುಲಪತಿಯಾಗಿ ಡಾ. ಎ.ಎಸ್. ಶಿರಾಲ್ ಶೆಟ್ಟಿಯವರನ್ನು ನೇಮಿಸಲಾಗಿದೆ. ಈ ಆದೇಶವು ತಕ್ಷಣದಿಂದ ಜಾರಿಗೆ ಬರುವಂತೆ, ಮುಂದಿನ ಆದೇಶದವರೆಗೆ ಜಾರಿಯಲ್ಲಿರುತ್ತದೆ ಎಂದು ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಲಾಗಿದೆ.