'ಕನಿಷ್ಕ 707'ನಲ್ಲಿ ಬಾಂಬ್ ಸ್ಫೋಟ

Update: 2019-06-22 18:15 GMT

930: ಪ್ರಪಂಚದ ಅತ್ಯಂತ ಪ್ರಾಚೀನ ಸಂಸತ್ತು 'ದಿ ಐಲ್ಯಾಂಡಿಕ್ ಪಾರ್ಲಿಮೆಂಟ್' ರಚನೆಗೊಂಡಿತು.

1757: ಬಂಗಾಳದ ನವಾಬ ಸಿರಾಜುದ್ದೌಲ್ ಮತ್ತು ಬ್ರಿಟಿಷ್ ಸೈನ್ಯದ ನಡುವೆ ಪ್ಲಾಸಿ ಎಂಬಲ್ಲಿ ಘನಘೋರ ಕದನ ಆರಂಭವಾಯಿತು. ಈ ಸಮರದಲ್ಲಿ ನವಾಬನು ಸಂಪೂಣವಾಗಿ ಸೋತು, ಬಂಗಾಳವು ಬ್ರಿಟಿಷರ ವಶವಾಯಿತು.

1930: ಬ್ರಿಟಿಷರಿಂದ ನೇಮಕವಾಗಿದ್ದ ಸೈಮನ್ ಆಯೋಗವು ಫೆಡರಲ್ ಸ್ಟೇಟ್(ಸಂಯುಕ್ತ ರಾಷ್ಟ್ರ)ನ ಕೊಡುಗೆಯನ್ನು ಭಾರತದ ಮುಂದಿಟ್ಟಿತು. ಆದರೆ ಭಾರತ ಇದಕ್ಕೆ ಒಪ್ಪಿಗೆ ನೀಡಲಿಲ್ಲ.

1946: ಈ ದಿನ ಮಧ್ಯಂತರ ಚುನಾವಣೆಯಲ್ಲಿ ಪಾಲ್ಗೊಳ್ಳದೆ, ಸಂವಿಧಾನ ಸಭೆಗೆ ಮಾತ್ರ ಪಾಲ್ಗೊಳ್ಳುವಂತೆ ಗಾಂಧೀಜಿ ಕಾಂಗ್ರೆಸಿಗೆ ಸೂಚಿಸಿದರು.

1972: ಅಮೆರಿಕದಲ್ಲಿ ಎಗ್ನೆಸ್ ಹೆಸರಿನ ಪ್ರಬಲ ಚಂಡಮಾರುತ ಬೀಸಿದ ಪರಿಣಾಮ 15 ರಾಜ್ಯಗಳ 119 ಜನರು ಅಸುನೀಗಿದರು. ಅಂದಾಜು 3 ಬಿಲಿಯನ್ ಡಾಲರ್‌ನಷ್ಟು ನಷ್ಟ ಸಂಭವಿಸಿತು. ಇದು ಅಮೆರಿಕದ ಅತ್ಯಂತ ದುಬಾರಿ ನೈಸರ್ಗಿಕ ದುರಂತವೆಂದೇ ಕುಖ್ಯಾತಿಯಾಗಿದೆ.

1985: ಈ ದಿನ ಏರ್ ಇಂಡಿಯಾ ಇತಿಹಾಸದಲ್ಲಿ ಮಹಾ ದುರಂತವೊಂದು ದಾಖಲಿಸಲ್ಪಟ್ಟಿದೆ. ವ್ಯಾಂಕೋವರ್-ದಿಲ್ಲಿ-ಮುಂಬೈ ಮಾರ್ಗದಿಂದ ಹಾರಾಟ ನಡೆಸುತ್ತಿದ್ದ 'ಕನಿಷ್ಕ 707' ವಿಮಾನದಲ್ಲಿ, ಭೂಮಿಯಿಂದ 9,400 ಮೀ. ಅಂತರದಲ್ಲಿ ಬಾಂಬ್ ಸ್ಫೋಟಗೊಂಡಿತು. ಪರಿಣಾಮ ಅಟ್ಲಾಂಟಿಕ್ ಸಾಗರದಲ್ಲಿ ವಿಮಾನ ಪತನವಾಗಿ, ಅದರೊಳಗಿದ್ದ ಎಲ್ಲ 329(ಸಿಬ್ಬಂದಿ ಸೇರಿ)ಜನರು ತಮ್ಮ ಪ್ರಾಣ ಕಳೆದುಕೊಂಡರು. ಕೆನಡಾ ಸರಕಾರ ತನಿಖೆ ಕೈಗೊಂಡು ಇಂದ್ರಜಿತ್ ಸಿಂಗ್ ಎಂಬಾತನೇ ಈ ಕೃತ್ಯಕ್ಕೆ ಕಾರಣ ಎಂಬುದು ಸಾಬೀತಾಗಿ ಕೆನಡಾ ಸರಕಾರ ಆತನಿಗೆ 15 ವರ್ಷಗಳ ಕಾಲ ಜೈಲು ಶಿಕ್ಷೆ ವಿಧಿಸಿತು.

2016: ಬ್ರಿಟನ್ ಸಂಸತ್ ಯುರೋಪಿಯನ್ ಒಕ್ಕೂಟದಿಂದ ಹೊರಬರುವ ಕುರಿತು ಬ್ರೆಕ್ಸಿಟ್ ಜನಮತ ಸಂಗ್ರಹಿಸಿತು.

1944: ಕನ್ನಡದ ಸಾಹಿತಿ, ವಿಮರ್ಶಕ ಎಚ್.ಎಸ್.ವೆಂಕಟೇಶಮೂರ್ತಿ ಜನ್ಮದಿನ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ಈ ದಿನ
ಈ ದಿನ