ರಾಜದ್ರೋಹದ ಆರೋಪ ಹೊರಿಸಿ ಬಾಲಗಂಗಾಧರ ತಿಲಕ್ ಬಂಧನ
1850: ಕೊಹಿನೂರ್ ವಜ್ರವನ್ನು ರಾಣಿ ವಿಕ್ಟೋರಿಯಾ ಅವರಿಗೆ ಈಸ್ಟ್-ಇಂಡಿಯಾ ಕಂಪೆನಿಯ ಅಧ್ಯಕ್ಷ ಅರಮನೆಯಲ್ಲಿ ಹಸ್ತಾಂತರಿಸಿದರು.
1661: ಪೋರ್ಚುಗಲ್ ತನ್ನ ವಶದಲ್ಲಿದ್ದ ಮುಂಬೈಯನ್ನು ಬ್ರಿಟಿಷ್ ರಾಜ 2ನೇ ಚಾರ್ಲ್ಸ್‌ಗೆ ಒಪ್ಪಿಸಿತು.
1863: ಅಮೆರಿಕದ ಇತಿಹಾಸದಲ್ಲೇ ಮಹಾಯುದ್ಧ ಎಂದು ಪರಿಗಣಿಸಲ್ಪಟ್ಟ ಗೆಟ್ಟಿಸ್‌ಬರ್ಗ್ ಯುದ್ಧ ಅಂತ್ಯ ಕಂಡಿತು.
1908: ರಾಜದ್ರೋಹದ ಆರೋಪದ ಮೇರೆಗೆ ಬ್ರಿಟಿಷರು ಬಾಲಗಂಗಾಧರ ತಿಲಕ್‌ರನ್ನು ಬಂಧಿಸಿದರು. ‘ಸ್ವರಾಜ್ಯ ನನ್ನ ಜನ್ಮಸಿದ್ಧ ಹಕ್ಕು’ ಎಂದು ಪಣತೊಟ್ಟು ಭಾರತದ ಸ್ವಾತಂತ್ರ ಹೋರಾಟದಲ್ಲಿ ಸಕ್ರಿಯರಾಗಿದ್ದ ತಿಲಕರು, ತೀವ್ರಗಾಮಿ ಬಣದ ಮುಖಂಡರಾಗಿದ್ದರು. ‘ಕೇಸರಿ’ ಎಂಬ ಮರಾಠಿ ಭಾಷಾ ಪತ್ರಿಕೆಯ ಸಂಪಾದಕರಾಗಿದ್ದರು.
1928: ಸ್ಕಾಟ್ಲೆಂಡ್‌ನ ಸಂಶೋಧಕ ಜಾನ್ ಲೋಗಿ ಬೇಯರ್ಡ್ ಪ್ರಥಮ ಕಲರ್ ಟಿವಿ ಪ್ರಯೋಗವನ್ನು ಲಂಡನ್‌ನಲ್ಲಿ ನಡೆಸಿದರು.
1970: ಬಾರ್ಸಿಲೋನಾದಲ್ಲಿ ಬ್ರಿಟಿಷ್ ವಿಮಾನವೊಂದು ಪತನಗೊಂಡು 112 ಜನ ಮೃತಪಟ್ಟ ಘಟನೆ ನಡೆಯಿತು.
1979: ಹೌರಾದ ಎರಡನೇ ಸೇತುವೆಗೆ ಶಂಕುಸ್ಥಾಪನೆ ನೆರವೇರಿಸಲಾಯಿತು.
2013: ಈಜಿಪ್ಟ್ ಅಧ್ಯಕ್ಷ ಮುಹಮ್ಮದ್ ಮುರ್ಸಿಯನ್ನು ಅಲ್ಲಿನ ಸೈನ್ಯವು ಪದಚ್ಯುತಗೊಳಿಸಿತು.
2017: ಜರ್ಮನಿಯ ಮ್ಯೂನಿಚ್‌ಬರ್ಗ್‌ನಲ್ಲಿ ಉಂಟಾದ ಬಸ್ ದುರಂತದಲ್ಲಿ ಬೆಂಕಿ ಹೊತ್ತಿಕೊಂಡು 18 ಜನ ಮೃತಪಟ್ಟ ಘಟನೆ ವರದಿಯಾಗಿದೆ.