ವಾಟ್ಸ್ ಆ್ಯಪ್ ನಲ್ಲಿ ಆಡಿಯೋ, ವಿಡಿಯೋ ಡೌನ್ ಲೋಡ್ ಆಗುತ್ತಿಲ್ಲವೇ?: ಇಲ್ಲಿದೆ ಕಾರಣ…
ವಿಶ್ವಾದ್ಯಂತ ವಾಟ್ಸ್ಯಾಪ್, ಇನ್ ಸ್ಟಾಗ್ರಾಮ್ ಮತ್ತು ಫೇಸ್ ಬುಕ್ ಸೇವೆಗಳು ‘ಡೌನ್’ ಆಗಿದ್ದು, ಬಳಕೆದಾರರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಯುರೋಪ್, ಅಮೆರಿಕ, ಆಫ್ರಿಕ, ಭಾರತ ಸೇರಿದಂತೆ ವಿಶ್ವದ ಹಲವೆಡೆ ಈ ಸಮಸ್ಯೆ ಎದುರಾಗಿದೆ.
ಆಡಿಯೋ, ವಿಡಿಯೋಗಳನ್ನು ಕಳುಹಿಸಲು ಯಾವುದೇ ಸಮಸ್ಯೆ ಎದುರಾಗದಿದ್ದರೂ ಕಂಟೆಂಟ್ ಡೌನ್ ಲೋಡ್ ಮಾಡಲು ಬಳಕೆದಾರರಿಗೆ ಸಾಧ್ಯವಾಗುತ್ತಿಲ್ಲ. ವಿಶ್ವದ ಹಲವೆಡೆ ವಾಟ್ಸ್ಯಾಪ್, ಫೇಸ್ ಬುಕ್ ಮತ್ತು ಇನ್ ಸ್ಟಾಗ್ರಾಂ ಗಂಟೆಗೂ ಅಧಿಕ ಕಾಲ ನಿಷ್ಕ್ರಿಯವಾಗಿತ್ತು.
ಫೇಸ್ ಬುಕ್ ನಲ್ಲಿ ಪೋಸ್ಟ್ ಗಳ ಫೋಟೊಗಳು ಕಾಣುತ್ತಿಲ್ಲ, ವಾಟ್ಸ್ಯಾಪ್ ನಲ್ಲಿ ಫೋಟೊ, ವಿಡಿಯೋ, ಆಡಿಯೋಗಳು ಡೌನ್ ಲೋಡ್ ಆಗುತ್ತಿಲ್ಲ ಎಂದು ಹಲವರು ಟ್ವಿಟರ್ ನಲ್ಲಿ ದೂರಿಕೊಂಡಿದ್ದಾರೆ. ಫೇಸ್ ಬುಕ್ ನ ಸರ್ವರ್ ದೋಷ ಈ ಸಮಸ್ಯೆಗೆ ಕಾರಣ ಎನ್ನಲಾಗಿದೆ. ಏಕೆಂದರೆ ಫೇಸ್ ಬುಕ್ ಸರ್ವರ್ ಈ ಮೂರು ಪ್ರಸಿದ್ಧ ಆ್ಯಪ್ ಗಳನ್ನು ನಿರ್ವಹಿಸುತ್ತಿದೆ.
ಫೇಸ್ ಬುಕ್, ವಾಟ್ಸ್ ಆ್ಯಪ್ ಸರ್ವರ್ ಡೌನ್ ಆಗುತ್ತಿರುವುದು ಇದು ಮೊದಲ ಬಾರಿಯೇನಲ್ಲ. ಈ ಹಿಂದೆಯೂ ಹಲವು ಬಾರಿ ಈ ಸಮಸ್ಯೆ ಕಾಣಿಸಿಕೊಂಡಿತ್ತು. ಬಳಕೆದಾರರ ದೂರುಗಳ ನಂತರ ಫೇಸ್ ಬುಕ್ ಈ ಸಮಸ್ಯೆಯನ್ನು ಬಗೆಹರಿಸುತ್ತದೆ. ಸದ್ಯಕ್ಕೆ ಬಳಕೆದಾರರು ಎದುರಿಸುತ್ತಿರುವ ಸಮಸ್ಯೆ ಕೆಲಗಂಟೆಗಳಲ್ಲೇ ಸರಿಯಾಗಲಿದೆ.