ಸ್ವಿಚ್ ಆಫ್ ಆಗಿದ್ದ ‘ಒನ್ ಪ್ಲಸ್ ಒನ್’ ಫೋನ್ ನಲ್ಲಿ ಬೆಂಕಿ!
Update: 2019-07-05 11:02 GMT
ಹೊಸದಿಲ್ಲಿ, ಜು.5: ರಾತ್ರಿ ಹೊತ್ತು ಸ್ವಿಚ್ ಆಫ್ ಮಾಡಲ್ಪಟ್ಟಿದ್ದ ಐದು ವರ್ಷ ಹಳೆಯ ಒನ್ ಪ್ಲಸ್ ಒನ್ ಫೋನ್ ಗೆ ಹಠಾತ್ತನೇ ಬೆಂಕಿ ಹತ್ತಿಕೊಂಡಿದೆ. ಆದರೆ ಸ್ವಿಚ್ ಆಫ್ ಆಗಿದ್ದ ಫೋನ್ ಗೆ ಹೇಗೆ ಬೆಂಕಿ ಹತ್ತಿಕೊಂಡಿದೆ ಎಂಬುದೇ ಇಲ್ಲಿ ಅಚ್ಚರಿಯ ವಿಚಾರವಾಗಿದೆ.
ಫೋನ್ ನ ಮಾಲಕ ಈ ಘಟನೆಯ ಬಗ್ಗೆ ಒನ್ ಪ್ಲಸ್ ಕಸ್ಟಮರ್ ಸಪೋರ್ಟ್ ತಂಡಕ್ಕೆ ಮಾಹಿತಿ ನೀಡಿದ್ದಾರೆ. ಫೋನ್ ಒಳಗಡೆಯಿಂದ ಹೊಗೆ ಬರಲು ಆರಂಭಿಸಿದಾಗ ತಾನು ನೀರು ಸುರಿದು ಫೋನ್ ಸ್ಫೋಟಗೊಳ್ಳುವುದನ್ನು ತಡೆದಿದ್ದಾಗಿ ಆತ ಹೇಳಿಕೊಂಡಿದ್ದಾರೆ. ಈ ಸಂದರ್ಭದ ಕೆಲ ಫೋಟೋಗಳನ್ನೂ ಗ್ರಾಹಕ ಕಂಪೆನಿಗೆ ಕಳುಹಿಸಿ ಕೊಟ್ಟಿದ್ದಾರೆ.
ಕಂಪೆನಿ ಗ್ರಾಹಕನನ್ನು ಸಂಪರ್ಕಿಸಿದ್ದು ಘಟನೆಯ ಕುರಿತಂತೆ ಪರಿಶೀಲಿಸುತ್ತಿರುವುದಾಗಿ ತಿಳಿಸಿದೆ. “ಇಂತಹ ಘಟನೆಗಳನ್ನು ನಾವು ಗಂಭೀರವಾಗಿ ತೆಗೆದುಕೊಳ್ಳುತ್ತೇವೆ. ನಮ್ಮ ತಂಡ ಈಗಾಗಲೇ ತನಿಖೆ ಆರಂಭಿಸಿದೆ'' ಎಂದು ಕಂಪೆನಿಯ ಹೇಳಿಕೆ ತಿಳಿಸಿದೆ.