ಆರೋಗ್ಯಕ್ಕೆ ಒಂದು ‘ವಾಶ್’
ಈ ವರ್ಷದ ಆದಿಯಲ್ಲಿ ಯುನಿಸೆಫ್ ಪ್ರಕಟಿಸಿದ ವರದಿಯೊಂದರ ಪ್ರಕಾರ, ವಿಶ್ವದಾದ್ಯಂತ ಹಲವಾರು ಆರೋಗ್ಯ ಸವಲತ್ತುಗಳಲ್ಲಿ ನೀರು, ನೈರ್ಮಲ್ಯ ಹಾಗೂ ಆರೋಗ್ಯ ಸೌಕರ್ಯಗಳ ಗಂಭೀರ ಕೊರತೆಯಿದೆ. 2016ರಲ್ಲಿ ಲಭ್ಯವಾದ ದತ್ತಾಂಶಗಳ ಪ್ರಕಾರ ಜಾಗತಿಕವಾಗಿ ಅಂದಾಜು 896 ಮಿಲಿಯನ್ ಜನರಿಗೆ ಅವರ ಆರೋಗ್ಯ ಕೇಂದ್ರಗಳಲ್ಲಿ ನೀರು ಪೂರೈಕೆ ಇರಲಿಲ್ಲ. 1.5 ಬಿಲಿಯನ್‌ಗೂ ಹೆಚ್ಚು ಮಂದಿಗೆ ನೈರ್ಮಲ್ಯ ಸೇವೆ ಲಭ್ಯವಿರಲಿಲ್ಲ. ಪ್ರತಿ ಆರೋಗ್ಯ ಕೇಂದ್ರಗಳಲ್ಲಿ ಒಂದರಲ್ಲಿ ಕೈ ತೊಳೆಯುವ, ನೈರ್ಮಲ್ಯ ಸೇವೆ, ಸಾಬೂನು ಮತ್ತು ಟಾಯ್ಲೆಟ್‌ಗಳಲ್ಲಿ ನೀರಿನ ಸೌಕರ್ಯವಿರಲಿಲ್ಲ.
ಆರೋಗ್ಯ ಸವಲತ್ತುಗಳು ಹಲವು ಮತ್ತು ವಿಭಿನ್ನ ರೀತಿಯವುಗಳು. ಕೆಲವು ಪ್ರಾಥಮಿಕ, ಇನ್ನು ಕೆಲವು ಮೇಲ್ಮಟ್ಟದವುಗಳು. ಕೆಲವು ಸಾರ್ವಜನಿಕ, ಕೆಲವು ಖಾಸಗಿ. ಕೆಲವು ಸವಲತ್ತುಗಳು ನಿರ್ದಿಷ್ಟ ಅವಶ್ಯಕತೆಗಳನ್ನು ಪೂರೈಸುತ್ತವೆ.
ಆರೋಗ್ಯ ಸವಲತ್ತುಗಳ ನಡುವಿನ ವ್ಯತ್ಯಾಸಗಳು ಏನೇ ಇರಲಿ ಮತ್ತು ಅವುಗಳ ಅವಶ್ಯಕತೆ ಯಾವುದೇ ತರದಲ್ಲಿರಲಿ, ತ್ಯಾಜ್ಯ ನಿರ್ವಹಣೆ ಹಾಗೂ ಪರಿಸರ ಸ್ವಚ್ಛಗೊಳಿಸುವ ಸೇವೆಗಳೂ ಸೇರಿದಂತೆ, ಸಾಕಷ್ಟು ನೀರು, ನೈರ್ಮಲ್ಯ ಮತ್ತು ಆರೋಗ್ಯ ಸವಲತ್ತುಗಳು (ವಾಟರ್ ಸ್ಯಾನಿಟೇಶನ್ ಹೈಜೀನ್=‘ವಾಶ್’) ತೀರ ಅವಶ್ಯಕ. ಯಾವುದೇ ಒಂದು ಆರೋಗ್ಯ ಸವಲತ್ತಿಗೆ ಈ ಮೂರು ಸೇವೆಗಳು (‘ವಾಶ್’) ದೊರಕದಿದ್ದಾಗ ಸೋಂಕುತಡೆ ಮತ್ತು ನಿಯಂತ್ರಣ ಸಾಧ್ಯವಾಗುವುದಿಲ್ಲ. ಆಗ ರೋಗಿಗಳು ಮತ್ತು ಆರೋಗ್ಯ ಕಾರ್ಯಕರ್ತರು ಸೋಂಕಿಗೆ ಒಳಗಾಗುತ್ತಾರೆ. ಪರಿಣಾಮವಾಗಿ ಬಾಣಂತಿಯರ ಹಾಗೂ ಶಿಶು ಆರೋಗ್ಯದ ಮೇಲೆ ಗಂಭೀರ ಪರಿಣಾಮಗಳಾಗುತ್ತವೆ.
ಈ ವರ್ಷದ ಆದಿಯಲ್ಲಿ ಯುನಿಸೆಫ್ ಪ್ರಕಟಿಸಿದ ವರದಿಯೊಂದರ ಪ್ರಕಾರ, ವಿಶ್ವದಾದ್ಯಂತ ಹಲವಾರು ಆರೋಗ್ಯ ಸವಲತ್ತುಗಳಲ್ಲಿ ನೀರು, ನೈರ್ಮಲ್ಯ ಹಾಗೂ ಆರೋಗ್ಯ ಸೌಕರ್ಯಗಳ ಗಂಭೀರ ಕೊರತೆಯಿದೆ. 2016ರಲ್ಲಿ ಲಭ್ಯವಾದ ದತ್ತಾಂಶಗಳ ಪ್ರಕಾರ ಜಾಗತಿಕವಾಗಿ ಅಂದಾಜು 896 ಮಿಲಿಯನ್ ಜನರಿಗೆ ಅವರ ಆರೋಗ್ಯ ಕೇಂದ್ರಗಳಲ್ಲಿ ನೀರು ಪೂರೈಕೆ ಇರಲಿಲ್ಲ. 1.5 ಬಿಲಿಯನ್‌ಗೂ ಹೆಚ್ಚು ಮಂದಿಗೆ ನೈರ್ಮಲ್ಯ ಸೇವೆ ಲಭ್ಯವಿರಲಿಲ್ಲ. ಪ್ರತಿ ಆರೋಗ್ಯ ಕೇಂದ್ರಗಳಲ್ಲಿ ಒಂದರಲ್ಲಿ ಕೈ ತೊಳೆಯುವ, ನೈರ್ಮಲ್ಯ ಸೇವೆ, ಸಾಬೂನು ಮತ್ತು ಟಾಯ್ಲೆಟ್‌ಗಳಲ್ಲಿ ನೀರಿನ ಸೌಕರ್ಯವಿರಲಿಲ್ಲ.
ಆದ್ದರಿಂದ ನಾವು ಪ್ರಾಥಮಿಕ ಆರೋಗ್ಯ ಸೇವೆಯನ್ನು ಹೆಚ್ಚಿಸಬೇಕಾಗಿದೆ. ಈ ಸಮಸ್ಯೆಗಳನ್ನು ಪರಿಹರಿಸಲು ವಾಶ್ ಸೇವೆಗಳನ್ನು ಸುಧಾರಿಸುವುದು ಆವಶ್ಯಕವಾಗಿದೆ. ಜೊತೆಗೆ ಈ ಸೇವೆಗಳ ಪೂರೈಕೆಯಲ್ಲಿರುವ ಗ್ರಾಮೀಣ ನಗರ ಕಂದಕವನ್ನು ತುಂಬಬೇಕಾಗಿದೆ. ಈ ನಿಟ್ಟಿನಲ್ಲಿ ಜಾಗತಿಕ ಗುರಿಗಳನ್ನು ತಲುಪಲು ಸ್ವದೇಶಿ ಹಾಗೂ ಬಾಹ್ಯ ಹೂಡಿಕೆಗಳು ಆವಶ್ಯಕವಾಗಿವೆ. ಜಾಗತಿಕ ಗುರಿಗಳಲ್ಲಿ ಒಟ್ಟು ಆರೋಗ್ಯ ಸೇವೆಗಳ ಕನಿಷ್ಠ ಶೇ.60 ಆರೋಗ್ಯ ಕೇಂದ್ರಗಳಲ್ಲಾದರೂ 2022ರ ವೇಳೆಗೆ ಮೂಲ ವಾಶ್ ಸೇವೆಗಳು ದೊರಕುವಂತೆ ನೋಡಿಕೊಳ್ಳುವುದು; 2025ರ ವೇಳೆಗೆ ಕನಿಷ್ಠ ಶೇ.80 ಮತ್ತು 2030ರ ವೇಳೆಗೆ ಶೇ.100 ಆರೋಗ್ಯ ಕೇಂದ್ರಗಳಲ್ಲಿ ಈ ಸೇವೆಗಳು ಲಭ್ಯವಾಗುವಂತೆ ಮಾಡುವುದು ಸೇರಿದೆ.
ಇದು ಸಾಧ್ಯವಾಗಲು ಮೊದಲನೆಯದಾಗಿ ಸದಸ್ಯ ರಾಷ್ಟ್ರಗಳು ವಿಶ್ವ ಆರೋಗ್ಯ ಸಂಸ್ಥೆ ಮತ್ತು ಯುನಿಸೆಫ್ ಮಾಡಿರುವ ಶಿಫಾರಸುಗಳನ್ನು ಅನುಷ್ಠಾನಗೊಳಿಸಬೇಕು.
ಆರೋಗ್ಯ ಕಾರ್ಯಕರ್ತರಿಗೆ ಶಿಕ್ಷಣ ನೀಡುವುದು:
ಎರಡನೆಯದಾಗಿ ಎಲ್ಲ ಆರೋಗ್ಯ ಕೇಂದ್ರಗಳಲ್ಲಿ ಸ್ವಚ್ಛತೆ ಮತ್ತು ಸುರಕ್ಷೆಯ ಸಂಸ್ಕೃತಿಯನ್ನು ಅಳವಡಿಸಲು ಆರೋಗ್ಯ ಅಧಿಕಾರಿಗಳು ಕ್ರಮಕೈಗೊಳ್ಳಬೇಕು. ಆರೋಗ್ಯ ಆಡಳಿತಗಾರರಿಗೆ ಮಾಹಿತಿ ನೀಡುವುದರ ಜೊತೆಗೆ ಆರೋಗ್ಯ ವ್ಯವಸ್ಥೆಯಲ್ಲಿರುವ ವೈದ್ಯರು ಮತ್ತು ದಾದಿಯರಿಂದ ಮೊದಲ್ಗೊಂಡು ಸೂಲಗಿತ್ತಿಯವರು ಹಾಗೂ ಕ್ಲೀನರ್‌ಗಳವರೆಗೆ ಎಲ್ಲರಿಗೂ ಈಗ ಚಾಲ್ತಿಯಲ್ಲಿರುವ ವಾಶ್ ಹಾಗೂ ಸೋಂಕು ತಡೆ ಮತ್ತು ನಿಯಂತ್ರಣ ಪ್ರಕ್ರಿಯೆಗಳ ಕುರಿತು ಸೂಕ್ತ ಮಾಹಿತಿ, ತಿಳುವಳಿಕೆ ಹಾಗೂ ಶಿಕ್ಷಣ ನೀಡಬೇಕು,. ಮೂರನೆಯದಾಗಿ, ಮುಖ್ಯ ವಾಶ್ ಸೂಚಕಗಳಿಗೆ ಸಂಬಂಧಿಸಿದ ದತ್ತಾಂಶ ಸಂಗ್ರಹಣೆ ನಿಗದಿತವಾಗಿ ನಡೆಯುವಂತೆ ಸಂಬಂಧಪಟ್ಟ ಇಲಾಖೆಗಳು, ಸರಕಾರಗಳು ನೋಡಿಕೊಳ್ಳಬೇಕು. ಹೀಗೆ ಮಾಡುವುದರಿಂದ ಸತತವಾದ ಕ್ರಿಯೆ ಹಾಗೂ ಉತ್ತರದಾಯಿತ್ವದ ಮೂಲಕ ಅಭಿವೃದ್ಧಿಯನ್ನು ಚುರುಕುಗೊಳಿಸಲು ಸಾಧ್ಯವಾಗುತ್ತದೆ. ಹಾಗೆಯೇ ಸರಕಾರದ ನೀತಿಗಳ ಹಾಗೂ ಅನುಷ್ಠಾನದಿಂದ ಆಗಿರುವ ಪರಿಣಾಮಗಳನ್ನು ದಾಖಲಿಸಿ ಆರೋಗ್ಯ ಹಾಗೂ ನೈರ್ಮಲ್ಯ ರಂಗದಲ್ಲಿ ನಾವೀನ್ಯತೆಯನ್ನು ತರುವುದಕ್ಕೆ ಅನುಕೂಲವಾಗುತ್ತದೆ. ಇದು ಸಾಧ್ಯವಾಗುವುದಕ್ಕಾಗಿ ವಿಶ್ವ ಆರೋಗ್ಯ ಸಂಸ್ಥೆಯು ಸದಸ್ಯ ರಾಷ್ಟ್ರಗಳ ಜತೆ ಕಾರ್ಯ ನಿರ್ವಹಿಸುತ್ತಿದೆ. ಆರೋಗ್ಯ ಸವಲತ್ತುಗಳ ಬಗ್ಗೆ ಒಂದು ದತ್ತಾಂಶ ಕೋಷ್ಟಕವನ್ನು ಸಿದ್ಧಪಡಿಸುವುದು ವಿಶ್ವ ಆರೋಗ್ಯ ಸಂಸ್ಥೆಯ ಉದ್ದೇಶವಾಗಿದೆ.
ಸದಸ್ಯ ರಾಷ್ಟ್ರಗಳು ವಾಶ್ ನಿಟ್ಟಿನಲ್ಲಿ ಆದ್ಯತೆಯ ಮೇರೆಗೆ ಕಾರ್ಯನಿರ್ವಹಿಸಲು ತೊಡಗಿವೆ. ಇದರಿಂದ ಸಿಗುವ ಫಲಿತಾಂಶ ತುಂಬ ಮುಖ್ಯವಾಗಿದೆ. ಏಕೆಂದರೆ ಆರೋಗ್ಯ ಸವಲತ್ತು ಯಾವುದೇ ಇರಲಿ, ಈ ಸವಲತ್ತನ್ನು ಒದಗಿಸುವವರು ಯಾರೇ ಇರಲಿ ಮತ್ತು ಆರೋಗ್ಯ ಕೇಂದ್ರಗಳು ಅಥವಾ ಚಿಕಿತ್ಸಾಲಯಗಳು ಎಲ್ಲಿಯೇ ಇರಲಿ, ಸುರಕ್ಷಿತವಾದ ಆರೋಗ್ಯ ಸೇವೆಗಳನ್ನು ಪಡೆಯುವುದು ವಿಶ್ವಸಂಸ್ಥೆಯ ಪ್ರತಿಯೊಂದು ಸದಸ್ಯರಾಷ್ಟ್ರವೂ ಸಾಧಿಸಲೇ ಬೇಕಾದ ಗುರಿಯಾಗಿದೆ. ನೀರು, ನೈರ್ಮಲ್ಯ ಮತ್ತು ಸ್ವಚ್ಛತಾ ಸೌಕರ್ಯಗಳ ಹೊರತಾಗಿ ಯಾವ ಆರೋಗ್ಯ ಕಾರ್ಯಕ್ರಮವೂ ಯಶಸ್ವಿಯಾಗಲಾರದು.
(ಪೂನಮ್ ಕ್ಷೇತ್ರಪಾಲ್ ಸಿಂಗ್,
ವಿಶ್ವ ಆರೋಗ್ಯ ಸಂಸ್ಥೆ, ಸೌತ್ ಈಸ್ಟ್ ಏಶ್ಯಾದ ಪ್ರಾದೇಶಿಕ ನಿರ್ದೇಶಕರಾಗಿದ್ದಾರೆ.)
ಕೃಪೆ: ದಿ ಹಿಂದು