ಚಂದ್ರನ ಮೇಲೆ ನಿಂತು ಭೂಮಿಯೆಡೆಗಿನ ನೋಟ....

Update: 2019-07-27 18:18 GMT
ಅಪೊಲೊ 11 ಬಾಹ್ಯಾಕಾಶ ನೌಕೆಯಿಂದ ತೆಗೆದ 1,81,000 ಕಿ.ಮೀ. ದೂರದಲ್ಲಿರುವ ಭೂಮಿಯ ದೃಶ್ಯ. ಚಿತ್ರಕೃಪೆ: ನಾಸಾ

ಚಂದ್ರನ ಮೇಲೆ ನಡೆದ 50ನೇ ವರ್ಷವನ್ನು ನಾವು ಆಚರಿಸುತ್ತಿರು ವಂತೆಯೇ ಚಂದ್ರನ ಮೇಲೆ ಮೊದಲು ಕಾಲಿಡುವ ಬಗ್ಗೆ ನಾವು ಕಾತರರಾಗಿದ್ದೇವೆ. ಈ ವಾಕ್ಯ ಸರಿಯಾದ ಕ್ರಮದಲ್ಲಿಲ್ಲ ಎಂದು ನಿಮಗನಿಸಬಹುದು. ಆದರೆ ಇದು ಸರಿಯಾಗಿಯೇ ಇದೆ. 

ಯಾಕೆಂದರೆ ಈ ವಾಕ್ಯದಲ್ಲಿ ಬಳಸಲಾಗಿರುವ ಮೊದಲ ನಾವು ಮತ್ತು ಎರಡನೇ ನಾವು ಒಂದೇ ಅಲ್ಲ. ಇವೆರಡು ವಿಭಿನ್ನ ವ್ಯಕ್ತಿಗಳನ್ನು ಗುರುತಿಸುತ್ತದೆ. ನಾವು ಮನುಷ್ಯರು ಚಂದ್ರನ ಮೇಲೆ ನಡೆದಾಡಿದ 50ನೇ ವರ್ಷವನ್ನು ಆಚರಿಸುತ್ತಿದ್ದೇವೆ ಮತ್ತು ನಾವು ಭಾರತೀಯರು ಮೊದಲ ಬಾರಿ ಚಂದ್ರನ ಮೇಲೆ ಕಾಲಿಡುತ್ತಿರುವ ಬಗ್ಗೆ ಕುತೂಹಲ ಹೊಂದಿದ್ದೇವೆ. ಚಂದ್ರನ ಮೇಲೆ ಮೊದಲ ಕಾಲಿಟ್ಟ ನೀಲ್ ಆರ್ಮ್‌ಸ್ಟ್ರಾಂಗ್ ಚಂದ್ರನ ದಿಗಂತದಾಚೆಯಿಂದ, ಕತ್ತಲೆಯ ತೊಟ್ಟಿಲಲ್ಲಿ ಮಲಗಿಸಿದಂತಿದ್ದ ನೀಲಿ-ಹಸಿರು ಬಣ್ಣದಿಂದ ಕಂಗೊಳಿಸುತ್ತಿದ್ದ ಭೂಮಿಯನ್ನು ಕಂಡು ವಿಚಲಿತಗೊಂಡಿದ್ದ. ಅಲ್ಲಿಂದ ನೋಡಿದಾಗ ಆತನಿಗೆ ಭೂಮಿ ಅಥವಾ ನೀರಿನ ಮೇಲೆ ಯಾವ ಗಡಿಯಾಗಲೀ, ಸ್ಪರ್ಧಾ ರೇಖೆಗಳಾಗಲೀ ಕಂಡುಬರಲಿಲ್ಲ.

ಅಲ್ಲಿ ಕಂಡಿದ್ದು ಕೇವಲ ಖಾಲಿಖಾಲಿ ವಿಶ್ವದಲ್ಲಿ ಸಣ್ಣ ಗೋಳದಲ್ಲಿ ಬಾಳುತ್ತಿರುವ ಮಾನವೀಯತೆ ಮಾತ್ರ.ಕೆಲವರು ಇದನ್ನು ಅಪೋಲೊ 11ರ ಅನಿರೀಕ್ಷಿತ ವಿಜಯ ಕಥಾನಕ ಎಂದು ಆಚರಿಸಿದರು: ಸದಾ ಒಗ್ಗಟ್ಟಾಗಿ ಇರುವಂತೆ ನಮಗೆ ಸ್ಫೂರ್ತಿ ತುಂಬುವ ಒಂದು ದೃಶ್ಯದ ಜನನ ಎಂದು ಘೋಷಿಸಿದರು. ಆದರೆ ಇದನ್ನು ಸಾಧಿಸುವ ಕಾರ್ಯ ಹೇಳುವಷ್ಟು ಸುಲಭವಾಗಿರಲಿಲ್ಲ. ಚಂದ್ರಯಾನ 2 ವಿಷಯದಲ್ಲಿ ಹೇಳುವುದಾದರೆ, ಈ ಸಾಧನೆ ನಾವು ಭಾರತೀಯರು ಇತರ ಮಾನವತೆಗಿಂತ ಭಿನ್ನರು ಎಂಬ ಜಾಗೃತಿಯನ್ನು ಮೂಡಿಸುತ್ತದೆ. ನಿಯಂತ್ರಣ ರೇಖೆಗಳು ಭೂಮಿಯ ಉದ್ದಗಲಕ್ಕೂ ವ್ಯಾಪಿಸಿವೆ ಮತ್ತು ನಾವು ಭಾರತೀಯರು, ಅಮೆರಿಕನ್, ಚೀನಾ, ಫ್ರೆಂಚ್ ಮತ್ತು ರಶ್ಯದಂತೆ, ನಿರ್ಣಾಯಕವಾಗಿಯೇ ಆ ಗೆರೆಯ ಒಂದು ಬದಿಯಲ್ಲಿ ನಿಂತಿದ್ದೇವೆ. ಚಂದ್ರನ ಮೇಲಿಂದ ನೋಡಿದಾಗ ನಾವೆಲ್ಲರೂ ಒಂದೇ ಎಂದು ಕಾಣಬಹುದು ಆದರೆ ಭೂಮಿಯ ಮೇಲೆ ನಿಂತು ನೋಡಿದಾಗ ನಾವು ಪರಸ್ಪರ ಭಿನ್ನರಾಗಿದ್ದೇವೆ. ಮತ್ತು ಇದೊಂದೇ ಅಂಶ ಮುಖ್ಯವಾಗಿದೆ. ಆರ್ಮ್‌ಸ್ಟ್ರಾಂಗ್ ಮಾತುಗಳು ಆತನ ಅಥವಾ ಬಹುಶಃ ನಮ್ಮ ಕಾಲಕ್ಕಿಂತಲೂ ಮುಂದಿದ್ದವು, ಯಾಕೆಂದರೆ ಅವುಗಳು, ಓರ್ವ ಮಾನವ ಚಂದ್ರನ ಮೇಲೆ ಹೋದರೆ ಇಡೀ ಮಾನವಕುಲ ಚಂದ್ರನಲ್ಲಿಗೆ ಹೋಗುವುದಕ್ಕೆ ಸಮಾನವಾದ ಜಗತ್ತಿನ ಕನಸನ್ನು ಹೊಂದಿದ್ದವು. ಇದು ಬಾಹ್ಯಾಕಾಶನೌಕೆ ಅಥವಾ ಸಂಪೂರ್ಣ ವಿಜ್ಞಾನ ಹೇಗೆ ಕಾರ್ಯಾಚರಿಸುತ್ತದೆ ಎಂಬ ಬಗ್ಗೆ ಕಂಡಿರುವ ಆದರ್ಶ ಕಲ್ಪನೆಯಂತಿದೆ.

ಅದು ಮಾನವತೆಯ ಮೇಲೆ ಆಕ್ರಮಣ ಮಾಡುತ್ತಿರುವ ಕೆಲವು ಅತೀದೊಡ್ಡ ಸಮಸ್ಯೆಗಳನ್ನು ನಿರ್ಲಕ್ಷಿಸುತ್ತದೆ, ಬದಲಿಗೆ ಭೂಮಿಯ ಮೇಲೆ ನಮ್ಮ ಬ್ರಹ್ಮಾಂಡ ಹೇರುವ ಏಕತಾನತೆಯ ಹೊರೆಯೇ ನ್ಯಾಯಾದ ರೇಖೆಯನ್ನು ಅದು ಸೇರಬೇಕಿರುವಲ್ಲಿಗೆ ಬಾಗಿಸಲು ಸಾಕಾಗಿದೆ ಎಂಬುದನ್ನು ಸೂಚಿಸುತ್ತದೆ. ಇದು ಯಾವತ್ತೂ ನಡೆಯಲು ಸಾಧ್ಯವಿಲ್ಲ. ಕೇವಲ ನ್ಯಾಯದ ರೇಖೆ ಅದು ಪರಿಣಾಮ ಬೀರುವ ಜನರು ಕಾರ್ಯ ಪ್ರವೃತ್ತರಾಗುವವರೆಗೆ ಬಾಗಲು ಸಾಧ್ಯವಿಲ್ಲವಾದ್ದರಿಂದ ಅದು ನಡೆಯಬಹುದು ಎಂದು ನಂಬಲು ಸಾಧ್ಯವಿಲ್ಲ. ಓರ್ವ ಅಮೆರಿಕೇತರ ವ್ಯಕ್ತಿ ತನ್ನದೇ ದೇಶದ ಬಾಹ್ಯಾಕಾಶ ಕಾರ್ಯಕ್ರಮದ ಪ್ರಯುಕ್ತ ಚಂದ್ರನ ಮೇಲೆ ಇಳಿದಾಗ ಮಾನವತೆ ಚಂದ್ರನ ಮೇಲೆ ಇಳಿಯಿತು ಎಂದು ನಂಬಲು ಸಾಧ್ಯವಿಲ್ಲ. ಚಂದ್ರನ ಮೇಲಿಂದ ಅಮೆರಿಕನ್‌ನ ಕಣ್ಣುಗಳ ಮೂಲಕ ಕಂಡಾಗ ಇರುವಷ್ಟೇ ಇಲ್ಲಿಂದ ನೋಡಿದಾಗಲೂ ಭೂಮಿಯ ಮುಖವನ್ನು ವಿರೂಪಗೊಳಿಸಿರುವ ಅಸಮಾನತೆಯನ್ನು ಕಡೆಗಣಿಸುವುದು ಅಸಾಧ್ಯ ಎನ್ನುವುದರಲ್ಲಿ ಆಶ್ಚರ್ಯವೇನೂ ಇಲ್ಲ.

ಅಭಿವೃದ್ಧಿ ಹೊಂದಿರುವ ಜಗತ್ತಿನ ಓರ್ವ ವಿಜ್ಞಾನಿಯನ್ನು ಪರಿಗಣಿಸಿ. ಆತ ಇಂಗ್ಲಿಷ್ ಮಾತನಾಡಬಲ್ಲ ಮಧ್ಯಮ ವರ್ಗದ ಬ್ರಾಹ್ಮಣ ಪುರುಷ ಎಂದು ತಿಳಿದುಕೊಳ್ಳೋಣ. ನಾವು ನಮ್ಮ ಚರ್ಚೆಯ ಸಲುವಾಗಿ, ಪುರುಷೇತರ, ಹಿಂದುಯೇತರ/ಮೇಲ್ವರ್ಗೇತರ, ಭಾರತೀಯ ಭಾಷೆ ಮಾತನಾಡುವ ಸದಸ್ಯರು ಎದುರಿಸುವ ವೈಜ್ಞಾನಿಕ ಸಮುದಾಯದ ತಡೆರಹಿತ ಅಸಮಾನತೆಯನ್ನು ಬದಿಗಿರಿಸಲು ಸಾಧ್ಯವಾಗಲು ಆ ವಿಜ್ಞಾನಿ ಇಂಗ್ಲಿಷ್ ಮಾತನಾಡಬಲ್ಲ ಓರ್ವ ಬ್ರಾಹ್ಮಣ ಪುರುಷ ಎಂದು ತಿಳಿಯೋಣ. ಆತನಿಗೆ ಕೆಲವು ಉಪಕರಣಗಳಿಗೆ, ಕೆಲವು ಉತ್ತಮ ಪ್ರಯೋಗಾಲಯಗಳಿಗೆ ಪ್ರವೇಶ ದೊರೆಯುತ್ತದೆ ಮತ್ತು ಕೆಲವೇ ಉತ್ತಮ ಗುರುಗಳನ್ನು ಹೊಂದಲು ಅವಕಾಶ ಇರುತ್ತದೆ. ಆತನಿಗೆ ಅನಿಯಮಿತ ಹಣ ಸಹಾಯ, ಕಡಿಮೆ ಪ್ರಯಾಣ ಅನುದಾನ, ಅಷ್ಟೊಂದು ಉತ್ತಮವಲ್ಲದ ಉದ್ಯೋಗ ಭರವಸೆ, ಪತ್ರಿಕೆಗಳ ಸೀಮಿತ ಒದಗುವಿಕೆ, ಮಲಿನ ನಗರದಲ್ಲಿ ಜೀವನ, ಅಸಮಂಜಸ ಸಾರ್ವಜನಿಕ ಸಾರಿಗೆ, ಏರುತ್ತಿರುವ ಜೀವನ ವೆಚ್ಚ, ಕಡಿಮೆ ನೀರು ಸರಬರಾಜು ಮತ್ತು ಏರುತ್ತಿರುವ ವೈದ್ಯಕೀಯ ಬಿಲ್‌ಗಳು. ಈ ಹಂತದಲ್ಲಿ ಈ ಸುಳಿಯಲ್ಲಿ ನಾವು ಕಡಿಮೆ ಸೌಲಭ್ಯ ಹೊಂದಿರುವ ಭಾರತೀಯನನ್ನು ಪರಿಗಣಿಸಿದಾಗ ಅದೊಂದು ವೈಯಕ್ತಿಕ, ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ಸಮಸ್ಯೆಗಳ ಗೊಂದಲಮಯ ಚಿತ್ರಣವಾಗಿ ಬದಲಾಗುತ್ತದೆ.

ಆ ಸಂದರ್ಭದಲ್ಲೂ, ಅದು ಕೇವಲ, ಭಾರತದ ಇತರ ಭಾಗಗಳು ಮತ್ತು ಜಗತ್ತಿನಾದ್ಯಂತದ ಮಾದರಿಗಳನ್ನು ಪಡೆಯುವ, ಗ್ರಂಥಾಲಯಗಳ ಕೈಗೆಟುಕದ ಅಥವಾ ವೈಜ್ಞಾನಿಕ ಪುಸ್ತಕಗಳ ಸಂಪಾದಕೀಯ ಮಂಡಳಿಯಿಂದ ಹೊರಗಿಡಲ್ಪಟ್ಟಿರುವ ಮಾಹಿತಿ ಹೊಂದಿರುವ ಪತ್ರಿಕೆಗಳನ್ನು ಹೊಂದುವ ಇತ್ಯಾದಿ ಅಂತರ್‌ರಾಷ್ಟ್ರೀಯ ಅಸಮಾನತೆಗಳು ನಿಂತಿರುವ ತಲಾಧಾರವಷ್ಟೇ ಅದಾಗಲು ಸಾಧ್ಯ. ಈ ಹಿನ್ನೆಲೆಯಲ್ಲಿ, ನಮ್ಮ ಸಾಮೂಹಿಕ ರಾಷ್ಟ್ರೀಯ ಕಲ್ಪನೆಯಲ್ಲಿ, ಕನಿಷ್ಟ ತತ್ವದಲ್ಲಿ ಗೊಂದಲಮಯ ಗಂಟಿರುವಂತೆ ಭಾಸವಾಗುತ್ತದೆ. ಇದು, ಅಪೊಲೊ 11 ಯೋಜನೆಯನ್ನು ಸಂಭ್ರಮಿಸುವ ಮತ್ತು ನಮ್ಮನ್ನು ವಿಭಜಿಸುವ ವಿಷಯಗಳನ್ನು ಒಮ್ಮೆ ಮರೆಮಾಚಲು ಸಾಧ್ಯವಾಗುವ ಅವಕಾಶವನ್ನು ಬಾಚಿಕೊಳ್ಳುವ ಮತ್ತು ಅದೇ ಸಮಯದಲ್ಲಿ ಚಂದ್ರನ ಮೇಲಿಳಿಯುವ ಭಾರತದ ಮೊಟ್ಟಮೊದಲ ಪ್ರಯತ್ನವನ್ನು ಶ್ಲಾಘಿಸುವ ನಡುವಿನ ಸಂಘರ್ಷದಂತೆ ಭಾಸವಾಗುತ್ತದೆ.

ಆ ಗಂಟನ್ನು ಬಿಚ್ಚಲು ಕಲೆ, ಸಂಗೀತ, ಸಿನೆಮ ಮತ್ತು ಕಲ್ಪನೆ ನೆರವಾಗಬಹುದು. ಇಲ್ಲಿ ನೆನಪಿಸಿಕೊಳ್ಳಬೇಕಾಗಿರುವುದು ಏನೆಂದರೆ, ಚಂದ್ರನ ಮೇಲೆ ಮಾನವ ಎಂಬ ಪರಿಕಲ್ಪನೆಯೇ ರಾಜನೈತಿಕ ಸೈದ್ಧಾಂತಿಕತೆಯ ಅಸಮತೋಲನದ ಉತ್ಪನ್ನವಾಗಿದೆ. ಅದನ್ನು ಎಷ್ಟು ದೃಢವಾಗಿ ಗ್ರಹಿಸಲಾಗಿತ್ತು ಎಂದರೆ ಅದು ಅಭೂತಪೂರ್ವ ಸಾರ್ವಜನಿಕ ಅಭಿಪ್ರಾಯವನ್ನೂ ಕಡೆಗಣಿಸಿತ್ತು ಮತ್ತು ತನ್ನ ಸಮರ್ಥನೆಯನ್ನು ಸಂಶಯಾತ್ಮಕ ಆರ್ಥಿಕತೆ ಮತ್ತು ಗೊಂದಲಮಯ ಭಾವನೆಯಲ್ಲಿ ಹುಡುಕಲು ಆರಂಭಿಸಿತ್ತು. ಹಾಗಾದರೆ ನಾವು ಯಾರು? ನಾವು ಮನುಷ್ಯರೇ ಅಥವಾ ಇನ್ಯಾವುದೋ ಬೇರೆಯೇ? ನೀವು ಜುಲೈ 16 ಮತ್ತು ಜುಲೈ 20ರ ಮಾನವೀಯತೆಯ ಸಂದೇಶದಿಂದ ಭಾವುಕರಾಗಿದ್ದರೆ ನೀವೂ ಬಹುತೇಕ ಎಲ್ಲರಂತೆ ಭೂಮಿಯ ಮೇಲೆ ಹೋಮೊ ಸಾಪಿಯನ್‌ಗಳ ಸಂತತಿ ಎಂದು ಭಾವಿಸಿದ್ದೀರಿ. ನೀವು ಜುಲೈ 15 ಮತ್ತು ಜುಲೈ 22ರ ರಾಷ್ಟ್ರೀಯತೆಯ ಸಂದೇಶದಿಂದ ಭಾವುಕರಾಗಿದ್ದರೆ ಭಾರತೀಯತೆಯ ಭಾವನೆಯಿಂದ ನೀವು ತಪ್ಪಿಸಿಕೊಳ್ಳಲು ಸಾಧ್ಯವೇ ಇಲ್ಲ.

ಆದರೆ, ಪ್ರಗತಿ ಶ್ರೇಣಿಯ ಯಾವ ಹಂತದಲ್ಲೂ ಸಿಲುಕಿಕೊಳ್ಳದೆ ಓರ್ವ ಎರಡನ್ನೂ ಅಪ್ಪಿಕೊಳ್ಳುವುದು ಹೇಗೆ ಎನ್ನುವುದು ತಕ್ಷಣಕ್ಕೆ ಸ್ಪಷ್ಟವಾಗುವುದಿಲ್ಲ. ನಮ್ಮ ಸಾಂಸ್ಕೃತಿಕ, ಲೈಂಗಿಕ, ರಾಜಕೀಯ, ಸಾಮಾಜಿಕ, ಆರ್ಥಿಕ ಗುರುತು ಮೊದಲು, ಜೈವಿಕ ನಂತರ ಮತ್ತು ಒಂದು ಹಂತದಿಂದ ಇನ್ನೊಂದಕ್ಕೆ ಮಾನವತೆಯ ಪ್ರಯಾಣದ ಕಲ್ಪನೆ ಮೂಡಿದಾಗ ಓರ್ವ ಮಾನವ ಗ್ಯಾನಿಮೆಡ್ ಮೇಲೆ ನಡೆದಾಗ ನಿಜವಾಗಿಯೂ ಇಡೀ ಮಾನವಕುಲ ಗ್ಯಾನಿಮೆಡ್ ಮೇಲೆ ನಡೆಯುವುದಕ್ಕೆ ಸಮವಾಗುವುದು. ಆದರೆ ಅಲ್ಲಿಯವರೆಗೆ ಒಳ್ಳೆಯದಕ್ಕೋ, ಕೆಟ್ಟದಕ್ಕೋ, ಆದರೆ ಬಹುತೇಕ ಒಳ್ಳೆಯದಕ್ಕಾಗಿ ನಾವು ಪ್ರತ್ಯೇಕ ದಾರಿಗಳಲ್ಲಿ ನಡೆಯುವುದು ಸೂಕ್ತ, ನಮ್ಮ ನಡುವಿನ ರೇಖೆಗಳನ್ನು ಗುರುತಿಸೋಣ ಮತ್ತು ಅವುಗಳು ಚಂದ್ರನ ಮೇಲಿನಿಂದ ಅಸ್ಪಷ್ಟವಾಗಿ ಕಾಣುವಷ್ಟೇ ಭೂಮಿಯ ಮೇಲೂ ಕಾಣುವ ಹಾಗೆ ಮಾಡೋಣ.

ಚಂದ್ರನ ಮೇಲೆ ಮೊದಲ ಕಾಲಿಟ್ಟ ನೀಲ್ ಆರ್ಮ್‌ಸ್ಟ್ರಾಂಗ್ ಚಂದ್ರನ ದಿಗಂತದಾಚೆಯಿಂದ, ಕತ್ತಲೆಯ ತೊಟ್ಟಿಲಲ್ಲಿ ಮಲಗಿಸಿದಂತಿದ್ದ ನೀಲಿ-ಹಸಿರು ಬಣ್ಣದಿಂದ ಕಂಗೊಳಿಸುತ್ತಿದ್ದ ಭೂಮಿಯನ್ನು ಕಂಡು ವಿಚಲಿತಗೊಂಡಿದ್ದ. ಅಲ್ಲಿಂದ ನೋಡಿದಾಗ ಆತನಿಗೆ ಭೂಮಿ ಅಥವಾ ನೀರಿನ ಮೇಲೆ ಯಾವ ಗಡಿಯಾಗಲೀ, ಸ್ಪರ್ಧಾ ರೇಖೆಗಳಾಗಲೀ ಕಂಡುಬರಲಿಲ್ಲ. ಅಲ್ಲಿ ಕಂಡಿದ್ದು ಕೇವಲ ಖಾಲಿಖಾಲಿ ವಿಶ್ವದಲ್ಲಿ ಸಣ್ಣ ಗೋಳದಲ್ಲಿ ಬಾಳುತ್ತಿರುವ ಮಾನವೀಯತೆ ಮಾತ್ರ.ಕೆಲವರು ಇದನ್ನು ಅಪೋಲೊ 11ರ ಅನಿರೀಕ್ಷಿತ ವಿಜಯ ಕಥಾನಕ ಎಂದು ಆಚರಿಸಿದರು:

ಕೃಪೆ-ದಿ ವೈರ್

Writer - ವಾಸುದೇವನ್ ಮುಕುಂದ್

contributor

Editor - ವಾಸುದೇವನ್ ಮುಕುಂದ್

contributor

Similar News