ಸಮಾಜಮುಖಿ ಬದುಕಿಗೆ ಶಿಕ್ಷಣ ಅತ್ಯಗತ್ಯ: ಸುಲೋಚನಾ

Update: 2019-08-01 18:20 GMT

ಚಿಕ್ಕಮಗಳೂರು, ಆ.1: ಮಕ್ಕಳು ಸಮಾಜಮುಖಿಯಾಗಿ ಬದುಕಲು ಶಿಕ್ಷಣ ಅತ್ಯಗತ್ಯ ಎಂದು  ಚಿಕ್ಕಮಗಳೂರು ಮಹಿಳಾ ಜಾಗೃತಿ ಸಂಘದ ಉಪಾಧ್ಯಕ್ಷೆ ಸುಲೋಚನಾ ಶೇಖರ್ ಹೇಳಿದರು.

ಆಣೂರು ಗ್ರಾಪಂ ವ್ಯಾಪ್ತಿಯ ಬಸಗೋಡು ಗ್ರಾಮದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ 1ರಿಂದ 3ನೇ ತರಗತಿವರೆಗಿನ ನಲಿಕಲಿ ಮಕ್ಕಳಿಗೆ ಅಗತ್ಯವಿರುವ ಪೀಠೋಪಕರಣಗಳ ಕೊಡುಗೆ ನೀಡಿ ಮಾತನಾಡಿದರು.

ಇತ್ತೀಚಿನ ದಿನಮಾನಗಳಲ್ಲಿ ಗ್ರಾಮಾಂತರ ಪ್ರದೇಶದ ಮಕ್ಕಳು ಶಿಕ್ಷಣದಿಂದ ದೂರಾಗುತ್ತಿದ್ದು, ಪೋಷಕರು ಮಕ್ಕಳನ್ನು ಶಿಕ್ಷಿತರನ್ನಾಗಿಸುವ ಬಗ್ಗೆ ಹೆಚ್ಚಿನ ಗಮನಹರಿಸಬೇಕೆಂದು ಹೇಳಿದರು.

ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ಬಿ.ಎನ್.ಮಹೇಶ್ ಅಧ್ಯಕ್ಷತೆ ವಹಿಸಿ ಮಾತನಾಡಿ ಗ್ರಾಮೀಣ ಭಾಗದ ಸರ್ಕಾರಿ ಶಾಲೆಗಳಿಗೆ ಸರ್ಕಾರದಿಂದ ದೊರೆಯುವ ಸೌಲಭ್ಯಗಳೊಂದಿಗೆ ದಾನಿಗಳು ಅಗತ್ಯಕ್ಕನುಗುಣವಾಗಿ ಕೊಡುಗೆಗಳನ್ನು ನೀಡಿದರೆ ಮಕ್ಕಳ ಶೈಕ್ಷಣಿಕ ಉನ್ನತೀಕರಣಕ್ಕೆ ಸಹಕಾರಿಯಾಗಲಿದೆ ಎಂದರು.

ಈ ಸಂದರ್ಭದಲ್ಲಿ ಸಹ ಶಿಕ್ಷಕ ಲಕ್ಷ್ಮಣ, ಶಿಕ್ಷಕ ಹಾಲಪ್ಪ, ಮಹಿಳಾ ಜಾಗೃತಿ ಸಂಘದ ಸುಲೋಚನಾ ಶಿವಶೆಟ್ಟಿ, ಕಾತ್ಯಾಯಿನಿ ಚಂದ್ರಶೇಖರ್, ಸತ್ಯಭಾಮ ಶ್ರೀನಿವಾಸ್ ಸೇರಿದಂತೆ ಶಾಲಾಭಿವೃದ್ಧಿ ಸಮಿತಿಯ ಸದಸ್ಯರು ಹಾಗು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News