ಖುದಿರಾಮ್ ಬೋಸ್‌ರಿಗೆ ಗಲ್ಲು

Update: 2019-08-10 18:37 GMT

1908: ದೇಶದ ಸ್ವಾತಂತ್ರಕ್ಕಾಗಿ ತಮ್ಮ 18ರ ಎಳೆಯ ಪ್ರಾಯದಲ್ಲೇ ನೇಣಿಗೆ ಕೊರಳೊಡ್ಡಿದ ಕ್ರಾಂತಿಕಾರಿ ಖುದಿರಾಮ್ ಬೋಸ್‌ರಿಗೆ ಬ್ರಿಟಿಷ್ ಸರಕಾರ ಗಲ್ಲು ಶಿಕ್ಷೆ ವಿಧಿಸಿತು. 1908ರ ಎ.8ರಂದು ಬ್ರಿಟಿಷ್ ಮ್ಯಾಜಿಸ್ಟ್ರೇಟ್ ಕಿಂಗ್ಸ್‌ಫರ್ಡ್‌ನ ಹತ್ಯೆ ಪ್ರಯತ್ನದಲ್ಲಿ ಆಕಸ್ಮಿಕವಾಗಿ ಬ್ರಿಟಿಷ್ ನ್ಯಾಯವಾದಿ ಪ್ರಿಂಜಲ್‌ನ ಪತ್ನಿ ಮತ್ತು ಮಕ್ಕಳು ಖುದಿರಾಮ್ ಎಸೆದ ಬಾಂಬ್‌ಗೆಬಲಿಯಾದರು. ಈ ಪ್ರಕರಣದಲ್ಲಿ ವಿಚಾರಣೆ ನಡೆದು, ಖುದಿರಾಮ್ ಬೋಸ್‌ರನ್ನು ತಪ್ಪಿತಸ್ಥರೆಂದು ತೀರ್ಮಾನಿಸಿ ಗಲ್ಲು ಶಿಕ್ಷೆ ವಿಧಿಸಲಾಯಿತು. ನಗುನಗುತ್ತಲೇ ಗಲ್ಲುಗಂಭಕ್ಕೆ ಏರಿದ ಈ ಕ್ರಾಂತಿಕಾರಿಯ ನಡೆ ಹಲವು ಯುವ ಕ್ರಾಂತಿಕಾರಿಗಳಿಗೆ ಸ್ಫೂರ್ತಿಯಾಯಿತು.

1914: ಯೆಹೂದಿಗಳು ಪೋಲೆಂಡ್‌ನ ಮಿಚೆನಿಕ್‌ನಿಂದ ಬಹಿಷ್ಕರಿಸಲ್ಪಟ್ಟರು.

1933: ಮೆಕ್ಸಿಕೊದ ಸ್ಯಾನ್ ಲೂಯಿಸ್ ಪೊಟೊಸಿ ಎಂಬಲ್ಲಿ ದಾಖಲಿಸಿದ 57 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ವಿಶ್ವದಾಖಲೆಯಾಯಿತು. 1960: ಚಾಡ್ ತನ್ನ ಸ್ವಾತಂತ್ರ್ಯವನ್ನು ಘೋಷಿಸಿಕೊಂಡಿತು.

1961: ಪೋರ್ಚುಗೀಸರ ಅಧೀನದಲ್ಲಿದ್ದ ದಾದ್ರ ಮತ್ತು ನಗರ ಹವೇಲಿ ಭೂ ಪ್ರದೇಶಗಳು ಸ್ವತಂತ್ರಗೊಂಡು ಅದೇ ಹೆಸರಿನಿಂದ ಕೇಂದ್ರಾಡಳಿತ ಪ್ರದೇಶದಲ್ಲಿ ವಿಲೀನಗೊಂಡವು.

1974: ಟರ್ಕಿಯ ಅಂಕಾರಾದಲ್ಲಿ 2 ಬಸ್‌ಗಳ ಮಧ್ಯೆ ಸಂಭವಿಸಿದ ಢಿಕ್ಕಿಯಲ್ಲಿ 21 ಜನ ಮೃತಪಟ್ಟರು.

2003: 112 ಡಿಗ್ರಿ ಫ್ಯಾರನ್‌ಹೀಟ್ ಪ್ರಮಾಣದಲ್ಲಿ ಬೀಸಿದ ಬಿಸಿಗಾಳಿಗೆ ಸುಮಾರು 144 ಜನ ಮೃತಪಟ್ಟ ಘಟನೆ ವರದಿಯಾಗಿದೆ.

2015: ಜಪಾನ್‌ನಲ್ಲಿ 2011ರಲ್ಲಿ ಫುಕುಶಿಮಾ ಅಣುಸ್ಥಾವರ ನಾಶ ಹೊಂದಿದ ಬಳಿಕ ಸೆಂಡಾಯ್ ಅಣುಸ್ಥಾವರವನ್ನು ಪುನಾರಂಭಿಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ಈ ದಿನ
ಈ ದಿನ