ನಾಪತ್ತೆಯಾಗಿದ್ದ ಬಾಲಕ ಹಳ್ಳದಲ್ಲಿ ಶವವಾಗಿ ಪತ್ತೆ

Update: 2019-08-27 18:02 GMT

ಶಿವಮೊಗ್ಗ, ಆ. 27: ಮನೆಯಿಂದ ನಾಪತ್ತೆಯಾಗಿದ್ದ ಬಾಲಕನೋರ್ವ ನೀರು ತುಂಬಿದ್ದ ಹಳ್ಳದಲ್ಲಿ ಶವವಾಗಿ ಪತ್ತೆಯಾಗಿರುವ ಘಟನೆ ಶಿವಮೊಗ್ಗ ತಾಲೂಕಿನ ಕೋಟೆಗಂಗೂರು ಗ್ರಾಮದಲ್ಲಿ ನಡೆದಿದೆ. 

ಪವನ್‍ ಕುಮಾರ್ (13) ಎಂಬ ಬಾಲಕ ಆ. 23 ರಂದು ಮನೆಯಿಂದ ಕಣ್ಮರೆಯಾಗಿದ್ದ. ಎಲ್ಲಿಯೂ ಆತನ ಸುಳಿವು ಲಭ್ಯವಾಗಿರಲಿಲ್ಲ. ಈ ಸಂಬಂಧ ಪೋಷಕರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿಯಲ್ಲಿ ನಾಪತ್ತೆ ದೂರು ದಾಖಲಿಸಿದ್ದರು. 

ಇದೀಗ ಬಾಲಕನ ಶವವು ಗ್ರಾಮದ ಹಳ್ಳವೊಂದರಲ್ಲಿ ಪತ್ತೆಯಾಗಿದೆ. ಈಜಾಡಲು ಹೋಗಿ ಬಾಲಕ ನೀರುಪಾಲಾಗಿರುವ ಶಂಕೆ ವ್ಯಕ್ತಪಡಿಸಲಾಗಿದೆ. ಪೊಲೀಸರು ತನಿಖೆ ಮುಂದುವರಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News