ಮೈಸೂರು ದಸರಾ ಆಚರಣೆಗೆ 18.50 ಕೋಟಿ ರೂ. ಬಿಡುಗಡೆ

Update: 2019-08-28 17:10 GMT
ಸಾಂದರ್ಭಿಕ ಚಿತ್ರ

ಮೈಸೂರು, ಆ. 28: ವಿಶ್ವವಿಖ್ಯಾತ ಮೈಸೂರು ದಸರಾ ಆಚರಣೆಗೆ ರಾಜ್ಯ ಸರಕಾರ 18.50 ಕೋಟಿ ರೂ. ಬಿಡುಗಡೆ ಮಾಡಿದೆ.

ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆ ಜಂಬೂ ಸವಾರಿ ಸೇರಿದಂತೆ ನವರಾತ್ರಿಯಂದು ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮ, ಆಹಾರ ಮೇಳ, ಯವ ದಸರಾ, ಯುವ ಸಂಭ್ರಮ, ಫಲಪುಷ್ಪ ಪ್ರದರ್ಶನ, ಕುಸ್ತಿ ಪಂದ್ಯಾವಳಿ, ಕವಿಗೋಷ್ಠಿ, ಅರಮನೆ ಸಂಗೀತ, ರೈತ ದಸರಾ ಸೇರಿದಂತೆ ವಿವಿಧ ಕಾರ್ಯಕ್ರಮಗಳು ಜರುಗಲಿವೆ. ಜೊತೆಗೆ ಮೈಸೂರಿನ ರಸ್ತೆಗಳ ಡಾಂಬರೀಕರಣ, ಸ್ವಚ್ಛತೆ ಸೇರಿದಂತೆ ಪ್ರವಾಸೋದ್ಯಮಕ್ಕೆ ಈ ಹಣ ಬಳಸಿಕೊಳ್ಳಲಾಗುತ್ತದೆ.

ಒಟ್ಟಾರೆ ದಸರಾ ಆಚರಣೆಗೆ 18.59 ಕೋಟಿ ರೂ. ಬಿಡುಗಡೆ ಮಾಡಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅಧೀನ ಕಾರ್ಯದರ್ಶಿ ಆದೇಶ ಹೊರಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News