ಸಾರ್ವಜನಿಕ ಆರೋಗ್ಯ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯ
ಅಕ್ಟೋಬರ್ 2018ರ ವೇಳೆಗೆ 118 ದೇಶಗಳು ಸಿಗರೆಟ್ ಪ್ಯಾಕೆಟ್‌ಗಳ ಮೇಲೆ ಸಚಿತ್ರ ಎಚ್ಚರಿಕೆಗಳನ್ನು ಮುದ್ರಿಸಲು ಒಪ್ಪಿದ್ದವು. 1966ರಲ್ಲಿ ಲಿಖಿತ ಆರೋಗ್ಯ ಎಚ್ಚರಿಕೆಗಳನ್ನು ಮುದ್ರಿಸಲು ಆರಂಭಿಸಿದ್ದ ಅಮೆರಿಕವೇ ತನ್ನ ದೇಶದ ಸಿಗರೆಟ್ ಪ್ಯಾಕೆಟ್‌ಗಳ ಮೇಲೆ ಇನ್ನೂ ಕೂಡ ಸಚಿತ್ರ ಎಚ್ಚರಿಕೆಗಳನ್ನು ಮುದ್ರಿಸುತ್ತಿಲ್ಲ ಎಂಬುದು ಒಂದು ವ್ಯಂಗ್ಯವೇ ಸರಿ.
ಅಮೆರಿಕದ ಕಾಂಗ್ರೆಸ್ ಹತ್ತು ವರ್ಷಗಳ ಹಿಂದೆ ಕುಟುಂಬ ಧೂಮಪಾನ ತಡೆ ಮತ್ತು ಹೊಗೆಸೊಪ್ಪುನಿಯಂತ್ರಣ ಕಾಯ್ದೆಯನ್ನು ಜಾರಿ ಮಾಡಿತ್ತು. ಈ ವರ್ಷ ಆಗಸ್ಟ್ ಹದಿನೈದರಂದು ಆಹಾರ ಮತ್ತು ಔಷಧಿ ಆಡಳಿತವು (ಎಫ್‌ಡಿಎ) ಅಂತಿಮವಾಗಿ ಒಂದು ನಿಲುವಳಿಯನ್ನು ಹೊರಡಿಸಿ ಸಿಗರೆಟ್ ಪ್ಯಾಕ್‌ಗಳ ಮೇಲೆ ಮತ್ತು ಜಾಹೀರಾತುಗಳಲ್ಲಿ ಧೂಮಪಾನದಿಂದ ಆಗುವ ಹಾನಿಗಳ ಬಗ್ಗೆ ಸಚಿತ್ರ ಎಚ್ಚರಿಕೆಗಳನ್ನು ಮುದ್ರಿಸಬೇಕೆಂದು ಹೇಳಿತು. ಇದು ಒಮ್ಮೆ ಜಾರಿಗೆ ಬಂತೆಂದರೆ ಪ್ಯಾಕೇಜುಗಳ ಮುಂಭಾಗ ಮತ್ತು ಹಿಂಭಾಗದ ಪ್ಯಾನಲ್‌ಗಳು ಶೇ. 50 ಜಾಗದಲ್ಲಿ ಧೂಮಪಾನದಿಂದಾಗುವ ಹಾನಿಯ ಕುರಿತಾದ ಚಿತ್ರಗಳು ಮತ್ತು ಪಠ್ಯ ಇರುತ್ತವೆ. ಈಗ ಅಮೆರಿಕದಲ್ಲಿ ಸಿಗರೆಟ್ ಪ್ಯಾಕೆಟ್‌ಗಳ ಮೇಲೆ ಪ್ಯಾಕೆಟ್‌ನ ಒಂದು ಬದಿಯಲ್ಲಿ ಎಚ್ಚರಿಕೆಯ ಸಂದೇಶ ಮಾತ್ರ ಇದೆ.
ಅಕ್ಟೋಬರ್ 2018ರ ವೇಳೆಗೆ 118 ದೇಶಗಳು ಸಿಗರೆಟ್ ಪ್ಯಾಕೆಟ್‌ಗಳ ಮೇಲೆ ಇಂತಹ ಸಚಿತ್ರ ಎಚ್ಚರಿಕೆಗಳನ್ನು ಮುದ್ರಿಸಲು ಒಪ್ಪಿದ್ದವು. 1966ರಲ್ಲಿ ಲಿಖಿತ ಆರೋಗ್ಯ ಎಚ್ಚರಿಕೆಗಳನ್ನು ಮುದ್ರಿಸಲು ಆರಂಭಿಸಿದ್ದ ಅಮೆರಿಕವೇ ತನ್ನ ದೇಶದ ಸಿಗರೆಟ್ ಪ್ಯಾಕೆಟ್‌ಗಳ ಮೇಲೆ ಇನ್ನೂ ಕೂಡ ಸಚಿತ್ರ ಎಚ್ಚರಿಕೆಗಳನ್ನು ಮುದ್ರಿಸುತ್ತಿಲ್ಲ ಎಂಬುದು ಒಂದು ವ್ಯಂಗ್ಯವೇ ಸರಿ.
ಹೊಗೆಸೊಪ್ಪುಉದ್ಯಮವು ಹೀಗೆ ಸಚಿತ್ರ ಎಚ್ಚರಿಕೆಯನ್ನು ಮುದ್ರಿಸುವುದು ಅಮೆರಿಕದ ಮೊದಲ (ಸಂವಿಧಾನ) ತಿದ್ದುಪಡಿ ನೀಡುವ ಅಭಿವ್ಯಕ್ತಿ ಸ್ವಾತಂತ್ರ್ಯದ ಹಕ್ಕನ್ನು ಉಲ್ಲಂಘಿಸುತ್ತದೆ ಎಂದು ವಾದಿಸುತ್ತಿದೆ ಹೊಗೆಸೊಪ್ಪು ಉತ್ಪನ್ನಗಳ ಮಾರಾಟದ ಮೂಲಕ ಬರುವ ಲಾಭವನ್ನು ಉಳಿಸಿಕೊಳ್ಳಲು ಹೊಗೆಸೊಪ್ಪುಉದ್ಯಮವು ಅಭಿವ್ಯಕ್ತಿ ಸ್ವಾತಂತ್ರ್ಯದ ಹಕ್ಕನ್ನು ಒಂದು ದಾಳವಾಗಿ ಬಳಸಿಕೊಳ್ಳುತ್ತಿದೆ. ಈಗ ಅಮೆರಿಕದ ಫುಡ್ ಆ್ಯಂಡ್ ಡ್ರಗ್ ಅಡ್ಮಿನಿಸ್ಟ್ರೇಷನ್ (ಎಫ್‌ಡಿಎ) ಹೊರಡಿಸಿರುವ ನಿಯಮ ಕೂಡ ಅಮೆರಿಕದ ಮೆಸಾಚುಸೆಟ್ಸ್ ಜಿಲ್ಲಾ ನ್ಯಾಯಾಲಯ 2019ರ ಮಾರ್ಚ್‌ನಲ್ಲಿ ಹೊರಡಿಸಿದ ಒಂದು ಆಜ್ಞೆಯ ಬಳಿಕವಷ್ಟೇ ಹೊರಡಿಸಲಾಗಿರುವ ಒಂದು ಆದೇಶವಾಗಿದೆ.
ಆದರೆ ಹೊಗೆಸೊಪ್ಪುಕಂಪೆನಿಗಳು ಎಫ್‌ಡಿಎ ಹೊರಡಿಸಿರುವ ಆಜ್ಞೆಯನ್ನು ನ್ಯಾಯಾಲಯದಲ್ಲಿ ಖಂಡಿತವಾಗಿಯೂ ಪ್ರಶ್ನಿಸದೆ ಇರುವುದಿಲ್ಲ. ಎಫ್‌ಡಿಎ ಅಂತಿಮ ನಿಯಮವನ್ನು ಪ್ರಕಟಿಸಿದ ಬಳಿಕ ಕೂಡ 2011ರ ಜೂನ್‌ನಲ್ಲಿ ಹೊಗೆಸೊಪ್ಪುಕಂಪೆನಿಗಳು ಸಚಿತ್ರ ಎಚ್ಚರಿಕೆಗಳನ್ನು ಜಾರಿಗೆ ತರುವುದಕ್ಕೆ ನ್ಯಾಯಾಲಯದಲ್ಲಿ ಯಶಸ್ವಿಯಾಗಿ ಸವಾಲೊಡ್ಡಿದ್ದವು.
ಕೇವಲ ಅಕ್ಷರಗಳಲ್ಲಿ ಮಾತ್ರ ಇರುವ ಎಚ್ಚರಿಕೆಗಳು ಅಕ್ಷರಗಳ ಅತಿ ಚಿಕ್ಕ ಗಾತ್ರ ಹಾಗೂ ಅವುಗಳು ಪ್ಯಾಕೆಟ್‌ನ ಮೇಲೆ ಇರುವ ಜಾಗದಿಂದಾಗಿ ಬಹಳ ಮಟ್ಟಿಗೆ ಗಿರಾಕಿಗಳ ಕಣ್ಣಿಗೆ ಕಾಣಿಸುವುದೇ ಇಲ್ಲ; ಪರಿಣಾಮವಾಗಿ ಧೂಮಪಾನದ ದುಷ್ಪರಿಣಾಮಗಳನ್ನು ಧೂಮಪಾನ ಮಾಡುವವರಿಗೆ ತಲುಪಿಸುವುದರಲ್ಲಿ ಅವು ಯಶಸ್ವಿಯಾಗುವುದಿಲ್ಲ. ಅದಕ್ಕೆ ವ್ಯತಿರಿಕ್ತವಾಗಿ ಧೂಮಪಾನದಿಂದಾಗುವ ಹಾನಿಗಳನ್ನು ಹೇಳುವ ಭಯ ಹುಟ್ಟಿಸುವಂತಹ ಚಿತ್ರಗಳನ್ನು ಜನರು ಗಮನಿಸುವ ಸಾಧ್ಯತೆಯೂ ಹೆಚ್ಚು; ಮತ್ತು ಅವುಗಳು ಅವರ ಮೇಲೆ ದೀರ್ಘಕಾಲಿಕ ಪರಿಣಾಮವನ್ನು ಬೀರುತ್ತದೆ. ಅಲ್ಲದೆ ಅವುಗಳು ಜಾಹೀರಾತಿನ ಎಚ್ಚರಿಕೆ ಸಂದೇಶವನ್ನು ತಕ್ಷಣ ಹಾಗೂ ಸುಲಭವಾಗಿ ರವಾನಿಸುತ್ತದೆ.
ಹೊಗೆಸೊಪ್ಪುಕಂಪೆನಿಗಳಿಗೆ ಇಂತಹ ಚಿತ್ರಗಳ ಮೂಲಕ ನೀಡುವ ಎಚ್ಚರಿಕೆಗಳ ಶಕ್ತಿ ಸಾಮರ್ಥ್ಯ ಏನೆಂದು ಚೆನ್ನಾಗಿ ಗೊತ್ತಿದೆ. ಹೊಗೆಸೊಪ್ಪು ಬಳಕೆಯನ್ನು ಕಡಿಮೆ ಮಾಡುವುದರಲ್ಲಿ, ಧೂಮಪಾನಿಗಳನ್ನು ಧೂಮಪಾನ ಮಾಡದಂತೆ ಒತ್ತಾಯಿಸುವುದರಲ್ಲಿ ಹಾಗೂ ಹದಿಹರೆಯದವರು ಧೂಮಪಾನ ಅಭ್ಯಾಸ ಮಾಡದಂತೆ ತಡೆಯುವುದರಲ್ಲಿ ಈ ಚಿತ್ರಗಳು ನೀಡುವ ಎಚ್ಚರಿಕೆಗಳ ಶಕ್ತಿಯ ಅರಿವು ಇರುವುದರಿಂದಲೇ ಹೊಗೆಸೊಪ್ಪು ಉದ್ಯಮವು ಈಗ ಅಮೆರಿಕದಲ್ಲಿ ಇಂತಹ ಗ್ರಾಫಿಕ್ ಚಿತ್ರಗಳನ್ನು ವಿರೋಧಿಸುತ್ತಿವೆ. ಅಮೆರಿಕ ವಿಶ್ವದಲ್ಲಿ ಹೊಗೆಸೊಪ್ಪುಉತ್ಪನ್ನಗಳಿಗೆ ಅತ್ಯಂತ ದೊಡ್ಡ ಮಾರುಕಟ್ಟೆಗಳಲ್ಲಿ ಒಂದು ಮಾರುಕಟ್ಟೆ. ಹನ್ನೆರಡರಿಂದ ಹದಿನೇಳರ ಹರೆಯದ ನಡುವಿನ 1.4 ಮಿಲಿಯ ಮಕ್ಕಳು ಮತ್ತು 34 ಮಿಲಿಯ ಮಂದಿ ವಯಸ್ಕರು ಈಗ ಅಮೆರಿಕದಲ್ಲಿ ಸಿಗರೆಟ್ ಸೇದುವವರಾಗಿದ್ದಾರೆ.
2017ರಲ್ಲಿ ನಡೆಸಲಾದ ಒಂದು ಅಧ್ಯಯನದ ಪ್ರಕಾರ 2020ರ ವೇಳೆಗೆ, ಸಚಿತ್ರ ಎಚ್ಚರಿಕೆಗಳು ಸಿಗರೆಟ್ ಸೇವನೆಯನ್ನು ಶೇಕಡಾ 5ರಷ್ಟು ಮತ್ತು 2065ರ ವೇಳೆಗೆ ಶೇ. 10ರಷ್ಟು ಇಳಿಸಬಲ್ಲವು. ಸಚಿತ್ರ ಎಚ್ಚರಿಕೆಗಳು ಎಷ್ಟು ಶಕ್ತಿಶಾಲಿ, ಪ್ರಭಾವಶಾಲಿ ಹಾಗೂ ಅವುಗಳು ಸಾರ್ವಜನಿಕ ಅಭಿಪ್ರಾಯ ರೂಪಿಸುವುದರಲ್ಲಿ ಎಷ್ಟೊಂದು ಮುಖ್ಯವಾದ ಪಾತ್ರ ವಹಿಸುತ್ತವೆ ಎಂಬುದು ಇಂತಹ ಎಚ್ಚರಿಕೆಗಳನ್ನು ಸಿಗರೆಟ್ ಪ್ಯಾಕೆಟ್‌ಗಳ ಮೇಲೆ ಮುದ್ರಿಸಲಾದ ದೇಶಗಳಿಂದ ದೊರೆತ ದತ್ತಾಂಶಗಳಿಂದ ತಿಳಿದು ಬಂದಿದೆ. ಉದಾಹರಣೆಗೆ ಸಿಗರೆಟ್ ಪ್ಯಾಕೆಟ್‌ಗಳ ಮೇಲೆ ಸಚಿತ್ರ ಎಚ್ಚರಿಕೆಗಳನ್ನು ಕಡ್ಡಾಯಗೊಳಿಸಿದ ಬಳಿಕ ಕೇವಲ ಆರು ವರ್ಷಗಳಲ್ಲಿ ಕೆನಡಾದಲ್ಲಿ ಸಿಗರೆಟ್ ಸೇವನೆಯ ಪ್ರಮಾಣ ಶೇ.12ರಷ್ಟು ಕಡಿಮೆಯಾಯಿತು. ಅದೇ ರೀತಿಯಾಗಿ ಆಸ್ಟ್ರೇಲಿಯಾದಲ್ಲಿ 2004-2008ರ ನಡುವೆ ಶೇ. 10ರಷ್ಟು ಕಡಿಮೆಯಾದರೆ ಯುಕೆಯಲ್ಲಿ 2009ರಲ್ಲಿ ಒಂದೇ ವರ್ಷದಲ್ಲಿ ಶೇ.10ರಷ್ಟು ಕಡಿಮೆಯಾಯಿತು. ಸಚಿತ್ರ ಎಚ್ಚರಿಕೆಗಳು ಹೊಗೆಸೊಪ್ಪುಕಂಪೆನಿಗಳಿಗೆ ಒಡ್ಡುವ ಅತ್ಯಂತ ದೊಡ್ಡ ಬೆದರಿಕೆ ಎಂದರೆ, ಅವುಗಳು ಸಿಗರೆಟಿನ ಆಕರ್ಷಣೆಯನ್ನು ಕಡಿಮೆ ಮಾಡುತ್ತದೆ. ಆ ಮೂಲಕ ಹೊಗೆಸೊಪ್ಪುಉತ್ಪನ್ನಗಳ ಬಳಕೆಯನ್ನು ಕಡಿಮೆ ಮಾಡುತ್ತವೆ. ಸಚಿತ್ರ ಎಚ್ಚರಿಕೆಗಳು ತಾವು ಧೂಮಪಾನ ಮಾಡಲು ಆರಂಭಿಸದಂತೆ ತಡೆಯುತ್ತಿದೆ ಎಂದು ಇಪ್ಪತ್ತೆಂಟು ಯುರೋಪಿಯನ್ ದೇಶಗಳ ಹಾಗೂ ಕೆನಡಾದ ಸುಮಾರು 30 ಶೇಕಡಾ ಯುವಕ-ಯುವತಿಯರು ಹದಿಹರೆಯದವರು ಹೇಳಿದ್ದಾರೆ.
ಸಚಿತ್ರ ಎಚ್ಚರಿಕೆಗಳು ಧೂಮಪಾನವನ್ನು ಸಿಗರೆಟನ್ನು ಒಂದು ಬ್ರಾಂಡ್ ಆಗಿ ವರ್ದಿಸುವ ಬದಲು ಪ್ಯಾಕೆಜಿಂಗ್ ಶಕ್ತಿಯನ್ನೇ ನಾಶ ಮಾಡಬಲ್ಲವು. ಗ್ರಾಫಿಕ್ ಚಿತ್ರಗಳ ಎಚ್ಚರಿಕೆಗಳಿರುವ ಸಿಗರೆಟ್ ಪ್ಯಾಕೆಟ್‌ಗಳು, ಸರಕಾರಕ್ಕೆ ಯಾವುದೇ ಖರ್ಚಿಲ್ಲದೆ, ಸಾರ್ವಜನಿಕ ಆರೋಗ್ಯ ಸಂದೇಶಗಳನ್ನು ಹರಡುವ ಒಂದು ಸಂಚಾರಿ(ಮೊಬೈಲ್) ಮಾಧ್ಯಮವಾಗಬಲ್ಲವು.
ಕೃಪೆ: ದಿ ಹಿಂದೂ