ರೊಮಿಲಾ ಥಾಪರ್ ರ ‘ಸ್ವವಿವರ’ದ ಅಗತ್ಯ ಯಾರಿಗಿದೆ?

Update: 2019-09-18 05:22 GMT

ಥಾಪರ್ ತಾನು ಬರೆದ ಸಂಶೋಧನಾ ಪ್ರಬಂಧಗಳು ಹಾಗೂ ಪುಸ್ತಕಗಳಿಗೆ ಹಲವಾರು ಪ್ರಶಸ್ತಿಗಳನ್ನು ಪಡೆದಿದ್ದಾರೆ. ಈಗ ಜವಾಹರಲಾಲ್ ನೆಹರೂ ವಿಶ್ವವಿದ್ಯಾನಿಲಯವು (ಜೆಎನ್‌ಯು) ಅವರ ಸಿವಿ (ಸ್ವವಿವರ)ಯನ್ನು ವಿವಿಗೆ ಸಲ್ಲಿಸುವಂತೆ ಹೇಳಿದೆ. ಅವರು ಅಲ್ಲಿ ಸುಮಾರು ಮೂರು ದಶಕಗಳ ಕಾಲ ಬೋಧನಾತ್ಮಕ ಹಾಗೂ ಆಡಳಿತಾತ್ಮಕ ಹುದ್ದೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ಈಗ ನಿವೃತ್ತಿಯ ಬಳಿಕ ಅಲ್ಲಿ ಪ್ರೊಫೆಸರ್ ಆಗಿ ಈ ಪ್ರತಿಷ್ಠೆಯ ಹುದ್ದೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಅವರನ್ನು ಅವರ ಹುದ್ದೆಯಲ್ಲಿ ಮುಂದುವರಿಸಬೇಕೋ ಬೇಡವೋ? ಎಂದು ನಿರ್ಧರಿಸಲಿಕ್ಕಾಗಿ ಈಗ ವಿವಿಯು 80ರ ಹರೆಯದ ಅವರ ಸಿವಿಯನ್ನು ಸಲ್ಲಿಸುವಂತೆ ಅವರಿಗೆ ಪತ್ರ ಕಳುಹಿಸಿದೆ.

‘‘ಜ್ಞಾನದ ಹುಡುಕಾಟದಲ್ಲಿ ಆಯಾಸವಿಲ್ಲದ ಹಾಗೂ ತಾನು ಪಡೆದ ಜ್ಞಾನದ ಪ್ರಕಟನೆಯಲ್ಲಿ ಸಾಟಿ ಇಲ್ಲದ ಓರ್ವ ಇತಿಹಾಸಕಾರರು ಮತ್ತು ಎಲ್ಲಕ್ಕಿಂತ ಮಿಗಿಲಾಗಿ ಸತ್ಯದ ಓರ್ವ ನಿಷ್ಠ ಪಕ್ಷಪಾತಿ’’

-2002ರಲ್ಲಿ ಆಕ್ಸ್‌ಫರ್ಡ್ ವಿಶ್ವ ವಿದ್ಯಾನಿಲಯವು ರೊಮಿಲಾ ಥಾಪರ್‌ರಿಗೆ ಗೌರವ ಡಾಕ್ಟರೇಟ್ ಪದವಿ ಪ್ರದಾನ ಮಾಡಿದಾಗ ನೀಡಿದ ಪ್ರಮಾಣ ಪತ್ರದಿಂದ.

1960ರಲ್ಲಿ ರೊಮಿಲಾ ಥಾಪರ್ ಅಶೋಕ ಚಕ್ರವರ್ತಿ ಹಾಗೂ ವೌರ್ಯ ಸಾಮ್ರಾಜ್ಯದ ಪತನದ ಕುರಿತು 400ಕ್ಕೂ ಹೆಚ್ಚು ಪುಟಗಳ ಒಂದು ಸಂಶೋಧನಾ ಪ್ರಬಂಧವನ್ನು ಬರೆದರು. 2017ರಲ್ಲಿ ಅದನ್ನು ಪ್ರಕಟಿಸಿದ ಆಕ್ಸ್‌ಫರ್ಡ್ ವಿಶ್ವವಿದ್ಯಾನಿಲಯದ ಪ್ರಕಾರ ಆ ಪ್ರಬಂಧವು ‘‘ಅಕ್ಷರಶಃ ಭಾರತೀಯ ಇತಿಹಾಸದ ಸಂಪೂರ್ಣ ಅವಧಿಯ ಅವಲೋಕನದ ಒಂದು ಪ್ರಯತ್ನ’’.

ಥಾಪರ್ ತಾನು ಬರೆದ ಸಂಶೋಧನಾ ಪ್ರಬಂಧಗಳು ಹಾಗೂ ಪುಸ್ತಕಗಳಿಗೆ ಹಲವಾರು ಪ್ರಶಸ್ತಿಗಳನ್ನು ಪಡೆದಿದ್ದಾರೆ. ಈಗ ಜವಾಹರಲಾಲ್ ನೆಹರೂ ವಿಶ್ವವಿದ್ಯಾನಿಲಯವು (ಜೆಎನ್‌ಯು) ಅವರ ಸಿವಿ(ಸ್ವವಿವರ)ಯನ್ನು ವಿವಿಗೆ ಸಲ್ಲಿಸುವಂತೆ ಹೇಳಿದೆ. ಅವರು ಅಲ್ಲಿ ಸುಮಾರು ಮೂರು ದಶಕಗಳ ಕಾಲ ಬೋಧನಾತ್ಮಕ ಹಾಗೂ ಆಡಳಿತಾತ್ಮಕ ಹುದ್ದೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ಈಗ ನಿವೃತ್ತಿಯ ಬಳಿಕ ಅಲ್ಲಿ ಪ್ರೊಫೆಸರ್ ಆಗಿ ಈ ಪ್ರತಿಷ್ಠೆಯ ಹುದ್ದೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಅವರನ್ನು ಅವರ ಹುದ್ದೆಯಲ್ಲಿ ಮುಂದುವರಿಸಬೇಕೋ ಬೇಡವೋ? ಎಂದು ನಿರ್ಧರಿಸಲಿಕ್ಕಾಗಿ ಈಗ ವಿವಿಯು 80ರ ಹರೆಯದ ಅವರ ಸಿವಿಯನ್ನು ಸಲ್ಲಿಸುವಂತೆ ಅವರಿಗೆ ಪತ್ರ ಕಳುಹಿಸಿದೆ. ಅದು ಹೀಗೆ ಮಾಡುವ ಮೊದಲು ಅಮೆರಿಕದ ಅತ್ಯಂತ ಪ್ರತಿಷ್ಠಿತ ಸಂಘಗಳಲ್ಲೊಂದಾದ ಹಾಗೂ 276 ವರ್ಷಗಳ ಹಿಂದೆ ಅಮೆರಿಕದ ಸ್ಥಾಪಕರಲ್ಲೊಬ್ಬರಾದ ಬೆಂಜಮಿನ್ ಫ್ರಾಂಕ್ಲಿನ್‌ನಿಂದ ಸ್ಥಾಪಿಸಲ್ಪಟ್ಟ ಅಮೆರಿಕನ್ ತತ್ವಶಾಸ್ತ್ರ ಸಂಘವು ಥಾಪರ್ ಬಗ್ಗೆ ಏನು ಹೇಳಿದೆ ಎಂಬುದನ್ನು ಪರಿಗಣಿಸಬಹುದಾಗಿತ್ತು.

2008ರಲ್ಲಿ ಥಾಪರ್ ಮತ್ತು ಇತಿಹಾಸಕಾರ ಪೀಟರ್ ಬ್ರೌನ್‌ರವರಿಗೆ ಜಂಟಿಯಾಗಿ ಒಂದು ಮಿಲಿಯ ಡಾಲರ್ ಬಹುಮಾನ ಮೊತ್ತದ ಕ್ಲೂಗ್ ಪ್ರಶಸ್ತಿ ನೀಡಲಾಯಿತು. ಮಾನವ ಶಾಸ್ತ್ರಗಳ ಅಧ್ಯಯನಕ್ಕಾಗಿ ಅವರಿಗೆ ಈ ಪ್ರಶಸ್ತಿ ದೊರಕಿತು. ಇದು ನೊಬೆಲ್ ಪ್ರಶಸ್ತಿಗೆ ಸಮನಾದ ಪ್ರಶಸ್ತಿ ಎಂದು ಪರಿಗಣಿಸಲ್ಪಟ್ಟಿದೆ.

ಈಗ ಜೆಎನ್‌ಯುನ ಅಧಿಕಾರಿಗಳು, ಈಗಿನ ಸರಕಾರಕ್ಕೆ ಅವರ ಕೃತಿಗಳು, ಅವರ ಅಧ್ಯಯನ ತಮಗೆ ಬೇಕಾಗಿಯೂ ಇಲ್ಲ, ತಮಗೆ ಸ್ವೀಕಾರಾರ್ಹವೂ ಅಲ್ಲ ಎಂಬ ಸಂದೇಶವನ್ನು ಅವರಿಗೆ ಹಾಗೂ ಇತರ ವಿದ್ವಾಂಸರಿಗೆ ರವಾನಿಸುತ್ತಿದ್ದಾರೆ ಯಾಕೆ?

ಈ ವರ್ಷ ಸಂಸತ್ ಚುನಾವಣೆಗಳು ನಡೆಯುವ ಮೊದಲು ಥಾಪರ್ ಸಂದರ್ಶನವೊಂದರಲ್ಲಿ ನೇರವಾಗಿ ಹೇಳಿದ್ದರು: ‘‘ಪ್ರಧಾನಿ ಮೋದಿಯವರ ಆಡಳಿತದಲ್ಲಿ ಅಲ್ಪಸಂಖ್ಯಾತರಿಗೆ ತಾವು ಪರಕೀಯ, ಅನಾಥರು ಎಂದು ಅನ್ನಿಸುತ್ತಿದೆ.’’ ಅಲ್ಲದೆ ತನ್ನ ಕೇಸರಿ ಸಿದ್ಧಾಂತವನ್ನು ಸಮರ್ಥಿಸಲು ಈಗ ಭಾರತವನ್ನು ಆಳುತ್ತಿರುವ ರಾಜಕೀಯ ಪಕ್ಷವು ಇತಿಹಾಸವನ್ನು ಹೇಗೆ ಪುನರ್‌ಲೇಖಿಸುತ್ತದೆ ಎಂಬ ಬಗ್ಗೆ ಕೂಡ ಅವರು ಮಾತಾಡಿದ್ದರು.

ಕೇಸರಿ ಲಾಬಿ ಅವರ ಅಧ್ಯಯನವನ್ನು, ಕೃತಿಗಳನ್ನು ‘ವಿವಾದಾಸ್ಪದ’ವೆಂದೇ ಪರಿಗಣಿಸಿದೆ. ಸಂಶೋಧನೆಯ ವೃತ್ತಿಪರ ವಿಧಾನಗಳನ್ನು ಅವಲಂಬಿಸಿ ಅವರ ಸಂಶೋಧನೆ ಇದೆ ಎಂಬುದೇ ಇದಕ್ಕೆ ಕಾರಣ. ಸಂಸ್ಕೃತ ಪಠ್ಯಗಳಿಲ್ಲದ ವಿಷಯಗಳನ್ನು ಇದೆಯೆಂದು ಸಾಧಿಸುವ ಹಿಂದೂ ತೀವ್ರಗಾಮಿಗಳ ಜನಪ್ರಿಯ ಸಿದ್ಧಾಂತಗಳನ್ನಾಧರಿಸಿರುವ ಸಂಶೋಧನೆ ಥಾಪರ್ ಅವರದ್ದಲ್ಲ ಎಂಬುದು ಪ್ರಸಕ್ತ ಸರಕಾರದ ಕೆಂಗಣ್ಣಿಗೆ ಕಾರಣವಾಗಿದೆ.

ಕೇಸರಿ ಬ್ರಿಗೇಡ್ ಪ್ರತಿಪಾದಿಸುವ ಐತಿಹಾಸಿಕ ಸಿದ್ಧಾಂತಗಳನ್ನು ಹಲವು ದಶಕಗಳಿಂದ ಥಾಪರ್ ಪ್ರಶ್ನಿಸುತ್ತ ಬಂದಿದ್ದಾರೆ. ಕೇಸರಿ ಬ್ರಿಗೇಡ್ ತನ್ನನ್ನು ಯಾಕೆ ಇಷ್ಟಪಡುವುದಿಲ್ಲ ಎಂಬುದನ್ನು 2003ರ ಫೆಬ್ರವರಿಯಲ್ಲಿ ಅಲಿಗಡ ಮುಸ್ಲಿಂ ವಿಶ್ವವಿದ್ಯಾನಿಲಯದಲ್ಲಿ ಥಾಪರ್ ಸ್ಪಷ್ಟಪಡಿಸಿದ್ದಾರೆ.

19ನೇ ಶತಮಾನದಲ್ಲಿ ಬ್ರಿಟಿಷರು ಪ್ರತಿಪಾದಿಸಿದ ಇತಿಹಾಸದ ವಸಾಹತುಶಾಹಿ ಅರ್ಥ ವಿವರಣೆಗೆ ಕೇಸರಿ ಬ್ರಿಗೇಡ್ ಅಂಟಿಕೊಂಡಿದೆ. ಆದರೆ ಥಾಪರ್ ಮತ್ತು ಆಧುನಿಕ ಇತಿಹಾಸದ ಇತರ ವಿದ್ವಾಂಸರು ಈ ಅರ್ಥ ವಿವರಣೆಯನ್ನು ಪ್ರಶ್ನಿಸುತ್ತಾರೆ.

ಥಾಪರ್ ಹೇಳುವಂತೆ, 1823ರ ಸುಮಾರಿಗೆ ಜೇಮ್ಸ್ ಮಿಲ್ ಬರೆದ ಬ್ರಿಟಿಷ್ ಭಾರತದ ಇತಿಹಾಸವೇ ವ್ಯಾಪಕವಾಗಿ ಓದಲ್ಪಟ್ಟು, ಬ್ರಿಟಿಷ್ ಸಾಮ್ರಾಜ್ಯಶಾಹಿಗಳ ಒಂದು ಸ್ಟಾಂಡರ್ಡ್ ಪಠ್ಯವಾಗಿತ್ತು. ಮಿಲ್ ಅದರಲ್ಲಿ ಭಾರತದ ಇತಿಹಾಸವನ್ನು ಮೂರು ‘ಯುಗಗಳಾಗಿ’ ವಿಂಗಡಿಸಿದ್ದ: ಹಿಂದೂ ನಾಗರಿಕತೆ, ಮುಸ್ಲಿಂ ನಾಗರಿಕತೆ ಮತ್ತು ಬ್ರಿಟಿಷ್ ಯುಗ.

ಭಾರತೀಯ ಇತಿಹಾಸ ಮತ್ತು ಸಂಶೋಧನೆಯ ಮೇಲೆ ಈ ಪುಸ್ತಕ 200 ವರ್ಷಗಳವರೆಗೆ ಪರಿಣಾಮ ಬೀರಿತು. ತನ್ನ ಪುಸ್ತಕದಲ್ಲಿ ಮಿಲ್ ಹೀಗೆ ವಾದಿಸಿದ್ದ ‘ಹಿಂದೂ ನಾಗರಿಕತೆ’ ಜಡ, ನಿಂತ ನೀರು ಮತ್ತು ಹಿಂದುಳಿದ ನಾಗರಿಕತೆ. ‘ಮುಸ್ಲಿಂ’ ಯುಗ ಇದಕ್ಕಿಂತ ಸ್ವಲ್ಪ ಉತ್ತಮ. ಭಾರತದಲ್ಲಿ ಬ್ರಿಟಿಷ್ ವಸಾಹತುಶಾಹಿ ಆಡಳಿತ ಅಭಿವೃದ್ಧಿಯ ಒಂದು ಏಜನ್ಸಿಯಾಯಿತು.

ಇಂದಿಗೂ ಭಾರತದಲ್ಲಿ ಇತಿಹಾಸದ ಹಿಂದುತ್ವ ಆವೃತ್ತಿ ಈ ಕಾಲ ವಿಭಜನೆಯನ್ನು ಒಪ್ಪಿಕೊಳ್ಳುತ್ತದೆ. ಇದೊಂದು ದುರಂತ.

ಥಾಪರ್‌ರವರು ಹೇಳಿರುವ ಹಾಗೆ, ಕೇಸರಿವಾದಿ ಸಿದ್ಧಾಂತಿಗಳು ಇತಿಹಾಸದ ಈ ಮೂರು ಹಂತಗಳ ಬಣ್ಣಗಳನ್ನು ಮಾತ್ರ ಬದಲಾಯಿಸಿದರು: ಕೇಸರಿವಾದಿಗಳು ಇತಿಹಾಸದ ಹಿಂದೂ ಅವಧಿಯನ್ನು ಒಂದು ಸ್ವರ್ಣಯುಗವೆಂದು, ಮುಸ್ಲಿಂ ಅವಧಿಯನ್ನು ದಬ್ಬಾಳಿಕೆ ಮತ್ತು ದಮನದ ಕರಾಳಯುಗವೆಂದೂ ಮತ್ತು ವಸಾಹತುಶಾಹಿ ಅವಧಿಯನ್ನು ಅಷ್ಟೊಂದು ಮಹತ್ವವಿಲ್ಲದ ಒಂದು ಅಮುಖ್ಯಯುಗವೆಂದು ಪರಿಗಣಿಸುತ್ತದೆ.

ಎರಡು ದಶಕಗಳ ಹಿಂದೆ, ಬಿಜೆಪಿ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದಾಗ ಪಠ್ಯಕ್ರಮವನ್ನು ಪುನರ್ ಲೇಖಿಸಲಾರಂಭಿಸಿತು. ಆರೆಸ್ಸೆಸ್‌ನ ಅಂದಿನ ಮುಖ್ಯಸ್ಥ ಕೆ.ಎಸ್. ಸುದರ್ಶನ್‌ರವರ ಮಾತಿನಲ್ಲಿ ಹೇಳುವುದಾದರೆ ‘ಹಿಂದೂ ವಿರೋಧಿ’ಯಾದ ಎಲ್ಲ ಪ್ರಭಾವಗಳನ್ನು ಹೊರಗಿಡುವ ಪ್ರಯತ್ನ ನಡೆಯಿತು.

2002ರಲ್ಲಿ ಅಮೆರಿಕದ ಲೈಬ್ರರಿ ಆಫ್ ಕಾಂಗ್ರೆಸ್ ಥಾಪರ್‌ರವರನ್ನು ಅದರ ಕ್ಲೂಗ್ ಪೀಠದ ಮೊದಲ ಮುಖ್ಯಸ್ಥರನ್ನಾಗಿ ನೇಮಿಸಿ ಅವರನ್ನು ಗೌರವಿಸಿತು. ಆಗ ಬಲ ಪಂಥೀಯರು ಅವರಿಗೆ ಆ ಗೌರವ ನೀಡ ಕೂಡದೆಂದು ಒತ್ತಾಯಿಸಲು 2000ಕ್ಕೂ ಹೆಚ್ಚು ಮಂದಿಯ ಸಹಿ ಪಡೆದು ಒಂದು ಅಭಿಯಾನ ನಡೆಸಿದ್ದರು. ಈಗ ಕೇಸರಿ ರಾಷ್ಟ್ರೀಯವಾದಿಗಳು ‘ಅಪಾಯಕಾರಿ’ ಶಕ್ತಿಗಳ, ಅಂದರೆ ಮುಸ್ಲಿಮರ ಹಾಗೂ ಒಮ್ಮಿಮ್ಮೆ ಕಮ್ಯುನಿಸ್ಟರ ವಿರುದ್ಧ ಹೋರಾಡಿ ರಾಷ್ಟ್ರವನ್ನು ಉಳಿಸುವವರು ತಾವು ಎಂದು ತಿಳಿದಿದ್ದಾರೆ.

ಕೃಪೆ: newsclick.in

Writer - ಸುಭಾಷ್ ಗಟಾಡೆ

contributor

Editor - ಸುಭಾಷ್ ಗಟಾಡೆ

contributor

Similar News

ಜಗದಗಲ
ಜಗ ದಗಲ