ಚಿಕಾಗೊ ಭಾಷಣದಲ್ಲಿ ವಿವೇಕಾನಂದರು ಉಲ್ಲೇಖಿಸಿದ್ದ, ಉಲ್ಲೇಖಿಸದ ವಿಷಯಗಳು

Update: 2019-09-20 18:33 GMT

ಚಾರ್ಲ್ಸ್ ಕರೊಲ್ ಬೊನ್ನಿ ಎಂಬ ಚಿಕಾಗೊ ಮೂಲದ ನ್ಯಾಯವಾದಿ, ಕೊಲಂಬಸ್ ಅಮೆರಿಕವನ್ನು ಕಂಡುಹಿಡಿದ 500 ವರ್ಷಗಳನ್ನು ಆಚರಿಸಲು 1893ರಲ್ಲಿ ನಡೆಯಲಿದ್ದ ಕೊಲಂಬಿಯನ್ ಪ್ರದರ್ಶನಕ್ಕೂ ಮೊದಲೇ 1889ರಲ್ಲೇ ಜಾಗತಿಕ ಧಾರ್ಮಿಕ ಸಭೆಯನ್ನು ನಡೆಸುವ ಸಲಹೆ ನೀಡಿದ್ದರು.

ಇಂತಹ ಅಗಾಧ ಮಟ್ಟದ ಕಾರ್ಯಕ್ರಮವನ್ನು ಕೇವಲ ಶ್ರೀಮಂತ ಮತ್ತು ಕ್ರೈಸ್ತ ರಾಷ್ಟ್ರದಿಂದ ಮಾತ್ರ ಆಯೋಜಿಸಲು ಸಾಧ್ಯ ಎಂದು ಸಂಸತ್‌ನ ಸಂಘಟನಾ ಸಮಿತಿಯ ಅಧ್ಯಕ್ಷ ಜಾನ್ ಹೆನ್ರಿ ಬರೊವ್ಸ್ ಹೇಳಿಕೊಂಡಿದ್ದರು. ಕುಚೋದ್ಯವೆಂದರೆ, ಇದೇ ಭಾವನೆಯನ್ನು ವಿವೇಕಾನಂದರು ಸಂಸತ್‌ನಲ್ಲಿ 1893ರ ಸೆಪ್ಟಂಬರ್ 15 ಮತ್ತು 19ರಂದು ಮಾಡಿದ ಎರಡು ಭಾಷಣಗಳಲ್ಲಿ ಪ್ರತಿಧ್ವನಿಸಿದ್ದರು. ಚಕ್ರವರ್ತಿ ಅಶೋಕನ ಮಂಡಳಿಯಲ್ಲಿ ಬೌದ್ಧರೇ ಇದ್ದರು ಮತ್ತು ಅಕ್ಬರ್ ಆಯೋಜಿಸಿದ್ದ ಸಭೆಗಳು ಕೇವಲ ಕೋಣೆಯೊಳಗಿನ ಸಭೆಗಳಾಗಿದ್ದವು ಎಂದು ಸ್ವಾಮಿ ವಿವೇಕಾನಂದರು ಹೇಳಿದ್ದರು.

ಇದನ್ನು ನಾನಿಲ್ಲಿ ಉಲ್ಲೇಖಿಸಲು ಬಯಸುತ್ತೇನೆ, ಯಾಕೆಂದರೆ ವಿವೇಕಾನಂದರ ಚಿಕಾಗೊ ಭಾಷಣಗಳ ಉದ್ದೇಶ ಮತ್ತು ವಸ್ತುಗಳು ದೇಶಾಭಿಮಾನವಾಗಿತ್ತು.

ಕ್ರೈಸ್ತೇತರ ಧರ್ಮಗಳಿಗೆ ಜಾಗ ನೀಡಲು ಬಯಸಿದ್ದ ಅಮೆರಿಕನ್ ಏಕೀಕರಣವಾದಿಗಳು ಮತ್ತು ಉದಾರವಾದಿ ಕ್ರೈಸ್ತರು ಧರ್ಮ ಸಂಸತ್ ಆಯೋಜಿಸುವ ಹಿಂದಿದ್ದ ಪ್ರಬಲ ಶಕ್ತಿಗಳಾಗಿದ್ದರು ಎಂದು ನಂಬಲಾಗುತ್ತದೆ. ಈ ಗುಂಪು ಮೂರು ಪ್ರಖ್ಯಾತ ಭಾರತೀಯರು 1893ಕ್ಕೂ ಮೊದಲ ಇಂಗ್ಲೆಂಡ್ ಮತ್ತು ಅಮೆರಿಕಕ್ಕೆ ಭೇಟಿ ನೀಡಲು ನೆರವಾಗುವಲ್ಲಿ ಪ್ರಮುಖ ಪಾತ್ರ ನಿಭಾಯಿಸಿತ್ತು ಎಂದು ಹಿಂದೆಯೇ ಸಾಬೀತಾಗಿದೆ. ಆ ಮೂವರು ಪ್ರಮುಖ ಭಾರತೀಯರೆಂದರೆ, ರಾಮಮೋಹನ ರಾಯ್ (1830), ಕೆಶುಬಾ ಚಂದರ್ ಸೇನ್ (1870) ಮತ್ತು ಪ್ರತಾಪ್‌ಚಂದ್ರ ಮಜುಮ್ದಾರ್ (1883).

ಪ್ರಭಾವಶಾಲಿ ತಂಡ:

ಚಿಕಾಗೊದಲ್ಲಿ ಭಾರತೀಯರ ಇರುವಿಕೆ ಪ್ರಭಾವಶಾಲಿಯಾಗಿತ್ತು. ಹತ್ತಕ್ಕೂ ಅಧಿಕ ಪ್ರತಿನಿಧಿಗಳನ್ನು ಆಹ್ವಾನಿಸಲಾಗಿತ್ತಾದರೂ ಎಲ್ಲರೂ ಮಾತನಾಡಲಿಲ್ಲ. ಭಾರತೀಯ ಬೌದ್ಧಧರ್ಮ, ಜೈನಧರ್ಮ, ದೇವತಾ ತತ್ವಜ್ಞಾನ, ಬ್ರಹ್ಮಸಮಾಜ ಮತ್ತು ಭಾರತೀಯ ಇಸ್ಲಾಂ ಹಾಗೂ ಕ್ರೈಸ್ತಧರ್ಮವನ್ನು ಪ್ರತಿನಿಧಿಸುವ ಪ್ರತಿನಿಧಿಗಳ ನಿಯೋಗವಿತ್ತು. ಸಂಘಟಕರು, 18ನೇ ಶತಮಾನದಲ್ಲಿ ಬಂಗಾಳದಲ್ಲಿ ಜನ್ಮತಾಳಿದ್ದ ಕರ್ತಬಜ ಸಮನ್ವಯ ಪಂಥದ ನಾಯಕ ದುಲಾಲ್‌ಚಂದ್ರ ಪಾಲ್‌ನನ್ನೂ ಆಹ್ವಾನಿಸಿದ್ದರು. ಈ ಪಂಥ ಜನ್ಮತಾಳಿದ 60 ವರ್ಷಗಳ ನಂತರ ನಾಯಕನ ಸಾವಿನೊಂದಿಗೆ ಅವಸಾನಗೊಂಡಿತ್ತು.

ವಿಷಾದಕರವೆಂದರೆ, ವಿವೇಕಾನಂದರನ್ನು ಹೊರತುಪಡಿಸಿ ಉಳಿದ ಭಾರತೀಯ ಭಾಷಣಕಾರರ ಇರುವಿಕೆ ಮತ್ತು ಕಾಣಿಕೆಯನ್ನು ಸಾರ್ವಜನಿಕರು ಮತ್ತು ವಿದ್ವಾಂಸರು ನಿರ್ಲಕ್ಷಿಸಿದ್ದರು.

 1893ರ ಸೆಪ್ಟಂಬರ್ 11ರಿಂದ 27ರ ಮಧ್ಯೆ ವಿವೇಕಾನಂದರು ಚಿಕಾಗೊದಲ್ಲಿ ಆರು ಭಾಷಣಗಳನ್ನು ಮಾಡಿದರು. ಇವುಗಳ ಪೈಕಿ ಮೊದಲ ಭಾಷಣ ಅದರ ನವೀನತೆ ಮತ್ತು ವಿವೇಕಾನಂದರು ಅಲ್ಲಿ ನೆರೆದಿದ್ದವರನ್ನು ಅಮೆರಿಕದ ಸಹೋದರ ಮತ್ತು ಸಹೋದರಿಯರೇ ಎಂದು ಸಂಬೋಧಿಸಿದ ಕಾರಣಕ್ಕೆ ಹೆಚ್ಚು ಜನಪ್ರಿಯಗೊಂಡಿತು. ಆದರೆ ಈ ಹೇಳಿಕೆ ಬಗ್ಗೆ ವಿರೋಧಾಭಾಸಗಳಿವೆ. ವಿವೇಕಾನಂದರ ಈ ಮಾತುಗಳನ್ನು ಕೇಳಿದ ಸಭಾಂಗಣದಲ್ಲಿ ಯಾವ ರೀತಿ ಹಲವು ನಿಮಿಷಗಳ ಕಾಲ ಚಪ್ಪಾಳೆಯ ಕರಡಾತನ ಕೇಳಿಸಿತು ಎಂದು ಸಂಸತ್‌ನ ಅಧಿಕೃತ ಇತಿಹಾಸದಲ್ಲಿ ಉಲ್ಲೇಖಿಸಲಾಗಿದ್ದರೆ ‘ಎ ಕೋರಸ್ ಆಫ್ ಫೈತ್ ಆ್ಯಸ್ ಹರ್ಡ್ ಇನ್ ದ ಪಾರ್ಲಿಂಟ್ ಆಫ್ ರಿಲಿಜನ್ಸ್’ (ಚಿಕಾಗೊ, ಯುನಿಟಿ ಪಬ್ಲಿಶಿಂಗ್ ಕೊ. 1893) ಎಂಬ ಹೆಸರಿನ ಸಮಕಾಲೀನ ಪತ್ರಿಕೆಯಲ್ಲಿ ಇಂತಹ ಯಾವುದೇ ಉಲ್ಲೇಖಗಳು ಇಲ್ಲ.

ವಿವೇಕಾನಂದರ ಚಿಕಾಗೊ ಭಾಷಣದಲ್ಲಿ ವಿಶೇಷವೆನಿಸಿದ ಅಂಶಗಳನ್ನು ಇಲ್ಲಿ ನೀಡಲಾಗಿದೆ:

ಧಾರ್ಮಿಕ ಸಹಿಷ್ಣುತೆ ಪರ ವಾದ ಮತ್ತು ಸ್ವಪ್ರತಿಷ್ಠೆ ಮತ್ತು ಮತಾಂಧತೆಯನ್ನು ಬಾವಿಯೊಳಗಿನ ಕಪ್ಪೆಯ ಕತೆಯ ಮೂಲಕ ಸೂಕ್ತವಾಗಿ ವಿವರಿಸಿರುವುದು. ಮುಖ್ಯವಾಗಿ, ವಿವೇಕಾನಂದರು ಹಿಂದೂವಾದದಲ್ಲಿರುವ ಧಾರ್ಮಿಕ ಬಹುತ್ವಕ್ಕೆ ಒತ್ತು ನೀಡಿದ್ದರು. ಸಾಮಾನ್ಯ ಗ್ರಹಿಕೆಗೆ ವಿರುದ್ಧವಾಗಿ, ಅವರು ವಿಶ್ವವ್ಯಾಪಿ ಧರ್ಮದ ಕಲ್ಪನೆಯನ್ನಾಗಲಿ, ಧಾರ್ಮಿಕ ಏಕತೆಯ ಭಾವನೆ ಅಥವಾ ಆಚರಣೆ ಯನ್ನು ಪ್ರಚುರಪಡಿಸಲು ಪ್ರಯತ್ನಿಸಿರಲಿಲ್ಲ. ಬದಲಿಗೆ, ಪ್ರತಿ ಧಾರ್ಮಿಕ ಸಮುದಾಯಕ್ಕೆ ಸಮಾನ ಗುರಿಯ ಅಥವಾ ವಿಧಿ (ಮಾನವ ಮೋಕ್ಷ)ಯ ಕಲ್ಪನೆಯನ್ನು ಪ್ರಸ್ತಾವಿಸಿದ್ದರು.

  ಪವಿತ್ರತೆ, ಶುದ್ಧತೆ ಮತ್ತು ದಾನ ಯಾವುದೇ ಒಂದು ಪಂಥ ಅಥವಾ ಚರ್ಚ್‌ನ ವಿಶೇಷ ಹಕ್ಕಲ್ಲ ಎಂದು ವಾದಿಸಿದ್ದ ಅವರು ಧಾರ್ಮಿಕ ಪರಿವರ್ತನೆಯನ್ನು ಪ್ರಶ್ನಿಸಿದ್ದರು.

ಹಿಂದೂವಾದಕ್ಕೆ ಸಂಬಂಧಿಸಿದಂತೆ ಬೌದ್ಧಧರ್ಮಕ್ಕೆ ಸ್ವಾಯತ್ತೆಯನ್ನು ನಿರಾಕರಿಸಿರುವುದು ವಿವೇಕಾನಂದರ ಬಹುತ್ವವನ್ನು ಮರೆಮಾಚುತ್ತದೆ. ಅದರಲ್ಲೂ, ಹಿಂದೂವಾದವನ್ನು ವಿಶ್ವವ್ಯಾಪಿ ಧರ್ಮ ಎಂದು ಬಿಂಬಿಸುವ ಅವರ ಪ್ರಯತ್ನ ಅವರು ಶ್ರೇಣಿ ವ್ಯವಸ್ಥೆಯ ರೂಪುರೇಷೆಯ ಒಳಗೆಯೇ ವಾದಿಸುವಂತೆ ಒತ್ತಡ ಹೇರುತ್ತದೆ.

ವಿವಿಧ ಧಾರ್ಮಿಕ ಸಂಪ್ರದಾಯಗಳ ಮಧ್ಯೆ ಒಡಂಬಡಿಕೆ ಧಾರ್ಮಿಕ ಸೌಹಾರ್ದಕ್ಕೆ ಪೂರ್ವಷರತ್ತಾಗಿದೆಯೇ ಎಂಬ ಪ್ರಶ್ನೆಗೆ ಅವರು ಸಮರ್ಪಕ ಉತ್ತರ ನೀಡಿಲ್ಲ. ಧರ್ಮಗಳ ನಡುವಿನ ಸಂಭಾಷಣಾ ಮುಕ್ತತೆ ಅಥವಾ ಎಲ್ಲ ಧರ್ಮಗಳೂ ಒಂದೇ ದೇವರತ್ತ ಬೆಟ್ಟು ಮಾಡುತ್ತವೆ ಎಂದು ಒಪ್ಪಿಕೊಳ್ಳುವುದರ ಅರ್ಥ ಎಲ್ಲ ಧರ್ಮಗಳು ಮೂಲದಲ್ಲಿ ಒಂದೇ ಆಗಿವೆ ಎಂಬುದಾಗಿರಬೇಕೆಂದಿಲ್ಲ ಎಂಬುದನ್ನೂ ವಿವೇಕಾನಂದರು ಬಹಿರಂಗವಾಗಿ ಒಪ್ಪಿಕೊಂಡಿಲ್ಲ.

ಮುಖ್ಯವಾಗಿ, ಸಂಸತ್‌ನಲ್ಲಿ ಅವರ ಭಾಷಣ ಧಾರ್ಮಿಕ ಮರುಹೇಳಿಕೆಗಿಂತ ಹೆಚ್ಚಾಗಿ ದೇಶಭಕ್ತಿ ಯಿಂದ ಲೇಪಿತವಾಗಿತ್ತು. ವಸಾಹತು ಏಶ್ಯದ ಬಹುತೇಕ ಪ್ರತಿನಿಧಿಗಳ ಪೈಕಿ ಇದು ನಿಜವಾಗಿತ್ತು. ವಿವೇಕಾನಂದರ ರಾಷ್ಟ್ರವಾದ ಹಲವು ಸಂದರ್ಭಗಳಲ್ಲಿ ಅವರ ಐತಿಹಾಸಿಕ ಉದ್ದೇಶ ವನ್ನೂ ಮೀರುತ್ತಿತ್ತು. ಅಂತಹ ಎರಡು ಉದಾಹರಣೆಗಳೆಂದರೆ, ಒಂದು ಅವರು ಹಿಂದೂವಾದವನ್ನು ಎಲ್ಲ ಧರ್ಮಗಳ ತಾಯಿ ಎಂದು ವ್ಯಾಖ್ಯಾನಿಸಿದ ಸಂದರ್ಭದಲ್ಲಿ ಮತ್ತೊಂದು ಬೌದ್ಧರ ಬದಲಾಗಿ ಹಿಂದೂಗಳು ಅತ್ಯಂತ ಮೊದಲು ಸನ್ಯಾಸತ್ವ ಆಚರಣೆ ಆರಂಭಿಸಿದ್ದರು ಎಂದು ತಪ್ಪಾಗಿ ಹೇಳಿಕೆ ನೀಡಿದಾಗ. ಚಿಕಾಗೊದಲ್ಲಿ ವಿವೇಕಾನಂದರ ಜನಪ್ರಿಯತೆಗೆ ಹಲವು ಅಂಶಗಳು ನೆರವಾಗಿರಬಹುದು. ಮೊದಲನೆಯದಾಗಿ, ನಿಸ್ಸಂಶಯವಾಗಿ ಅವರ ವೈಯಕ್ತಿಕ ಆಕರ್ಷಣೆ. ಎರಡನೆಯದಾಗಿ, ಅವರ ಕೆಲವೊಂದು ಹೇಳಿಕೆಗಳು ಸಮಕಾಲೀನ ಅಮೆರಿಕನ್ನರ ಮನಸ್ಸಿಗೆ ನಾಟಿತ್ತು. ಮನುಷ್ಯನ ಪರಿಪೂರ್ಣತೆ ಬಗ್ಗೆ ಅವರು ನೀಡಿದ ಹೇಳಿಕೆ ಯುವ ರಾಷ್ಟ್ರಕ್ಕೆ ಆಕರ್ಷಕವಾಗಿ ಕಂಡಿತ್ತು. ಇದೇ ರೀತಿ, ಕ್ರೈಸ್ತಧರ್ಮದ ಸರ್ವಾಧಿಕಾರಿ ಧೋರಣೆ ಕುರಿತ ಅವರ ಹೇಳಿಕೆ, ಅಮೆರಿಕದ ಯುವ ಮನಸ್ಸುಗಳು ಆ ಧರ್ಮದಿಂದ ದೂರ ಸಾಗಲು ಬಯಸುತ್ತಿದ್ದ ಸಮಯದಲ್ಲೇ ಬಂದಿತ್ತು.

ಅಮೆರಿಕದಲ್ಲಿ ವಿವೇಕಾನಂದರ ಯಶಸ್ಸಿನಿಂದ ಭಾರತದಲ್ಲಿ ಹರ್ಷೋಲ್ಲಾಸ ವ್ಯಾಪಿಸಿದರೂ ಅದಕ್ಕೆ ವಿರುದ್ಧವಾಗಿ, ಅವರು ಸಾಗರೋಲ್ಲಂಘನೆ ಮಾಡುವ ಮೂಲಕ ತನ್ನ ಆಚರಣೆಯ ಶುದ್ಧತೆಗೆ ಧಕ್ಕೆ ತಂದಿದ್ದಾರೆ ಎಂಬ ನೆಲೆಯಲ್ಲಿ ವಿವೇಕಾನಂದರು ತನ್ನ ಗುರು ಶ್ರೀ ರಾಮಕೃಷ್ಣ ಪರಮಹಂಸರನ್ನು ಭೇಟಿಯಾಗಲು ಬರುತ್ತಿದ್ದ ದಕ್ಷಿಣೇಶ್ವರ ದೇವಸ್ಥಾನದ ಆವರಣದೊಳಗೆ ಅವರಿಗೆ ಪ್ರವೇಶ ನಿರಾಕರಿಸಲಾಗಿತ್ತು ಎನ್ನುವುದನ್ನು ನಿರ್ಲಕ್ಷಿಸಲಾಗಿದೆ.

ಕೃಪೆ: sahapedia.org

Writer - ಅಮಿಯ ಪಿ. ಸೇನ್

contributor

Editor - ಅಮಿಯ ಪಿ. ಸೇನ್

contributor

Similar News

ಜಗದಗಲ
ಜಗ ದಗಲ