ಒಬ್ಬೊಬ್ಬರಾಗಿ ಬಂಧಿತ ಕಾಶ್ಮೀರಿ ರಾಜಕಾರಣಿಗಳ ಬಿಡುಗಡೆ: ಜಮ್ಮು-ಕಾಶ್ಮೀರ ಆಡಳಿತ

Update: 2019-10-03 14:09 GMT

 ಜಮ್ಮು,ಅ.3: ವಿಧಿ 370ರ ರದ್ದತಿಯ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಬಂಧಿಸಲ್ಪಟ್ಟಿದ್ದ ಕಾಶ್ಮೀರದ ರಾಜಕೀಯ ನಾಯಕರನ್ನು ಶೀಘ್ರವೇ ಬಿಡುಗಡೆಗೊಳಿಸಲಾಗುವುದು ಎಂದು ಜಮ್ಮು-ಕಾಶ್ಮೀರ ಆಡಳಿತವು ಗುರುವಾರ ತಿಳಿಸಿದೆ.

ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ರಾಜ್ಯಪಾಲ ಸತ್ಯಪಾಲ್ ಮಲಿಕ್ ಅವರ ಸಲಹೆಗಾರ ಫಾರೂಕ್ ಖಾನ್ ಅವರು,ಪ್ರತಿಯೊಬ್ಬರ ಕುರಿತು ವರದಿಗಳ ವಿಶ್ಲೇಷಣೆಯ ಬಳಿಕ ಈ ನಾಯಕರನ್ನು ಒಬ್ಬೊಬ್ಬರನ್ನಾಗಿ ಬಿಡುಗಡೆ ಗೊಳಿಸಲಾಗುವುದು ಎಂದರು.

ಜಮ್ಮು-ಕಾಶ್ಮೀರದಲ್ಲಿ ಪೊಲೀಸರು ಮತ್ತು ಭದ್ರತಾ ಸಿಬ್ಬಂದಿಗಳ ಚಟುವಟಿಕೆಗಳು ಹೆಚ್ಚುತ್ತಿರುವ ಕುರಿತು ಪ್ರಶ್ನೆಗೆ,ಇದಕ್ಕೆ ಯಾವುದೇ ವಿಶೇಷ ಭಯೋತ್ಪಾದನೆ ಬೆದರಿಕೆ ಕಾರಣವಲ್ಲ. ಆಡಳಿತವು ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಂಡಿದೆಯಷ್ಟೇ. ಪೊಲೀಸ್,ಸೇನೆ,ಬಿಎಸ್‌ಎಫ್ ಸೇರಿದಂತೆ ಎಲ್ಲ ಪಡೆಗಳು ಕಟ್ಟೆಚ್ಚರದಲ್ಲಿವೆ ಮತ್ತು ಭಯೋತ್ಪಾದಕರಿಗೆ ಸೂಕ್ತ ಉತ್ತರ ನೀಡುವುದನ್ನು ಮುಂದುವರಿಸುತ್ತವೆ ಎಂದು ಖಾನ್ ಉತ್ತರಿಸಿದರು.

ಪಾಕಿಸ್ತಾನದಿಂದ ನಿರಂತರ ಕದನ ವಿರಾಮ ಉಲ್ಲಂಘನೆಗಳ ಕುರಿತಂತೆ ಅವರು,ಪಾಕಿಸ್ತಾನಕ್ಕೆ ಈ ಹಿಂದೆ ಪಾಠವನ್ನು ಕಲಿಸಲಾಗಿದೆ. ಅಗತ್ಯವಾದರೆ ಮುಂಬರುವ ದಿನಗಳಲ್ಲಿ ಅದಕ್ಕೆ ಮತ್ತೆ ಪಾಠ ಕಲಿಸಲಾಗುವುದು ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News