​ಪ್ರವಾಹ ಸಂತ್ರಸ್ತರ ಜೊತೆ ಫೋಟೋ ಪೋಸು ಕೊಡಲು ಹೋಗಿ ನದಿಗೆ ಬಿದ್ದ ಬಿಜೆಪಿ ಸಂಸದ

Update: 2019-10-03 17:00 GMT
Photo: ANI

ಪಾಟ್ನಾ: ಬಿಹಾರದ ಪಾಟಲೀಪುತ್ರ ಕ್ಷೇತ್ರದ ಬಿಜೆಪಿ ಸಂಸದ ರಾಮ್ ಕೃಪಾಲ್ ಯಾದವ್ ಪ್ರವಾಹ ಪೀಡಿತ ಕ್ಷೇತ್ರಗಳ ಸಮೀಕ್ಷೆಗೆ ಹೋದಾಗ ತೆಪ್ಪದಿಂದ ನದಿ ನೀರಿಗೆ ಬಿದ್ದ ವಿಡಿಯೋ ಒಂದು ವೈರಲ್ ಆಗಿತ್ತು. ಆದರೆ ರಾಮ್ ಕೃಪಾಲ್ ನೀರಿಗೆ ಬಿದ್ದಿದ್ದು ಬೇಕಾದ ಪೋಸಿನಲ್ಲಿ ಫೋಟೋ ತೆಗೆಯುವ ಪ್ರಯತ್ನದಲ್ಲಿ ಎಂಬುದು ವಿಡಿಯೋದಲ್ಲಿ ಬೆಳಕಿಗೆ ಬಂದಿದ್ದು ಸಂಸದರ ಪ್ರಚಾರದ ಖಯಾಲಿ ನಗೆಪಾಟಲಿಗೀಡಾಗಿದೆ. 

ಅಕ್ಟೊಬರ್ 2 ರಂದು ರಾಮ್ ಕೃಪಾಲ್ ಅವರು ತಮ್ಮ ಕ್ಷೇತ್ರದಲ್ಲಿ ಪ್ರವಾಹದಿಂದ ಆಗಿರುವ ಹಾನಿಯ ಸಮೀಕ್ಷೆಗೆ ತೆರಳಿದ್ದರು. ಆ ಸಂದರ್ಭದಲ್ಲಿ ಕೆಲವು ಜನರ ಜೊತೆ ತೆಪ್ಪದ ಮೇಲೆಯೇ ಮಾತಾಡುತ್ತಾ ಇರುವಂತೆ ಫೋಟೋಗೆ ಪೋಸ್ ಕೊಡಲು ಹೋದಾಗ ತೆಪ್ಪ ತಲೆಕೆಳಗಾಗಿದೆ. ಸಂಸದರ ಸಹಿತ ಅದರಲ್ಲಿದ್ದವರು ಎಲ್ಲರೂ ನದಿಗೆ ಬಿದ್ದಿದ್ದಾರೆ. ಬಳಿಕ ಅವರನ್ನು ಸುರಕ್ಷಿತವಾಗಿ ಮೇಲೆತ್ತಲಾಯಿತು.  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News