ಫುಟ್ಬಾತ್‌ನಲ್ಲಿ ಮಲಗಿದ್ದವರ ಮೇಲೆ ಬಸ್ ಹರಿದು ಏಳು ಮಂದಿ ಮೃತ್ಯು

Update: 2019-10-11 04:56 GMT

ಬುಲಂದ್‌ಶಹರ್, ಅ.11: ಪಶ್ಚಿಮ ಉತ್ತರಪ್ರದೇಶದ ಬುಲಂದ್‌ಶಹರ್ ಜಿಲ್ಲೆಯಲ್ಲಿ  ಫುಟ್ಬಾತ್ ಮೇಲೆ ಮಲಗಿ ನಿದ್ರಿಸುತ್ತಿದ್ದವರ ಮೇಲೆ ಬಸ್ ಹರಿದು ನಾಲ್ವರು ಮಹಿಳೆಯರು ಹಾಗೂ ಮೂವರು ಮಕ್ಕಳು ಸಹಿತ ಏಳು ಮಂದಿ ಸಾವನ್ನಪ್ಪಿರುವ ದಾರುಣ ಘಟನೆ ಶುಕ್ರವಾರ ಬೆಳಗ್ಗಿನ ಜಾವ ನಡೆದಿದೆ.

ಘಟನೆಯು ಬುಲಂದ್‌ಶಹರ್‌ನ ನರೋರಾದ ಗಂಗಾಘಾಟ್‌ನಲ್ಲಿ ನಡೆದಿದ್ದು ಖಾಸಗಿ ಬಸ್ ಅಡಿ ಸಿಲುಕಿ ಮೃತಪಟ್ಟವರೆಲ್ಲರೂ ಯಾತ್ರಾರ್ಥಿಗಳಾಗಿದ್ದಾರೆ. ಪ್ರಾಥಮಿಕ ವರದಿಯ ಪ್ರಕಾರ, ಬಸ್ ಚಕ್ರದಡಿ ಸಿಲುಕಿ ಮೃತಪಟ್ಟವರು ಉತ್ತರಪ್ರದೇಶದ ಹಥ್ರಾಸ್ ನಿವಾಸಿಗಳಾಗಿದ್ದು, ಗಂಗಾ ನದಿಯಲ್ಲಿ ಸ್ನಾನಮಾಡಿ ನರೋರ ಘಾಟ್‌ಗೆ ವಾಪಸಾಗುತ್ತಿದ್ದರು. ಅಪಘಾತದ ಬಳಿಕ ಬಸ್ ಚಾಲಕ ನಾಪತ್ತೆಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಎಲ್ಲ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿಕೊಡಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News