ಚೆನ್ನೈಗೆ ಆಗಮಿಸಿದ ಚೀನಾ ಅಧ್ಯಕ್ಷ ಜಿನ್‌ಪಿಂಗ್

Update: 2019-10-11 09:00 GMT

ಚೆನ್ನೈ, ಅ.11: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರೊಂದಿಗೆ ದ್ವಿದಿನ ಅನೌಪಚಾರಿಕ ಶೃಂಗಸಭೆಯಲ್ಲಿ ಭಾಗವಹಿಸಲು ಚೀನಾದ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಶುಕ್ರವಾರ ಮಧ್ಯಾಹ್ನ ಚೆನ್ನೈಗೆ ಆಗಮಿಸಿದರು.

ವಿಮಾನ ನಿಲ್ದಾಣದೊಳಗೆ ಸಾಂಪ್ರದಾಯಿಕ ನೃತ್ಯ ಸಂಗೀತದ ಮೂಲಕ ಚೀನಾ ಅಧ್ಯಕ್ಷರಿಗೆ ಸ್ವಾಗತ ಕೋರಲಾಯಿತು. ಬೆಳಗ್ಗೆಯೇ ಮಹಾಬಲಿಪುರಂಗೆ ಬಂದಿಳಿದಿದ್ದ ಪ್ರಧಾನಿ ಮೋದಿ ಅವರು ಚೀನಾ ಅಧ್ಯಕ್ಷರನ್ನು ಮಹಾಬಲಿಪುರಂನಲ್ಲಿ ಸ್ವಾಗತಿಸಲಿದ್ದಾರೆ.

ಚೀನಾ ಅಧ್ಯಕ್ಷರು ಸಂಜೆ 5 ಗಂಟೆಗೆ ಮಹಾಬಲಿಪುರಂಗೆ ಆಗಮಿಸಲಿದ್ದು, ಅವರಿಗೆ ಕೆಂಪು ರತ್ನಗಂಬಳಿ ಮೂಲಕ ಸ್ವಾಗತ ನೀಡುವ ಸಾಧ್ಯತೆಯಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News