ಯಾರೂ ಇತಿಹಾಸವನ್ನು ತಿರುಚಲು ಹೋಗಬಾರದು : ಸಿದ್ದರಾಮಯ್ಯ
Update: 2019-10-30 13:47 GMT
ಬಾಗಲಕೋಟೆ, ಅ.30: ಟಿಪ್ಪು ಚರಿತ್ರೆಯನ್ನು ಪಠ್ಯಪುಸ್ತಕದಿಂದ ತೆಗೆದರೆ ಇತಿಹಾಸವನ್ನೇ ತಿರುಚಿದಂತೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.
ಟಿಪ್ಪು ಚರ್ರಿತ್ರೆಯನ್ನು ಪಠ್ಯಪುಸ್ತಕದಿಂದ ತೆಗೆಯುವ ಬಗ್ಗೆ ಚಿಂತನೆ ನಡೆಸಲಾಗುವುದು ಎಂದು ಮುಖ್ಯ ಮಂತ್ರಿ ಬಿ.ಎಸ್ ಯಡಿಯೂರಪ್ಪ ನೀಡಿರುವ ಹೇಳಿಕೆಗೆ ಸಂಬಂಧಿಸಿ ಬಾಗಲಕೋಟೆಯ ಜಮಖಂಡಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿದ್ದರಾಮಯ್ಯ ಅವರು ಬಿಜೆಪಿಯವರು ಇತಿಹಾಸವನ್ನೇ ಬದಲಾವಣೆ ಮಾಡುತ್ತಾರೆ. ಯಾರು ಸಹ ಇತಿಹಾಸವನ್ನು ತಿರುಚಲು ಹೋಗಬಾರದು. ಇತಿಹಾಸದ ಬಗ್ಗೆ ಮಕ್ಕಳಿಗೆ ತಿಳಿಸಬೇಕು ಎಂದರು.
ಟಿಪ್ಪು ಸುಲ್ತಾನ್ ಬ್ರಿಟೀಷರ ವಿರುದ್ಧ ಹೋರಾಡಿದ್ದು ಸುಳ್ಳಾ, ನಿಜಾನಾ ? ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.
ಬಿಜೆಪಿಯವರು ಮಾತ್ರ ಟಿಪ್ಪುವನ್ನು ಮತಾಂಧ ಎಂದು ಹೇಳುತ್ತಾರೆ. ಟಿಪ್ಪು ಸುಲ್ತಾನ ಮತಾಂಧ ಅಲ್ಲ, ಬಿಜೆಪಿಯವರೇ ನಿಜವಾದ ಮತಾಂಧರು ಎಂದು ವಾಗ್ದಾಳಿ ನಡೆಸಿದರು.