‘ರೇಡಿಯೋ ಕಾಶ್ಮೀರ್’ ಈಗ ‘ಆಲ್ ಇಂಡಿಯಾ ರೇಡಿಯೊ’

Update: 2019-10-31 16:38 GMT

ಹೊಸದಿಲ್ಲಿ, ಅ. 31: ಜಮ್ಮು ಹಾಗೂ ಕಾಶ್ಮೀರ ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ವಿಭಜನೆಯಾಗುತ್ತಿದ್ದಂತೆ, ಕೇಂದ್ರ ಸರಕಾರ ಜಮ್ಮು, ಶ್ರೀನಗರ ಹಾಗೂ ಲೇಹ್‌ನಲ್ಲಿರುವ ರೇಡಿಯೊ ಸ್ಟೇಷನ್‌ಗಳು ‘ಆಲ್ ಇಂಡಿಯಾ ರೇಡಿಯೊ, ಜಮ್ಮು’, ‘ಆಲ್ ಇಂಡಿಯಾ ರೇಡಿಯೊ, ಶ್ರೀನಗರ’, ‘ಆಲ್ ಇಂಡಿಯಾ ರೇಡಿಯೊ, ಲೇಹ್’ ಎಂದು ಇದ್ದಕ್ಕಿದ್ದಂತೆ ಘೋಷಿಸಿದೆ.

ಶ್ರೀನಗರ ಹಾಗೂ ಜಮ್ಮುವಿನಲ್ಲಿರುವ ಆಲ್ ಇಂಡಿಯಾ ರೇಡಿಯೊದ ಕಾಶ್ಮೀರ ಸ್ಟೇಷನ್ ಅನ್ನು ಇದುವರೆಗೆ ‘ರೇಡಿಯೋ ಕಾಶ್ಮೀರ’ ಎಂದು ಕರೆಯಲಾಗುತ್ತಿತ್ತು. ಇನ್ನು ಮುಂದೆ ‘ಆಲ್ ಇಂಡಿಯಾ ರೇಡಿಯೊ ಕಾಶ್ಮೀರ’ ಒಂದು ಕರೆಯಬೇಕಾಗುತ್ತದೆ. ‘ರೇಡಿಯೋ ಕಾಶ್ಮೀರ್’ 1950ರಿಂದ ‘ಆಲ್ ಇಂಡಿಯಾ ರೇಡಿಯೊ’ದ ಭಾಗವಾಗಿತ್ತು. ಈ ನಡೆಗೆ ಸಾಮಾಜಿಕ ಮಾದ್ಯಮದಲ್ಲಿ ವ್ಯಾಪಕ ಬೆಂಬಲ ವ್ಯಕ್ತವಾಗಿದೆ. ಪತ್ರಕರ್ತ ರಾಹುಲ್ ಪಂಡಿತ್ ಟ್ವಿಟರ್‌ನಲ್ಲಿ, ‘ಆಲ್ ಇಂಡಿಯಾ ರೇಡಿಯೋ’ ಸ್ಟೇಶನ್ ಅನ್ನು ‘ಕಾಶ್ಮೀರ ರೇಡಿಯೊ’ ಎಂದು ಯಾಕೆ ಕರೆಯಬೇಕು ಎಂದು 1966ರ ಆರಂಭದಲ್ಲಿ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಪ್ರಶ್ನಿಸಿದ್ದರು. ಪಂಡಿತರ ಟ್ವೀಟ್‌ಗೆ ಪ್ರಸಾರ ಭಾರತಿಯ ಅಧಿಕೃತ ಖಾತೆ ಮರು ಟ್ವೀಟ್ ಮಾಡಿದೆ.

 ಕಾಶ್ಮೀರದ ರೇಡಿಯೋ ಕೇಂದ್ರಗಳ ಅಸ್ತಿತ್ವ ವ್ಯೂಹಾತ್ಮಕ ಕಾರಣಗಳನ್ನು ಹೊಂದಿದೆ-‘‘ಪಾಕಿಸ್ತಾನದ ಪ್ರಚಾರವನ್ನು ವಿರೋಧಿಸುವುದು ಹಾಗೂ ಭಾರತದ ಮಾಹಿತಿ ಪ್ರಸಾರ ಮಾಡುವುದು’’ ಎಂದು ‘ರೇಡಿಯೋ ಕಾಶ್ಮೀರ’ದ ನಿವೃತ್ತ ಉದ್ಯೋಗಿ ಹಾಗೂ ‘ರೇಡಿಯೋ ಕಾಶ್ಮೀರ: ಟೈಮ್ಸ್ ಆಫ್ ಪೀಸ್ ಆ್ಯಂಡ್ ವಾರ್’ನ ಲೇಖಕ ರಾಜೇಶ್ ಭಟ್ ತಿಳಿಸಿದ್ದಾರೆ.

  1947 ಡಿಸೆಂಬರ್ 1ರಂದು ಜಮ್ಮುವಿನಲ್ಲಿ ರಾಜ್ಯ ಸರಕಾರ ಮೊದಲ ಸ್ಟೇಶನ್ ಆರಂಭಿಸಿತ್ತು. ‘ಅಝಾದ್ ಕಾಶ್ಮೀರ ರೇಡಿಯೊ’, ‘ಟ್ರಾರ್ಖಲ್ ರೇಡಿಯೊ’, ‘ಆಝಾದ್ ರೇಡಿಯೊ ಮುಝಪ್ಫರಬಾದ್’ನಂತಹ ಪಾಕ್ ಆಕ್ರಮಿತ ಕಾಶ್ಮೀರ ಮೂಲದ ರೇಡಿಯೊ ಸ್ಟೇಶನ್‌ಗಳ ಭಾರತ ವಿರೋಧಿ ಪ್ರಚಾರ ತಡೆಯುವ ಉದ್ದೇಶದಿಂದ ಈ ರೇಡಿಯೊ ಸ್ಟೇಶನ್ ಅನ್ನು ಅಸ್ತಿತ್ವಕ್ಕೆ ತಂದಿತ್ತು ಎಂದು ಅವರು ತಿಳಿಸಿದ್ದಾರೆ.

ಆಗಸ್ಟ್ 5ರಂದು ಕೇಂದ್ರ ಸರಕಾರ ಸಂವಹನ ನಿರ್ಬಂಧ ಹೇರಿದ ಬಳಿಕ ಕಾಶ್ಮೀರಿಗಳು ಮಾಹಿತಿ ತಿಳಿಯಲು ಹಳೆಯ ರೇಡಿಯೊವನ್ನೇ ಅವಲಂಬಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News