‘ಒಥೆಲೊ’ದ ಪ್ರಥಮ ಪ್ರದರ್ಶನ

Update: 2019-10-31 18:45 GMT

1604: ವಿಶ್ವ ವಿಖ್ಯಾತ ನಾಟಕಕಾರ, ಕವಿ ಶೇಕ್ಸ್ ಪಿಯರ್ ಅವರ ದುಃಖಾಂತ್ಯ ನಾಟಕ ‘ಒಥೆಲೊ’ದ ಪ್ರಥಮ ಪ್ರದರ್ಶನ ನಡೆಯಿತು.

1755: ಪೋರ್ಚುಗಲ್ ಲಿಸ್ಬನ್‌ನಲ್ಲಿ ಪ್ರಬಲ ಭೂಕಂಪಕ್ಕೆ 50,000 ಜನರು ಬಲಿಯಾದರು.

1894: ಡಿಫ್ತೀರಿಯಾ ರೋಗಕ್ಕೆ ಲಸಿಕೆಯನ್ನು ಕಂಡುಹಿಡಿದಿರುವುದಾಗಿ ಪ್ಯಾರಿಸ್ ಡಾ.ರೌಕ್ಸ್ ಎಂಬವರು ಘೋಷಿಸಿದರು.

1956: ಕರ್ನಾಟಕದಾದ್ಯಂತ ಕನ್ನಡ ರಾಜ್ಯೋತ್ಸವವನ್ನು ಆಚರಿಸಲಾಗುತ್ತದೆ. ದಕ್ಷಿಣ ಭಾರತದ ಅನೇಕ ಕಡೆಗಳಲ್ಲಿ ಹರಿದು ಹಂಚಿಹೋಗಿದ್ದ ಕನ್ನಡ ಭಾಷೆ ಮಾತನಾಡುವ ಪ್ರದೇಶಗಳನ್ನು ಒಗ್ಗೂಡಿಸಿ ಒಂದು ರಾಜ್ಯವನ್ನು ಘೋಷಣೆ ಮಾಡಿದ ಈ ದಿನವನ್ನು ಕನ್ನಡಿಗರು ನಾಡ ಹಬ್ಬವನ್ನಾಗಿ ಆಚರಿಸುತ್ತಾರೆ. ಏಕೀಕರಣವಾದ ಸಂದರ್ಭದಲ್ಲಿ ಕರ್ನಾಟಕಕ್ಕೆ ‘ಮೈಸೂರು ರಾಜ್ಯ’ ಎಂದು ನಾಮಕರಣ ಮಾಡಲಾಗಿತ್ತು. 1973, ನ.1ರಂದು ‘ಕರ್ನಾಟಕ’ ಎಂದು ಬದಲಾಯಿಸಲಾಯಿತು.

1955: ವಿಯೆಟ್ನಾಂ ಯುದ್ಧ ಪ್ರಾರಂಭವಾಯಿತು.

1956: ದಿಲ್ಲಿಯನ್ನು ಭಾರತ ಒಕ್ಕೂಟದ ಕೇಂದ್ರಾಡಳಿತ ಪ್ರದೇಶವೆಂದು ಘೋಷಿಸಲಾಯಿತು. ದಿಲ್ಲಿಯು ಶಕ್ತಿ ಮತ್ತು ಪ್ರತಿಷ್ಠೆಯ ಕೇಂದ್ರವಾಗಿದೆ. ಸಾವಿರಾರು ರಾಜರು, ಚಕ್ರವರ್ತಿಗಳಿಂದ ಆಳಲ್ಪಟ್ಟ ಇದು ಆಧುನಿಕ ಭಾರತದ ರಾಜಧಾನಿಯಾಗುವ ಮೂಲಕ ತನ್ನ ಹಳೆಯ ಛಾಪು ಕಳೆದುಕೊಂಡಿಲ್ಲ.

1974: ಬ್ರೆಜಿಲ್‌ನ ಸಾವೊ ಪಾವ್ಲೊದಲ್ಲಿ ಆಕಸ್ಮಿಕ ಬೆಂಕಿಗೆ ಕೇವಲ 25 ನಿಮಿಷದಲ್ಲಿ 189 ಜನರು ಬಲಿಯಾದ ಘಟನೆ ವರದಿಯಾಗಿದೆ.

2000: ಸೆರ್ಬಿಯಾ ಮತ್ತು ಮಾಂಟೆನೆಗ್ರೊ ಗಣರಾಜ್ಯ ವಿಶ್ವಸಂಸ್ಥೆಗೆ ಸೇರಿತು.

2012: ಸೌದಿ ಅರೇಬಿಯದ ರಿಯಾದ್‌ನಲ್ಲಿ ಇಂಧನ ಟ್ಯಾಂಕರ್ ಸ್ಪೋಟಗೊಂಡು 22 ಜನರು ಮೃತರಾದರು. 111 ಮಂದಿ ಗಾಯಗೊಂಡರು.

1834: ಉತ್ತರ ಕರ್ನಾಟಕದಲ್ಲಿ ಮರಾಠಿ ಪ್ರಾಬಲ್ಯವನ್ನು ಹಿಮ್ಮೆಟ್ಟಿಸಿ ಕನ್ನಡದ ಜ್ಯೋತಿಯನ್ನು ಬೆಳಗಿಸಿದ ಡೆಪ್ಯುಟಿ ಚನ್ನಬಸಪ್ಪ ಜನ್ಮದಿನ.

1927: ಕಾಂಗ್ರೆಸ್‌ನ ಹಿರಿಯ ನಾಯಕ, ಭಾರತದ ಮಾಜಿ ರೈಲ್ವೆ ಮಂತ್ರಿ ಬಂಗಾಳದ ಎ.ಬಿ.ಎ ಘನೀಖಾನ್ ಚೌಧುರಿ ಜನ್ಮದಿನ.

1973: ಖ್ಯಾತ ಬಾಲಿವುಡ್ ನಟಿ ಐಶ್ವರ್ಯ ರೈ ಜನ್ಮದಿನ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ಈ ದಿನ
ಈ ದಿನ