ಜಾರ್ಖಂಡ್ ವಿಧಾನಸಭೆಗೆ ಐದು ಹಂತಗಳಲ್ಲಿ ಚುನಾವಣೆ, ಡಿ.23ಕ್ಕೆ ಫಲಿತಾಂಶ

Update: 2019-11-01 12:03 GMT

ಹೊಸದಿಲ್ಲಿ, ನ.1: ಜಾರ್ಖಂಡ್ ವಿಧಾನಸಭೆಗೆ ಐದು ಹಂತಗಳಲ್ಲಿ ಚುನಾವಣೆ ನಡೆಸಲು ನಿರ್ಧರಿಸಲಾಗಿದೆ ಎಂದು ಚುನಾವಣಾ ಆಯೋಗ(ಇಸಿ)ಶುಕ್ರವಾರ ಘೋಷಣೆ ಮಾಡಿದೆ.

ನ.30ರಿಂದ ಮೊದಲ ಹಂತದ ಚುನಾವಣೆ ನಡೆಯಲಿದ್ದು, ಡಿಸೆಂಬರ್ 23ರಂದು ಫಲಿತಾಂಶ ಪ್ರಕಟವಾಗಲಿದೆ.

  ಡಿ.7, ಡಿ.12, ಡಿ.16 ಹಾಗೂ ಡಿ.20ರಂದು ಉಳಿದ ನಾಲ್ಕು ಹಂತಗಳ ಚುನಾವಣೆ ನಡೆಯಲಿದೆ. ರಾಜ್ಯದಲ್ಲಿ ಮಾದರಿ ನೀತಿ ಸಂಹಿತೆ ತಕ್ಷಣವೇ ಜಾರಿಯಾಗಲಿದೆ ಎಂದು ಶುಕ್ರವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮುಖ್ಯ ಚುನಾವಣಾ ಆಯುಕ್ತ ಸುನೀಲ್ ಅರೋರ ಘೋಷಿಸಿದ್ದಾರೆ.

ಜಾರ್ಖಂಡ್ ರಾಜ್ಯದ ಐದು ವರ್ಷಗಳ ಅಸೆಂಬ್ಲಿ ಅವಧಿಯು 2020ರ ಜ.5ರಂದು ಕೊನೆಗೊಳ್ಳಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News