ಶೇ.50ರಷ್ಟು ಸರಕಾರಿ ಬಸ್‌ಗಳನ್ನು ಖಾಸಗೀಕರಣಗೊಳಿಸಲಾಗುವುದು: ಚಂದ್ರಶೇಖರ್ ರಾವ್

Update: 2019-11-03 05:36 GMT

ಹೈದರಾಬಾದ್, ಡಿ.3: ತೆಲಂಗಾಣ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ನೌಕರರ ಮುಷ್ಕರ ಆರಂಭವಾಗಿ ಒಂದು ತಿಂಗಳು ಕಳೆದರೂ ತನ್ನ ನಿಲುವನ್ನು ಬದಲಿಸಲು ನಿರಾಕರಿಸಿರುವ ಮುಖ್ಯಮಂತ್ರಿ ಕೆ.ಚಂದ್ರಶೇಖರ ರಾವ್ ಶೇ.50ರಷ್ಟು ರಾಜ್ಯ ರಸ್ತೆ ಸಾರಿಗೆ ಬಸ್ ಸೇವೆಗಳನ್ನು ಖಾಸಗೀಕರಣಗೊಳಿಸಲಾಗುವುದು ಎಂದು ಘೋಷಿಸಿದ್ದಾರೆ. ಮುಷ್ಕರ ನಿರತ ಕಾರ್ಮಿಕರು ಇನ್ನು ಮೂರೇ ದಿನದಲ್ಲಿ ತಮ್ಮ ಕರ್ತವ್ಯಕ್ಕೆ ಹಾಜರಾಗಬೇಕೆಂದು ಗಡುವು ನೀಡಿದ್ದಾರೆ.

 ಐದು ಗಂಟೆಗಳ ಕಾಲ ನಡೆದ ಮ್ಯಾರಥಾನ್ ಸಂಪುಟ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ರಾವ್,‘‘ಸುಮಾರು 5,100 ಖಾಸಗಿ ಬಸ್‌ಗಳಿಗೆ ನಿರ್ದಿಷ್ಟ ರೂಟ್‌ಗಳಲ್ಲಿ ಸಂಚರಿಸಲು ಪರ್ಮಿಟ್ ನೀಡಲಾಗುವುದು. ತೆಲಂಗಾಣ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ(ಟಿಎಸ್‌ಆರ್‌ಟಿಸಿ)10,400 ಬಸ್‌ಗಳನ್ನು ಓಡಿಸುತ್ತಿದ್ದು, ಇದರಲ್ಲಿ 2,000 ಬಸ್‌ಗಳನ್ನು ಈಗಾಗಲೇ ಖಾಸಗೀಕರಣಗೊಳಿಸಲಾಗಿದ್ದು, ಇನ್ನೂ 2,000 ಬಸ್‌ಗಳು ಕೆಟ್ಟುಹೋಗಿವೆ" ಎಂದಿದ್ದಾರೆ.

 "ಖಾಸಗೀಕರಣ ಹೆಜ್ಜೆಯನ್ನು ಕಾರ್ಮಿಕ ಸಂಘಟನೆಗಳು ವಿರೋಧಿಸುತ್ತಿವೆ. ಆದರೆ, ಸಂಪುಟದಲ್ಲಿ ತೆಗೆದುಕೊಂಡಿರುವ ನಿರ್ಧಾರವನ್ನು ಬದಲಿಸಲು ಸಾಧ್ಯವಿಲ್ಲ. ಕೇಂದ್ರ ಸರಕಾರ ಇತ್ತೀಚೆಗೆ ತಿದ್ದುಪಡಿ ಮಾಡಿರುವ ಮೋಟಾರ್ ವಾಹನಗಳ ಕಾಯ್ದೆ ಸುಸ್ಥಿರತೆ ಖಚಿತಪಡಿಸಿಕೊಳ್ಳಲು ರಾಜ್ಯಗಳು ಖಾಸಗೀಕರಣಗೊಳಿಸಲು ಅನುಮತಿಸುತ್ತದೆ'' ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News