ಹೊಸ ಯುಗದ ಹರಿಕಾರ ಟಿಪ್ಪು ಸುಲ್ತಾನ್

Update: 2019-11-10 06:41 GMT

ಟಿಪ್ಪು ಪ್ರಾರಂಭಿಸಿದ ಊಳಿಗಮಾನ್ಯ ವಿರೋಧಿ, ವಸಾಹತುಶಾಹಿ ವಿರೋಧಿ ಹೋರಾಟ ಇನ್ನೂ ಪರಿಪೂರ್ಣಗೊಂಡಿಲ್ಲ. ಅಂದು ಟಿಪ್ಪುವಿನ ಸಾವಿನ ನಂತರ ಗದ್ದುಗೆ ಹಿಡಿದ ಮೈಸೂರ ಅರಸನಂತಹ ಊಳಿಗಮಾನ್ಯ ಶಕ್ತಿಗಳ ಪ್ರತಿನಿಧಿಗಳು, ವಸಾಹತುಶಾಹಿಯ ಗುಲಾಮರೇ ಇಂದಿಗೂ ಹೊಸಹೊಸ ರೂಪಗಳಲ್ಲಿ ಗದ್ದುಗೆಯಲ್ಲಿ ಮುಂದುವರಿದಿದ್ದಾರೆ. ಆದ್ದರಿಂದಲೇ ಇತಿಹಾಸದ ಆ ಕಾಲಘಟ್ಟದಲ್ಲಿ ಕ್ರಾಂತಿಕಾರಿ ಪಾತ್ರವಹಿಸಿದ ಟಿಪ್ಪು ಸುಲ್ತಾನನ ನೆನಪು ಇಂದಿಗೂ ನಾಡಿನ ವಿಮೋಚನಾ ಹೋರಾಟದಲ್ಲಿ ತೊಡಗಿರುವ ಪ್ರತಿಯೊಬ್ಬರಿಗೂ ಸ್ಫೂರ್ತಿ ನೀಡುತ್ತದೆ. ಆದ್ದರಿಂದಲೇ ಆ ನೆನಪನ್ನು ಸಹ ನಾಶ ಮಾಡಿ ಈ ನಾಡನ್ನು ಕತ್ತಲಲ್ಲಿ ಮುಳುಗಿಸ ಬಯಸುವ ಪ್ರತಿಗಾಮಿ ಶಕ್ತಿಗಳ ವಿರುದ್ಧ ನಿಜವಾದ ದೇಶಪ್ರೇಮಿಗಳು ರಾಜಿರಹಿತ ಸಮರ ಸಾರಬೇಕಿದೆ.

ಲೇಖಕ-ಟಿಪ್ಪ್ಪು!

ಟಿಪ್ಪು ತನ್ನ ಬಿಡುವಿಲ್ಲದ ದಿನಚರಿಯ ನಡುವೆಯೂ ಹಲವು ಪುಕ್ತಗಳನ್ನು ರಚಿಸಿದ್ದಾನೆ. ಟಿಪ್ಪು ಕನ್ನಡ, ತೆಲುಗು, ತಮಿಳು, ಭಾಷೆ ಬಲ್ಲವನಾಗಿದ್ದ. ಆತ ಬರೆದ ಪುಸ್ತಕಳ ಮೂಲಧಾತುವೂ ಸಹ ಬ್ರಿಟಿಷ್ ವಸಾಹತುಶಾಹಿಯಿಂದ ಹಾಗೂ ಊಳಿಗಮಾನ್ಯತೆಯಿಂದ ನಾಡಿನ ಬಿಡುಗಡೆಯ ಅಂಶವನ್ನೇ ಹೊಂದಿತ್ತು. ಅವುಗಳಲ್ಲಿ ಫತುವುಲ್ ಮುಜಾಹಿದೀನ್(ಸೈನಿಕನ ವಿಜಯ)ಯುದ್ಧ, ಕಲೆ,ಹಾಗೂ ವಿಜ್ಞಾನಗಳ ಬಗ್ಗೆಯಾಗಿತ್ತು. ಭೂ ಕಂದಾಯ ಕಾಯ್ದೆ ಹಾಗೂ ವಾಣಿಜ್ಯ ಕಾಯ್ದೆಗಳ ಟಿಪ್ಪುವ್ಪಿನ ರಾಷ್ಟ್ರ ನಿರ್ಮಾಣದ ಪ್ರಣಾಳಿಕೆಯೇ ಆಗಿತ್ತು. ಅಲ್ಲದೇ ಟಿಪ್ಪು ಕನಸುಗಳು ಎಂಬ ಪುಸ್ತಕ 38 ಲೇಖನಗಳನ್ನು ಹೊಂದಿದ್ದು ಸ್ವತಂತ್ರ ರಾಷ್ಟ್ರ ನಿರ್ಮಾಣದ ಬಗೆ ಟಿಪ್ಪುವಿನ ಕನಸುಗಳನ್ನು ದಾಖಲಿಸುತ್ತದೆ.

ಮಾನವ ಸಮಾಜದ ವಿಕಾಸದ ಗತಿಚಕ್ರಕ್ಕೆ ಚಾಲನೆ ನೀಡುವುದು ಆ ಸಮಾಜದ ಹಳೆಯ ಪ್ರತಿಗಾಮಿ ಶಕ್ತಿಗಳ ಹಾಗೂ ಹೊಸದಾಗಿ ಉದಯಿಸುತ್ತಿರುವ ಪ್ರಗತಿಪರ ಶಕ್ತಿಗಳ ನಡುವೆ ನಡೆಯುವ ಸತತ ಸಂಘರ್ಷವೇ ಆಗಿದೆ. ಹಳೆಯ ಸಮಾಜದ ವ್ಯವಸ್ಥೆಯ ಗರ್ಭದೊಳಗೆ ಹುಟ್ಟಿಕೊಳ್ಳುವ ಹೊಸ ವ್ಯವಸ್ಥೆಯ ಭ್ರೂಣ ಶಕ್ತಿಗಳು ತಮ್ಮ ಐತಿಹಾಸಿಕ ವಿಕಾಸಕ್ಕೆ ಅಡ್ಡಿಯಾಗುವ ಹಳೆ ವ್ಯವಸ್ಥೆಯ ಆಳುವ ಶಕ್ತಿಗಳೊಡನೆ ನಿರಂತರ ಯುದ್ಧ ನಡೆಸುತ್ತವೆ. ಈ ಸಂಘರ್ಷದಿಂದ ಹೊಸ ಸಮಾಜ ವ್ಯವಸ್ಥೆ ಉಗಮಗೊಳ್ಳುತ್ತದೆ. ವಿಶ್ವದೆಲ್ಲೆಡೆ ಮಾನವ ಸಮಾಜ ವಿಕಸನಗೂಂಡದ್ದು ಈ ರೀತಿಯಲ್ಲೇ. ಗುಲಾಮ ವ್ಯವಸ್ಥೆಯ ಬರ್ಬರ ಶೋಷಣೆಯ ವಿರುದ್ಧ ಗುಲಾಮರು ನಡೆಸಿದ ಐತಿಹಾಸಿಕ ಸಂಗ್ರಾಮವು ಊಳಿಗಮಾನ್ಯ ವ್ಯವಸ್ಥೆಗೆ ದಾರಿ ಮಾಡಿಕೊಟ್ಟಿತು. ಅದೇ ರೀತಿ ಊಳಿಗಮಾನ್ಯ ವ್ಯವಸ್ಥೆಯ ಪಾಳೇಗಾರಿ ಶಕ್ತಿಗಳ ವಿರುದ್ಧ ರೈತರೂ, ವ್ಯಾಪಾರಿಗಳೂ, ಉದ್ಯಮಿಗಳೂ ನಡೆಸಿದ ವರ್ಗ ಸಂಘರ್ಷವೇ ಬಂಡವಾಳಶಾಹಿ ವ್ಯವಸ್ಥೆಗೆ ದಾರಿ ಮಾಡಿಕೊಟ್ಟಿತು. ಯೂರೋಪಿನಲ್ಲಿ ಈ ರೀತಿ ಬಂಡವಾಳಶಾಹಿ ಕ್ರಾಂತಿಗಳು ಸಂಭವಿಸಿದ್ದರಿಂದಲೇ ಆ ದೇಶಗಳಿಗೆ ಪ್ರಗತಿಯ ಮಹಾ ಮುನ್ನಡೆ ದೊರೆತು ಇಂದು ಜಗತ್ತಿನ ಪ್ರಬಲ ಶಕ್ತಿಗಳಾಗಲು ತಳಹದಿ ದೊರೆಯಿತು. ನಂತರ ಬಂಡವಾಳಶಾಹಿ ವ್ಯವಸ್ಥೆಯ ಒಳಗಿನಿಂದ ಕಾರ್ಮಿಕವರ್ಗವು ನಡೆಸುವ ಪ್ರಜ್ಞಾಪೂರ್ವಕ ಸಮಾಜವಾದಿ ಕ್ರಾಂತಿ ಮಾನವ ಸಮಾಜವನ್ನು ಶೋಷಣಾರಹಿತ ಸಮಾಜವಾದಿ ಸಮಾಜದೆಡೆಗೆ ಕೊಂಡೊಯ್ಯುತ್ತದೆ. ಇದು ಇತಿಹಾಸದ ಗತಿಕ್ರಮ.

ಅದೇರೀತಿ ಕರ್ನಾಟಕವೂ ಸಹ ಊಳಿಗಮಾನ್ಯತೆಯ ಕತ್ತಲಲ್ಲಿ ತಡವರಿಸುತ್ತಿರುವಾಗಲೇ ಬ್ರಿಟಿಷ್ ವಸಾಹತುಶಾಹಿಯ ಆಕ್ರಮಣವೂ ನಡೆದು ಈ ನಾಡಿನಲ್ಲೂ ಸಂಭವಿಸಬೇಕಾಗಿದ್ದ ಊಳಿಗಮಾನ್ಯ ವಿರೋಧಿ ಪ್ರಜಾಸತ್ತಾತ್ಮಕ ಕ್ರಾಂತಿಗೆ ಬಹುದೊಡ್ಡ ಸವಾಲೇ ಎದುರಾಯಿತು. ಇಂತಹ ಸಂಕ್ರಮಣಾವಸ್ಥೆಯಲ್ಲಿ ಮೈಸೂರಿನ ಆಳ್ವಿಕೆ ವಹಿಸಿಕೊಂಡ ಟಿಪ್ಪ್ಪು-ಹೈದರ್ ಅವರು ಊಳಿಗಮಾನ್ಯ ವ್ಯವಸ್ಥೆಯ ಪ್ರತಿನಿಧಿಗಳಾಗಿರದೇ, ಅದನ್ನು ವಿರೋಧಿಸಿ ಸೆಣಸುತ್ತಾ ಐತಿಹಾಸಿಕವಾಗಿ ಪ್ರಗತಿ ಪರ ಪಾತ್ರವಹಿಸುತ್ತಿದ್ದ ಸ್ವದೇಶಿ ವ್ಯಾಪಾರಿವರ್ಗಗಳ ಪರವಾಗಿ ನಿಂತು ಇತಿಹಾಸದ ಈ ಬಿಕ್ಕಟ್ಟನ್ನು ಯುದ್ಧದ ಮೂಲಕ ಸಂಪೂರ್ಣವಾಗಿ ಪರಿಹರಿಸುವ ಕ್ರಾಂತಿಕಾರಿಗಳ ಪಾತ್ರವಹಿಸಿದರು.

ಟಿಪ್ಪ್ಪು-ಹೈದರ್‌ರ ಪ್ರಭುತ್ವವೇ ಪಾಳೇಗಾರಿ ಊಳಿಗಮಾನ್ಯ ಶಕ್ತಿಗಳನ್ನು ನಿರ್ಮೂಲನ ಮಾಡಿದ್ದಲ್ಲದೇ, ವಸಾಹತುಶಾಹಿ ವಿರೋಧಿ ಸಂಗ್ರಾಮ ಸೋಲಿನಲ್ಲಿ ಕೊನೆಗೊಂಡರೂ, ಊಳಿಗಮಾನ್ಯ ಶಕ್ತಿಯನ್ನು ಮಾತ್ರ ನಾಶಗೂಳಿಸುವಲ್ಲಿ ತಮ್ಮ ಕಾಲದಲ್ಲಿ ಟಿಪ್ಪ್ಪು-ಹೈದರ್ ಯಶಸ್ವಿಯಾಗಿದ್ದರು. ಹೀಗೆ ಇತಿಹಾಸದ ಕಾಲಗತಿಯಲ್ಲಿ ಕರ್ನಾಟಕದ ಚರಿತ್ರೆಗೆ ಹಳೆಯ ಪ್ರತಿಗಾಮಿ ವರ್ಗಗಳ ನಿರ್ಮೂಲನೆಯ ಮೂಲಕ ಹೊಸ ರೂಪ ತಂದುಕೊಟ್ಟವನು ಟಿಪ್ಪ್ಪು ಸುಲ್ತಾನ್. ಈ ಯುಗದ ಕ್ರಾಂತಿಕಾರಿ ಆಶಯವಾಗಿರುವ ಸಮತಾವಾದದ ಹಿನ್ನೆಲೆಯಲ್ಲಿ ನೋಡಿದರೆ ಟಿಪ್ಪ್ಪು ಪ್ರತಿನಿಧಿಸಿದ ವರ್ಗಗಳಿಗೂ ಹಾಗೂ ಅದರ ವೌಲ್ಯಗಳಿಗೂ ಶೋಷಣಾ ಗುಣವಿರುವುದು ನಿಜವೇ. ಆದರೆ ಅದು ಟಿಪ್ಪು ಬಾಳಿದ ಕರ್ನಾಟಕದ ಆ ಐತಿಹಾಸಿಕ ಕಾಲಘಟ್ಟದ ಐತಿಹಾಸಿಕ ಮಿತಿಯೂ ಆಗಿತ್ತೆಂಬುದನ್ನು ಮರೆಯುವಂತಿಲ್ಲ. ಆ ಕಾಲಘಟ್ಟದ ಕ್ರಾಂತಿ ಊಳಿಗಮಾನ್ಯ ವಿರೋಧಿ, ಪ್ರಜಾಸತ್ತಾತ್ಮಕ ಕ್ರಾಂತಿಯಾಗಿತ್ತು ಹಾಗೂ ವಸಾಹತುಶಾಹಿಯನ್ನು ಮೂಲೋತ್ಪಾಟನೆ ಮಾಡದೇ ಈ ಕ್ರಾಂತಿ ನೆರವೆರುವಂತಿರಲಿಲ್ಲ. ಟಿಪ್ಪು ಈ ಎರಡೂ ಶತ್ರುಗಳ ವಿರುದ್ಧ ನಿರ್ಣಾಯಕ ಸಂಗ್ರಾಮ ನಡೆಸಿ ರಣರಂಗದಲ್ಲಿ ಪ್ರಾಣಕೊಟ್ಟು ಹುತಾತ್ಮನಾದ. ಆದ್ದರಿಂದಲೇ ಟಿಪ್ಪು ಸುಲ್ತಾನ್ ದೊರೆಯಾದರೂ ಕ್ರಾಂತಿಕಾರಿಯಾಗಿ ಉಳಿದುಕೊಂಡ ಏಕೈಕ ರಾಜನಾಗಿದ್ದನೆನ್ನಬಹುದು. ಟಿಪ್ಪು ಹೈದರ್‌ರ ಆಳ್ವಿಕೆಯ ಕೇವಲ 38 ವರ್ಷಗಳಲ್ಲಿ ಕರ್ನಾಟಕವು ಇಡೀ ಪ್ರಪಂಚವೇ ನಿಬ್ಬೆರಗಾಗುವಂತೆ ಪ್ರಗತಿ ಸಾಧಿಸಿತು. ಕೃಷಿ ಅಭಿವೃದ್ಧಿಗೆ ಅಡ್ಡಿಯಾಗಿದ್ದ ಪಾಳೇಗಾರಿಕೆ, ಬ್ರಾಹ್ಮಣಶಾಹಿ ಹಾಗೂ ಮಧ್ಯವರ್ತಿ ವರ್ಗವನ್ನು ಟಿಪ್ಪು ಸರ್ವನಾಶ ಮಾಡಿದ್ದರಿಂದ ರೈತರ ಮೇಲಿನ ಹೊರೆ ಕಡಿಮೆಯಾಗಿ ಕೃಷಿ ಅಭಿವೃದ್ಧಿಯ ಅದ್ಭುತ ನೆಗೆತ ಸಾಧಿಸಿತು. ಅಲ್ಲದೇ ಟಿಪ್ಪುವಿನ ಪ್ರಭುತ್ವ ನೀಡಿದ ನೀರಾವರಿ ಸೌಲಭ್ಯ, ಕೃಷಿ ತಕಾವಿ ಸಾಲ, ಸರಳ ರಿಯಾಯಿತಿ ತೆರಿಗೆ, ಹೊಸ ವಾಣಿಜ್ಯ ತಳಿಗಳ ಅಭಿವೃದ್ಧಿ ಇತ್ಯಾದಿಗಳು ಕೃಷಿಯಲ್ಲಿ ವಾಣಿಜ್ಯೀಕರಣವನ್ನು ತಂದು ಗೃಹ ಮಾರುಕಟ್ಟೆಯನ್ನು ಹಿಗ್ಗಿಸಿತು. ಮತ್ತೊಂದೆಡೆ ದೇಶೀಯ ವ್ಯಾಪಾರ ಹಾಗೂ ಕೈಗಾರಿಕೆಯನ್ನು ಬೆಳೆಸಲು ಬ್ರಿಟಿಷ್ ಸರಕು ಮಾರಾಟವನ್ನು ಟಿಪ್ಪು ಸಂಪೂರ್ಣವಾಗಿ ನಿಷೇಧಿಸಿದ್ದನಲ್ಲದೇ, ಗೃಹ ಮಾರುಕಟ್ಟೆಯ ವಿತರಣೆಗೂ ಮೇಲಿನ ಕ್ರಮಗಳಿಂದ ಉತ್ತೇಜನ ನೀಡಿದ. ಇದರಿಂದ ಕೇವಲ ಎರಡು ದಶಕಗಳಲ್ಲಿ ಮೈಸೂರು ಪ್ರಾಂತಗಳಲ್ಲಿ ಕೈಗಾರಿಕೆಯು ಯೂರೋಪಿಗೆ ಸರಿಸಮವಾಗಿ ಅಭಿವೃದ್ಧಿ ಹೊಂದುವ ಹಂತದಲ್ಲಿತ್ತು. ಇದರಿಂದಾಗಿ ಜನಾನುರಾಗಿ ಟಿಪ್ಪುವಿನ ಪ್ರಭುತ್ವವು ಜನಪರವಾಗಿ ಊಳಿಗಮಾನ್ಯತೆ ಹಾಗೂ ವಸಾಹತುಶಾಹಿಯಂತಹ ಜನರನ್ನು ಹಿಮ್ಮೆಟ್ಟಿಸುವ ಮೂಲಕ ಅಭಿವೃದ್ಧಿಯೆಡೆಗೆ ಮುನ್ನಡೆಸಿತು. ಒಂದೆಡೆ ಟಿಪ್ಪುವಿನ ನೀತಿಗಳಿಂದ ಜಾತಿ ಪದ್ಧತಿಯಿಂದ ಜನತೆ ವಿಮುಕ್ತಿಯತ್ತ ಸಾಗಿದರೆ, ಮತ್ತೊಂದೆಡೆ ಗೃಹ ಮಾರುಕಟ್ಟೆ ವಿತರಣೆಯಿಂದ ಹಾಗೂ ರಕ್ಷಣೆಯಿಂದ ಕನ್ನಡನಾಡೂ ಸಹ ಮೊತ್ತ ಮೊದಲ ಬಾರಿಗೆ ಆಧುನಿಕ ತಳಹದಿಯಲ್ಲಿ ಒಗ್ಗೂಡಿತು. ವ್ಯಕ್ತಿಯಾಗಿಯೂ ಸಹ ಟಿಪ್ಪ್ಪು-ಹೈದರ್‌ರ ಊಳಿಗಮಾನ್ಯ ವಿರೋಧಿ ಮೌಲ್ಯಗಳನ್ನು ಅರಗಿಸಿಕೊಂಡಿದ್ದ ವ್ಯಕಿತ್ವ ಹೊಂದಿದ್ದರು. ಅವರ ಕಾಲದಲ್ಲಿ ಸಾರ್ವಜನಿಕ ಕೆರೆ-ಕಟ್ಟೆ ನಿರ್ಮಾಣಕ್ಕೆ ಲಕ್ಷಾಂತರ ರೂಪಾಯಿ ವೆಚ್ಚ ಮಾಡಿದ್ದರೂ ತಮ್ಮ ಅರಮನೆಗಳನ್ನು ವೈಭವಯುತವಾಗಿ ಕಟ್ಟಿಕೊಳ್ಳಲಿಲ್ಲ. ಇಂದಿಗೂ ಶ್ರೀರಂಗಪಟ್ಟಣದ ಹಾಗೂ ಬೆಂಗಳೂರಿನ ಟಿಪ್ಪುವಿನ ಅರಮನೆಗಳು ಸರಳತೆಗೆ ಪ್ರತೀಕವಾಗಿ ನಿಂತಿದ್ದರೆ, ಮೈಸೂರು ಅರಸರ ಅರಮನೆ ಊಳಿಗಮಾನ್ಯ ದುಂದಿಗೆ, ಸುಖಲೋಲುಪತೆಗೆ ಸಾಕ್ಷಿಯಾಗಿ ನಿಂತಿದೆ. ಟಿಪ್ಪು ವಿಶೇಷವಾಗಿ ಜ್ಞಾನದಾಹಿಯಾಗಿದ್ದ. ಇತರೆ ಅರಸರ ಅರಮನೆಗಳಲ್ಲಿ ಮದಿರೆ, ಸುಗಂಧ ಸುಖಭೋಗದ ಸಾಧನಗಳು ವಿಫುಲವಾಗಿ ದೊರೆತರೆ ಟಿಪ್ಪುವಿನ ಅರಮನೆಯಲ್ಲಿ ದೊರೆತದ್ದು, ಪುಸ್ತಕಗಳ, ಪ್ರಯೋಗ ಸಾಧನಗಳು, ವಿಜ್ಞಾನ, ತಂತ್ರಜ್ಞಾನ, ಸಾಹಿತ್ಯ, ಸೂಫಿ ಧರ್ಮಸಾಹಿತ್ಯ ಇತ್ಯಾದಿಗಳು. ನಾಡಿನ ಅಭಿವೃದ್ಧಿಗೆ ಬೇಕಾದಷ್ಟು ವಿಶ್ವದಲ್ಲಿ ಎಲ್ಲೇ ದೊರೆತರೂ ಅದನ್ನು ಕೂಡಲೇ ತರಿಸಿ ಈ ನಾಡಿನಲ್ಲಿ ಪ್ರಯೋಗಕ್ಕೆ ಹಚ್ಚುತ್ತಿದ್ದ ಮಹಾನ್ ಉದ್ಯಮಶೀಲ, ಜ್ಞಾನದಾಹಿ, ಜನಾನುರಾಗಿ ದೊರೆ ಟಿಪ್ಪು ಸುಲ್ತಾನ್. ಇವೆಲ್ಲಕ್ಕಿಂತ ಹೆಚ್ಚಾಗಿ ಕರ್ನಾಟಕವನ್ನು, ಕರ್ನಾಟಕದ ಜನತೆಯನ್ನು ನುಂಗಲು ನುಗ್ಗಿ ಬರುತ್ತಿದ್ದ ಬ್ರಿಟಿಷ್ ವಸಾಹತುಶಾಹಿಯ ವಿರುದ್ಧ ಪ್ರಾಣವನ್ನು, ಮಕ್ಕಳನ್ನು ಪಣವಾಗಿಟ್ಟು ಹೋರಾಡಿದ ಮಹಾನ್ ದೇಶಪ್ರೇಮಿ ಟಿಪ್ಪುಲ್ತಾನ್. ಕನಾಟಕದ ಇತಿಹಾಸದ ಗತಿಯಲ್ಲಿ ಪ್ರಗತಿ ಪರ ಶಕ್ತಿಗಳ ಪರವಾಗಿ ನಿಂತು ಪ್ರತಿಗಾಮಿ ಶಕ್ತಿಗಳ ವಿರುದ್ಧ ರಾಜಿ ಇಲ್ಲದೇ ಹೋರಾಟ ನಡೆಸಿ ಹುತಾತ್ಮನಾದ ಕ್ರಾಂತಿಕಾರಿ ಟಿಪ್ಪು ಸುಲ್ತಾನ್. ಆದ್ದರಿಂದಲೇ ಟಿಪ್ಪುವಿನ ಸಾಲಿನಲ್ಲಿ, ಸೋಲಿನಲ್ಲಿ ಕರ್ನಾಟಕದ ಶೋಷಿತ ಜನತೆಯೂ ಸೋಲುಂಡಿತು. ಟಿಪ್ಪುವಿನ ಸಾವಿನಿಂದ ಸಂಭ್ರಮ ಪಟ್ಟವರು ಭೂ ಮಾಲಕ, ಊಳಿಗಮಾನ್ಯ ವರ್ಗಗಳು. ಪರಾವಲಂಬಿ ಮೈಸೂರು ಅರಸೊತ್ತಿಗೆ ಹಾಗೂ ಬ್ರಿಟಿಷ್ ವಸಾಹತು ಶಾಹಿಗಳು. ಟಿಪ್ಪುವಿನ ಕಾಲದಲ್ಲಿ ಸ್ವಾತಂತ್ರ ಹಾಗೂ ಸ್ವಾಭಿಮಾನಿ ಅಭಿವೃದ್ಧಿಯ ಸವಿಯುಂಡ ರಾಷ್ಟ್ರೀಯ ವ್ಯಾಪಾರಿ, ಕೈಗಾರಿಕೋದ್ಯಮಿ, ರೈತಾಪಿ ವರ್ಗ ಮತ್ತೆ ನಿಸ್ಸಹಾಯಕರಾಗಿ ಊಳಿಗಮಾನ್ಯತೆಯ ಮತು ವಸಾಹತುಶಾಹಿಯ ಕಬಂಧ ಬಾಹುಗಳಿಗೆ ಸಿಲುಕಿದರು.

ಮೂರು ಬಗೆಯ ಯುದ್ಧಗಳಲ್ಲೂ ನಿಷ್ಣಾತ: ಟಿಪ್ಪ್ಪು-ಹೈದರ್‌ಅಲಿ ಇವರಿಬ್ಬರೂ ತಾವು ನಡೆಸಿದ ವಸಾಹತುಶಾಹಿ ವಿರೋಧಿ ಯುದ್ಧಗಳಲ್ಲಿ ಮೂರು ಬಗೆಯ ಸಮರ ಪದ್ಧತಿಗಳನ್ನು ಬಳಸಿದರು. 1. ಗೆರಿಲ್ಲಾ ಯುದ್ಧ 2. ಚಲನ ಯುದ್ಧ 3. ಸ್ಥಾನಿಕ ಯುದ್ಧ. ಗೆರಿಲ್ಲಾ ಯುದ್ಧತಂತ್ರಗಳ ವಿಧಾನಗಳನ್ನು ಅಂದಿನ ಪಾಳೆಗಾರರು ಹಾಗೂ ಕೊಡಗಿನ ಜನತೆ ಅನುಸರಿಸುತ್ತಿದ್ದರೆ, ಚಲನ ಯುದ್ಧ ಮರಾಠರ ಪ್ರಮುಖ ಯುದ್ಧ ತಂತ್ರವಾಗಿತ್ತು. ಇನ್ನು ಸ್ಥಾನಿಕ ಯುದ್ಧ ಬ್ರಿಟಿಷರು, ಫ್ರೆಂಚರು ಭಾರತದಲ್ಲಿ ಅನುಸರಿಸಿದ ಯೂರೋಪಿಯನ್ ಯುದ್ಧ ಪದ್ಧ್ದತಿಯಾಗಿತ್ತು. ಟಿಪ್ಪು ಈ ಮೂವರು ಶತ್ರುಗಳ ವಿರುದ್ಧ ಯುದ್ಧ ಮಾಡುತ್ತಲೇ ತನ್ನ ಶತ್ರುಳ ನಿಷ್ಣಾತರಾಗಿದ್ದ ಯುದ್ದ ಕಲೆಗಳನ್ನು ಅಭ್ಯಸಿಸಿ ಅದರಲ್ಲಿ ಪರಿಣಿತನಾದ. ಯುದ್ಧರಂಗದಲ್ಲಿ ಯುದ್ಧ ಕಲೆಯನ್ನು ಕಲಿತು, ತಾನು ಕಲಿತದ್ದನ್ನೆಲ್ಲಾ ಬ್ರಿಟಿಷರನ್ನು ಒದ್ದೋಡಿಸಲು ಪ್ರಯೋಗಿಸಿದ ಯುದ್ಧ ಚತುರ ಹಾಗೂ ಶಿಸ್ತುಬದ್ಧ ಸೈನಿಕ ಟಿಪ್ಪು ಸುಲ್ತಾನ್.

ಕೆರೆಕಟ್ಟೆಗಳು: ಟಿಪ್ಪುವಿನ ಕಾಲದಲ್ಲಿ ನೀರಾವರಿ ಸೌಲಭ್ಯ ವಿಸ್ತೃತವಾಗಿ ಹರಡಿತು. ಅವುಗಳಲ್ಲಿ ಸರಕಾರವೇ ಕೈಗೆತ್ತಿಕೊಂಡ ಬೃಹತ್ ನೀರಾವರಿ ಯೋಜನೆಗಳ, ಜನ ಹಾಗೂ ಸರಕಾರ ಜೊತೆಗೂಡಿ ನಿರ್ವಹಿಸುತ್ತಿದ್ದ ಮಧ್ಯಮ ನೀರಾವರಿ ಯೋಜನೆಗಳ ಹಾಗೂ ಜನತೆಯೇ ಸರಕಾರದ ಬೆಂಬಲದಿಂದ ನಿರ್ವಹಿಸಿದ ನೀರಾವರಿ ಯೋಜನೆಗಳು . ಈ ಒಟ್ಟಾರೆ ನೀರಾವರಿ ಜಾಲದಿಂದಾಗಿ ಟಿಪ್ಪುವಿನ ಮೈಸೂರು ಸಂಸ್ಥಾನದಲ್ಲಿ 39,000 ಕೆರೆಕಟ್ಟೆಗಳಿದ್ದು ಭಾರತದಲ್ಲೇ ಪ್ರಥಮ ಸ್ಥಾನದಲ್ಲಿತು. 1803-1804ರ ಅಂದಾಜಿನಂತೆ ಆಗ ಉಳುಮೆಯಾಗುತ್ತಿದ್ದ 30,12,397 ಎಕರೆ ಜಮೀನಿನಲ್ಲಿ 8,13,491 ಎಕರೆ ಜಮೀನು ನೀರಾವರಿಗೆ ಒಳಪಟ್ಟಿತ್ತು. ಮತ್ತೊಂದು ಅಂದಾಜಿನಂತೆ 1799ರ ವೇಳೆಗೆ ಶೇ.35ರಷ್ಟು ಭೂಮಿ ನೀರಾವರಿಗೆ ಒಳಪಟ್ಟಿತು. ಅಲ್ಲದೇ 1798ರಲ್ಲಿ ಇಂದು ಕೆ.ಆರ್.ಎಸ್ ಇರುವ ಜಾಗದ ಕಾವೇರಿ ನದಿಗೆ ಬೃಹತ್ ಆಣೆಕಟ್ಟು ಕಟ್ಟುವ ಯೋಜನೆಗೆ ಟಿಪ್ಪು ಸರಕಾರ ಅಸ್ತಿಭಾರ ಹಾಕಿತು. ಅಷ್ಟುಹೊತ್ತಿಗೆ ನಾಲ್ಕನೇ ಮೈಸೂರು ಯುದ್ಧ ಸಾಧ್ಯತೆಗಳಿದ್ದವು ಎಂಬುದನ್ನು ಗಮನಿಸಬೇಕು.

ಸಸ್ಯಶಾಸ್ತ್ರ ಪ್ರಯೋಗಶಾಲೆ-ಲಾಲ್‌ಬಾಗ್: ಬೆಂಗಳೂರಿನಲ್ಲಿರುವ ಲಾಲ್ ಬಾಗ್ ಸಸ್ಯತೋಟವನ್ನು ಅಪರೂಪದ ಸಸ್ಯತಳಿಗಳನ್ನು ಸಂರಕ್ಷಿಸಲೆಂದೇ ಟಿಪ್ಪ್ಪು ಪ್ರಾರಂಭಿಸಿದ. ಪ್ರಾಕಿ ಫೆರ್ನಾಂಡಿಸ್ ಎಂಬವರು ಬರೆದಿರುವಂತೆ; ಲಾಲ್ ಬಾಗ್ ಸಸ್ಯ ಉದ್ಯಾನವು ಕೇವಲ ಮನೋಲ್ಲಾಸಕ್ಕಾಗಿ ನಿರ್ಮಿಸಿದ ತೋಟವಾಗಿರಲಿಲ್ಲ. ವಿಶ್ವದ ಬೇರೆಬೇರೆ ಕಡೆಗಳಿಂದ ತರಿಸಲಾಗಿದ್ದ ಅಪರೂಪದ ಸಸ್ಯ ತಳಿಗಳನ್ನೆಲ್ಲಾ ಇಲ್ಲಿ ಸಂರಕ್ಷಣೆ ಮಾಡಲಾಗಿತ್ತು. ಇಂಗ್ಲೇಂಡಿನ ಓಕ್ಮರ, ದಕ್ಷಿಣ ಆಫ್ರಿಕಾದ ಪೈನ್ಮರ, ಮೆಕ್ಸಿಕೋದ ಅವೋಕಾಡೋ, ಮಾವು, ಕಿತ್ತಳ್ತೆ, ಹಿಪ್ಪುನೇರಳೆ, ಸೀಬೆಗಿಡಗಳ ಹಾಗೂ ಹತ್ತಿ ಮತು ನೀಲಿ ಬೆಳೆಯ ಪ್ರಾಯೋಗಿಕ ಕ್ಷೇತ್ರಗಳು ಲಾಲ್‌ಬಾಗಿನಲ್ಲಿದ್ದವು. 

ವಿಶ್ವದಲ್ಲೇ ಅತ್ಯುತ್ತಮ ಕಬ್ಬಿಣ: ಟಿಪ್ಪುವಿನ ಆಳ್ವಿಕೆಯಲ್ಲಿ ದೊರೆತ ಕಬ್ಬಿಣದ ಬಗ್ಗೆ ಹೇನ್ಸ್ ಎಂಬುವವನು ಈಸ್ಟ್ ಇಂಡಿಯಾ ಕಂಪೆನಿಗೆ ಈ ರೀತಿ ವರದಿ ಮಾಡಿದ್ದ ; ‘‘....ಒಟ್ಟಿನಲ್ಲಿ ಹೇಳುವುದಾದರೆ ಇಂಗ್ಲಿಷ್ ಉದ್ಯಮಿಗಳಿಗೆ ಭಾರತದ ಕಬ್ಬಿಣ ಅತ್ಯುತ್ತಮ ಸರಕಾಗುತ್ತದೆ ಎಂದು ನನ್ನ ಭಾವನೆ. ಏಕೆಂದರೆ ಇದಕ್ಕೆ ಹೋಲಿಸಿದರೆ ನಮ್ಮ ಇಂಗ್ಲಿಷ್ ಕಬ್ಬಿಣ ಕನಿಷ್ಠ ಪಕ್ಷ 30-40 ವರ್ಷಕ್ಕಿಂತ ಹಳತಾದ ಕೆಳದರ್ಜೆಯದು...... ನಾನಿದುವರೆಗೆ ನೋಡಿರುವ ಕಬ್ಬಿಣದಲ್ಲಿ ಭಾರತದ ಈ ಕಬ್ಬಿಣ ಅತ್ಯುತ್ತಮ ದರ್ಜೆಯದು’’.

ಸಿಟಿಜನ್ ಟಿಪ್ಪ್ಪು: ಬ್ರಿಟಿಷರ ವಿರುದ್ಧ ಟಿಪ್ಪು ಫ್ರಾನ್ಸಿನೊಡನೆ ಸತತ ರಾಜ ತಾಂತ್ರಿಕ ಸಂಪರ್ಕವಿರಿಸಿಕೊಂಡಿದ್ದರೂ ಅಲ್ಲಿ ಕ್ರಾಂತಿಯ ಸಂಕ್ಷೋಭೆ ಉಂಟಾದಾಗ ಟಿಪ್ಪು ಕ್ರಾಂತಿಕಾರಿಗಳ ಪರವಾಗಿ ನಿಂತಿದ್ದು ಸಹಜವಾಗಿತು. ಫ್ರಾನ್ಸಿನ ಕಾಂತಿಕಾರಿ ಸಂಘಟನೆಯಾದ ಜಾಕೋಬಿನ್ ಕ್ಲಬ್‌ಅನ್ನು ಟಿಪ್ಪುವಿನ ಆಶ್ರಯದಲ್ಲಿದ್ದ ಫ್ರೆಂಚರು ಪ್ರಾರಂಭಿಸಿದಾಗ ಟಿಪ್ಪು ಅದಕ್ಕೆ ಆಶ್ರಯ ಕೊಟ್ಟು ತಾನೂ ಸಹ ಅದರ ಸದಾಶಯದಲ್ಲಿ ಸಿಟಿಜನ್ ಟಿಪ್ಪು ಆಗಿ ಭಾಗವಹಿಸಿದ. ಅಲ್ಲದೇ ಟಿಪ್ಪುವಿನ ಪ್ರಾಂಗಣದಲ್ಲಿ ವಿಮೋಚನಾ ವೃಕ್ಷವೊಂದನ್ನು ನೆಡೆಸ ಲಾಯಿತು. ಫ್ರೆಂಚ್ ಕ್ರಾಂತಿ ಸಂಭವಿಸಿದಾಗ ಅದರ ಯಶಸ್ಸಿಗೆ ಶ್ರೀರಂಗ ಪಟ್ಟಣದಲ್ಲೂ ಟಿಪ್ಪು ಸಹ ಸಂಭ್ರಮಾಚರಣೆ ನಡೆಸಿದ. ಹೀಗೆ ಟಿಪ್ಪು ಕೇವಲ ನಾಡಿನೊಳಗೆ ಮಾತ್ರವಲ್ಲ, ವಿಶ್ವದೆಲ್ಲೆಡೆಯಿದ್ದ ಪ್ರಗತಿಪರ ಶಕ್ತಿಗಳೊಡನೆ ಗುರುತಿಸಿಕೊಂಡ. 

ಮಹಿಳಾ ಕಾಳಜಿ: ಟಿಪ್ಪು ಸುಲ್ತಾನ್ ಹಾಗೂ ಹೈದರ್ ಅಲಿ ಇಬ್ಬರೂ ಮೂಢ ಸಂಪ್ರದಾಯದಡಿ ಮಹಿಳೆಯರು ಅನುಭವಿಸುತ್ತಿದ್ದ ಶೋಷಣೆಯ ಬಗ್ಗೆ ಸಂವೇದನಾ ಶೀಲರಾಗಿದ್ದರು. ಈಗಿನ ಆಧುನಿಕ ಮಹಿಳಾ ವಿಮೋಚನಾ ಪ್ರಜ್ಞೆ ಅವರಿಗಿರಲಿಲ್ಲವಾದರೂ, ಅವರಿದ್ದ ಐತಿಹಾಸಿಕ ಕಾಲಘಟ್ಟ ಮಿತಿ ಹಾಗೂ ಅವರು ಪ್ರತಿನಿಧಿಸುತ್ತಿದ್ದ ಪ್ರಗತಿಪರದವರೂ ವ್ಯಾಪಾರೋದ್ಯಮಿ ವರ್ಗದೃಷ್ಟಿಯ ಮಿತಿಯಲ್ಲಿ ಅವರು ಮೂಢ-ಸಂಪ್ರದಾಯಗಳಿಂದ ಮಹಿಳೆಯರ ಶೋಷಣೆಯನ್ನು ನಿಲ್ಲಿಸಲು ಸಾಕಷ್ಟು ಪ್ರಯತ್ನಿಸಿದರು. ಉದಾಹರಣೆಗೆ ಕೇರಳದ ಉತ್ತರ ಮಲಬಾರ್ ಪ್ರಾಂತದಲ್ಲಿ ಊಳಿಗ ಮಾನ್ಯ ಪ್ರಭುಗಳು ವಿಧಿಸಿದ್ದ ಕಂದಾಚಾರಗಳಿಗೆ ಗೆ ಬಲಿಯಾಗಿದ್ದ ಮಹಿಳೆಯರು ಎದೆಯಮೇಲೆ ಬಟ್ಟೆ ಹಾಕುವಂತಿರಲಿಲ್ಲ. ಜನಕಂಟಕ ಪಾಳೆಗಾರರನ್ನೆಲ್ಲಾ ನಾಶಮಾಡಿದ ನಂತರ ಟಿಪ್ಪು ಈ ಮಹಿಳಾ ವಿರೋಧಿ ಕಂದಾಚಾರಗಳ ವಿರುದ್ಧ ಕ್ರಮ ಕೈಗೊಂಡ. ಈ ನಿಟ್ಟಿನಲ್ಲಿ ಆತ ತನ್ನ ಅಧಿಕಾರಿಗಳಿಗೆ ಹೊರಡಿಸಿದ ನಿರೂಪವೊಂದರಲ್ಲಿ ಮಹಿಳೆಯರ ಎದೆಯಮೆಲೆ ಬಟ್ಟೆ ಹಾಕಲಾರದ ಅನಿಷ್ಟ ಸಂಪ್ರದಾಯವೊಂದು ಆ ಪ್ರಾಂತದಲ್ಲಿ ಅಸ್ತಿತ್ವದಲ್ಲಿದೆ. ಇದು ಸಮಾಜಕ್ಕೆ ಒಂದು ಕಳಂಕ. ಒಂದು ವೇಳೆ ಬಲಪ್ರಯೋಗದಿಂದ ಮಹಿಳೆಯರನ್ನು ಈ ಸ್ಥಿತಿಗೆ ದೂಡಿ ದ್ದರೆ ಕೂಡಲೇ ಅಂಥವರ ವಿರುದ್ಧ ಕ್ರಮ ಕೈಗೊಳ್ಳತಕ್ಕದ್ದು ಅಥವಾ ಇದು ಅಲ್ಲಿ ಧಾರ್ಮಿಕ ಸಂಪ್ರದಾಯಗಳ ಭಾಗವಾಗಿ ಅಸ್ತಿತ್ವದಲ್ಲಿದ್ದರೆ ಅಲ್ಲಿನ ಧರ್ಮ ಗುರುಗಳ ಮನವೊಲಿಸುವ ಮೂಲಕ ಈ ಕಂದಾಚಾರವನ್ನು ನಿಲ್ಲಿಸಲು ಪ್ರಯತ್ನಿಸತಕ್ಕದ್ದು ಎಂದು ಆದೇಶ ನೀಡಿದ್ದ. ಮಠಗಳಿಂದ ಅಕ್ಷರ ವಿಮೋಚನೆ!: ಒಂದು ಕೇಂದ್ರೀಕೃತ ಪ್ರಭುತ್ವದ ಯಶಸ್ವಿ ನಿರ್ವಹಣೆಗೆ ಅಕ್ಷರಸ್ಥ ಅಧಿಕಾರಿ ವರ್ಗದ ಅಗತ್ಯವನ್ನು ಟಿಪ್ಪು ಮನಗಂಡಿದ್ದ . ಈ ಕಾರಣದಿಂದ ಟಿಪ್ಪುವಿನ ಆಳ್ವಿಕೆಯಲ್ಲಿ ಶ್ರೀರಂಗಪಟ್ಟಣದಲ್ಲಿ ಅಧಿಕಾರಿಗಳಿಗೆ ಹಾಗೂ ಅವರ ಮಕ್ಕಳು ಓದು ಬರಹ ಕಲಿಯುವುದು ಕಡ್ಡಾಯವಾಗಿತ್ತು. ಹೀಗೆ ಶತಶತಮಾನಗಳಿಂದ ಸಾಗಿಬಂದಿದ್ದ ಅಕ್ಷರದ ಮೇಲೆ ಬ್ರಾಹ್ಮಣಶಾಹಿ ಹತೋಟಿ ತಪ್ಪಿ ಸಾರ್ವಜನಿಕ ಗೊಳಿಸುವ ಪ್ರಕ್ರಿಯೆಯು ಸಣ್ಣದಾಗಿ ಪ್ರಾರಂಭ ಗೊಂಡಿತು.

ಸಂಪೂರ್ಣ ಮದ್ಯಪಾನ ನಿಷೇಧ: ಮದ್ಯಪಾನ ನಿಷೇಧಿಸಿದರೆ ಸರಕಾರದ ಖಜಾನೆ ಖಾಲಿಯಾಗುತ್ತದೆ ಎಂದು ಇಂದಿನ ಸರಕಾರಗಳು ಈಗಲೂ ಜನರನ್ನು ಕುಡಿತದ ಅಮಲಿನಲ್ಲಿಟ್ಟು ಶೋಷಣೆ ಮುಂದುವರಿಸಿವೆ. ಆದರೆ ಎರಡು ಶತಮಾನಗಳ ಮೊದಲೇ ಟಿಪ್ಪು ಸಂಪೂರ್ಣ ಮದ್ಯಪಾನ ನಿಷೇಧವನ್ನು ಜಾರಿಗೆ ತಂದಿದ್ದ. 1787ರಲ್ಲಿ ಮೀರ್ ಸಾದಿಕ್‌ಗೆ ಬರೆದ ಪತ್ರವೊಂದರಲ್ಲಿ ‘‘ಈ ವಿಷಯದಲ್ಲಿ ಮಾತ್ರ ನಾವು ಯಾವುದೇ ಹಣಕಾಸಿನ ವಿಷಯವನ್ನು ಪ್ರಧಾನಗೊಳಿಸಿ ನೋಡಬಾರದು. ಏನೇ ಆದರೂ ಸಂಪೂರ್ಣ ಮದ್ಯಪಾನ ನಿಷೇಧ ಮಾತ್ರ ಜಾರಿಗೆ ಬರಲೇಬೇಕು. ಅದು ಕೇವಲ ಧಾರ್ಮಿಕ ವಿಷಯ ವಲ್ಲ. ನಾವು ನಮ್ಮ ಜನತೆಯ ಆರ್ಥಿಕ ಸಧೃಢತೆ, ನೈತಿಕ ಔನತ್ಯಗಳನ್ನು ಪ್ರಧಾನವಾಗಿ ಪರಿಗಣಿಸಬೇಕು. ನಮ್ಮ ಯುವಕರಲ್ಲಿ ಸನ್ನಡತೆಯನ್ನು ಬೆಳೆಸಬೇಕು. ಖಜಾನೆಯ ಹಣಕಾಸಿನ ವಿಷಯ ಪ್ರಮುಖವಾದರೂ ಅದು ನಮ್ಮ ಜನತೆಯ ಆರೋಗ್ಯ ಹಾಗೂ ನೈತಿಕತೆಗಿಂತಲೂ ಮುಖ್ಯವಾದದ್ದೇ?’’ ಎಂದು ಪ್ರಶ್ನಿಸಿದ್ದ. ಇಂದಿನ ನಮ್ಮ ಸಮಾಜವಾದಿಗಳಿಗೂ ಇಲ್ಲದಂತಹ ನೈತಿಕ ಹಾಗೂ ದೂರದೃಷ್ಟಿ ಟಿಪ್ಪುವಿಗಿತ್ತು. ಅಲ್ಲದೇ ಟಿಪ್ಪು ಇದನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲು ನಾಡಿನಾದ್ಯಂತ ಈಚಲುಮರಗಳನ್ನು ಕಡಿಸಲು ಆಜ್ಞೆ ಮಾಡಿದ್ದ.

ಭಾರತದ ಅತಿದೊಡ್ಡ ವ್ಯಾಪಾರಿ ಕೇಂದ್ರ ಗುಬ್ಬಿ : ಹೈದರ್‌ಅಲಿ ಹಾಗೂ ಟಿಪ್ಪು ಅವರ ಆಳ್ವಿಕೆಯಲ್ಲಿ ವಾಣಿಜ್ಯೀಕರಣ ಅದೆಷ್ಟು ತೀವ್ರಗತಿ ಪಡೆದುಕೊಂಡಿತ್ತೆಂದರೆ ಗುಬ್ಬಿ ಹಾಗೂ ಹರಿಹರದ ಸಂತೆಗಳ ಇಡೀ ಸಂಸ್ಥಾನ ಅತ್ಯಂತ ಪ್ರಾಮುಖ್ಯತೆಯನ್ನು ಪಡೆದುಕೊಂಡವು. ಬುಕಾನನ್ ದಾಖಲಿಸಿರುವಂತೆ ಆಗ ಗುಬ್ಬಿಯಲ್ಲಿ ನಡೆಯುತ್ತಿದ್ದ ಸಂತೆ ಭಾರತದ ಅತೀ ದೊಡ್ಡ ಸಂತೆಯಾಗಿತ್ತು.

ನಾಡಿನ ಪ್ರಪ್ರಥಮ ರೇಷ್ಮೆ ಬೆಳೆಗಾರ

ಟಿಪ್ಪು ಸದಾ ಪ್ರಯೋಗಶೀಲನಾಗಿರುತ್ತಿದ್ದ. ವಿಶ್ವದ ಯಾವುದೇ ಮೂಲೆಯಲ್ಲಿ ಕೃಷಿ ಹಾಗೂ ಕೈಗಾರಿಕೆಗೆ ಸಂಬಂಧಪಟ್ಟ ಯಾವುದೇ ಹೊಸ ಅಥವಾ ಇಲ್ಲಿ ಇರದಿದ್ದ ಪದ್ಧತಿಗಳು, ಅನ್ವೇಷಣೆಗಳನ್ನು ಕಂಡರೂ ಆತ ಕೂಡಲೇ ರಾಯಭಾರಿಗಳನ್ನು ಕಳಿಸಿ ತರಿಸಿಕೊಂಡು ಉತ್ಪಾದನೆಗೆ ಹಚ್ಚುತ್ತಿದ್ದ. ಟಿಪ್ಪುವಿನ ಈ ಅದಮ್ಯ ಅಭಿವೃದ್ಧಿಶೀಲ ಗುಣದಿಂದಲೇ ವಿದೇಶಿ ರೇಷ್ಮೆ ಬೆಳೆ ಕರ್ನಾಟಕದಲ್ಲಿ ಪರಿಚಯಗೊಂಡಿತು. ಟಿಪ್ಪು ರೇಷ್ಮೆ ಕೃಷಿಯ ಬಗ್ಗೆ ಅದೆಷ್ಟು ಜತನ ವಹಿಸಿದನೆಂದರೆ 1786ರಲ್ಲಿ ಯುದ್ಧದ ಮಧ್ಯೆ ಸುತ್ತುವರಿಯಲ್ಪಟ್ಟಿದ್ದರೂ ತನ್ನ ಬಿಡು

Writer - ಬಿ. ಪೀರ್‌ಬಾಷ

contributor

Editor - ಬಿ. ಪೀರ್‌ಬಾಷ

contributor

Similar News