ಜಾನ್ ಎಫ್. ಕೆನಡಿ ಹತ್ಯೆ

Update: 2023-06-30 05:29 GMT

1935: ದಕ್ಷಿಣ ಇಟಲಿಯಲ್ಲಿ ಬೀಸಿದ ಮಾರಣಾಂತಿಕ ಬಿರುಗಾಳಿಯ ಪರಿಣಾಮವಾಗಿ 9 ಜನರು ಪ್ರಾಣ ಕಳೆದುಕೊಂಡರು. ಹಲವು ಮನೆಗಳು ನೆಲಕಚ್ಚಿದವು.

1943: ಲೆಬನಾನ್ ಫ್ರಾನ್ಸ್ ನಿಂದ ಸ್ವಾತಂತ್ರ್ಯ ಪಡೆಯಿತು.

1950: ಅಮೆರಿಕದ ರಿಚ್‌ಮಂಡ್ ಹಿಲ್ ಸೆಕ್ಷನ್ ಪ್ರದೇಶದಲ್ಲಿ ಎರಡು ಪ್ರಯಾಣಿಕ ಹಡಗುಗಳ ನಡುವೆ ಢಿಕ್ಕಿ ಸಂಭವಿಸಿ 79 ಜನರು ಅಸುನೀಗಿದರು.

1963: ಅಮೆರಿಕ ಅಧ್ಯಕ್ಷ ಜಾನ್ ಎಫ್. ಕೆನಡಿ ಅವರನ್ನು ಅಮೆರಿಕದ ಡಲ್ಲಾಸ್ ಎಂಬಲ್ಲಿ ಗುಂಡು ಹಾರಿಸಿ ಹತ್ಯೆಗೈಯಲಾಯಿತು. ಈ ಪ್ರಕರಣದಲ್ಲಿ ಹಂತಕನೆಂದು ಆರೋಪಿಸಲಾಗಿದ್ದ ಲೀ ಹಾರ್ವೆ ಓಸ್ವಾಲ್ಡ್‌ನನ್ನು ಬಂಧಿಸಲಾಗಿತ್ತು. ಆದರೆ ಆತನೂ ಜಾಕ್ ರೂಬಿ ಎಂಬ ನೈಟ್‌ಕ್ಲಬ್ ಮಾಲಕನಿಂದ ಹತ್ಯೆಯಾದನು.

2002: ನೈಜೀರಿಯಾದಲ್ಲಿ ನಡೆದ ವಿಶ್ವಸುಂದರಿ ಸ್ಪರ್ಧೆಯನ್ನು ವಿರೋಧಿಸಿ ದುಷ್ಕರ್ಮಿಗಳು ನಡೆಸಿದ ದಾಳಿಯಲ್ಲಿ ಸುಮಾರು 100 ಜನರು ಮೃತಪಟ್ಟರು. 200ಕ್ಕಿಂತ ಹೆಚ್ಚು ಮಂದಿ ಕಾಣೆಯಾದ ಘಟನೆ ವರದಿಯಾಯಿತು.

2005: ಜರ್ಮನಿಯ ಪ್ರಥಮ ಮಹಿಳಾ ಚಾನ್ಸಲರ್ ಆಗಿ ಏಂಜೆಲಾ ಮರ್ಕೆಲ್ ಅಧಿಕಾರ ವಹಿಸಿಕೊಂಡರು.

2009: ವೆನೆಝುವೆಲ ಆರ್ಥಿಕ ಹಿಂಜರಿತದಲ್ಲಿದೆಯೆಂದು ಆ ದೇಶದ ಅಧ್ಯಕ್ಷ ಹ್ಯೂಗೊ ಚವೇಝ್ ಘೋಷಿಸಿದರು.

2012: ಪಾಕಿಸ್ತಾನದಾದ್ಯಂತ ಒಟ್ಟು 6 ಕಡೆ ನಡೆದ ಬಾಂಬ್ ದಾಳಿಯಲ್ಲಿ 37 ಜನರು ಸಾವಿಗೀಡಾಗಿ, 92 ಮಂದಿ ಗಾಯಗೊಂಡರು.

2013: ನಾರ್ವೆ ದೇಶದ ಮ್ಯಾಗ್ನಸ್ ಕಾರ್ಲ್‌ಸನ್ ಭಾರತದ ವಿಶ್ವನಾಥನ್ ಆನಂದರನ್ನು ಸೋಲಿಸುವ ಮೂಲಕ 2013ರ ವಿಶ್ವ ಚೆಸ್ ಚಾಂಪಿಯನ್ ಪಟ್ಟ ಧರಿಸಿದರು.

1892: ಭಾರತದ ಸ್ವಾತಂತ್ರ ಹೋರಾಟದಲ್ಲಿ ಸಕ್ರಿಯರಾಗಿದ್ದ, ಗಾಂಧೀಜಿಯ ಅನುಯಾಯಿ ಮೀರಾ ಬೆಹನ್(ಮೆಡಲಿನ್ ಸ್ಲೇಡ್) ಜನ್ಮದಿನ.

1943: ಭಾರತದ ಮಾಜಿ ರಕ್ಷಣಾ ಸಚಿವ, ಉತ್ತರಪ್ರದೇಶದ ಮಾಜಿ ಮುಖ್ಯಮಂತ್ರಿ ಮುಲಾಯಂಸಿಂಗ್ ಯಾದವ್ ಜನ್ಮದಿನ.

2012: ಸಿಪಿಎಂ ಪಕ್ಷದ ನಾಯಕ ಕೇರಳದ ಪಿ.ಗೋವಿಂದ ಪಿಳ್ಳೈ ನಿಧನರಾದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ಈ ದಿನ
ಈ ದಿನ