ಕೇಂದ್ರದ ಮಾರಾಟ ಪಟ್ಟಿಯಲ್ಲಿ ಇನ್ನೂ ಹಲವು ಸಾರ್ವಜನಿಕ ರಂಗದ ಸಂಸ್ಥೆಗಳು !

Update: 2019-11-25 05:36 GMT

ಹೊಸದಿಲ್ಲಿ : ಇಂಜಿನಿಯರ್ಸ್ ಇಂಡಿಯಾ ಲಿ., ಪವರ್ ಗ್ರಿಡ್, ನ್ಯಾಷನಲ್ ಮಿನರಲ್ ಡೆವಲೆಪ್ಮೆಂಟ್ ಕಾರ್ಪೊರೇಶನ್, ಸೈಲ್, ಬಿಎಚ್‍ಇಎಲ್, ಹಿಂದುಸ್ತಾನ್ ಕಾಪರ್, ಎನ್‍ಎಚ್‍ಪಿಸಿ, ಹಿಂದುಸ್ತಾನ್ ಆರ್ಗಾನಿಕ್ಸ್ ಕೆಮಿಕಲ್ಸ್ ಲಿಮಿಟೆಡ್  ಸಹಿತ ಹಲವಾರು ಕೇಂದ್ರ ಸರಕಾರಿ ಸ್ವಾಮ್ಯದ ಸಾರ್ವಜನಿಕ ರಂಗದ ಸಂಸ್ಥೆಗಳಲ್ಲಿ ತನ್ನ ಪಾಲುದಾರಿಕೆಯನ್ನು ಶೇ 51ಕ್ಕಿಂತಲೂ ಕಡಿಮೆಗೊಳಿಸುವ ನಿಟ್ಟಿನಲ್ಲಿ ಸರಕಾರ ಯೋಚಿಸುತ್ತಿದೆಯೆನ್ನಲಾಗಿದೆ. 

ಆದರೆ ಈ ಸಂಸ್ಥೆಗಳ ಆಡಳಿತವನ್ನು ಸರಕಾರ ತನ್ನ ಬಳಿಯೇ ಉಳಿಸಿಕೊಳ್ಳಲಿದೆ.

ಈ ಸಂಸ್ಥೆಗಳಲ್ಲಿ ಸರಕಾರದ ಪಾಲುದಾರಿಕೆಯನ್ನು ಕಡಿಮೆಗೊಳಿಸುವ ಕುರಿತಂತೆ  ಇಲ್ಲಿಯ ತನಕ ಯಾವುದೇ ತೀರ್ಮಾನ ಕೈಗೊಳ್ಳಲಾಗಿಲ್ಲ ಎಂದು ಅಧಿಕೃತ ಮೂಲಗಳು ತಿಳಿಸಿವೆ. ಆದರೆ  ಈ ಸಂಸ್ಥೆಗಳಲ್ಲಿ ಸದ್ಯ ಇರುವ ಸರಕಾರದ ಪಾಲುದಾರಿಕೆ, ಅವುಗಳ ಕಾರ್ಯನಿರ್ವಹಣೆ  ಹಾಗೂ ಈ ಕ್ಷೇತ್ರಗಳಲ್ಲಿ ಖಾಸಗಿ ರಂಗ ಅದಾಗಲೇ ಅಸ್ತಿತ್ವದಲ್ಲಿದ್ದರೆ ಹಾಗೂ ಸಂಸ್ಥೆ ಬಹಳ ಪ್ರಮುಖ್ಯವಲ್ಲದೇ ಇದ್ದಲ್ಲಿ ಸರಕಾರ ತನ್ನ ಪಾಲುದಾರಿಕೆಯನ್ನು ಕಡಿಮೆಗೊಳಿಸಬಹುದು ಎಂದು ಹೇಳಲಾಗುತ್ತಿದೆ. ಆದರೆ ರಕ್ಷಣಾ ಮತ್ತು ವಿತ್ತೀಯ ವಲಯಗಳ ಸಂಸ್ಥೆಗಳನ್ನು ಇದರಿಂದ ಹೊರತು ಪಡಿಸಲಾಗಿದೆ.

ಬಿಎಚ್‍ಇಎಲ್‍ನಲ್ಲಿ ಸರಕಾರದ ಪಾಲುದಾರಿಕೆ ಈಗ 63.17 ಇದ್ದರೆ ಎನ್‍ಎಂಡಿಸಿಯಲ್ಲಿ ಶೇ 72.28ರಷ್ಟಿದೆ. ಪವರ್ ಗ್ರಿಡ್, ಇಂಜಿನಿಯರ್ಸ್ ಇಂಡಿಯಾ, ಹಿಂದುಸ್ತಾನ್ ಕಾಪರ್, ಸೈಲ್, ಎನ್‍ಎಚ್‍ಪಿಸಿ ಹಾಗೂ ಎಚ್‍ಒಸಿಎಲ್‍ನಲ್ಲಿ ಸರಕಾರದ ಪಾಲುದಾರಿಗೆ ಕ್ರಮವಾಗಿ ಶೇ 55, ಶೇ 76.05, ಶೇ 75, ಶೇ 73.33 ಹಾಗೂ ಶೇ 58.78ರಷ್ಟಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News