ಲೋಕಸಭೆ: ಫಾರೂಕ್ ಅಬ್ದುಲ್ಲಾ ಬಂಧನ ವಿರೋಧಿಸಿ ಎನ್‌ಸಿ ಸಂಸದರಿಂದ ಸಭಾತ್ಯಾಗ

Update: 2019-11-28 15:42 GMT

ಹೊಸದಿಲ್ಲಿ, ನ.28: ಶ್ರೀನಗರ ಸಂಸದರಾಗಿರುವ ತಮ್ಮ ಪಕ್ಷದ ಮುಖ್ಯಸ್ಥ ಫಾರೂಕ್ ಅಬ್ದುಲ್ಲಾ ಅವರ ಬಂಧನದ ವಿರುದ್ಧ ನ್ಯಾಷನಲ್ ಕಾನ್ಫರೆನ್ಸ್ (ಎನ್‌ಸಿ)ನ ಇಬ್ಬರು ಸಂಸದರಾದ ಹಸೈನ್ ಮಸೂದಿ ಮತ್ತು ಮುಹಮ್ಮದ್ ಅಕ್ಬರ್ ಲೋನೆ ಅವರು ಗುರುವಾರ ಲೋಕಸಭೆಯಲ್ಲಿ ಪ್ರತಿಭಟನೆಯನ್ನು ನಡೆಸಿದರು.

ತಮ್ಮ ಪ್ರತಿಭಟನೆಯನ್ನು ವ್ಯಕ್ತಪಡಿಸಲು ಉಭಯ ಸದಸ್ಯರು ಪ್ರತಿಪಕ್ಷಗಳ ಆಸನಗಳ ಮುಂದಿನ ಸಾಲಿಗೆ ಬಂದಿದ್ದು, 'ಅಬ್ದುಲ್ಲಾ ಅವರು ಸದನದ ಹಿರಿಯ ಸದಸ್ಯರಾಗಿದ್ದಾರೆ. ನಾಲ್ಕು ತಿಂಗಳುಗಳಿಂದ ಅವರು ಬಂಧನದಲ್ಲಿದ್ದಾರೆ. ದಯವಿಟ್ಟು ಏನಾದರೂ ಮಾಡಿ 'ಎಂದು ಮಸೂದಿ ಸ್ಪೀಕರ್ ಓಂ ಬಿರ್ಲಾ ಅವರಿಗೆ ಹೇಳಿದರು. ಆದರೆ ಸ್ಪೀಕರ್ ಅವರ ಪ್ರತಿಭಟನೆಯನ್ನು ಕಡೆಗಣಿಸಿ ಸದನದ ಕಲಾಪವನ್ನು ಮುಂದುವರಿಸಿದಾಗ ಉಭಯ ಸಂಸದರು ಪ್ರತಿಭಟನೆಯ ಸಂಕೇತವಾಗಿ ಸದನದಿಂದ ಹೊರಕ್ಕೆ ನಡೆದರು.

ಆ.5ರಂದು ಜಮ್ಮು-ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ಹಿಂದೆಗೆದುಕೊಂಡಾಗಿನಿಂದ ರಾಜ್ಯದ ಮಾಜಿ ಮುಖ್ಯಮಂತ್ರಿಗಳಾದ ಫಾರೂಕ್ ಅಬ್ದುಲ್ಲಾ,ಉಮರ್ ಅಬ್ದುಲ್ಲಾ ಮತ್ತು ಮೆಹಬೂಬ ಮುಫ್ತಿ ಅವರು ಬಂಧನದಲ್ಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News