ಟೆಸ್ಟ್ ನಲ್ಲಿ ಸ್ಟೀವ್ ಸ್ಮಿತ್ ವೇಗದ 7,000 ರನ್ ದಾಖಲೆ

Update: 2019-11-30 07:47 GMT

ಅಡಿಲೇಡ್,ನ.30:  ಆಸ್ಟ್ರೇಲಿಯದ ಬ್ಯಾಟ್ಸ್ ಮನ್ ಸ್ಟೀವ್ ಸ್ಮಿತ್  ಶನಿವಾರ  ಟೆಸ್ಟ್ ಕ್ರಿಕೆಟ್ ನಲ್ಲಿ ವೇಗವಾಗಿ 7,000 ರನ್ ಗಳಿಸಿದ ಬ್ಯಾಟ್ಸ್ ಮನ್  ಎಂಬ ಹೆಗ್ಗಳಿಕೆಗೆ ಪಾತ್ರರಾದರು.

1946 ರಿಂದಲೂ ಇದ್ದ ದಾಖಲೆಯನ್ನು ಚೂರುಚೂರು ಮಾಡಿದರು.   ಇಂಗ್ಲೆಂಡ್ ನ ವಾಲ್ಟರ್ ರೆಜಿನಾಲ್ಡ್ ಹ್ಯಾಮಂಡ್  ಅವರು ಭಾರತದ ವಿರುದ್ಧ ಆ.17, 1946ರಲ್ಲಿ  ದಿ ಓವಲ್ ನಡೆದ ಟೆಸ್ಟ್ ನಲ್ಲಿ 7,000 ರನ್ ಗಳ ಮೈಲುಗಲ್ಲನ್ನು ಮುಟ್ಟಿದ್ದರು. 80ನೇ ಟೆಸ್ಟ್ ನ 131ನೇ ಇನಿಂಗ್ಸ್ ನಲ್ಲಿ ಈ ಸಾಧನೆ ಮಾಡಿದ್ದರು.  ಸ್ಮಿತ್ ಈ ದಾಖಲೆಯನ್ನು ಮುರಿದಿದ್ದಾರೆ.

  ಸ್ಮಿತ್  ಅವರು ಅಡಿಲೇಡ್ ನಲ್ಲಿ ನಡೆಯುತ್ತಿರುವ ಪಾಕಿಸ್ತಾನ ವಿರುದ್ಧದ ಟೆಸ್ಟ್ ನಲ್ಲಿ ಈ ಸಾಧನೆ ಮಾಡಿದ್ದಾರೆ. ಸ್ಮಿತ್  ತನ್ನ 70ನೇ ಟೆಸ್ಟ್ ನ 126ನೇ ಇನಿಂಗ್ಸ್ ನಲ್ಲಿ ದಾಖಲೆ ಬರೆದರು. ಸ್ಮಿತ್ 7,000 ರನ್ ಗಳಿಸಿರುವ ಆಸ್ಟ್ರೇಲಿಯಾದ 11ನೇ ಆಟಗಾರ ಎನಿಸಿಕೊಂಡಿದ್ದಾರೆ

30 ರ ಹರೆಯದ ಸ್ಮಿತ್ ಅಡಿಲೇಡ್‌ನಲ್ಲಿ ಪಾಕಿಸ್ತಾನ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ ಮುಹಮ್ಮದ್ ಮೂಸಾ ಅವರ ಎಸೆತದಲ್ಲಿ  ಒಂಟಿ ರನ್  ತೆಗೆದುಕೊಂಡು ಮೈಲಿಗಲ್ಲು ತಲುಪಿದರು ಮತ್ತು   ಇಂಗ್ಲೆಂಡ್ ನ  ಹ್ಯಾಮಂಡ್ ಅವರ  73 ವರ್ಷಗಳ ಹಿಂದಿನ  ದಾಖಲೆಯನ್ನು ಮುರಿದರು.

ಭಾರತದ ವೀರೇಂದ್ರ ಸೆಹ್ವಾಗ್ 134 ಇನ್ನಿಂಗ್ಸ್‌ಗಳಲ್ಲಿ  ಈ ಸಾಧನೆ ಮಾಡಿದ ಮೂರನೇ ಆಟಗಾರ ಹಾಗೂ ಸಚಿನ್ ತೆಂಡುಲ್ಕರ್(136 ಇನಿಂಗ್ಸ್ ) ನಾಲ್ಕನೇ ಸ್ಥಾನದಲ್ಲಿದ್ದಾರೆ.

ಇನ್ನು ಸ್ಮಿತ್  ಅವರು ಗ್ರೆಗ್ ಚಾಪೆಲ್ (7,110) ದಾಖಲೆಯನ್ನು ಮುರಿಯುವ ಯೋಜನೆಯಲ್ಲಿದ್ದಾರೆ, ಆದರೆ ರಿಕಿ ಪಾಂಟಿಂಗ್ ಅವರನ್ನು ತಲುಪಲು ಇನ್ನು ಹಲವು ಟೆಸ್ಟ್ ಗಳನ್ನು ಆಡಬೇಕಾಗಿದೆ.  ಪಾಂಟಿಂಗ್  168 ಟೆಸ್ಟ್ ಪಂದ್ಯಗಳಲ್ಲಿ 13,378 ರನ್ ಗಳಿಸಿದ್ದಾರೆ.

ಆಸ್ಟ್ರೇಲಿಯ ಡಿಕ್ಲೇರ್ : ಪಾಕಿಸ್ತಾನ ವಿರುದ್ಧ ಆಸ್ಟ್ರೇಲಿಯ ತಂಡ  ಮೊದಲ ಇನಿಂಗ್ಸ್ ನಲ್ಲಿ 3 ವಿಕೆಟ್ ನಷ್ಟದಲ್ಲಿ 589 ರನ್ ಗಳಿಸಿ ಡಿಕ್ಲೇರ್ ಮಾಡಿಕೊಂಡಿದೆ. ಆರಂಭಿಕ ಬ್ಯಾಟ್ಸ್ ಮನ್  ಡೇವಿಡ್ ವಾರ್ನರ್ (ಔಟಾಗದೆ 335) ತ್ರಿಶತಕ ದಾಖಲಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News