ಮೊಗಲರು ಕಟ್ಟಿದ ಭಾರತ
ಕೇಂಬ್ರಿಜ್ ಇತಿಹಾಸಕಾರ ಆ್ಯಂಗಸ್ ಮ್ಯಾಡಿಸನ್‌ರ ಪ್ರಕಾರ ಕ್ರಿ.ಶ.1000ದ ವರೆಗೆ ಭಾರತ ಅತ್ಯಂತ ಬೃಹತ್ತಾದ ಅರ್ಥವ್ಯವಸ್ಥೆಯನ್ನು ಹೊಂದಿತ್ತಾದರೂ ಆರ್ಥಿಕ ಬೆಳವಣಿಗೆ ಅಭಿವೃದ್ಧಿ ಇರಲಿಲ್ಲ. ಮೊಗಲರ ಆಳ್ವಿಕೆಯಲ್ಲಿ ಕ್ರಿ.ಶ. 1000-1500ರ ಅವಧಿಯಲ್ಲಷ್ಟೆ ಭಾರತ ಆರ್ಥಿಕ ಪ್ರಗತಿಯನ್ನು ಕಾಣಲಾರಂಭಿಸಿತು. (ಆಗಿನ ಜಿಡಿಪಿ ಬೆಳವಣಿಗೆ ಯ ದರ ಶೇ.20.9 ಆಗಿತ್ತು) 18ನೇ ಶತಮಾನದಲ್ಲಿ ಭಾರತ ಚೀನಾವನ್ನು ಹಿಂದಿಕ್ಕಿ ವಿಶ್ವದಲ್ಲೇ ಅತ್ಯಂತ ಬೃಹತ್ತಾದ ಅರ್ಥವ್ಯವಸ್ಥೆಯಾಗಿ ಮೆರೆದಿತ್ತು.
ಐತಿಹಾಸಿಕ ಜ್ಞಾನದ ಕೊರತೆ ಯಿಂದಾಗಿ, ಬ್ರಿಟಿಷ್ ಸಾಮ್ರಾಜ್ಯ ಶಾಹಿಯನ್ನು ಗಮನದಲ್ಲಿಟ್ಟು ಕೊಂಡು ನಾವು ಭಾರತದ ಮೇಲೆ ನಡೆದ ಎಲ್ಲ ವಿದೇಶಿ ಆಳ್ವಿಕೆಗಳನ್ನು ವಸಾಹತು ಗೊಳಿಸುವಿಕೆ ಎಂದೇ ತಿಳಿಯುತ್ತೇವೆ. ಮೊಗಲರು ಭಾರತಕ್ಕೆ ಯುದ್ಧದಲ್ಲಿ ಗೆಲುವು ಸಾಧಿಸಿದವರಾಗಿ ಬಂದು ಭಾರತೀಯರಾಗಿ ಇಲ್ಲಿ ಉಳಿದರೇ ಹೊರತು ವಸಾಹತುಶಾಹಿಗಳಾಗಿ ಅಲ್ಲ. ಅವರು ಈ ದೇಶದೊಂದಿಗೆ ಎಷ್ಟೊಂದು ಬೆರೆತರೆಂದರೆ ಅವರು ಈ ದೇಶದವರೇ ಆಗಿ ಹೋದರು. ಅಕ್ಬರನಿಂದ ಆರಂಭಿಸಿ ಎಲ್ಲ ಮೊಗಲ್ ದೊರೆಗಳು ಭಾರತದಲ್ಲೇ ಜನಿಸಿದರು. ಅವರಲ್ಲಿ ಹಲವರ ತಾಯಂದಿರು ರಜಪೂತರಾಗಿದ್ದರು. ಬಾಬರ್ ಕ್ರಿ.ಶ 1526ರಲ್ಲಿ ಪಾಣಿಪತ್‌ನಲ್ಲಿ ಇಬ್ರಾಹೀಂ ಖಾನ್ ಲೋದಿಯ ಸೈನ್ಯವನ್ನು ಸೋಲಿಸಿ ಭಾರತದಲ್ಲಿ ಮೊಗಲ್ ಸಾಮ್ರಾಜ್ಯಕ್ಕೆ ತಳಪಾಯ ಹಾಕಿದ. ಬಹುತೇಕ ಮೊಗಲ್‌ದೊರೆಗಳು ಉನ್ನತ ಹುದ್ದೆಗಳಿಗೆ ರಜಪೂತರನ್ನು ನೇಮಕ ಮಾಡಿಕೊಂಡಿದ್ದರು. ಹೀಗೆ, 1857ರ (ಸಿಪಾಯಿ ದಂಗೆಯಲ್ಲಿ ), ಭಾತರದ ಪ್ರಥಮ ಸ್ವಾತಂತ್ರ ಸಂಗ್ರಾಮದಲ್ಲಿ ಭಾರತೀಯ ಸೈನಿಕರು ಬ್ರಿಟಿಷರ ವಿರುದ್ಧ ಹೋರಾಡಿ ಮೊಗಲ್ ಚಕ್ರವರ್ತಿ ಬಹದ್ದೂರ್ ಶಾ ಜಫರ್‌ನನ್ನು ಹಿಂದೂಸ್ಥಾನದ ಚಕ್ರರ್ವತಿಯಾಗಿ ಮಾಡಿದರು.
ಬಾಬರ್ (ಕ್ರಿ.ಶ.1526-1530)
ಹುಮಯೂನ್ (ಕ್ರಿ.ಶ.1530-1556)
ಜಹಾಂಗೀರ್ (ಕ್ರಿ.ಶ.1605-1627)
ಅಕ್ಬರ್ (ಕ್ರಿ.ಶ.1556-1605)
ಶಹಜಹಾನ್(ಕ್ರಿ.ಶ.1628-1658)
ಔರಂಗಜೇಬ್ (ಕ್ರಿ.ಶ. 1658-1707)
16ರಿಂದ 18ನೇ ಶತಮಾನದವರೆಗೆ ಮೊಗಲ್ ಸಾಮ್ರಾಜ್ಯವು ಅತ್ಯಂತ ಶ್ರೀಮಂತ ಹಾಗೂ ಬಲಿಷ್ಠ ಸಾಮ್ರಾಜ್ಯವಾಗಿದ್ದು ವಿಶ್ವದ ಮೂಲೆ ಮೂಲೆಗಳಿಂದ ಹಿಂದೂಸ್ಥಾನಕ್ಕೆ ಚಿನ್ನ ಮತ್ತು ಬೆಳ್ಳಿ ಭಾರೀ ಪ್ರಮಾಣದಲ್ಲಿ ಬರುತ್ತಿತ್ತೆಂದು ಫ್ರೆಂಚ್ ಪ್ರವಾಸಿ ಫ್ರಾಂಕ್ಯೊಸ್ ಬರ್ನಿಯರ್ ಬರೆದಿದ್ದಾನೆ.
ಶೇರ್ ಶಾ ಮತ್ತು ಮೊಗಲರ ರಸ್ತೆಗಳು, ನದಿಸಾರಿಗೆ, ಸಮುದ್ರ ಮಾರ್ಗಗಳು ಹಾಗೂ ಬಂದರುಗಳನ್ನು ಅಭಿವೃದ್ಧಿ ಪಡಿಸುವ ಮೂಲಕ, ಒಳಸಾರಿಗೆ ಟೋಲ್‌ಗಳನ್ನು ಹಾಗೂ ತೆರಿಗೆಗಳನ್ನು ರದ್ದುಪಡಿಸುವ ಮೂಲಕ ವಾಣಿಜ್ಯ ವ್ಯಾಪಾರಕ್ಕೆ ಪ್ರೋತ್ಸಾಹ ನೀಡಿ ದ್ದರು. ಪರಿಣಾಮವಾಗಿ, ಹತ್ತಿಬಟ್ಟೆ, ಸಾಂಬಾರ ಜಿನಸು ಗಳು, ಉಣ್ಣೆ ಮತ್ತು ರೇಶ್ಮೆಯಂತಹ ಸರಕುಗಳ ರಫ್ತು ವ್ಯಾಪಾರ ಬಿರುಸಿನಿಂದ ನಡೆಯುತ್ತಿತ್ತು. ಪಾರಂಪರಿಕ ವಾಗಿ ಈ ವ್ಯಾಪಾರ ಹಿಂದೂ ವ್ಯಾಪಾರಿಗಳ ಕೈಯಲ್ಲಿದ್ದು ಅವರೇ ಇದನ್ನು ನಿಯಂತ್ರಿಸುತ್ತಿದ್ದರು. ಈಸ್ಟ್ ಇಂಡಿಯಾ ಕಂಪೆನಿ ಮೊಗಲ್ ಸಾಮ್ರಾಜ್ಯದಿಂದ ವಾಣಿಜ್ಯ ರಿಯಾಯಿತಿ ಗಳನ್ನು ನೀಡುವಂತೆ ವಿನಂತಿಸಲು ವ್ಯಾಪಾರವೇ ಕಾರಣವಾಗಿತ್ತು. ಕ್ರಮೇಣ ಕಂಪೆನಿಯೇ ಇದನ್ನು ಸ್ವ ನಿಯಂತ್ರಣಕ್ಕೆ ತೆಗೆದುಕೊಂಡಿತು.
ಭಾರತದಿಂದ ಸಂಪತ್ತು ಸೂರೆಯಾಗಿ ಹೊರ ಹೋಗಲು ಆರಂಭವಾದದ್ದು ಈಸ್ಟ್ ಇಂಡಿಯಾ ಕಂಪೆನಿಯಿಂದಲೇ ಹೊರತು ದೆಹಲಿ ಸುಲ್ತಾನರು ಅಥವಾ ಮೊಗಲರಿಂದಲ್ಲ. ಭಾರತ ಬ್ರಿಟಿಷರ ವಸಾಹತು ಆಗುವ ಮೊದಲು ಅದರ ಆರ್ಥಿಕ ಸ್ಥಿತಿ ಹೇಗಿತ್ತು ಎಂದು ನೋಡೋಣ. ಕೇಂಬ್ರಿಜ್ ಇತಿಹಾಸಕಾರ ಆ್ಯಂಗಸ್ ಮ್ಯಾಡಿಸನ್‌ರ ಪ್ರಕಾರ ಕ್ರಿ.ಶ.1000ದ ವರೆಗೆ ಭಾರತ ಅತ್ಯಂತ ಬೃಹತ್ತಾದ ಅರ್ಥವ್ಯವಸ್ಥೆಯನ್ನು ಹೊಂದಿತ್ತಾದರೂ ಆರ್ಥಿಕ ಬೆಳವಣಿಗೆ ಅಭಿವೃದ್ಧಿ ಇರಲಿಲ್ಲ. ಮೊಗಲರ ಆಳ್ವಿಕೆಯಲ್ಲಿ ಕ್ರಿ.ಶ. 1000-1500ರ ಅವಧಿಯಲ್ಲಷ್ಟೆ ಭಾರತ ಆರ್ಥಿಕ ಪ್ರಗತಿಯನ್ನು ಕಾಣಲಾರಂಭಿಸಿತು. (ಆಗಿನ ಜಿಡಿಪಿ ಬೆಳವಣಿಗೆ ಯ ದರ ಶೇ.20.9 ಆಗಿತ್ತು) 18ನೇ ಶತಮಾನದಲ್ಲಿ ಭಾರತ ಚೀನಾವನ್ನು ಹಿಂದಿಕ್ಕಿ ವಿಶ್ವದಲ್ಲೇ ಅತ್ಯಂತ ಬೃಹತ್ತಾದ ಅರ್ಥವ್ಯವಸ್ಥೆಯಾಗಿ ಮೆರೆದಿತ್ತು.
ಮೊಗಲರು ಭಾರತದಿಂದ ಹಣ ವನ್ನು ಸಂಪತ್ತನ್ನು ಕೊಂಡೊಯ್ಯಲಿಲ್ಲವೆಂದು ಈಗ ಸಾಬೀತಾಗಿರುವು ದರಿಂದ, ಅವರು ಯಾವುದರಲ್ಲಿ ಹಣ ಹೂಡಿದ್ದರೆಂದು ಗಮನಿಸೋಣ. ಅವರು ಮೂಲ ಚೌಕಟ್ಟಿನಲ್ಲಿ, ವಾರ್ಷಿಕ ಕೋಟಿಗಟ್ಟಲೇ ರೂ. ಆದಾಯ ತರುವ ಪ್ರವಾಸಿ ಆಕರ್ಷಣೆಗಳಾಗಿರುವ ಶ್ರೇಷ್ಠ ಸ್ಮಾರಕಗಳ ನಿರ್ಮಾಣದಲ್ಲಿ ಹಣ ಹೂಡಿದರು. ಲೋಕಸಭೆಯಲ್ಲಿ ಸಂಸ್ಕೃತಿ ಸಚಿವಾಲಯ ಮಂಡಿಸಿದ ಅಂಕಿ- ಸಂಖ್ಯೆಗಳ ಪ್ರಕಾರ, ಶಹಜಹಾನ್ ನಿರ್ಮಿಸಿದ ತಾಜ್‌ಮಹಲ್ ಒಂದರಿಂದಲೇ ವಾರ್ಷಿಕ 21 ಕೋಟಿ ರೂಪಾಯಿ ಟಿಕೆಟ್ ಮಾರಾಟದ ಮೂಲಕ ಸಂಗ್ರಹವಾಗುತ್ತದೆ. ಕುತುಬ್ ಮಿನಾರ್ ಸಂಕೀರ್ಣ ಟಿಕೆಟ್ ಮಾರಾಟದ ಮೂಲಕ 10 ಕೋಟಿ ರೂ. ಆದಾಯ ತರುತ್ತಿದೆ; ಕೆಂಪುಕೋಟೆ ಮತ್ತು ಹುಮಾಯೂನನ ಗೋರಿಯಿಂದ ತಲಾ ಆರುಕೋಟಿ ರೂ. ಆದಾಯ ಬರುತ್ತದೆ.
ಮೊಗಲರು ಸ್ಥಳೀಯ ಕಲೆಗಳು ಮತ್ತು ಕುಶಲ ಕೈಗಾರಿಕೆಗಳಲ್ಲಿ ಬಂಡವಾಳ ಹೂಡಿ ಹಳೆಯ ಕೌಶಲ್ಯಗಳಿಗೆ ಪ್ರೋತ್ಸಾಹ ನೀಡಿ ಹೊಸ ಕೌಶಲ್ಯಗಳನ್ನು ಸೃಷ್ಟಿಸಿದರು. ಆ ಮೂಲಕ ಕರಕುಶಲ ವಸ್ತುಗಳಿಗೆ ಜಾಗತಿಕ ಮನ್ನಣೆ ದೊರಕಿಸಿಕೊಟ್ಟರು. ಮೊಗಲರ ಭಿತ್ತಿಚಿತ್ರಗಳು, ಆಭರಣಗಳು, ಕಲಾಕೃತಿಗಳು ಹಾಗೂ ಕರಕುಶಲ ವಸ್ತುಗಳು ಇಂದಿಗೂ ಹಲವಾರು ಪಾಶ್ಚಿಮಾತ್ಯ ವಸ್ತು ಸಂಗ್ರಹಾಲಯಗಳ ಅಮೂಲ್ಯ ಆಸ್ತಿಗಳಾಗಿವೆ. ಇವುಗಳಲ್ಲಿ ಕೆಲವು ಭಾರತದ ಮ್ಯೂಸಿಯಂಗಳಲ್ಲೂ ಕಾಣಿಸುತ್ತಿವೆ.
ಮೊಗಲರ ಕಾಲದಲ್ಲಿ ಕಲೆ ಮತ್ತು ಸಾಹಿತ್ಯ ವಿಫುಲವಾಗಿ ಸೃಷ್ಟಿಯಾಯಿತು. ದಾದಾ ಶಿಕೊವ್ ಪರ್ಶಿಯನ್ ಭಾಷೆಗೆ ಅನುವಾದಿಸಿದ ಉಪನಿಷತ್ತುಗಳು ಬರ್ನಿಯರ್‌ನಿಂದ ಫ್ರಾನ್ಸ್ ಗೆ ಒಯ್ಯಲ್ಪಟ್ಟು ಅಲ್ಲಿ ಅವುಗಳು ಆಂಕ್ವೆಟಿಲ್ ಡೆಪೆರ್ರನ್‌ನಿಂದ ಫ್ರೆಂಚ್ ಮತ್ತು ಲ್ಯಾಟಿನ್‌ಗೆ ಅನುವಾದಗೊಂಡವು. ಲ್ಯಾಟಿನ್ ಅನುವಾದ ಜರ್ಮನ್ ತತ್ವಜ್ಞಾನಿ ಶೋಪೆನ್‌ಹೊವರ್‌ಗೆ ತಲುಪಿ, ಅದು ಬಳಿಕ ವೇದೋತ್ತರ ಸಂಸ್ಕೃತ ಸಾಹಿತ್ಯದಲ್ಲಿ ಯುರೋಪಿನ ವಿದ್ವಾಂಸರು ಆಸಕ್ತಿತಾಳಲು ಕಾರಣವಾಯಿತು.
ಮೊಗಲ್ ಚಕ್ರವರ್ತಿಗಳಷ್ಟೇ ಕಟ್ಟಡಗಳನ್ನು ನಿರ್ಮಿಸಿದ್ದಲ್ಲ, ಹಿಂದೂ ಸಾಮಂತರು ಮತ್ತು ವ್ಯಾಪಾರಿಗಳು ಕೂಡ ದೇವಾಲಯಗಳನ್ನು ಹಾಗೂ ಧರ್ಮಶಾಲೆಗಳನ್ನು ಕಟ್ಟಿಸಿದರು. ಆದ್ದರಿಂದ ಕೋಮುವಾದಿ ನೆಲೆಯಲ್ಲಿ ಇತಿಹಾಸವನ್ನು ಸಾಮಾನ್ಯೀಕರಿಸುವುದು ಅಪಾಯಕಾರಿ.
ಮೊಗಲರ ಆಸ್ಥಾನ ಹಾಗೂ ಆಳ್ವಿಕೆಯ ಪ್ರಭಾವ ಭಾರತೀಯ ಸಮಾಜದ ಮೇಲೆ ಆದದ್ದರ ಪರಿಣಾಮವಾಗಿ ದೇಶದಲ್ಲಿ ಧಾರ್ಮಿಕ ಸಾಮರಸ್ಯಕ್ಕೆ ಒಂದು ಹೊಸ ಆಯಾಮ ದೊರಕಿತು.
ಆದ್ದರಿಂದ, ಮೊಗಲರು ಭಾರತವನ್ನು ಕೊಳ್ಳೆ ಹೊಡೆದರು ಎಂಬುದು ವಾಸ್ತವ ಸಂಗತಿಗಳ ತಿರುಚುವಿಕೆಯಲ್ಲದೆ, ಒಂದು ಸುಳ್ಳಲ್ಲದೆ ಬೇರೆ ಏನೂ ಅಲ್ಲ..
ಕೃಪೆ: dailyo.in