ಆದಾಯ ಅಸಮಾನತೆಯನ್ನು ಪ್ರತಿಧ್ವನಿಸುವ ನೊಬೆಲ್ ಪುರಸ್ಕೃತರ ಕೃತಿ

Update: 2019-12-01 06:01 GMT

   ವಿಜಯಕುಮಾರ್. ಎಸ್.ಅಂಟೀನ

ನೊಬೆಲ್ ಪ್ರಶಸ್ತಿಗೆ ಭಾಜನರಾದ ಅಭಿಜಿತ್ ಬ್ಯಾನರ್ಜಿ ಮತ್ತು ಎಸ್ತರ್ ಡಫ್ಲೊ ಅವರ ಕೃತಿ ‘ಗುಡ್ ಎಕನಾಮಿಕ್ಸ್ ಫಾರ್ ಹಾರ್ಡ್ ಟೈಮ್ಸ್’ನ ಚಿಕ್ಕ ವಿಮರ್ಶೆ

ನೊಬೆಲ್ ಪ್ರಶಸ್ತಿಗೆ ಭಾಜನರಾದ ಅಭಿಜಿತ್ ಬ್ಯಾನರ್ಜಿ ಮತ್ತು ಎಸ್ತರ್ ಡಫ್ಲೊ ಅವರ ಕೃತಿ ‘ಗುಡ್ ಎಕನಾಮಿಕ್ಸ್ ಫಾರ್ ಹಾರ್ಡ್ ಟೈಮ್ಸ್’ ಯನ್ನು ಆನ್‌ಲೈನ್ ಮೂಲಕ ತರಿಸಿಕೊಂಡು ಎರಡು ಸಲ ಓದಿದೆ. ಓದುವಿಕೆ ಎಂದೂ ಅಜೀರ್ಣವಾಗಬಾರದು. ಹಾಗಾದರೆ ಜೀರ್ಣವಾಗುವವರೆಗೆ ಓದಬೇಕು. ಅದೇನೋ ಭಾರತದ ಬಡತನವನ್ನು ವೈಭವೀಕರಿಸಿ ಬರೆದವರಿಗೆಲ್ಲ ಪುರಸ್ಕಾರಗಳು! ಅಭಿವೃದ್ಧಿ ಶೀಲತೆ ಬಗ್ಗೆ ಯಾರೂ ಚಕಾರ ಎತ್ತುವುದಿಲ್ಲ,positiveness, optimistic ಆಗಿ ಬರೆಯುವುದಿಲ್ಲ ಎಂಬುದು ವಿಷಾದಕರ ಸಂಗತಿ. ಎಂಐಟಿ ಅರ್ಥಶಾಸ್ತ್ರಜ್ಞರಾದ ಅಭಿಜಿತ್ ಬ್ಯಾನರ್ಜಿ ಮತ್ತು ಎಸ್ತರ್ ಡಫ್ಲೊ ಅವರು ಚೆನ್ನಾಗಿ ಬರೆಯುತ್ತಾರೆ ಮತ್ತು ಅವರು ವಿಷಯದ ಬಗ್ಗೆ ಸಂಪೂರ್ಣ ಅರಿತಿದ್ದಾರೆ ಎಂಬುದರಲ್ಲಿ ಎರಡು ಮಾತಿಲ್ಲ. ಮಾನವೀಯತೆ ಎದುರಿಸುತ್ತಿರುವ ಅತ್ಯಂತ ನಿರ್ಣಾಯಕ ಸಮಸ್ಯೆಗಳನ್ನು (ವಲಸೆ, ವ್ಯಾಪಾರ ಸಮರಗಳು, ಅಸಮಾನತೆಯ ಉಪದ್ರವ, ಹವಾಮಾನ ದುರಂತ) ಅರ್ಥಶಾಸ್ತ್ರವು ನಮಗೆ ಏನು ಹೇಳಲಾರದು ಎಂಬುದರ ಬಗ್ಗೆ ನಮ್ರತೆಯ ಸಂಯೋಜನೆಯೊಂದಿಗೆ ಮತ್ತು ನಮ್ಮ ಸೀಮಿತ ತಿಳುವಳಿಕೆಯಲ್ಲಿ ಅದರ ಕೊಡುಗೆಗಳ ಬಗ್ಗೆ ಹೆಮ್ಮೆಪಡುತ್ತದೆ. ಅವರ ಮಾತಿನಲ್ಲಿ ಹೇಳುವುದಾದರೆ, ಪುಸ್ತಕದ ಉದಾತ್ತ, ತುರ್ತು ಕಾರ್ಯವೆಂದರೆ ‘‘ಹೆಚ್ಚು ಮಾನವೀಯ ಜಗತ್ತನ್ನು ನಿರ್ಮಿಸುವುದನ್ನು ತಡೆಯುವ ಅರ್ಥಶಾಸ್ತ್ರದ ಯಾವುದೇ ಕಠಿಣವಾದ ಕಾನೂನುಗಳಿಲ್ಲ ಎಂದು ಒತ್ತಿಹೇಳುವುದು’’.

ಲೇಖಕರು ವಿಶ್ವದ ಬಡ ಜನರ ಸಂದರ್ಭಗಳನ್ನು ಅಧ್ಯಯನ ಮಾಡುವ ಮೂಲಕ ತಮ್ಮನ್ನು ತಾವು ಹೆಸರಿಸಿಕೊಂಡಿದ್ದಾರೆ. ಉನ್ನತ ಮಹತ್ವಾಕಾಂಕ್ಷೆಯು ಅನೇಕ ಅರ್ಥಶಾಸ್ತ್ರಜ್ಞರಲ್ಲಿ ಭವ್ಯತೆಯ ಅಪಾಯಕಾರಿ ಭ್ರಮೆಯನ್ನು ಹುಟ್ಟುಹಾಕಿದೆ, ಅವರ ಸಿದ್ಧಾಂತಗಳು ಅನೇಕ ಜನರಿಗೆ ದೊಡ್ಡ ಕಷ್ಟಗಳನ್ನು ಉಂಟುಮಾಡಿದೆ (ಉದಾಹರಣೆಗೆ, ಹಣಕಾಸು ಮಾರುಕಟ್ಟೆಯ ಸ್ವಯಂ-ಸರಿಪಡಿಸುವ ಸಾಮರ್ಥ್ಯಗಳ ಭವ್ಯ ಸಿದ್ಧಾಂತಗಳು), ಆದರೆ ಉತ್ತಮ ಅರ್ಥಶಾಸ್ತ್ರದಲ್ಲಿ ಅನೇಕ ಹಾದಿಗಳಿವೆ.

ಬ್ಯಾನರ್ಜಿ ಮತ್ತು ಡಫ್ಲೊ ಸ್ಯಾಂಡರ್ಸ್‌ನ ಉದ್ಯೋಗ ಖಾತರಿ ಯೋಜನೆಯನ್ನು ಪರಿಗಣಿಸುತ್ತಾರೆ, ಮತ್ತೊಂದೆಡೆ ಅದನ್ನು ತಿರಸ್ಕರಿಸುತ್ತಾರೆ, ಏಕೆಂದರೆ ರಾಜ್ಯವು ಅಂತಹ ದೊಡ್ಡ ಸಂಖ್ಯೆಯಲ್ಲಿ ಯೋಗ್ಯವಾದ ಉದ್ಯೋಗಗಳನ್ನು ಉತ್ಪಾದಿಸಬಹುದೆಂದು ಅವರು ನಂಬುವುದಿಲ್ಲ. ವಾರೆರ್‌ನ ಸಂಪತ್ತು ತೆರಿಗೆಯು ಸರಿಯಾದದ್ದಾದರೂ, ಅಮೆರಿಕದ ರಾಷ್ಟ್ರೀಯ ಆದಾಯದ ಶೇ.1ಕ್ಕಿಂತ ಹೆಚ್ಚು ಸಂಗ್ರಹಿಸಲು ಸಾಧ್ಯವಿಲ್ಲ ಎಂದು ಅವರು ಪ್ರಸ್ತಾಪಿಸುತ್ತಾರೆ, ಆದರೆ ಒಕಾಸಿಯೊ-ಕಾರ್ಟೆಜ್‌ನ ಶೇ.70ರಷ್ಟು ಅತೀ ಶ್ರೀಮಂತರಿಗೆ ಕನಿಷ್ಠ ತೆರಿಗೆ ದರವು ಲಾಭವನ್ನು ವಿತರಿಸದಂತೆ ಸಂಸ್ಥೆಗಳನ್ನು ಪ್ರೇರೇಪಿಸುತ್ತದೆ ಎಂದು ಹೇಳಿದ್ದಾರೆ. ಹವಾಮಾನ ಬದಲಾವಣೆಯ ಯಾವುದೇ ಗಂಭೀರ ನಿಭಾಯಿಸುವಿಕೆಯು ಒಟ್ಟು ಆದಾಯದ ಕನಿಷ್ಠ ಶೇ.5ರಷ್ಟು ಖರ್ಚು ಮಾಡಬೇಕಾಗುತ್ತದೆ. ಹಾಗಾದರೆ ಅಂತರ್‌ರಾಷ್ಟ್ರೀಯ ಹಸಿರು ಹೊಸ ಒಪ್ಪಂದ ಮತ್ತು ಮಾನವೀಯತೆಗೆ ಅಗತ್ಯವಿರುವ ಸಂಪತ್ತಿನ ಪುನರ್‌ವಿತರಣೆ (ಜಾಗತಿಕ ಮತ್ತು ಸ್ಥಳೀಯ)ಗೆ ಅಗತ್ಯವಾದ ಹಣ ಎಲ್ಲಿಂದ ಬರುತ್ತದೆ? ಎಂದು ಬ್ಯಾನರ್ಜಿ ಮತ್ತು ಡಫ್ಲೊ ಎಲ್ಲೂ ಹೇಳುವುದಿಲ್ಲ.

ತಿಳಿಯಲು ಹೊಸದೇನೂ ಇಲ್ಲ. ಉಲ್ಲೇಖಿಸಿದ ಉದಾಹರಣೆಗಳನ್ನು ದಶಕಗಳ ಹಿಂದೆ ಬರೆದ ಇದೇ ರೀತಿಯ ಪುಸ್ತಕಗಳನ್ನು ಓದಿದಂತೆ ಭಾಸವಾಗುತ್ತದೆ.

ದೊಡ್ಡ ಪ್ರಶ್ನೆಗಳನ್ನು ಕಂಡುಹಿಡಿಯಲು ಅರ್ಥಶಾಸ್ತ್ರವನ್ನು ಬಳಸಿಕೊಳ್ಳ ಬಹುದು. ಉದಾಹರಣೆಗೆ, ವಲಸೆ - ವೇತನವನ್ನು ನಿಗ್ರಹಿಸಲು ಒಲವು ತೋರುತ್ತದೆಯೇ ಎಂಬ ಪ್ರಶ್ನೆಗೆ , ಶ್ರೀಮಂತ ದೇಶಗಳಿಗೆ ಕಡಿಮೆ-ನುರಿತ ವಲಸೆ ಹೋಗುವುದರಿಂದ ಸ್ಥಳೀಯರಿಗೆ ವೇತನ ಮತ್ತು ಉದ್ಯೋಗವನ್ನು ಕಡಿಮೆ ಮಾಡು ತ್ತದೆ ಎಂಬುದಕ್ಕೆ ಯಾವುದೇ ಪುರಾವೆಗಳಿಲ್ಲ. ವಾಸ್ತವವಾಗಿ, ಇದು ಉತ್ತಮ ಕೆಲಸಕ್ಕಾಗಿ ಅವರನ್ನು ಮುಕ್ತಗೊಳಿಸುವ ಮೂಲಕ ಆ ಸ್ಥಳೀಯರಿಗೆ ಅವಕಾಶಗಳನ್ನು ತೆರೆಯುತ್ತದೆ. ಆದಾಯ ಅಸಮಾನತೆಯನ್ನು ಪರಿಹರಿಸುವುದು ನಮ್ಮ ಅತ್ಯಂತ ನಿರ್ಣಾಯಕ ಆರ್ಥಿಕ ಸವಾಲಾಗಿದೆ ಎಂಬುದು ಕೃತಿಯ ಬಹುದೊಡ್ಡ ಕೊಡುಗೆಯಾಗಿದೆ.

Writer - ವಿಜಯಕುಮಾರ್. ಎಸ್.ಅಂಟೀನ

contributor

Editor - ವಿಜಯಕುಮಾರ್. ಎಸ್.ಅಂಟೀನ

contributor

Similar News