ಫಾರೂಕ್ ಅಬ್ದುಲ್ಲಾ ಪ್ರಧಾನಿಗಿಂತ ಹೆಚ್ಚು ರಾಷ್ಟ್ರವಾದಿ: ಯಶವಂತ ಸಿನ್ಹಾ

Update: 2019-12-16 16:37 GMT

ಹೊಸದಿಲ್ಲಿ,ಡಿ.16: ನ್ಯಾಷನಲ್ ಕಾನ್ಫರೆನ್ಸ್ ಮುಖ್ಯಸ್ಥ ಫಾರೂಕ್ ಅಬ್ದುಲ್ಲಾ ಅವರ ಬಂಧನ ಅವಧಿಯನ್ನು ಇನ್ನೂ ಮೂರು ತಿಂಗಳ ಕಾಲ ವಿಸ್ತರಿಸಿರುವುದಕ್ಕಾಗಿ ಕೇಂದ್ರ ಸರಕಾರದ ವಿರುದ್ಧ ದಾಳಿ ನಡೆಸಿರುವ ಮಾಜಿ ಕೇಂದ್ರ ಸಚಿವ ಯಶವಂತಸಿನ್ಹಾ ಅವರು,ಅಬುಲ್ಲಾ ಪ್ರಧಾನಿ ನರೇಂದ್ರ ಮೋದಿ ಅವರಿಗಿಂತ ಹೆಚ್ಚು ರಾಷ್ಟ್ರವಾದಿಯಾಗಿದ್ದಾರೆ ಎಂದು ಹೇಳಿದ್ದಾರೆ.

ಅಬುಲ್ಲಾರ ಬಂಧನದ ಅವಧಿಯನ್ನು ಇನ್ನೂ ಮೂರು ತಿಂಗಳಿಗೆ ವಿಸ್ತರಿಸಿರುವುದು ವಿಷಾದನೀಯವಾಗಿದೆ. ಅವರು ಹೆಚ್ಚಿನ ಇತರರಿಗಿಂತ, ನಿರ್ದಿಷ್ಟವಾಗಿ, ನಮ್ಮ ದೇಶವನ್ನು ನಾಶಗೊಳಿಸಲು ಹೊರಟಿರುವ ಪ್ರಧಾನಿಗಿಂತ ಹೆಚ್ಚು ರಾಷ್ಟ್ರವಾದಿಯಾಗಿದ್ದಾರೆ ಎಂದು ಕಳೆದ ವರ್ಷ ಬಿಜೆಪಿಯನ್ನು ತೊರೆದಿದ್ದ ಸಿನ್ಹಾ ಟ್ವೀಟಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News