ಪೌರತ್ವ ವಿರೋಧಿ ಪ್ರತಿಭಟನೆ: ಮಾನವ ಸರಪಳಿ ರಚಿಸಿ ನಮಾಝ್‌ಗೆ ನೆರವು

Update: 2019-12-19 18:44 GMT

ಹೊಸದಿಲ್ಲಿ, ಡಿ.19: ಪೌರತ್ವ ಮಸೂದೆಯನ್ನು ವಿರೋಧಿಸಿ ಹೊಸದಿಲ್ಲಿಯಲ್ಲಿ ಗುರುವಾರ ನಡೆದ ಪ್ರತಿಭಟನೆ ಸಂದರ್ಭ ಮುಸ್ಲಿಮರು ನಮಾಝ್ ನಡೆಸಲು ಇತರ ಸಮುದಾಯದ ಜನತೆ ಮಾನವ ಸರಪಳಿ ರಚಿಸುವ ಮೂಲಕ ನೆರವಾದ ಘಟನೆ ನಡೆದಿದೆ. ಆಗ್ನೇಯ ದಿಲ್ಲಿಯ ಜಾಮಿಯ ಮಿಲ್ಲಿಯ ಇಸ್ಲಾಮಿಯಾ ವಿವಿಯ ಗೇಟ್‌ನ ಹೊರಗಡೆ ಗುರುವಾರ ನಡೆದ ಪ್ರತಿಭಟನೆ ಸಂದರ್ಭ ಈ ಘಟನೆ ನಡೆದಿದ್ದು ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಇತರ ಧರ್ಮದ ಜನರು ಒಬ್ಬರಿಗೊಬ್ಬರು ತಾಗಿ ನಿಂತು ವೃತ್ತಾಕಾರದಲ್ಲಿ ಮಾನವ ಸರಪಳಿ ರಚಿಸಿದರೆ ಮಧ್ಯದಲ್ಲಿ ಮುಸ್ಲಿಮರು ನಮಾಝ್ ನಡೆಸುವ ದೃಶ್ಯದ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಅಪ್‌ಲೋಡ್ ಆದ ಕೆಲವೇ ಘಂಟೆಗಳಲ್ಲಿ 60,000ಕ್ಕೂ ಹೆಚ್ಚು ಮಂದಿ ಅದನ್ನು ವೀಕ್ಷಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News