ಕರ್ನಾಟಕದಲ್ಲಿ 2020ರ ಆರಂಭದಲ್ಲೇ ಎನ್‍ಆರ್ ಸಿ: ವರದಿ

Update: 2019-12-21 11:45 GMT

ಬೆಂಗಳೂರು: ದೇಶಾದ್ಯಂತ ಪೌರತ್ವ ತಿದ್ದುಪಡಿ ಕಾಯ್ದೆ ಹಾಗೂ ಎನ್‍ಆರ್ ಸಿ ವಿರುದ್ಧದ ಕೂಗು ಮುಗಿಲು ಮುಟ್ಟಿರುವಂತೆಯೇ  ಕರ್ನಾಟಕದ ಬಿಜೆಪಿ ಸರಕಾರ ಆದಷ್ಟು ಬೇಗ ಎನ್‍ಆರ್ ಸಿ ಜಾರಿಗೊಳಿಸುವ ಉತ್ಸುಕತೆಯಲ್ಲಿದೆ. ಮುಂದಿನ ವರ್ಷದ ಮೊದಲ ತ್ರೈಮಾಸಿಕದಲ್ಲಿಯೇ ಎನ್‍ಆರ್ ಸಿ ಪ್ರಕ್ರಿಯೆ ಆರಂಭಿಸುವಂತೆ ಕೇಂದ್ರ ನಾಯಕತ್ವ ಕರ್ನಾಟಕ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪಗೆ ಸೂಚಿಸಿದೆ ಎಂದು ಮೂಲಗಳು ತಿಳಿಸಿವೆ ಎಂದು thequint.com ವರದಿ ಮಾಡಿದೆ.

ಬಿಜೆಪಿ ಆಡಳಿತದಲ್ಲಿರುವ ಪ್ರಮುಖ ರಾಜ್ಯಗಳಲ್ಲಿ ಒಂದಾಗಿರುವ ಕರ್ನಾಟಕದಲ್ಲಿ ಎನ್‍ಆರ್‍ ಸಿ ಮೊದಲು ಜಾರಿಗೊಳಿಸಿ ದೇಶಕ್ಕೆ ಮಾದರಿಯನ್ನಾಗಿಸುವ ಉದ್ದೇಶ ಬಿಜೆಪಿಗಿದೆಯೆನ್ನಲಾಗಿದೆ.

ಈ ವಿಚಾರ ಚರ್ಚಿಸಲು ಕಳೆದ ವಾರ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ ಎಲ್ ಸಂತೋಷ್ ಹಾಗೂ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಭೇಟಿಯಾಗಿದ್ದರೆಂದು ತಿಳಿದು ಬಂದಿದೆ.

ರಾಜ್ಯದಲ್ಲಿ ಎನ್‍ಆರ್‍ಸಿ ಜಾರಿಗೊಳಿಸಲಾಗುವುದು ಎಂದು ಅಕ್ಟೋಬರ್ ತಿಂಗಳಲ್ಲಿಯೇ ಗೃಹ ಸಚಿವ ಬಸವರಾಜ್ ಬೊಮ್ಮಾಯಿ  ಹೇಳಿದ್ದರು. ನಂತರ ನಿಲುವು ಬದಲಿಸಿದ ಸರಕಾರ ಎನ್‍ಆರ್‍ಸಿ ಬದಲು ರಾಜ್ಯದಲ್ಲಿ ದಾಖಲೆಗಳಿಲ್ಲದೆ ಅಕ್ರಮವಾಗಿ ವಾಸಿಸುತ್ತಿರುವ ವಲಸಿಗರ ಬಗ್ಗೆ ಮಾಹಿತಿ ಸಂಗ್ರಹಿಸುವುದು ಎಂದು ಹೇಳಿತ್ತು.

ಆದರೆ ಸಂಸತ್ತಿನಲ್ಲಿ ಪೌರತ್ವ ತಿದ್ದುಪಡಿ ಕಾಯಿದೆ ಜಾರಿಗೊಂಡ ನಂತರ ಸರಕಾರ ತನ್ನ ಹಿಂದಿನ ನಿಲುವಿಗೆ ಮರಳಿದೆ ಎನ್ನಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News