ಇಸ್ರೋ ವಿಜ್ಞಾನಿ ಸೋಮನಾಥ್ ಗೆ ಭಡ್ತಿ

Update: 2019-12-25 09:20 GMT

ಹೊಸದಿಲ್ಲಿ, ಡಿ.25: ಇಸ್ರೊ  ವಿಜ್ಞಾನಿ    ಮತ್ತು ತಿರುವನಂತಪುರದ ವಿಕ್ರಮ್ ಸಾರಾಭಾಯ್ ಬಾಹ್ಯಾಕಾಶ ಕೇಂದ್ರ (ವಿಎಸ್‌ಎಸ್‌ಸಿ), ನಿರ್ದೇಶಕ  ಎಸ್.ಸೋಮನಾಥ್ ಅವರಿಗೆ  ಭಾರತ ಸರಕಾರದ  ಕಾರ್ಯದರ್ಶಿ ಹುದ್ದೆಗೆ ಸಮಾನವಾದ ಅಪೆಕ್ಸ್ ಸ್ಕೇಲ್‌ಗೆ ಭಡ್ತಿ ನೀಡಲು ಕ್ಯಾಬಿನೆಟ್‌ನ ನೇಮಕಾತಿ ಸಮಿತಿ ಅನುಮೋದನೆ ನೀಡಿದೆ.

ಇಷ್ಟರ ತನಕ ಇಸ್ರೋ ಅಧ್ಯಕ್ಷರು ಭಾರತ ಸರಕಾರದ  ಕಾರ್ಯದರ್ಶಿ ಸ್ಥಾನಮಾನ ಹೊಂದಿದ್ದಾರೆ. ಇಸ್ರೋ ಅಧ್ಯಕ್ಷ ಕೆ.ಶಿವನ್  ಅಧಿಕಾರದ ಅವಧಿ 2021 ಜನವರಿ ತನಕ ಇರುತ್ತದೆ. ಕೆ.ಶಿವನ್  2018 ಜನವರಿಯಲ್ಲಿ ಇಸ್ರೋ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡಿದ್ದರು.

ಸೋಮನಾಥ್‌ರನ್ನು ಪೇ ಮೆಟ್ರಿಕ್ಸ್‌ನಲ್ಲಿನ ಲೆವೆಲ್ -16 ರಿಂದ (2,05,400-2,24,400 ರೂ.) ಅಪೆಕ್ಸ್ ಸ್ಕೇಲ್ ಲೆವಲ್  -17 ಕ್ಕೆ (ರೂ. 2,25,000 ರೂ.) ಏರಿಸಲಾಗಿದೆ.  ಪೇ ಮ್ಯಾಟ್ರಿಕ್ಸ್‌ನಲ್ಲಿ ವೇತನ ಏರಿಕೆ 2020ರಿಂದ ಜನವರಿ 1ರಿಂದ ಜಾರಿಗೆ ಬರಲಿದೆ.

ಸೋಮನಾಥ್ ಮುಂದಿನ ಇಸ್ರೊ ಮುಖ್ಯಸ್ಥರಾಗಿ ನೇಮಕಗೊಳ್ಳಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News