ಕಾರ್ಗಿಲ್‌ನಲ್ಲಿ 145 ದಿನಗಳ ಬಳಿಕ ಅಂತರ್ಜಾಲ ಸೇವೆ ಮರು ಆರಂಭ

Update: 2019-12-27 09:33 GMT

ಹೊಸದಿಲ್ಲಿ, ಡಿ.27: ಸುಮಾರು 145 ದಿನಗಳ ಬಳಿಕ ಜಮ್ಮು-ಕಾಶ್ಮೀರದ ಕಾರ್ಗಿಲ್‌ನಲ್ಲಿ ಅಂತರ್ಜಾಲ ಸೇವೆಯನ್ನು ಮತ್ತೆ ಆರಂಭಿಸಲಾಗಿದೆ ಎಂದು ಪಿಟಿಐ ವರದಿ ಮಾಡಿದೆ.

ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುವ 370ನೇ ವಿಧಿಯನ್ನು ರದ್ದುಪಡಿಸುವ ಮೊದಲು ಕೇಂದ್ರ ಸರಕಾರ ಮುನ್ನಚ್ಚರಿಕಾ ಕ್ರಮವಾಗಿ ಕಳೆದ ಆಗಸ್ಟ್ 5ರಂದು ಜಮ್ಮು-ಕಾಶ್ಮೀರದಲ್ಲಿ ಮೊಬೈಲ್, ಟೆಲಿಫೋನ್ ಸೇರಿದಂತೆ ಇಂಟರ್‌ನೆಟ್ ಸೇವೆಯನ್ನು ರದ್ದುಗೊಳಿಸಿತ್ತು.

ಅಷ್ಟೇ ಅಲ್ಲದೇ ಇಲ್ಲಿನ ಪ್ರಮುಖ ರಾಜಕೀಯ ನಾಯಕರನ್ನು ಕೂಡ ಗೃಹಬಂಧನದಲ್ಲಿಟ್ಟಿದೆ. ಕಾಶ್ಮೀರದ ಪರಿಸ್ಥಿತಿ ಸುಧಾರಿಸಿದ ಬಳಿಕವೂ ರಾಜಕೀಯ ನಾಯಕರ ಬಂಧನ ಹಾಗೂ ಇಂಟರ್‌ನೆಟ್ ಸೇವೆಯನ್ನು ಮರಳಿ ನೀಡಿರಲಿಲ್ಲ. ಹಂತಹಂತವಾಗಿ ವಿಧಿಸಿರುವ ನಿರ್ಬಂಧಗಳನ್ನು ಸಡಿಸಲಾಗುವುದು ಎಂದಿದ್ದ ಕೇಂದ್ರ ಸರಕಾರ ಮೊದಲಿಗೆ ಟೆಲಿಫೋನ್ ಸೇವೆಯನ್ನು ನೀಡಿತ್ತು. ಇದಾದ ಬಳಿಕ ಪೋಸ್ಟ್‌ಪೇಯ್ಡ್ ಸೇವೆಯನ್ನು ನೀಡಿತ್ತು. ಆದರೆ, ಇದುವರೆಗೆ ಪ್ರೀ-ಪೇಯ್ಡ್ ಹಾಗೂ ಅಂತರ್ಜಾಲ ಸೇವೆಯನ್ನು ಕಣಿವೆ ರಾಜ್ಯದ ಜನರಿಗೆ ನೀಡಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News