ಜೆಎನ್‌ಯು ಉಪಕುಲಪತಿ ವಜಾಕ್ಕೆ ವಿದ್ಯಾರ್ಥಿಗಳ ಯೂನಿಯನ್ ಆಗ್ರಹ

Update: 2020-01-06 18:37 GMT

ಹೊಸದಿಲ್ಲಿ, ಜ.6: ವಿವಿಯ ಉಪಕುಲಪತಿ ಜಗದೀಶ್ ಕುಮಾರ್‌ರನ್ನು ವಜಾಗೊಳಿಸಬೇಕೆಂದು ಜೆಎನ್‌ಯು ವಿದ್ಯಾರ್ಥಿಗಳ ಯೂನಿಯನ್ ಆಗ್ರಹಿಸಿದೆ. ವಿವಿಯಲ್ಲಿ ನಡೆದ ಹಿಂಸಾಚಾರಕ್ಕೆ ಜಗದೀಶ್ ಕುಮಾರ್ ಕಾರಣ ಎಂದು ವಿದ್ಯಾರ್ಥಿ ಯೂನಿಯನ್ ಆರೋಪಿಸಿದೆ.

ನಮ್ಮ ಹಲವು ಕೋರಿಕೆಗಳ ಬಗ್ಗೆ ಲಕ್ಷ್ಯವಹಿಸಲು ತೋರಿದ ವಿಳಂಬದ ಘೋರ ಪರಿಣಾಮವನ್ನು ರವಿವಾರದ ದಾಳಿ ಘಟನೆ ಮತ್ತೊಮ್ಮೆ ಎತ್ತಿತೋರಿಸಿದೆ. ಆದ್ದರಿಂದ ಉಪಕುಲಪತಿಯನ್ನು ವಜಾಗೊಳಿಸಬೇಕು ಎಂದು ಜೆಎನ್‌ಯು ಶಿಕ್ಷಕರ ಸಂಘ ರಾಷ್ಟ್ರಪತಿಗೆ ಪತ್ರ ಬರೆದು ಒತ್ತಾಯಿಸಿದೆ.

ದೇಶದ ಪ್ರಮುಖ ವಿವಿಯನ್ನು ವ್ಯವಸ್ಥಿತವಾಗಿ ದುರ್ಬಲಗೊಳಿಸಿ ನಾಶಗೊಳಿಸುವ ಪ್ರಕ್ರಿಯೆಯ ಪ್ರಮುಖ ವ್ಯಕ್ತಿಯಾಗಿರುವ ಉಪಕುಲಪತಿ , ರವಿವಾರ ವಿವಿಯಲ್ಲಿ ನಡೆದ ದಾಂಧಲೆಗೆ ಅವಕಾಶ ನೀಡಿದ್ದಾರೆ. ಅವರನ್ನು ತಕ್ಷಣ ವಜಾಗೊಳಿಸಬೇಕು ಎಂದು ಸಿಪಿಐ(ಎಂ) ಆಗ್ರಹಿಸಿದೆ. ಜಗದೀಶ್ ಕುಮಾರ್ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕೆಂದು ಆಲಿಗಢ ಮುಸ್ಲಿಂ ವಿವಿ ವಿದ್ಯಾರ್ಥಿಗಳ ಸಮನ್ವಯ ಸಮಿತಿ ಒತ್ತಾಯಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News