ಬೆಂಗಳೂರನ್ನು ಸುಂದರಗೊಳಿಸಿದ ಮಿರ್ಝಾ ಇಸ್ಮಾಯೀಲ್

Update: 2020-01-12 05:59 GMT

1926 ಮತ್ತು 1948ರ ನಡುವೆ ಮೈಸೂರು, ಬೆಂಗಳೂರು ಭಾರತದ ಅತ್ಯಂತ ಬುದ್ಧಿವಂತ ವ್ಯಕ್ತಿಗಳಲ್ಲೊಬ್ಬರಾದ ಮಿರ್ಝಾ ಇಸ್ಮಾಯೀಲ್‌ರವರ ಗಮನ ಸೆಳೆದ ನಗರಗಳಾಗಿದ್ದವು. 1833ರಲ್ಲಿ ಪರ್ಷಿಯನ್‌ನಲ್ಲಿ ಜನಿಸಿದ ದಿವಾನ್ ಮಿರ್ಝಾ ಇಸ್ಮಾಯೀಲ್ ಬೆಂಗಳೂರಿನಲ್ಲಿ ಬೆಳೆದು ತನ್ನ ಅಂತಿಮ ವರ್ಷಗಳಲ್ಲಿ ಮತ್ತೆ ಬೆಂಗಳೂರಿಗೆ ಮರಳಿ 1959ರಲ್ಲಿ ನಿಧನರಾದರು. 43ರ ಹರೆಯದಲ್ಲಿ ಮಿರ್ಝಾ ಇಸ್ಮಾಯೀಲ್ (1926 ರಿಂದ 1941ರವರೆಗೆ) ಮೈಸೂರಿನ ಮಹಾರಾಜರಿಗೆ ದಿವಾನರಾಗಿದ್ದರು. ಬಳಿಕ ಹೈದರಾಬಾದಿನ ನಿಜಾಮ ಮತ್ತು ಜೈಪುರದ ಮಹಾರಾಜ ಇವರ ಸೇವೆಯನ್ನು ಬಳಸಿಕೊಂಡರು.

ಜೈಪುರದಲ್ಲಿ ಇವರು ಸಲ್ಲಿಸಿದ ಸೇವೆಗಾಗಿ ಅಲ್ಲಿಯ ಮಹಾರಾಜ ಜೈಪುರದ ರಸ್ತೆಯೊಂದಕ್ಕೆ ಇವರ ಹೆಸರನ್ನು ಇಡುವ ಮೂಲಕ ಇವರನ್ನು ಗೌರವಿಸಿದ್ದರು.

ಭಾರತದ ಕೆಲವು ರಾಜಕುಮಾರರು ತಮ್ಮ ರಾಜ್ಯದ ನಗರ ಹಾಗೂ ಗ್ರಾಮೀಣ ಪ್ರದೇಶಗಳನ್ನು ಅಭಿವೃದ್ಧಿಪಡಿಸಿ ಸುಂದರ ಗೊಳಿಸಲು ಪ್ರಯತ್ನ ನಡೆಸಿದ್ದರು. ಆದರೆ ಮಿರ್ಝಾ ಇಸ್ಮಾಯೀಲ್‌ರಿಗೆ ಅದು ಏನೇನೂ ಸಾಲದು ಎನಿಸಿತು (1954ರಲ್ಲಿ ಪ್ರಕಟವಾದ) ‘ಮೈ ಪಬ್ಲಿಕ್ ಲೈಫ್: ದಿ ಕಲೆಕ್ಷೆನ್ಸ್ ಆ್ಯಂಡ್ ರಿಪ್ಲೆಕ್ಷನ್ ಎಂಬ ಪುಸ್ತಕದಲ್ಲಿ ಅವರು ಹೀಗೆ ಬರೆದಿದ್ದಾರೆ. ‘‘ಭಾರತದಲ್ಲಿ ಆಡಳಿತ ನಡೆಸುವವರು ತಮ್ಮ ನಗರಗಳ ಹಾಗೂ ಪಟ್ಟಣಗಳ ಬೆಳವಣಿಗೆಯಲ್ಲಿ ಸಾಕಷ್ಟು ಆಸಕ್ತಿ ವಹಿಸಿಲ್ಲ, ಹಳ್ಳಿಗಳ ಪಾಡಂತೂ ಹೇತೀರದು. ಜನ ನಿಭಿಡತೆ ಇರುವ ಲಂಡನ್ ಅಥವಾ ಪ್ಯಾರಿಸ್‌ನಲ್ಲಿ ಇರುವ ವಿಸ್ತಾರವಾದ ತೆರೆದ ಬಯಲುಗಳನ್ನೇ ನೋಡಿ. ಭಾರತದ ಎಷ್ಟು ನಗರಗಳಲ್ಲಿ ಅಂತಹ ಎಷ್ಟು ಉದ್ಯಾನಗಳಿವೆ ಹೇಳಿ? ನಮ್ಮ ಪಟ್ಟಣಗಳ ಹಾಗೂ ನಗರಗಳ ಸುಂದರೀಕರಣ ನಿರಂತರ ಮೈಸೂರು, ಜೈಪುರ ಮತ್ತು ಹೈದರಾಬಾದ್‌ನಲ್ಲಿ ಸಾಧ್ಯವಿರುವಲ್ಲೆಲ್ಲ ನಾನು ಪ್ರದೇಶಗಳನ್ನು ಸುಂದರಗೊಳಿಸಲು ಪ್ರಯತ್ನಿಸಿದ್ದೇನೆ.

1912-1919ರ ನಡುವೆ ಮೈಸೂರಿನ ದಿವಾನರಾಗಿದ್ದ ಎಂ. ವಿಶ್ವೇಶ್ವರಯ್ಯನವರು ಬೆಂಗಳೂರನ್ನು ಒಂದು ಔದ್ಯಮಿಕ ನಗರವನ್ನಾಗಿ ಮಾಡಿದರೆ. ಮಿರ್ಝಾ ಇಸ್ಮಾಯೀಲ್ ಲಾಲ್‌ಬಾಗ್ ಮತ್ತು ನಗರದ ಬೀದಿಗಳಿಗೆ ಗೊಂಚಲು ದೀಪ ಕಂಬಗಳನ್ನು ಹಾಕಿಸುವ ಮೂಲಕ, ಬೆಂಗಳೂರನ್ನು ಒಂದು ಸುಂದರ ನಗರವನ್ನಾಗಿ ಮಾಡಿದರು. ಅವರ ಬಗ್ಗೆ ಒಂದು ಐತಿಹ್ಯ ಇದೆ. ಎಲ್ಲವೂ ಸರಿಯಾಗಿ ಇದೆಯೇ ಉತ್ತಮ ಸ್ಥಿತಿಯಲ್ಲಿದೆಯೇ ಎಂದು ಅವರು ಕನಿಷ್ಠ ಸುಮ್ಮನೆ ನೋಡುತ್ತಿರಲಿಲ್ಲ; ನೆಲಹಾಸನ್ನು ಎತ್ತಿ ಆದರೆ ಅಡಿ ಧೂಲು ಇದೆಯೇ? ಎಂದು ಪರೀಕ್ಷಿಸುತ್ತಿದ್ದರು.

ಅವರು ಜೈಪುರದಲ್ಲಿದ್ದ ಚಿಕ್ಕ ಅವಧಿಯಲ್ಲಿ ಅಲ್ಲಿ ಒಂದು ನಾಗರಿಕ ಕಾಂತ್ರಿಯನ್ನೇ ಉಂಡುಮಾಡಿದ್ದರು. 1942ರಲ್ಲಿ ನೂಯಾರ್ಕ್ ಲೈಮ್ಸ್‌ನಲ್ಲಿ ಪ್ರಕಟವಾದ ಒಂದು ಲೇಖನದಲ್ಲಿ ಹೀಗೆ ಬರೆಯಲಾಗಿತ್ತು ಜೈಪುರ ನಿರ್ಲಕ್ಷಕ್ಕೆ ಉಪೇಕ್ಷೆಗೆ ಒಳಗಾದ ಒಂದು ನಗರವಾಗಿತ್ತು ಆದರೆ ಮಿರ್ಝಾ ಇಸ್ಮಾಯೀಲ್‌ರವರ ಎರಡು ವರ್ಷಗಳ ಸೇವೆಯ ಬಳಿಕ, ಅದು ರಾಬಟ್‌ಮೋಸಸ್‌ನ ಅವಧಿಯ ನ್ಯೂಯಾರ್ಕ್‌ನ ನಗರಕ್ಕಿಂತ ಹೆಚ್ಚು ಬದಲಾಗಿತ್ತು. ರಾಬರ್ಟ್ ಮೋಸಸ್ ಮಿರ್ಝಾರವರ ಸಮಕಾಲೀನನಾಗಿದ್ದ ಮತ್ತು ಇವನನ್ನು 1960ರ ದಶಕದಲ್ಲಿ ಪ್ಯಾರಿಸ್ ನಗರವನ್ನು ಸುಂದರ ಗೊಳಿಸಿದ ಬ್ಯಾರೊನ್ ಪೌಸ್‌ಮನ್‌ಗೆ ಹೋಲಿಸಲಾಗಿತ್ತು. ‘‘ಪುನರ್‌ನಿರ್ಮಾಣ, ಹೊಸ ಉದಾನಗಳು, ಹೊಸ ಕಟ್ಟಡಗಳು, ಸಮೀಕರಣ ಮತ್ತು ಎಲ್ಲ ರೀತಿಯ ಅಭಿವೃದ್ಧಿ ಕಾರ್ಯಗಳು ಈ ಭಾರತದಲ್ಲಿ ಭಾರೀ ವೇಗದಲ್ಲಿ ನಡೆಯುತ್ತಿದೆ’’ ಎಂದು ಇಸ್ಮಾಯೀಲ್ ತನ್ನ ಪುಸ್ತಕದಲ್ಲಿ ಬರೆದಿದ್ದರು ದುಂಬಿಗಳಷ್ಟು ಬಿಜಿಯಾಗಿರುವ ಕೆಲಸಗಾರರಿಂದ ನಗರವು ತುಂಬಿಹೋಗಿದೆ.. ಹಣ ಇರುವುದು ಕೂಡಿಇಡಲಿಕ್ಕಲ್ಲ, ಬದಲಾಗಿ ಪುನರ್ ಉತ್ಪಾದಕವಾಗಿ ಖರ್ಚುಮಾಡುವುದಕ್ಕೆ. ನಾವು ಜೈಪುರದಲ್ಲಿ ಹೊಸ ಕಚೇರಿಗಳನ್ನು, ಹೊಸ ಬಂಗಲೆಗಳನ್ನು ನಿರ್ಮಿಸಿ, ಇತರ ಹಲವು ಸುಧಾರಣೆಗಳನ್ನು ಮಾಡದೇ ಇರುತ್ತಿದ್ದಲ್ಲಿ ಅದು ರಾಜಸ್ಥಾನದ ರಾಜಧಾನಿಯಾಗಿ ಆಯ್ಕೆಯಾಗುತ್ತಿರಲಿಲ್ಲ’’ ಎಂದೂ ಅವರು ಬರೆದಿದ್ದರು.

 ಪ್ರಸಿದ್ಧ ಛಾಯಾಚಿತ್ರಗ್ರಾಹಕ ಸಿಸಿಲ್ ಬೀಟನ್ ಜೈಪುರವನ್ನು ನೋಡಿದ ಬಳಿಕ ನಗರವನ್ನು ಹೊಗಳುತ್ತ ಇಸ್ಮಾಯೀಲ್‌ರವರ ಬಗ್ಗೆ ಬಹಳ ಮೆಚ್ಚುಗೆಯ ಮಾತುಗಳನ್ನು ಬರೆದಿದ್ದ: ‘‘ ವಿಶ್ವದ ಬೇರೆ ಎಲ್ಲಿಯೂ ಕೂಡ ಅಷ್ಟೊಂದು ನಾಜೂಕಿನ ಹಾಗೂ ಮೋಹಕವಾದ ಪರಿಣಾಮವನ್ನುಂಟು ಮಾಡಲು ಬಣ್ಣಗಳನ್ನು ಬಳಿಸಿರುವುದನ್ನು ನಾನು ನೋಡಿಲ್ಲ. ಸರ್ ಮಿರ್ಝಾ ಕಾರ್ಯುಗೇಟೆಡ್ ಕಬ್ಬಿಣದ ಶೀಟುಗಳು ಹಾಗೂ ಒರಟಾದ ಕೊಳಕಾದ ಏನನ್ನು ಕಂಡರೂ ಸಹಿಸಲಾರರು. ಅವರು ಸಣ್ಣ ಅವಧಿಯಲ್ಲಿ ಸಾಧಿಸಿರುವ ನಗರದ ರೂಪಾಂತರ ಅದ್ಭುತ; ಅಲ್ಲದೆ ಅವರ ಯೋಜನೆಗಳು ಅವರ ಸ್ಫೂರ್ತಿಯಷ್ಟೇ ಅಸಂಖ್ಯ.’’

ಆದರೆ ಅವರು ವಾಸ್ತವದಲ್ಲಿ ಏನು ನಡೆಯುತ್ತಿದೆ ಎಂಬುದನ್ನು ಗಮನಿಸದೆ ಇರಲಿಲ್ಲ. ಅವರು ಹೀಗೆ ಬರೆದಿದ್ದರು: ‘‘ ಪೂರ್ವ ಜಗತ್ತಿನಲ್ಲಿ ಸರಕಾರಗಳಿಗೆ ತಮ್ಮ ಕೈಕೆಳಗೆ ಸೇವೆ ಸಲ್ಲಿಸುವವರಲ್ಲಿ ವಿಶ್ವಾಸವಿಲ್ಲ, ಗೌರವವಿಲ್ಲ. ನಮ್ಮ ದೇಶಗಳು ಬಹಳ ಸುಲಭವಾಗಿ ವೃತ್ತಿಪರ ರಾಜಕಾರಣಿಗಳ ಸ್ವರ್ಗವಾಗಿ ಬಿಡುತ್ತವೆ.’’

Writer - ನಾರಾಯಣ್ ಗುಪ್ತ

contributor

Editor - ನಾರಾಯಣ್ ಗುಪ್ತ

contributor

Similar News