ಬಳಕೆದಾರರಿಗಾಗಿ 'ಡಾರ್ಕ್ ಮೋಡ್' ಫೀಚರ್ ಹೊರತಂದ 'ವಾಟ್ಸ್ಯಾಪ್'
ಪ್ರಸಿದ್ಧ ಸಾಮಾಜಿಕ ಜಾಲತಾಣ ವಾಟ್ಸ್ಯಾಪ್ ತನ್ನ ಬಳಕೆದಾರರಿಗಾಗಿ 'ಡಾರ್ಕ್ ಮೋಡ್ ಫೀಚರ್' ಅನ್ನು ಐಒಎಸ್ ಮತ್ತು ಆ್ಯಂಡ್ರಾಯ್ಡ್ ಮೊಬೈಲ್ ಗಳಲ್ಲಿ ಲಾಂಚ್ ಮಾಡಿದೆ. ಒಂದು ವರ್ಷದಿಂದ ಫೇಸ್ ಬುಕ್ ಒಡೆತನದ ವಾಟ್ಸ್ಯಾಪ್ 'ಡಾರ್ಕ್ ಮೋಡ್' ಮೇಲೆ ಕೆಲಸ ಮಾಡುತ್ತಿದ್ದು, ಬೆಟಾ ವರ್ಷನ್ ಅನ್ನು ಈ ಹಿಂದೆ ಬಿಡುಗಡೆ ಮಾಡಿತ್ತು.
ಇದೀಗ ತನ್ನ 2 ಬಿಲಿಯನ್ ಬಳಕೆದಾರರಿಗಾಗಿ ಅಧಿಕೃತವಾಗಿ ಈ ಸೇವೆಯನ್ನು ವಾಟ್ಸ್ಯಾಪ್ ನೀಡಲಿದೆ.
"ಕಡಿಮೆ ಬೆಳಕಿನಲ್ಲಿ ನೀವು ಆ್ಯಪ್ ಬಳಕೆ ಮಾಡುವಂತೆ ಈ ಫೀಚರ್ ಇದೆ. ಇದರಿಂದಾಗಿ ನಿಮ್ಮ ಕಣ್ಣುಗಳಿಗೂ ಆಯಾಸವಾಗುವುದಿಲ್ಲ" ಎಂದು ಕಂಪೆನಿಯು ತಿಳಿಸಿದೆ.
ಇದರ ಬಳಕೆ ಹೇಗೆ?
ಮೊದಲಿಗೆ ಆ್ಯಪ್ ಸ್ಟೋರ್ ಅಥವಾ ಗೂಗಲ್ ಪ್ಲೇ ಸ್ಟೋರ್ ಮೂಲಕ ವಾಟ್ಸ್ಯಾಪನ್ನು ಅಪ್ ಡೇಟ್ ಮಾಡಿ. ನಂತರ ವಾಟ್ಸ್ಯಾಪ್ ಓಪನ್ ಮಾಡಿ ಸೆಟ್ಟಿಂಗ್ ಗೆ ಹೋಗಿ , ಡಾರ್ಕ್ ಥೀಮ್ ಎನೇಬಲ್ ಮಾಡಿ.
ಸೆಟ್ಟಿಂಗ್ ಆಪ್ಶನ್ ಗೆ ಕ್ಲಿಕ್ ಮಾಡಿ, ಚಾಟ್ಸ್ ಗೆ ಟ್ಯಾಪ್ ಮಾಡಿ, ಅದರಲ್ಲಿ ಡಿಸ್ ಪ್ಲೇಗೆ ಟ್ಯಾಪ್ ಮಾಡಿ ನಂತರ ನಿಮಗೆ ಥೀಮ್ ನೋಡಲು ಸಾಧ್ಯವಾಗುತ್ತದೆ. ಇದರಲ್ಲಿ ಡಾರ್ಕ್ ಥೀಮ್ ಆಯ್ಕೆ ಮಾಡಿ ಅದನ್ನು ಎನೇಬಲ್ ಮಾಡಿ.