ರಂಜನ್ ಗೊಗೊಯಿ: ನ್ಯಾಯಾಂಗದ ಗೌರವದ ಮೇಲಿನ ಮಾರಕ ದಾಳಿ

Update: 2020-03-19 05:44 GMT

ನಮ್ಮೊಳಗಿನ ಅತ್ಯಂತ ಸಿನಿಕರೂ ಸುಪ್ರೀಂ ಕೋರ್ಟ್ ಬಗ್ಗೆ ಅಚಲ ವಿಶ್ವಾಸ ಹೊಂದಿರುತ್ತಾರೆ. ಆದರೆ ಗೊಗೊಯಿ ಅಂತಹ ಪವಿತ್ರ ಸಂಸ್ಥೆಯನ್ನೇ ಪಾರದರ್ಶಕತೆಯ ಶವಪೆಟ್ಟಿಗೆ ಮಾಡಿಬಿಟ್ಟರು. ಅವರು ಕೇವಲ ನ್ಯಾಯ ನಿರಾಕರಿಸಲಿಲ್ಲ. ಅದನ್ನು ಬಂದ್ ಮಾಡಿದ ಲಕೋಟೆಯಲ್ಲಿಟ್ಟು ನಿರಾಕರಿಸಿಬಿಟ್ಟರು. ಎನ್‌ಆರ್‌ಸಿ, ರಫೇಲ್, ಸಿಬಿಐ ನಿರ್ದೇಶಕರ ವಜಾ-ಈ ಎಲ್ಲ ಪ್ರಮುಖ ಪ್ರಕರಣಗಳ ತೀರ್ಪಿನಲ್ಲಿ ಏನು ಬಂದಿದೆ ಎಂಬುದಕ್ಕಿಂತ ಹೆಚ್ಚಾಗಿ ಆ ತೀರ್ಪುಗಳು ಬಚ್ಚಿಟ್ಟ ಸತ್ಯಗಳಿಗಾಗಿ ಸದಾ ನೆನಪಿನಲ್ಲಿ ಉಳಿಯುತ್ತವೆ.

 ಇದು ಕಪ್ಪುಬಿಳುಪಿನಷ್ಟೇ ಸ್ಪಷ್ಟವಾಗಿದೆ. ‘‘ತನಗಿರುವ ದೇಶದ ಸಂವಿಧಾನದತ್ತ ಅಧಿಕಾರದಲ್ಲಿ ರಾಷ್ಟ್ರಪತಿಗಳು ಶ್ರೀ ರಂಜನ್ ಗೊಗೊಯಿ ಅವರನ್ನು ರಾಜ್ಯಸಭೆಗೆ ನಾಮಕರಣ ಮಾಡಿದ್ದಾರೆ.’’

ಭಾರತದ ಮಾಜಿ ಮುಖ್ಯ ನ್ಯಾಯಾಧೀಶರೊಬ್ಬರು ತನ್ನ ಹುದ್ದೆಯಿಂದ ನಿವೃತ್ತರಾಗಿ ನಾಲ್ಕು ತಿಂಗಳಲ್ಲೇ ಸರಕಾರದಿಂದ ರಾಜ್ಯಸಭೆಗೆ ನಾಮಕರಣಗೊಂಡಿದ್ದಾರೆ. ನ್ಯಾಯಾಂಗದ ಗೌರವಕ್ಕೆ ಸಂಬಂಧಿಸಿದ ಪ್ರತಿಯೊಂದು ಮೌಲ್ಯಗಳ ಮೇಲೆ ಇತ್ತೀಚಿನ ವರ್ಷಗಳಲ್ಲೇ ನಡೆದ ಅತ್ಯಂತ ಮಾರಕ ದಾಳಿಯಿದು.

ಆದರೆ ಈ ಮಾಜಿ ಮುಖ್ಯ ನ್ಯಾಯಾಧೀಶರು ಇಂತಹ ಹೊಸ ಸಂ್ರದಾಯ ಸ್ಥಾಪಿಸಿದ್ದು ಇದೇ ಮೊದಲಲ್ಲ.

ನಿಮ್ಮಲ್ಲಿ ಹೆಚ್ಚಿನವರಿಗೆ ತಿಳಿದಿರದ ಮಾಹಿತಿಯೊಂದು ಇಲ್ಲಿದೆ. ಗೊಗೊಯಿ ಅವರು ನಿವೃತ್ತರಾಗುವ ಎರಡು ವಾರಗಳ ಮೊದಲು ಗುವಾಹಟಿ ಹೈಕೋರ್ಟ್‌ನ ಶಿಷ್ಟಾಚಾರ ಸಮಿತಿ ಅಕ್ಟೋಬರ್ 30, 2019ರಂದು ಸಭೆ ಸೇರಿತ್ತು. ಅದರ ಬೆನ್ನಿಗೆ ಹೈಕೋರ್ಟ್‌ನ 18 ನ್ಯಾಯಾಧೀಶರು ಸೇರಿದ ಸಭೆ ನಡೆಯಿತು. ಶಿಷ್ಟಾಚಾರ ಸಮಿತಿ ತೆಗೆದುಕೊಂಡ ನಿರ್ಧಾರಕ್ಕೆ ಬಳಿಕ ಹೈಕೋರ್ಟ್ ಒಪ್ಪಿಗೆ ನೀಡಿತು. ಆ ನಿರ್ಧಾರದ ಪ್ರಕಾರ ಗೊಗೊಯಿ ಹಾಗೂ ಅವರ ಪತ್ನಿಗೆ ಈವರೆಗೆ ಕಂಡು ಕೇಳಿರ ಈ ಸೌಲಭ್ಯಗಳನ್ನು ನೀಡಲಾಯಿತು.

 1. ನ್ಯಾ. ಗೊಗೊಯಿ ಹಾಗೂ ಅವರ ಪತ್ನಿಯವರ ದಿನನಿತ್ಯದ ಅಗತ್ಯಗಳನ್ನು ನೋಡಿಕೊಳ್ಳಲು ಒಬ್ಬ ಮೀಸಲು ಆಪ್ತ ಕಾರ್ಯದರ್ಶಿ, ಈ ಆಪ್ತ ಕಾರ್ಯದರ್ಶಿ ತನಗೆ ನೀಡಲಾಗುವ ಇತರ ಜವಾಬ್ದಾರಿಗಳ ಜೊತೆ ನ್ಯಾ. ಗೊಗೊಯಿ ಅವರ ಶಿಷ್ಟಾಚಾರ ಸಂಬಂಧಿತ ಅಗತ್ಯಗಳಿಗೆ ಹೈಕೋರ್ಟ್ ರಿಜಿಸ್ಟ್ರಿ ೊತೆ ಸಂಪರ್ಕ ಇಟ್ಟುಕೊಳ್ಳಬೇಕು.

2. ನ್ಯಾ. ಗೊಗೊಯಿ ಅವರ ಮನೆಕೆಲಸಕ್ಕೆ ಹೈಕೋರ್ಟ್‌ನಿಂದ ಒಬ್ಬ ನಾಲ್ಕನೇ ದರ್ಜೆ ಜವಾನ ಹಾಗೂ ಒಬ್ಬ ಬಂ ಗಲೆ ಜವಾನನನ್ನು ಒದಗಿಸಬೇಕು.

3. ನ್ಯಾ. ಗೊಗೊಯಿ ಅವರಿಗೆ ಅಗತ್ಯ ಬಿದ್ದಾಗಲೆಲ್ಲಾ ಹೈಕೋರ್ಟ್‌ನ ಉತ್ತಮ ಸ್ಥಿತಿಯಲ್ಲಿರುವ ವಾಹನವನ್ನು ಇಂಧನ ಹಾೂ ಚಾಲಕನ ಸಹಿತ ಒದಗಿಸಬೇಕು.

ಗೊಗೊಯಿ ಅವರ ಆಪ್ತ ಕಾರ್ಯದರ್ಶಿಗೆ ಬೇಕಾದಾಗ ಸಂಪರ್ಕಿಸಲೆಂದೇ ಗುವಾಹಟಿ ಹೈಕೋರ್ಟ್‌ನ ನೋಡಲ್ ಅಧಿಕಾರಿಯೊಬ್ಬರನ್ನು ನೇಮಿಸಲಾಯಿತು. ಹೈಕೋರ್ಟ್ ನೀಡಿದ ಈ ಎಲ್ಲ ಸೌಲಭ್ಯಗಳು ಗೊಗೊಯಿ ಅವರಿಗೆ 1959ರ ಸುಪ್ರೀಂ ಕೋರ್ಟ್ ನ್ಯಾಯಾಧೀಶರ ನಿಯಮದಂತೆ ( 2014ರಲ್ಲಿ ತಿದ್ದುಪಡಿ) ಸಿಗುವ ಸೌಲಭ್ಯಗಳಲ್ಲೆ ಹೆಚ್ಚುವರಿಯಾಗಿ ನೀಡಿದವುಗಳು.

ಈಗ ನಾನು ಕೇಳುವ ಸಹಜ ಪ್ರಶ್ನೆ: ತೆರಿಗೆದಾರರ ಖರ್ಚಿನಲ್ಲಿ ತನಗೆ ನೀಡಲಾಗಿರುವ ಈ ಎಲ್ಲ ಹೆಚ್ಚುವರಿ ಸೌಲಭ್ಯಗಳನ್ನು ಗೌರವಾನ್ವಿತ ಮಾಜಿ ನ್ಯಾಯಾಧೀಶರು ರಾಜ್ಯಸಭಾ ಸದಸ್ಯರಾಗಿ ದಿಲ್ಲಿಗೆ ಹೋದ ಮೇಲೂ ಬಳಸಿಕೊಳ್ಳುತ್ತಾರಾ?

ಸರಕಾರದ ವಿವಿಧ ಅಂಗಗಳ ನಡುವೆ ಪಾಲಿಸಬೇಕಾದ ಅಧಿಕಾರದ ಪ್ರತ್ಯೇಕತೆ ನಮ್ಮ ಸಂವಿಧಾನದ ಅತ್ಯಂತ ಪವಿತ್ರ ಮೌಲ್ಯಗಳಲ್ಲಿ ಒಂದು. ಆದರೆ ಗೊಗೊಯಿಗೆ ಈ ಮೌಲ್ಯಗಳ ಬಗ್ಗೆಯೇ ಯಾವುದೇ ಗೌರವ ಇಲ್ಲ. ಅವರು ರಾಜ್ಯಸಭೆಗೆ ಹೋಗುತ್ತಿರುವ ಕುರಿತ ಅತಿದೊಡ್ಡ ಅಪಾು ಇದೇ.

ಈ ವ್ಯಕ್ತಿ ಸದಾ ನ್ಯಾಯ ನೀಡುವ ನಿಷ್ಪಕ್ಷ ನ್ಯಾಯಾಧೀಶರ ಮುಖವಾಡ ಧರಿಸಿದ್ದ ಅಧಿಕಾರ ಲಾಲಸಿ ಭ್ರಷ್ಟ ರಾಜಕಾರಣಿಯಾ ಗಿದ್ದರು. ಎನ್‌ಆರ್‌ಸಿ ವಿಷಯದಲ್ಲಿ ಅದನ್ನು ತನ್ನ ವೈಯಕ್ತಿಕ ಅಜೆಂಡಾ ಮಾಡಿಕೊಂಡ ಗೊಗೊಯಿ ಕಾರ್ಯಾಂಗ ಮಾಡಬೇಕಾದ ಕೆಲಸಕ್ಕೆ ಕೈಹಾಕಿ ಕಾರ್ಯಾಂಗದ ಅಧಿಕಾರವನ್ನು ತನಗೆ ತಾನೇ ಕೊಟ್ಟುಕೊಂಡರು. ಕೋರ್ಟ್ ಹಾಗೂ ಎನ್‌ಆರ್‌ಸಿ ಕೋ ಆರ್ಡಿನೇಟರ್ ನಡುವೆ ಎನ್‌ಆರ್‌ಸಿ ಪ್ರಕ್ರಿಯೆಯನ್ನು ಅಂತಿಮಗೊಳಿಸಿದ ಆತುರ ಹಾಗೂ ಅದಕ್ಕೆ ಮೇಲ್ಮನವಿಗೆ ಅವಕಾಶವೇ ಇಲ್ಲದಂತೆ ಮಾಡಿದ ನಿರ್ಧಾರದಿಂದ ಲಕ್ಷಾಂತರ ಭಾರತೀಯ ನಾಗರಿಕರು ತಮ್ಮ ಹಕ್ಕುಗಳನ್ನು ಕಳಕೊಳ್ಳುವಂತೆ ಮಾಡಿತು. ಆ ಇಡೀ ತೇಪೆ ಪ್ರಕ್ರಿಯೆ ಮಾರಕ ಪರಿಣಾಮಗಳನ್ನು ಬೀರಿತು, ಅದರಿಂದ ಬಿ್ದ ಬೆಂಕಿ ಇಂದಿಗೂ ಉರಿಯುತ್ತಲೇ ಇದೆ.

ನಮ್ಮಳಗಿನ ಅತ್ಯಂತ ಸಿನಿಕರೂ ಸುಪ್ರೀಂ ಕೋರ್ಟ್ ಬಗ್ಗೆ ಅಚಲ ವಿಶ್ವಾಸ ಹೊಂದಿರುತ್ತಾರೆ. ಆದರೆ ಗೊಗೊಯಿ ಅಂತಹ ಪವಿತ್ರ ಸಂಸ್ಥೆಯನ್ನೇ ಪಾರದರ್ಶಕತೆಯ ಶವಪೆಟ್ಟಿಗೆ ಮಾಡಿಬಿಟ್ಟರು. ಅವರು ಕೇವಲ ನ್ಯಾಯ ನಿರಾಕರಿಸಲಿಲ್ಲ. ಅದನ್ನು ಬಂದ್ ಮಾಡಿದ ಲಕೋಟೆಯಲ್ಲಿಟ್ಟು ನಿರಾಕರಿಸಿಬಿಟ್ಟರು. ಎನ್‌ಆರ್‌ಸಿ, ರಫೇಲ್, ಸಿಬಿಐ ನಿರ್ದೇಶಕರ ವಜಾ-ಈ ಎಲ್ಲ ಪ್ರಮುಖ ಪ್ರಕರಣಗಳ ತೀರ್ಪಿನಲ್ಲಿ ಏನು ಬಂದಿದೆ ಎಂಬುದಕ್ಕಿಂತ ಹೆಚ್ಚಾಗಿ ಆ ತೀರ್ಪುಗಳು ಬಚ್ಚಿಟ್ಟ ಸತ್ಯಗಳಿಗಾಗಿ ಸದಾ ನೆನಪಿನಲ್ಲಿ ಉಳಿಯುತ್ತವೆ.

ರಾಜಕಾರಣಿಗಳಿಗೂ ಉತ್ತರದಾಯಿತ್ವವಿದೆ. ಪ್ರತಿ ಐದು ವರ್ಷಗಳಿಗೊಮ್ಮೆ ನಡೆಯುವ ಚುನಾವಣೆ ಅವರಿಗೆ ಸಿಕ್ಕಿರುವ ಅಧಿಕಾರ ಪ್ರಶ್ನಾತೀತವಾಗದಂತೆ ಖಾತ್ರಿಪಡಿಸುತ್ತದೆ. ಆದರೆ ಈ ವ್ಯಕ್ತಿ ತನ್ನ ಯಾವ ಕ್ರಿಯೆಗೂ ಯಾವುದೇ ಪರಿಣಾಮ ಎದುರಿಸಲೇ ಇಲ್ಲ. ತನ್ನ ವಿರುದ್ಧವೇ ಇದ್ದ ಲೈಂಗಿಕ ಕಿರುಕುಳ ಪ್ರಕರಣದಲ್ಲಿ ತಾನೇ ವಿಶೇಷ ಪೀಠ ಕರೆದು ತಾನೇ ಅದರ ಮುಖ್ಯ ನ್ಯಾಯಾಧೀಶನಾಗುವಾಗಲೂ ಈ ವ್ಯಕ್ತಿಗೆ ಏನೂ ಅನಿಸಲೇ ಇಲ್ಲ.

 ವದಂತಿಗಳೂ ಎಲ್ಲರನ್ನೂ ತಲುಪಿದ್ದವು - ಪುತ್ರರು, ಅಳಿಯಂದಿರು, ಸಂಬಂಧಿಕರು ಇತ್ಯಾದಿ. ಆದರೆ ಅವೆಲ್ಲವೂ ಹೊಟ್ಟೆಕಿಚ್ಚಿನಿಂದ ಹುಟ್ಟಿದ ಊಹಾಪೋಹಗಳಾಗಿರಲಿ ಎಂದೇ ಬಯಸಿದ್ದೆವು. ಆದರೆ ಈಗ ಯಾರಿಗೂ ಹಾಗೆ ಊಹಿಸುವ ಧೈರ್ಯವಿಲ್ಲ.

‘‘ನಿವೃತ್ತಿಯ ಬಳಿಕ ನ್ಯಾಯಾಧೀಶರಿಗೆ ಹುದ್ದೆ ನೀಡುವುದು ನ್ಯಾಯಾಂಗದ ಸ್ವಾತಂತ್ರ್ಯದ ಮೇಲಿನ ಗಾಯದಂತೆ’’ ಎಂದು 2018ರಲ್ಲಿ ಐವರು ನ್ಯಾಯಾಧೀಶರ ಪೀಠವೊಂದರ ಮುಖ್ಯಸ್ಥರಾಗಿ ಗೊಗೊಯಿ ಹೇಳಿದ್ದರು. ಆದರೆ ಮಾನ್ಯ ನ್ಯಾಯಾಧೀಶರೇ, ಇಂದು ನೀವು ಆ ಹಳೆ ಗಾದೆ ‘‘ಒಂದು ಸಿಕ್ಕಿಬಿದ್ದ ಸುಳ್ಳು ಎಲ್ಲ ಸತ್ಯಗಳನ್ನು ಸಂಶಯಿಸಲು ಸಾಕು’’ ಸತ್ಯ ಎಂದು ಸಾಬೀತುಪಡಿಸಿದ್ದೀರಿ. ನೀವು ನಿಮ್ಮ ತೀರ್ಪುಗಳಲ್ಲಿ ಎತ್ತಿ ಹಿಡಿಯುತ್ತಿದ್ದೇನೆ ಎಂದು ಪ್ರತಿಪಾದಿಸುತ್ತಿದ್ದ ನ್ಯಾಯದ ಪ್ರತಿಯೊಂದು ಮೌಲ್ಯಗಳ ಮೇಲೆ ಇಂದು ಸಂಶಯವೆಂಬ ಅತಿದೊಡ್ಡ ಆಘಾತಕಾರಿ ಹೊಡೆತ ಬಿದ್ದಿದೆ.

‘‘ಈ ಹಿಂದಿನ ಸರಕಾರಗಳು ಮತ್ತು ಅವುಗಳ ಅಪರಾಧಗಳ ಬಗ್ಗೆ ಏನು ಹೇಳುತ್ತೀರಿ?’’ ಎಂಬ ಗೊಡ್ಡುವಾದ ಇಂದು ಭಾರತಕ್ಕೆ ಬೇಕಾಗಿಲ್ಲ. ರಂಗನಾಥ್ ಮಿಶ್ರಾ ಅಥವಾ ಎಂ. ಹಿದಾಯತುಲ್ಲಾ ಅವರು ತಮ್ಮ ನಿವೃತ್ತಿಯ ಆರು ಮತ್ತು ಒಂಬತ್ತು ವರ್ಷಗಳ ಬಳಿಕ ಯಾವ ಹುದ್ದೆ ಪಡೆದರು ಎಂಬುದು ನನಗೆ ಬೇಕಾಗಿಲ್ಲ. ಆ ಉದಾಹರಣೆಗಳು (ಎಡಿಎಂ ಜಬಲ್ಪುರ ಪ್ರಕರಣದಂತೆ) ನಮ್ಮ ದೇಶದ ನ್ಯಾಯಾಂಗ ಬಲಿಷ್ಠ, ಸ್ವತಂತ್ರ ಹಾಗೂ ನಿಷ್ಪಕ್ಷವಾಗಿದ್ದು ಬಹುಸಂಖ್ಯಾತ ಪರ ಸರಕಾರಗಳ ಅತಿರೇಕವನ್ನು ಮೆಟ್ಟಿನಿಲ್ಲುವ ಸಮರ್ಥ ಸಂಸ್ಥೆಗಳಾಗಬೇಕು ಎಂಬ ಅಗತ್ಯವನ್ನು ಇನ್ನಷ್ಟು ಒತ್ತಿ ಹೇಳುತ್ತವೆ, ಅಷ್ಟೇ.

ಈ ದೇಶದಲ್ಲಿ ಎಲ್ಲಕ್ಕಿಂತ ಪವಿತ್ರ ಇಲ್ಲಿನ ಸುಪ್ರೀಂ ಕೋರ್ಟ್. ಇಲ್ಲಿನ ಯಾವುದೊ ಊರಿನ ಒಬ್ಬ ಪೊಲೀಸ್ ಠಾಣಾಧಿಕಾರಿಯಿಂದ ಹಿಡಿದು ಅತ್ಯಂತ ಪ್ರಭಾವಿ ರಾಜಕಾರಣಿ ಅಥವಾ ಉದ್ಯಮಿಗೆ ಸುಪ್ರೀಂ ಕೋರ್ಟ್‌ನಿಂದ ಬರುವ ಛೀಮಾರಿಯ ಬಗ್ಗೆ ಭಾರೀ ಭಯವಿದೆ. ಅದಕ್ಕಾಗಿಯೇ ಒಬ್ಬ ಹಾಲಿ ನ್ಯಾಯಾಧೀಶ ನಿಷ್ಪಕ್ಷತೆಯ ನಟನೆಯನ್ನೂ ಬಿಟ್ಟು ಹಾಲಿ ಪ್ರಧಾನ ಮಂತ್ರಿ ಬಗ್ಗೆ ಪ್ರಶಂಸೆಯ ಮಹಾಪೂರ ಹರಿಸಿದರೂ ಯಾರೂ ಅವರನ್ನು ಪ್ರಶ್ನಿಸುವ ಧೈರ್ಯ ತೋರಿಸುವುದಿಲ್ಲ.

ಸಾರ್ವಜನಿಕ ಜೀವನದಲ್ಲಿ ನೈತಿಕ ಅಧಃಪತನ ಭಾರತಕ್ಕೆ ಹೊಸತಲ್ಲ. ಆದರೆ ತಾನು ಮೊದಲು ರಾಜ್ಯಸಭಾ ಸದಸ್ಯನಾಗಿ ಪ್ರಮಾಣ ವಚನ ಸ್ವೀಕರಿಸಿ ಬಳಿಕ ಅದರ ಬಗ್ಗೆ ವಿವರಣೆ ನೀಡುತ್ತೇನೆ ಎಂದು ಹೇಳುವ ಗೊಗೊಯಿ ಅವರ ವರ್ತನೆ ಅಸಭ್ಯತೆಯ ಸಾಗರದಲ್ಲೂ ಉಳಿದೆಲ್ಲಕ್ಕಿಂತ ಢಾಳಾಗಿ ಎದ್ದು ಕಾಣುತ್ತದೆ. ಅವರ ಮಾಜಿ ಸಹೋದ್ಯೋಗಿಗಳಾದ ನ್ಯಾ. ಮದನ್ ಬಿ. ಲೋಕುರ್ ಹಾಗೂ ನ್ಯಾ. ಕುರಿಯನ್ ಜೋಸೆಫ್ ಅವರು ಅವರ ನಾಮಕರಣವನ್ನು ಬಹಿರಂಗವಾಗಿ ವಿರೋಧಿಸಿದ್ದಾರೆ. ಇನ್ನೊಬ್ಬ ಗೌರವಾನ್ವಿತ ನ್ಯಾ. ಎ. ಪಿ. ಶಾ ಅವರು ನೇರವಾಗಿಯೇ ‘‘ಇದು ಗೊಗೊಯಿ ಹಾಗೂ ಅಧಿಕಾರದಲ್ಲಿರುವವರ ನಡುವಿನ ‘ಕೊಡು ಕೊಳ್ಳುವಿಕೆ’ಕೆಯ ನಿರ್ಲಜ್ಜ ನಿದರ್ಶನ’’ ಎಂದು ಹೇಳಿದ್ದಾರೆ.

ಈ ಲೇಖನ ಪ್ರಕಟವಾದ ಕೂಡಲೇ ನನ್ನ ಮಿತ್ರರು, ಕುಟುಂಬ ಸದಸ್ಯರು ಖಂಡಿತ ನನಗೆ ಕರೆ ಮಾಡಿ ಹೀಗೆಲ್ಲ ಬರೆದು ಮಾನನಷ್ಟ ಮೊಕದ್ದಮೆ ಮೈಮೇಲೆ ಎಳೆದುಕೊಳ್ಳುತ್ತೀಯ ಎಂದು ಗದರಿಸುತ್ತಾರೆ. ಆದರೆ ಇವತ್ತು ಮೌನವಾಗಿ ಇರುವುದರ ಅಪಾಯ ಈ ದೇಶಕ್ಕೆ ಬಹಳ ದೊಡ್ಡದಿದೆ. ಹಾಗಾಗಿ ನಾನು ಖಂಡಿತ ಮಾತಾಡುತ್ತೇನೆ ಮತ್ತು ಖಂಡಿಸುತ್ತೇನೆ. ರಂಜನ್ ಗೊಗೊಯಿ ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವದ ಅತ್ಯುನ್ನತ ನ್ಯಾಯಾಲಯದ ನಾಚಿಕೆಗೇಡು ಸಂಕೇತವಾಗಲು ಸಾಧ್ಯವಿಲ್ಲ. ಹಾಗೆ ಈ ಅತ್ಯುನ್ನತ ನ್ಯಾಯಾಲಯದ ಪೀಠಗಳಲ್ಲಿ ಕುಳಿತಿರುವ ಎಲ್ಲ ಮಾನ್ಯ ನ್ಯಾಯಾಧೀಶರಲ್ಲಿ ನನ್ನ ಮನವಿ - ನಿಮ್ಮ ಮಾಜಿ ಸಹೋದ್ಯೋಗಿಯ ಬಗ್ಗೆ ಮಾತ್ರ ನಿಮಗೆ ತಿರಸ್ಕಾರವಿರಲಿ, ನೀವು ಸೇವೆ ಸಲ್ಲಿಸುತ್ತಿರುವ ಆ ಮಹಾನ್ ಸಂಸ್ಥೆಯ ಬಗ್ಗೆ ಮಾತ್ರ ನಿಮ್ಮ ಪ್ರಶಂಸೆಯಿರಲಿ.

*ಲೇಖಕಿ ತೃಣಮೂಲ ಕಾಂಗ್ರೆಸ್‌ನ ಲೋಕಸಭಾ ಸದಸ್ಯೆ

ಕೃಪೆ: thewire.in

Writer - ಮಹುಆ ಮೊಯಿತ್ರಾ

contributor

Editor - ಮಹುಆ ಮೊಯಿತ್ರಾ

contributor

Similar News

ಜಗದಗಲ
ಜಗ ದಗಲ