ಮೋದಿ ಸರಕಾರ ಮಹಿಳೆಯರಿಗೆ ಹೆದರಿರುವಂತಿದೆ: ಉಮರ್ ಬಿಡುಗಡೆ ಕುರಿತು ಇಲ್ತಿಜಾ ಮುಫ್ತಿ
Update: 2020-03-24 17:26 GMT
ಹೊಸದಿಲ್ಲಿ, ಮಾ. 24: ಸುಮಾರು ಎಂಟು ತಿಂಗಳುಗಳಿಂದ ದಿಗ್ಬಂಧನದಲ್ಲಿದ್ದ ನ್ಯಾಷನಲ್ ಕಾನ್ಫರೆನ್ಸ್ ನಾಯಕ ಉಮರ್ ಅಬುಲ್ಲಾರ ಬಿಡುಗಡೆಯನ್ನು ಪಿಡಿಪಿ ಅಧ್ಯಕ್ಷೆ ಮೆಹಬೂಬ ಮುಫ್ತಿ ಅವರ ಪುತ್ರಿ ಇಲ್ತಿಜಾ ಮುಫ್ತಿ ಸ್ವಾಗತಿಸಿದ್ದಾರೆ.
ಮಂಗಳವಾರ ಮೆಹಬೂಬ ಮುಫ್ತಿಯವರ ಟ್ವಟರ್ ಹ್ಯಾಂಡಲ್ ನಿಂದ ಟ್ವೀಟಿಸಿರುವ ಇಲ್ತಿಜಾ,ಕೇಂದ್ರ ಸರಕಾರವು ಮಹಿಳಾ ಶಕ್ತಿ ಮತ್ತು ಮಹಿಳಾ ಸ್ವಾತಂತ್ರ್ಯದ ಬಗ್ಗೆ ಮಾತನಾಡುತ್ತಿದೆಯಾದರೂ, ಅದು ಮಹಿಳೆಯರಿಗೆ ಹೆಚ್ಚು ಹೆದರಿಕೊಂಡಿರುವಂತಿದೆ ಎಂದು ತನ್ನ ತಾಯಿಯ ನಿರಂತರ ದಿಗ್ಬಂಧನವನ್ನು ಪ್ರಸ್ತಾಪಿಸಿ ಹೇಳಿದ್ದಾರೆ. ಮೆಹಬೂಬ ಮುಫ್ತಿ ಈಗಲೂ ಸಾರ್ವಜನಿಕ ಸುರಕ್ಷಾ ಕಾಯ್ದೆ (ಪಿಎಸ್‌ಎ)ಯಡಿ ದಿಗ್ಬಂಧನದಲ್ಲಿದ್ದಾರೆ.
ಜಮ್ಮು-ಕಾಶ್ಮೀರ ಆಡಳಿತವು ಪಿಎಸ್‌ಎ ಅಡಿ ಜಮ್ಮು-ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಉಮರ್ ಅಬ್ದುಲ್ಲಾ ಅವರ ವಿರುದ್ಧದ ಆರೋಪಗಳನ್ನು ಹಿಂದೆಗೆದುಕೊಂಡ ಬಳಿಕ ಅವರ ಬಿಡುಗಡೆಗೆ ಆದೇಶಿಸಿದೆ.