ಕೊರೋನ ವೈರಸ್: ಹರ್ಯಾಣದಲ್ಲಿ ದೃಢೀಕೃತ ಪ್ರಕರಣಗಳ ಸಂಖ್ಯೆ 62ಕ್ಕೇರಿಕೆ

Update: 2020-04-04 16:10 GMT

ಚಂಡಿಗಡ, ಎ.4: ಹರ್ಯಾಣದಲ್ಲಿ ಶನಿವಾರ 18 ಕೊರೋನ ವೈರಸ್ ಪ್ರಕರಣಗಳು ವರದಿಯಾಗಿದ್ದು,ಇದರೊಂದಿಗೆ ಒಟ್ಟು ಪ್ರಕರಣಗಳ ಸಂಖ್ಯೆ 62ಕ್ಕೆ ಏರಿಕೆಯಾಗಿದೆ. ಅತ್ಯಂತ ಹೆಚ್ಚಿನ ಪ್ರಕರಣಗಳು ಪಲ್ವಾಲ್ ಜಿಲ್ಲೆಯಲ್ಲಿ ವರದಿಯಾಗಿವೆ. ಈಗಾಗಲೇ ಆಸ್ಪತ್ರೆಗಳಿಂದ ಬಿಡುಗಡೆಯಾಗಿರುವ 14 ರೋಗಿಗಳು ಇದರಲ್ಲಿ ಸೇರಿದ್ದಾರೆ. ಸದ್ಯ ರಾಜ್ಯದಲ್ಲಿ 48 ಸಕ್ರಿಯ ಪ್ರಕರಣಗಳಿವೆ ಎಂದು ಆರೋಗ್ಯ ಇಲಾಖೆಯು ತಿಳಿಸಿದೆ.

ಹೊಸದಾಗಿ ವರದಿಯಾಗಿರುವ 18 ಪ್ರಕರಣಗಳಲ್ಲಿ ಹೆಚ್ಚಿನವರು ಲಾಕ್‌ಡೌನ್‌ಗೆ ಮುನ್ನ ದೇಶದ ಇತರ ಭಾಗಗಳಿಂದ ರಾಜ್ಯವನ್ನು ಪ್ರವೇಶಿಸಿದ್ದ ತಬ್ಲಿಘಿ ಜಮಾತ್ ಸದಸ್ಯರಾಗಿದ್ದಾರೆ ಎಂದು ಅಧಿಕಾರಿಗಳು ಹೇಳಿದರಾದರೂ,ಅವರ ನಿಖರವಾದ ಸಂಖ್ಯೆಯನ್ನು ನೀಡಲಿಲ್ಲ.

ಪಲ್ವಾಲ್ ಜಿಲ್ಲೆಯು ರಾಜ್ಯದಲ್ಲಿ ಗರಿಷ್ಠ ಪ್ರಕರಣಗಳನ್ನು (16)ಹೊಂದಿದ್ದು,ಇದರಲ್ಲಿ ಶನಿವಾರ ವರದಿಯಾದ 13 ಪ್ರಕರಣಗಳು ಸೇರಿವೆ. ಭಿವಾನಿ ಮತ್ತು ಗುರ್ಗಾಂವ್‌ಗಳಲ್ಲಿ ಹೊಸದಾಗಿ ತಲಾ ಎರಡು ಪ್ರಕರಣಗಳು ವರದಿಯಾಗಿವೆ ಎಂದು ಅಧಿಕಾರಿಗಳು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News