ಕೋವಿಡ್ ಸವಾಲಿನ ವಿರುದ್ಧ ಹೋರಾಡಲು ಕುಟುಂಬದ ಪ್ರೋತ್ಸಾಹ ಅಗತ್ಯವಿದೆ: ಏಮ್ಸ್ ವೈದ್ಯೆ ಅಭಿಮತ

Update: 2020-04-07 05:42 GMT

ಹೊಸದಿಲ್ಲಿ, ಎ.7: ದಿಲ್ಲಿಯ ಏಮ್ಸ್‌ನಲ್ಲಿ ಕೋವಿಡ್-19ರ ಚಿಕಿತ್ಸಾ ಕೇಂದ್ರದಲ್ಲಿ ಕಾರ್ಯನಿರತವಾಗಿರುವ ವೈದ್ಯೆಯೊಬ್ಬರು ಕೊರೋನ ವಿರುದ್ಧ ಹೋರಾಟದ ಸವಾಲನ್ನು ಕುರಿತು ಮಾತನಾಡುವಾಗ ಭಾವುಕರಾದರು.

ಕುಟುಂಬ ಸದಸ್ಯರಿಂದ ದೂರವುಳಿದು ಕೋವಿಡ್-19 ರೋಗಿಗಳ ಆರೈಕೆಯಲ್ಲಿ ತೊಡಗಿಸಿಕೊಂಡಿರುವ ಡಾ.ಅಂಬಿಕಾ, "ದಿನದಿಂದ ದಿನಕ್ಕೆ ಕೋವಿಡ್-19 ಪ್ರಕರಣ ಜಾಸ್ತಿಯಾಗುತ್ತಿರುವುದು ನಮಗೆ ಸವಾಲಾಗಿ ಪರಿಣಮಿಸಿದೆ. ಇಂತಹ ಪರಿಸ್ಥಿತಿಯಲ್ಲಿ ನಮಗೆ ಕುಟುಂಬದವರ ಬೆಂಬಲ ಅಗತ್ಯವಿರುತ್ತದೆ. ಕುಟುಂಬದ ಯಾರಾದರೊಬ್ಬರು ಅನಾರೋಗ್ಯಕ್ಕೆ ಒಳಗಾದರೆ ನಮಗೆ ರೋಗಿಗೆ ಚಿಕಿತ್ಸೆ ನೀಡಲು ಸಾಧ್ಯವಾಗುವುದಿಲ್ಲ. ನಾವು ಇಲ್ಲಿ ಜನರ ಚಿಕಿತ್ಸೆಗಾಗಿ ಬಂದಿದ್ದೇವೆ. ನಮ್ಮ ಕುಟುಂಬ ಸದಸ್ಯರ ಬೆಂಬಲವೂ ಇದಕ್ಕೆ ಬೇಕಾಗುತ್ತದೆ. ಸಹೋದ್ಯೋಗಿಗಳು,ಸ್ನೇಹಿತರು ಹಾಗೂ ಸಿಬ್ಬಂದಿ ವರ್ಗ ಸಹಿತ ಪ್ರತಿಯೊಬ್ಬರು ಇಲ್ಲಿ ನಮಗೆ ಬೆಂಬಲ ನೀಡುತ್ತಿದ್ದಾರೆ. ಆದರೆ,ಕುಟುಂಬದ ಪ್ರೋತ್ಸಾಹ ವಿಭಿನ್ನವಾಗಿರುತ್ತದೆ. ನಾವೆಲ್ಲರೂ ಅದನ್ನೇ ಬಯಸುತ್ತೇವೆ'' ಎಂದು ಭಾವುಕರಾಗಿ ನುಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News