ಅಸ್ಸಾಂನ ಬಂಧನ ಕೇಂದ್ರದಲ್ಲಿದ್ದ 60 ವಯಸ್ಸಿನ ಮಹಿಳೆ ಮೃತ

Update: 2020-04-07 08:28 GMT

ಹೊಸದಿಲ್ಲಿ, ಎ.7: ದೇಶದ ಪ್ರಜೆ ಎಂದು ಸಾಬೀತುಪಡಿಸುವ ಸೂಕ್ತ ದಾಖಲೆಗಳನ್ನು ಸಲ್ಲಿಸಲು ವಿಫಲವಾಗಿ ಅಸ್ಸಾಂನ ಕೊಕ್ರಜಹಾರ್ ಜಿಲ್ಲೆಯ ಬಂಧನ ಕೇಂದ್ರದಲ್ಲಿದ್ದ 60ರ ವಯಸ್ಸಿನ ಮಹಿಳೆ ಮೃತಪಟ್ಟಿರುವ ಆಘಾತಕಾರಿ ಘಟನೆ ಮಂಗಳವಾರ ವರದಿಯಾಗಿದೆ. ಇದನ್ನು ಅಧಿಕಾರಿಗಳು ದೃಢಪಡಿಸಿದ್ದಾರೆ.

ಜೈಲು ದಾಖಲೆಗಳ ಪ್ರಕಾರ ಮೃತ ಮಹಿಳೆ 2018ರ ಫೆಬ್ರವರಿಯಿಂದ ಬಂಧನ ಕೇಂದ್ರದಲ್ಲಿದ್ದರು. ಇವರು ಕ್ಯಾನ್ಸರ್ ರೋಗಿಯಾಗಿದ್ದರು. ಈ ಮಹಿಳೆಯ ಸಾವಿನೊಂದಿಗೆ ಅಸ್ಸಾಂನ ಬಂಧನ ಕೇಂದ್ರದಲ್ಲಿ ಮೃತಪಟ್ಟವರ ಸಂಖ್ಯೆ 30ಕ್ಕೇರಿಕೆಯಾಗಿದೆ.

ಮೃತಪಟ್ಟಿರುವ ಮಹಿಳೆಯು ಡಿಮಾ ಹಸಾವೊ ಜಿಲ್ಲೆಯ ರಬೆದಾ ಬೇಗಂ ಅಲಿಯಾಸ್ ರೋಬಾ ಬೇಗಂ ಎಂದು ಕೊಕ್ರಜಹಾರ್ ಜಿಲ್ಲೆಯ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಅಸ್ಸಾಂನಲ್ಲಿ 6 ಬಂಧನ ಕೇಂದ್ರಗಳಿವೆ. ಇದರಲ್ಲಿ ಅಕ್ರಮ ವಿದೇಶಿಗರನ್ನು ಕೂಡಿಡಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News