ಟೈಮ್ಸ್ ನೆಟ್ ವರ್ಕ್‌ನ 6 ಉದ್ಯೋಗಿಗಳಿಗೆ ಕೊರೋನ ವೈರಸ್ ಸೋಂಕು

Update: 2020-04-12 15:47 GMT
ಸಾಂದರ್ಭಿಕ ಚಿತ್ರ

ಮುಂಬೈ, ಎ.12: ಇಲ್ಲಿಯ ‘ಟೈಮ್ಸ್ ನೆಟ್ ವರ್ಕ್’ನ ಆರು ಉದ್ಯೋಗಿಗಳು ಕೊರೋನ ವೈರಸ್ ಸೋಂಕಿಗೆ ಗುರಿಯಾಗಿದ್ದು, ಈ ಪೈಕಿ ನಾಲ್ವರು ಟೈಮ್ಸ್ ಗ್ರೂಪ್‌ನ ಇಂಗ್ಲಿಷ್ ಸುದ್ದಿವಾಹಿನಿ ‘ಮಿರರ್ ನೌ’ಗೆ ಮತ್ತು ಇಬ್ಬರು ‘ಇಟಿ ನೌ’ಗೆ ಸೇರಿದ್ದಾರೆ.

 ಎಲ್ಲ ಸುರಕ್ಷತಾ ಕ್ರಮಗಳನ್ನು ಕೈಗೊಂಡಿದ್ದರೂ ಆರು ಸಿಬ್ಬಂದಿ ಕೊರೋನ ವೈರಸ್ ಸೋಂಕಿಗೆ ತುತ್ತಾಗಿದ್ದಾರೆ. ಬೃಹನ್ಮುಂಬೈ ಮಹಾನಗರ ಪಾಲಿಕೆಯ ಮಾರ್ಗದರ್ಶನದ ಮೇರೆಗೆ ಅವರನ್ನು ಮುಂಬೈನ ಖಾಸಗಿ ಆಸ್ಪತ್ರೆಯಲ್ಲ್ಲಿ ಕಡ್ಡಾಯ ಕ್ವಾರಂಟೈನ್‌ನಲ್ಲಿ ಇರಿಸಲಾಗಿದೆ. ಈಗ ಅವರ ಸ್ಥಿತಿ ಉತ್ತಮವಾಗಿದೆ ಎಂದು ‘ಟೈಮ್ಸ್ ಗ್ರೂಪ್’ ತನ್ನ ಅಧಿಕೃತ ಜಾಲತಾಣದಲ್ಲಿ ತಿಳಿಸಿದೆ.

ಲೋವರ್ ಪರೇಲ್‌ನಲ್ಲಿರುವ ಗ್ರೂಪ್‌ನ ಕಚೇರಿಯಲ್ಲಿ ಬಿಎಂಸಿಯು ಸೋಂಕು ನಿವಾರಕಗಳನ್ನು ಸಿಂಪಡಿಸಿದ್ದು, ಅಲ್ಲಿ ಮುಂದಿನ ವಾರ ಕಚೇರಿ ಕಾರ್ಯಾಚರಣೆ ಪುನರಾರಂಭಗೊಳ್ಳಲಿದೆ. ಸದ್ಯ ‘ಮಿರರ್ ನೌ’ ಮತ್ತು ‘ಇಟಿ ನೌ’ ಕಚೇರಿಗಳು ಪರ್ಯಾಯ ಸ್ಥಳಗಳಿಂದ ಕಾರ್ಯಾಚರಿಸುತ್ತಿವೆ ಎಂದು ಅದು ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News