ಡ್ರೋನ್ ಮೂಲಕ ಪಾನ್ ಮಸಾಲ ಸರಬರಾಜು ಮಾಡಿದ ಇಬ್ಬರು ಜೈಲುಪಾಲು

Update: 2020-04-13 12:56 GMT

ಅಹ್ಮದಾಬಾದ್: ಲಾಕ್ ಡೌನ್‍ನಿಂದಾಗಿ ಗುಜರಾತ್ ರಾಜ್ಯದ ಪಾನ್ ಮಸಾಲ ಪ್ರಿಯರಂತೂ ಪಾನ್ ಮಸಾಲ ದೊರೆಯದೆ ಬಹಳ ಕಷ್ಟಕ್ಕೀಡಾಗಿದ್ದಾರೆ. ಹೆಚ್ಚು ಬೆಲೆ ತೆತ್ತಾದರೂ ಇದನ್ನು ಖರೀದಿಸಲು ಅವರು ಸಿದ್ಧರಾಗಿದ್ದಾರೆ.

ಇದನ್ನೇ ಬಂಡವಾಳವನ್ನಾಗಿಸಿದ ಗುಜರಾತದ ಮೊರ್ಬಿ ಎಂಬಲ್ಲಿನ ನೀಲಕಂಠ ಸೊಸೈಟಿಯ ಇಬ್ಬರು ನಿವಾಸಿಗಳಾದ ಹಿರೇನ್ ಗರ್ಧರಿಯಾ ಹಾಗೂ ರವಿ ಭದನಿಯಾ  ಡ್ರೋನ್ ಒಂದರ ಕೆಳಭಾಗದಲ್ಲಿ ಪಾನ್ ಮಸಾಲ ಇರಿಸಿ ಅದನ್ನು  ಪಾನ್ ಮಸಾಲ  ಆರ್ಡರ್ ಮಾಡಿದ ಗ್ರಾಹಕರ ಮನೆಯ ಟೆರೇಸಿನ ಮೇಲಿಳಿಸಿ ಪಾನ್ ಮಸಾಲ ಅವರಿಗೆ ತಲುಪಿಸಿದ್ದಾರೆ.

ಅಷ್ಟಕ್ಕೇ ಸುಮ್ಮನಿರದ ಅವರು ತಮ್ಮ ಸಾಹಸದ ಟಿಕ್ ಟಾಕ್ ವೀಡಿಯೋ ಕೂಡ ಮಾಡಿದ್ದಾರೆ. ಇದು ಪೊಲೀಸರ ಕಣ್ಣಿಗೆ ಬಿದ್ದು ಇದೀಗ ಇಬ್ಬರೂ ಜೈಲುಗಂಬಿ ಎಣಿಸುತ್ತಿದ್ದಾರೆ. ಸುಮಾರು ರೂ 25,000 ವೆಚ್ಚದ ಅವರ ಡ್ರೋನ್ ಕೂಡ ಈಗ ಪೊಲೀಸರ ವಶದಲ್ಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News