ಸೂರತ್ ನಲ್ಲೂ ವಲಸೆ ಕಾರ್ಮಿಕರ ಪ್ರತಿಭಟನೆ

Update: 2020-04-14 16:20 GMT

ಸೂರತ್, ಎ.14: ಲಾಕ್ ಡೌನ್ ನಡುವೆಯೂ  ಸೂರತ್‌ನಲ್ಲಿ ಮಂಗಳವಾರ ಸಂಜೆ ನೂರಾರು ವಲಸೆ ಕಾರ್ಮಿಕರು ರಸ್ತೆಯಲ್ಲಿ  ಜಮಾಯಿಸಿ ತಮ್ಮ ಊರುಗಳಿಗೆ  ಕಳುಹಿಸಿ ಕೊಡಬೇಕೆಂದು ಒತ್ತಾಯಿಸಿದರು.

ವಲಸೆ ಕಾರ್ಮಿಕರು ನಗರದ ವರಾಚಾ ಪ್ರದೇಶದಲ್ಲಿ ಜಮಾಯಿಸಿ ರಸ್ತೆಯ ಮೇಲೆ ಕುಳಿತು ತಮ್ಮ ಸ್ಥಳೀಯ ಸ್ಥಳಗಳಿಗೆ ಹೋಗಲು ಅವಕಾಶ ನೀಡಬೇಕೆಂದು ಒತ್ತಾಯಿಸಿದರು ಎಂದು ಪೊಲೀಸರು ತಿಳಿಸಿದ್ದಾರೆ.

ವರಾಚಾ ಸೂರತ್‌ನ ವಜ್ರ ಹೊಳಪು ಕೇಂದ್ರವಾಗಿದ್ದು, ಗುಜರಾತ್‌ನ ವಿವಿಧ ಭಾಗಗಳಿಂದ ಮತ್ತು ದೇಶದ ಲಕ್ಷಾಂತರ ಕಾರ್ಮಿಕರಿಗೆ ಉದ್ಯೋಗ ನೀಡುತ್ತದೆ. ಅನೇಕ ಜವಳಿ ಘಟಕಗಳು ಸಹ ಇಲ್ಲಿ ಕಾರ್ಯಾಚರಿಸುತ್ತಿವೆ.

"ಈ ವಲಸೆ ಕಾರ್ಮಿಕರು ತಮ್ಮ ಊರುಗಳಿಗೆ ಹೋಗಲು ಬಯಸುತ್ತಾರೆ. ಪ್ರಸ್ತುತ ಲಾಕ್‌ಡೌನ್ ಜಾರಿಯಲ್ಲಿರುವುದರಿಂದ ತಾಳ್ಮೆಯಿಂದಿರುವಂತೆ ನಾವು ಮನವೊಲಿಸಿದ್ದೇವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ

"ಅವರಲ್ಲಿ ಕೆಲವರು ಆಹಾರದ ಬಗ್ಗೆ ದೂರು ನೀಡಿದ ಹಿನ್ನೆಲೆಯಲ್ಲಿ  ನಾವು ಎನ್‌ಜಿಒ ಮೂಲಕ  ತಕ್ಷಣ ಅವರಿಗೆ ಆಹಾರ ಪ್ಯಾಕೆಟ್‌ಗಳನ್ನು ನೀಡಿದ್ದೇವೆ.ಈಗ ಪರಿಸ್ಥಿತಿ ನಿಯಂತ್ರಣದಲ್ಲಿದೆ ”ಎಂದು ಸ್ಥಳದಲ್ಲಿದ್ದ ಪೊಲೀಸ್ ಅಧಿಕಾರಿಯೊಬ್ಬರು ಸುದ್ದಿಗಾರರಿಗೆ ತಿಳಿಸಿದರು.

ಸ್ಥಳೀಯ ಶಾಸಕ ಮತ್ತು ಆರೋಗ್ಯ ರಾಜ್ಯ ಸಚಿವ ಕಿಶೋರ್ ಕಾನಾನಿ ಸ್ಥಳಕ್ಕೆ ತೆರಳಿ ವಲಸೆ ಕಾರ್ಮಿಕರನ್ನು ಮನವೊಲಿಸಿದರು. 

“ವಲಸೆ ಕಾರ್ಮಿಕರಲ್ಲಿ  ಬಹುತೇಕ ಮಂದಿ ಒಡಿಶಾ, ಉತ್ತರ ಪ್ರದೇಶ ಮತ್ತು ಬಿಹಾರ ರಾಜ್ಯಕ್ಕೆ ಸೇರಿದವರು.  ಅವರು  ಊರಿಗೆ ವಾಪಸಾಗಲು  ಲಾಕ್‌ಡೌನ್ ಇಂದು ಕೊನೆಗೊಳ್ಳುತ್ತದೆ ಎಂಬ ನಿರೀಕ್ಷೆಯಲ್ಲಿದ್ದರು.  ಆದರೆ ಲಾಕ್ ಡೌನ್ ಮುಂದುವರಿದ ಹಿನ್ನೆಲೆಯಲ್ಲಿ ಅವರು ತಾಳ್ಮೆ ಕಳೆದುಕೊಂಡಿದಿದ್ದರು" ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News